ನೂತನ ಅನುಭವಮಂಟಪ ನಿರ್ಮಾಣ ಕಾರ್ಯಕ್ಕೆ ಮೂಹೂರ್ತ

ಮೂರು ವರ್ಷದಲ್ಲಿ  ಅನುಭವ ಮಂಟಪ ಕಾಮಗಾರಿ ಪೂರ್ಣಕ್ಕೆ ಸಿಎಂ ಸೂಚನೆ

ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಕೈಗೆತ್ತಿಕೊಂಡಿರುವ ನೂತನ ಅನುಭವ ಮಂಟಪ ನಿರ್ಮಾಣಕ್ಕಾಗಿ  ಸರ್ಕಾರ 532 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡಲಾಗಿದೆ. ಮೂರು ವರ್ಷಗಳೊಗಳಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ  ಅವರು ತಿಳಿಸಿದ್ದಾರೆ.

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ 532 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ ಯೋಜನೆಗೆ ರಾಜ್ಯ ಸರ್ಕಾರ ಅನುಮತಿ ನೀಡಲಾಗಿದೆ.

ಅನುಭವ ಮಂಟಪವು ಬಸವಣ್ಣನವರ ಕ್ರಾಂತಿಕಾರಿ ವೇದಿಕೆಯಾಗಿದೆ. ಈ ಮಂಟಪದ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸವನ್ನು ಬಸವಣ್ಣನವರು ಮಾಡಿದ್ದರು. ಅವರು ಮಾಡಿರುವ ಸಾಮಾಜಿಕ ಕ್ರಾಂತಿಯನ್ನು ಪ್ರತಿಬಿಂಬಿಸುವ ರೂಪದಲ್ಲಿ ಅನುಭವ ಮಂಟಪ ನಿರ್ಮಿಸಲಾಗುವುದು.

ನೂತನ ಅನುಭವ ಮಂಟಪದ ವಿಶೇಷತೆ

532 ಕೋಟಿ ವೆಚ್ಚದಲ್ಲಿ 25 ಎಕರೆ ಪ್ರದೇಶದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಲಾಗುತ್ತಿದೆ. 182 ಅಡಿ ಎತ್ತರ, 2884 ಅಡಿ ಸುತ್ತಳತೆ.

 ನವೀನ ಅನುಭವ ಮಂಟಪದಲ್ಲಿ 770 ಕಂಬಗಳು ಇರಲಿದ್ದು, ಈ ಕಂಬಗಳ ಮೇಲೆ 12ನೇ ಶತಮಾನದಲ್ಲಿ ಬಾಳಿ ಬದುಕಿದ್ದ ಶರಣ, ಶರಣೆಯರ ಹೆಸರುಗಳನ್ನು ಕೆತ್ತನೆ ಮಾಡಲಾಗುವುದು. ಆರು ಅಂತಸ್ತಿನ ಈ ಕಟ್ಟಡ ಮಿನಿ ಪಾರ್ಲಿಮೆಂಟ್​ನಂತೆ ಇರಲಿದ್ದು, ಕಟ್ಟಡದ ತುದಿಯಲ್ಲಿ ನೂರು ಅಡಿ ವ್ಯಾಸದ ಬೃಹತ್ ಲಿಂಗಾಕಾರದ ಗೋಪುರ ನಿರ್ಮಾಣ ಮಾಡಲಾಗುವುದು. ಈ ಅನುಭವ ಮಂಟಪ ಕಲ್ಯಾಣಚಾಲುಕ್ಯರ ಶೈಲಿಯಲ್ಲಿ ನಿರ್ಮಾಣವಾಗುವುದು.

ಬಸವ ಕಲ್ಯಾಣದಲ್ಲಿ 532 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ ಯೋಜನೆಗೆ

ರಾಜ್ಯ ಸರಕಾರ ಒಪ್ಪಿಗೆ ನೀಡಿದೆ. cm ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ‘ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ’ ಸಭೆಯಲ್ಲಿ ಮುಂದಿನ ೩ ವರ್ಷಗಳಲ್ಲಿ  ಅನುಭವ ಮಂಟಪ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಲಾಯಿತು.

ಸಚಿವರು ಮತ್ತು ಗಣ್ಯರು ಉಪಸ್ಥಿತರಿದ್ದರು, ಆರ್‌.ಅಶೋಕ್‌, ಪ್ರಭು ಚೌಹಾಣ್, ಕೆಕೆಆರ್‌ಡಿಬಿ ಅಧ್ಯಕ್ಷ ಬಸವರಾಜ ಪಾಟೀಲ್‌ ಸೇಡಂ, ರಘುನಾಥ ರಾವ್‌ ಮಲ್ಕಾಪುರೆ, ಅಮರನಾಥ ಪಾಟೀಲ್, ಶಾಸಕರಾದ ಈಶ್ವರ ಖಂಡ್ರೆ, ಶಶಿಲ್‌ ನಮೋಶಿ ಮತ್ತಿರರು ಸಭೆಯಲ್ಲಿ ಭಾಗವಹಿಸಿದ್ದರು.

12ನೇ ಶತಮಾನದಲ್ಲಿಇದ್ದಂತಹ ವಚನಕಾರರು ಹಾಗು ದಾರ್ಶನಿಕ ಪುರುಷರ ಕುರಿತು ಮಾಹಿತಿ ನೀಡುವ ಕಿರು ಚಿತ್ರಗಳ ಪ್ರದರ್ಶನ ಇರುವುದಾಗಿದೆ. ಬಸವಣ್ಣನವರ ಜೀವನ ಮತ್ತು ಸಾಧನೆ ಬಿಂಬಿಸುವ ಮಾಹಿತಿಗಳನ್ನು ಅನುಭವ ಮಂಟಪಕ್ಕೆ ಆಗಮಿಸುವ ಎಲ್ಲರಿಗೂ ವಿವರಿಸುವ ವ್ಯವಸ್ಥೆ ಮಾಡಲಾಗುತ್ತದೆ.

ಅನುಭವ ಮಂಟಪವನ್ನು ಜಗಜ್ಯೋತಿ ಬಸವಣ್ಣನವರು ೧೨ನೇ ಶತಮಾನದಲ್ಲಿ ಸ್ಥಾಪಿಸಿದರು

 ಮಹಾಮನೆ ಎಂದೂ ಕರೆಯಲ್ಪಡುವ ಅನುಭವ ಮಂಟಪವು ಈಗಿನ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಸ್ಥಾಪನೆಯಾಗಿತ್ತು. ಬಸವಣ್ಣ, ಅಕ್ಕಮಹಾದೇವಿ, ಚೆನ್ನಬಸವಣ್ಣ ಇನ್ನೂ ಹಲವಾರು ಶರಣರನ್ನೊಳಗೊಂಡ ಅನುಭವ ಮಂಟಪವನ್ನು  ವಿಶ್ವದ ಮೊಟ್ಟ ಮೊದಲ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಧರ್ಮಭೇದವಿಲ್ಲದೇ ಯಾವುದೇ ಜಾತಿಯ ಶರಣರನ್ನು ಹೊಂದಿದ್ದ ಅನುಭವ ಮಂಟಪದ ಅಧ್ಯಕ್ಷತೆಯನ್ನು ಅಲ್ಲಮ‌ ಪ್ರಭುಗಳು ವಹಿಸಿದ್ದರು.

ನಿರ್ಮಾಣ ಕಾರ್ಯಕ್ಕೆ ಮೂಹೂರ್ತ

ಜೂನ್ ೩ ೨೦೨೨ ರಂದು   ನೂತನ ಅನುಭವಮಂಟಪ ನಿರ್ಮಾಣ ಕಾರ್ಯಕ್ಕೆ ಮೂಹೂರ್ತ 612 ಕೋಟಿಯ ಕಾಮಗಾರಿ , ಪುಣೆಯ ಶಿರ್ಕೆ ಕಂಪನಿಗೆ ಗುತ್ತಿಗೆ ಸಾಕಷ್ಟು ವಿಳಂಬ,ವಾದವಿವಾದಗಳ ಮಧ್ಯೆ ಕೊನೆಗೂ ಮೂಹೂರ್ತ ಕೂಡಿ ಬಂದಿದ್ದು ಜೂನ್ 3 ರಂದು ಕಟ್ಟಡದ ಕೆಲಸ ಆರಂಭ ಆಗಲಿದೆ. ತ್ರಿಪುರಾಂತ ಕೆರೆ ದಂಡೆದ 7 ಎಕರೆಯಲ್ಲಿ 108 ಅಡಿ ಎತ್ತರದ ಇಷ್ಟಲಿಂಗಾಕೃತಿಯ ಗುಮ್ಮಟ ನಿರ್ಮಿಸುವುದು .

Social Share

Leave a Reply

Your email address will not be published. Required fields are marked *