
Actor Chethan Kumar Arrest
ಬೆಂಗಳೂರು
ಫೆಬ್ರವರಿ 23 ಹಿಜಾಬ್ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಈ ವಿಚಾರವಾಗಿ ವಿವಾದಾತ್ಮಕ ಪೋಸ್ಟ್ ಹಾಕಿದ ಆರೋಪದ ಹಿನ್ನೆಲೆಯಲ್ಲಿ ನಟ ಚೇತನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಆಕ್ಷೇಪಾರ್ಹ ಟ್ವೀಟ್ ಮಾಡಿರುವ ಆರೋಪದ ಮೇಲೆ ಮೈನಾ ಖ್ಯಾತಿಯ ನಟ ಚೇತನ್‌ರಿಗೆ ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಜಾಮಿನುಗೋಸ್ಕರ ಚೇತನ್ ಪರ ವಕೀಲ ಕೆ. ಬಾಲನ್ ಅರ್ಜಿ ಸಲ್ಲಿಸಿದ್ದಾರೆ, ಇಂದು ಆಕ್ಷೇಪಣೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಈ ಸಂದರ್ಭದಲ್ಲಿ ಚೇತನ್ ಪತ್ನಿ ಮೇಘಾ ಪ್ರತಿಕ್ರಿಯೆ ನೀಡಿದ್ದು, ಚೇತನ್ ಹೋರಾಟಕ್ಕೆ ನಮ್ಮ ಬೆಂಬಲವಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನಿಸುವ ಅವಕಾಶ ಎಲ್ಲರಿಗೂ ಇದೆ, ಪೊಲೀಸ್, ಜಡ್ಜ್, ಮೋದಿ ಯಾರೇ ಆಗಿರಲಿ ಪ್ರಶ್ನಿಸುವ ಅಧಿಕಾರ ಹೊಂದಿದ್ದಾರೆ.
ಯಾವುದೇ ಕೆಟ್ಟ ಪದಗಳನ್ನು ಬಳಸಿ ಚೇತನ್ ಮಾತನಾಡಿಲ್ಲ, ಚೇತನ್ ಜೊತೆ ನಾನು ಮಾತನಾಡಿದ್ದೇನೆ, ಆತ್ಮವಿಶ್ವಾಸದಿಂದಿದ್ದಾರೆ.
ಚೇತನ್ ಬಂಧನದ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಪತ್ನಿ ಹೇಳಿದ್ದಾರೆ.Actor Chethan Kumar Arrest
ನಟ ಚೇತನ್ ಟ್ವೀಟ್

ಇದರಲ್ಲಿ ಹಿಜಾಬ್ ವಿಚಾರವನ್ನು ಪ್ರಸ್ತಾಪಿಸುತ್ತಾ ಹೈಕೋರ್ಟ್ ನ್ಯಾಯಮೂರ್ತಿಗಳೊಬ್ಬರ ವಿರುದ್ಧ ಅಕ್ಷೇಪಾರ್ಹ ವ್ಯಾಖ್ಯಾನ ಮಾಡಿದ್ದರು ಎನ್ನಲಾಗಿದೆ.
ಇದರ ವಿರುದ್ಧ ಶೇಷಾದ್ರಿಪುರಂ ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದಾರೆ.
ನಂತರ ಐಪಿಸಿ ಸೆಕ್ಷನ್ 505(2) ಮತ್ತು 504 ಅಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಎರಡು ವರ್ಷಗಳ ಹಿಂದೆ ನಟ ಚೇತನ್ ಅತ್ಯಾಚಾರ ಪ್ರಕರಣವೊಂದರ ಬಗ್ಗೆ ನ್ಯಾಯಮೂರ್ತಿಗಳನ್ನು ಪ್ರಶ್ನೆ ಮಾಡುವ ಮೂಲಕ ಟ್ವೀಟ್ ಮಾಡಿದ್ದರು.
ಇದನ್ನು ಉಲ್ಲೇಖ ಮಾಡಿ ಫೆಬ್ರವರಿ 16ರಂದು ನ್ಯಾಯಮೂರ್ತಿಗಳ ಹಿಜಾಬ್ ವಿಚಾರಣೆ ಪೀಠದಲ್ಲಿ ಇರುವ ಸಮಯದಲ್ಲಿ ಟೀಕೆ ಮಾಡಿದ್ದರು.
ಈ ಹಿನ್ನೆಲೆಯಿಂದಾಗಿ ಚೇತನ್ ಕುಮಾರ್ ಅವರನ್ನು ಬಂಧನ ಮಾಡಲಾಗಿದೆ.Actor Chethan Kumar Arrest
ಇನ್ನು ವಕೀಲ ಎಸ್ ಬಾಲನ್, “ಒಂದು ಟ್ವೀಟ್ ಆಧಾರ ಮೇಲೆ ಬಂಧನ ಮಾಡಿದ್ದಾರೆಯೇ? ಯಾರ ದೂರಿನ ಆಧಾರ ಮೇಲೆ ಬಂಧನ ಮಾಡಲಾಗಿದೆ,” ಎಂಬ ಬಗ್ಗೆಯೂ ತಿಳಿಸಿಲ್ಲ.
ಇದಕ್ಕೂಇದಕ್ಕಿಂತ ಮೊದಲು ನಟ ಚೇತನ್ ಪತ್ನಿ ಮೇಘಾ ಅವರು ಮಂಗಳವಾರ ರಾತ್ರಿ ಫೇಸ್ಬುಕ್ ಲೈವ್ ಬಂದು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
‘ನನ್ನ ಪತಿಯ ಅಪಹರಣವಾಗಿದೆ’ ಎಂದು ಹೇಳಿಕೊಂಡಿದ್ದರು, ಇದಕ್ಕೆ ಪೊಲೀಸರಿಂದ ಸ್ಪಷ್ಟನೆ ಸಿಕ್ಕಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ನ್ಯಾಯಾಧೀಶರಿಗೆ ನಿಂದಿಸಿದ ಆರೋಪ ಪ್ರಕರಣದಡಿ ಬಂಧನ ಮಾಡಿದ್ದೂ, ಸ್ವಯಂಪ್ರೇರಿತ ಕೇಸ್ ದಾಖಲಿಸಿ ನಟ ಚೇತನ್ ಅವರನ್ನು ಬಂಧಿಸಿದ್ದೇವೆ.
“ಚೇತನ್ ಅವರಿಗೆ ಯಾವುದೇ ನೋಟಿಸ್ ಕೊಟ್ಟಿಲ್ಲ, ಹಾಗೂ ನೇರವಾಗಿ ಬಂದು ಚೇತನ್ ಅವರನ್ನು ಪೊಲೀಸರು ಕರೆದುಕೊಂಡು ಹೋಗಿ ಬಂಧಿಸಿದ್ದಾರೆ.
ಚೇತನ್ ಎಲ್ಲಿದ್ದಾರೆ ಎಂದೂ ಹೇಳುತ್ತಿಲ್ಲ, ಇದೊಂದು ರೀತಿ ಕಿಡ್ನ್ಯಾಪ್ ಮಾಡಿದಂತೆ ನಮಗೆ ಅನ್ಯಾಯ ಆಗುತ್ತಿದೆ.
ಪೊಲೀಸ್ ಆದರೂ ನಮಗೆ ಮಾಹಿತಿ ನೀಡಬಹುದಿತ್ತು, ಅದನ್ನೂ ಮಾಡುತ್ತಿಲ್ಲ ಎಂದು ಚೇತನ್ ಪತ್ನಿ ಮೇಘಾ ಆರೋಪ ಮಾಡಿದ್ದಾರೆ.