2 ಕೋಟಿ ಆಫರ್ ರಿಜೆಕ್ಟ್ ಮಾಡಿದ ನಟಿ ಸಾಯಿ ಪಲ್ಲವಿ!

Sai Pallavi Rejected Ad

ಸಾಯಿ ಪಲ್ಲವಿ

ನಟಿ ಸಾಯಿ ಪಲ್ಲವಿ ಎಲ್ಲ ಸಿನಿ ತಾರೆಯರ ಹಾಗೇ ಅಲ್ಲ, ಸಾಯಿ ಪಲ್ಲವಿ ಕೆಲವು ವಿಚಾರಗಳಲ್ಲಿ ತುಂಬಾನೇ ಡಿಫ್ರೆಂಟ್.

ಮೇಕಪ್, ಲಿಪ್ ಲಾಕ್ ವಿಚಾರದಲ್ಲಿ ತಮ್ಮದೇ ಆದ ನಿರ್ಧಾರಗಳನ್ನು ಹೊಂದಿದ್ದು, ಅದರಿಂದ ಹಲವು ಬಾರಿ ಸಾಯಿ ಪಲ್ಲವಿ ಸುದ್ದಿಯಲ್ಲಿರುತ್ತಾರೆ.

ಸಾಯಿ ಪಲ್ಲವಿ ಹೆಚ್ಚಾಗಿ ಸಾಂಪ್ರದಾಯಿಕವಾಗಿ ಸೀರೆಯಲ್ಲೇ ಕಾಣಿಸಿಕೊಳ್ಳುತ್ತಾರೆ, ಅದು ಕೂಡ ಈ ನಟಿಯ ವಿಶೇಷತೆಗಳಲ್ಲಿ ಒಂದು.

ಯಾವುದೇ, ಸಿನಿಮಾ ಕಾರ್ಯಕ್ರಮ ಆದರೂ ಕೂಡ ಸಾಯಿ ಪಲ್ಲವಿ ಹೆಚ್ಚಾಗಿ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಬರುತ್ತಾರೆ.

ಇತ್ತೀಚೆಗೆ ಈಕೆ ಕಾಣಿಸಿಕೊಂಡಿದ್ದು, ಸಿನಿಮಾದ ಕಾರ್ಯಕ್ರಮದಲ್ಲಿ. ಅಲ್ಲು ಕೂಡ ರೇಶ್ಮೆ ಸೀರೆಯುಟ್ಟು ನಟಿ ಎಲ್ಲರ ಗಮನ ಸೆಳೆದಿದ್ದಾರೆ.

ಆದರೆ ಇಲ್ಲಿ ಎಲ್ಲದಕ್ಕಿಂತಲೂ ಹೆಚ್ಚಾಗಿ ಗಮನ ಸೆಳೆದ ವಿಚಾರ ಅಂದರೆ ಅದು ನಟಿ ಸಾಯಿ ಪಲ್ಲವಿ ಬಗ್ಗೆ ನಿರ್ದೇಶಕ ಸುಕುಮಾರ್ ಮಾತನಾಡಿದ್ದಾರೆ.

ನಿರ್ದೇಶಕ ಸುಕುಮಾರ್, ಸಾಯಿ ಪಲ್ಲವಿ, ಕೀರ್ತಿ ಸುರೇಶ್ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲು ಕಾರಣ ರಶ್ಮಿಕಾ ಮಂದಣ್ಣ ಸಿನಿಮಾ ಎಂದಿದ್ದಾರೆ..Sai Pallavi Rejected Ad

ನಿರ್ದೇಶಕ ಸುಕುಮಾರ್ ಮಾತು

ತೆಲುಗು ನಿರ್ದೇಶಕ ಸುಕುಮಾರ್ ರಶ್ಮಿಕಾ ಮಂದಣ್ಣ, ಶರ್ವಾನಂದ್ ಅಭಿನಯದ ‘ಆಡವಾಳ್ಳು ಮೀಕು ಜೋಹರ್ಲು’ ಸಿನಿಮಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

ಅದ್ದೂರಿ ಕಾರ್ಯಕ್ರಮದಲ್ಲಿ ನಟಿ ಸಾಯಿ ಪಲ್ಲವಿ ಕೂಡ ಭಾಗಿಯಾಗಿದ್ದರು.

ವೇದಿಕೆ ಮೇಲೆ ನಿರ್ದೇಶಕ ಸುಕುಮಾರ್ ಸಿನಿಮಾದ ಬಗ್ಗೆ ಆಡಿದ ಮಾತುಗಳು ಹೆಚ್ಚಾಗಿ ಗಮನವನ್ನು ಸೆಳೆದಿಲ್ಲ.

ಅದರ ಬದಲಿಗೆ ಸುಕುಮಾರ್ ನಟಿ ಸಾಯಿ ಪಲ್ಲವಿಯ ಬಗ್ಗೆ ಮಾತನಾಡಿದ್ದು ಹೆಚ್ಚಾಗಿ ಗಮನ ಸೆಳೆದಿದೆ, ಸಾಯಿ ಪಲ್ಲವಿ ಫೇರ್‌ನೆಸ್ ಕ್ರೀಮ್ ಜಾಹೀರಾತು ಬಿಟ್ಟಿದ್ದು, ಸುಕುಮಾರ್‌ ಅವರಿಗೆ ಉತ್ತಮ ಎನಿಸಿದೆ ಎಂದು ಹೇಳಿದರು.

2 ಕೋಟಿ ಆಫರ್ ರಿಜೆಕ್ಟ್ 

ನಟಿ ಸಾಯಿ ಪಲ್ಲವಿ ಈ ಹಿಂದೆ ಜಾಹೀರಾತು ಒಂದನ್ನು ತಿರಸ್ಕರಿಸಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು, ಫೇರ್‌ನೆಸ್ ಕ್ರೀಮ್‌ನಲ್ಲಿ ನಟಿಸಲು ಸಾಯಿ ಪಲ್ಲವಿ ತಿರಸ್ಕಾರ ಮಾಡಿದರು.actress sai pallavi

ಫೇರ್‌ನೆಸ್ ಕ್ರೀಮ್ ನೀಡುವ ಭರವಸೆ ನಕಲಿ ಎಂದು ಸಾಯಿ ಪಲ್ಲವಿ ಈ ಜಾಹೀರಾತು ಮಾಡಲು ಒಪ್ಪಿಕೊಳ್ಳುವುದಿಲ್ಲ.

ಇದನ್ನು ನೆನೆದ ಸುಕುಮಾರ್ ಅಷ್ಟೊಂದು ದುಬಾರಿ ಜಾಹೀರಾತನ್ನು ಸಾಯಿ ಪಲ್ಲವಿ ತಿರಸ್ಕರಿಸಿದ ವಿಚಾರ ಕೇಳಿ ಆಶ್ಚರ್ಯವಾಯಿತು ಎಂದರು.

ಆದರೆ ಅದರ ಹಿಂದಿನ ಉದ್ದೇಶವನು ಕೇಳಿ ನನಗೆ ತುಂಬಾ ಒಳ್ಳೆಯದು ಅನಿಸಿತು ಎಂದು ಹೇಳಿದ್ದಾರೆ.Sai Pallavi Rejected Ad

ಮುತ್ತಿನ ದೃಶ್ಯ ಮಾಡುವುದಿಲ್ಲ

ನಟಿ ಸಾಯಿ ಪಲ್ಲವಿ ಆದಷ್ಟು ನೈಜವಾಗಿ ಇರಲು ಪ್ರಯತ್ನ ಮಾಡುತ್ತಾರೆ ಅಂದರೆ ಸಿನಿಮಾದಲ್ಲೂ ಕೂಡ ಸಾಯಿ ಪಲ್ಲವಿ ಕೆಲವೊಂದು ಕಂಡೀಷನ್‌ಗಳನ್ನು ತಪ್ಪದೇ ಹಾಕುತ್ತಾರೆ.sai pallavi actress

ಸಾಯಿ ಪಲ್ಲವಿಗೆ ಲಿಪ್ ಲಾಕ್ ಮಾಡುವುದು ಅಂದರೆ ತುಂಬಾ ಅಲರ್ಜಿ.

ಹಾಗಾಗಿ ಸಾಯಿ ಪಲ್ಲವಿ ಯಾವುದೇ, ಸಿನಿಮಾ ಆಗಲಿ, ಎಷ್ಟೇ ದೊಡ್ಡ ಬಜೆಟ್ ಆಗಲಿ, ನಟ ಆಗಲಿ ಲಿಪ್ ಲಾಕ್ ಮಾಡುವುದಿಲ್ಲ.

ಚಿತ್ರದ ಚಿತ್ರೀಕರಣದ ಆರಂಭಕ್ಕೂ ಮೊದಲೇ ಈ ರೀತಿಯ ಕಂಡಿಷನ್ಗಳನ್ನೂ ಹಾಕುತ್ತಾರಂತೆ.sai palavi latest news

ಮೇಕಪ್ ಇಲ್ಲದೆ ನಟನೆ 

ಇನ್ನು ಚಿತ್ರರಂಗದಲ್ಲಿ ಮತ್ತೊಂದು ಸುದ್ದಿ ಏನೆಂದರೆ, ನಟಿ ಸಾಯಿ ಪಲ್ಲವಿ ಸಿನಿಮಾಗಳಲ್ಲಿ ಮೇಕಪ್ ಹಾಕುವುದನ್ನು ಕೂಡ ಇಷ್ಟ ಪಡುವುದಿಲ್ಲವಂತೆ.

ಆದಷ್ಟು ಮೇಕಪ್ ಇಲ್ಲದೇ ನಟಿಸಲು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರಂತೆ.sai pallavi without makeup

ಕೆಲವು ಸಿನಿಮಾಗಳಲ್ಲಿ ಸಾಯಿ ಪಲ್ಲವಿಗೆ ಮೇಕಪ್ ಕೂಡ ಹಾಕಿಲ್ಲವಂತೆ, ಇದು ಕೂಡ ಸಾಯಿ ಪಲ್ಲವಿ ಇಷ್ಟ ಪಡವ ವಿಚಾರಗಳಲ್ಲಿ ಒಂದಾಗಿದೆ.

ಹಾಗಾಗಿ ನಟಿ ಸಾಯಿ ಪಲ್ಲವಿ ಅವರನ್ನು ನ್ಯಾಚುರಲ್ ಸ್ಟಾರ್ ಅಂತಲೇ ಕರೆಯಲಾಗುತ್ತದೆ.sai pallavi makeup

ವಿರಾಟ ಪರ್ವಂ 

ಸಾಯಿ ಪಲ್ಲವಿ ಸಿನಿಮಾಗಳನ್ನು ಸಾಲು ಸಾಲಾಗಿ ಒಪ್ಪಿಕೊಳ್ಳುವುದಿಲ್ಲ, ಯಾಕೆಂದರೆ ಸಿನಿಮಾ ಮತ್ತು ಕಥೆಯ ಆಯ್ಕೆಯಲ್ಲಿ ತುಂಬಾನೇ ಸೀಮಿತ.sai pallavi new movie

ಕಥೆ ತುಂಬಾ ಇಷ್ಟ ಆದರೆ ಮಾತ್ರ ಸಿನಿಮಾ ಒಪ್ಪಿಕೊಳ್ಳುತ್ತಾರಂತೆ, ಇತ್ತೀಚೆಗೆ ರಿಲೀಸ್ ಆದ ‘ಶ್ಯಾಮ ಸಿಂಗ ರಾಯ್’ ಸಿನಿಮಾದ ಮೂಲಕ ಸಾಯಿ ಪಲ್ಲವಿ ಯಶಸ್ಸು ಕಂಡಿದ್ದಾರೆ.sai pallavi new telugu movie

ಈಗ ಸಾಯಿ ಪಲ್ಲವಿ ಅಭಿನಯದ ‘ವಿರಾಟ ಪರ್ವಂ’ ಸಿನಿಮಾ ಮಾತ್ರ ರಿಲೀಸ್‌ಗೆ ಸಿದ್ಧತೆಯಾಗಿದೆ.

ನಟ ಚೇತನ್ ಕುಮಾರಗೆ ಗಡಿಪಾರು!

https://www.google.com/search?q=way2plot&oq=w&aqs=chrome.1.69i60j69i59l2j69i57j69i60l4.919j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *