
Another shock for Instagram users
ಇನ್ಸ್ಟಾಗ್ರಾಂ
ಇನ್ಸ್ಟಾಗ್ರಾಂ ಈ ಹಿಂದೆ ಐಜಿಟಿವಿ ಆಪ್ನ ಸೇವೆಯನ್ನು ನಿಲ್ಲಿಸಲಾಗಿತ್ತು, ಇದೀಗ ಸದ್ದಿಲ್ಲದೇ ಮತ್ತೆರಡು ಆಪ್ಗಳ ಸೇವೆಯನ್ನು ನಿಲ್ಲಿಸಿ, ಬಳಕೆದಾರರಿಗೆ ಶಾಕ್ ನೀಡಿದೆ.
ಹೌದು, ಬಳಕೆದಾರರಿಗೆ ಪ್ರಿಯವಾಗಿದ್ದ ಬೂಮರಾಂಗ್ ಹಾಗೂ ಹೈಪರ್ಲ್ಯಾಪ್ಸ್ ಸ್ವತಂತ್ರ ಅಪ್ಲಿಕೇಶನ್ಗಳನ್ನು ಆಪಲ್ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್ನಿಂದ ತೆಗೆದು ಹಾಕಲಾಗಿದೆ.instagram story saver
ಬೂಮರಾಂಗ್ ಆಪ್ ಸಣ್ಣ ವಿಡಿಯೋ ತುಣುಕುಗಳನ್ನು ಲೂಪ್ ಮಾದರಿಯಲ್ಲಿ ತಯಾರಿಸಲು ಸಹಾಯ ಮಾಡುವ ಒಂದು ಆಪ್ ಆಗಿತ್ತು.
ಟೈಮ್ ಲ್ಯಾಪ್ಸ್ಗಳನ್ನು ಮಾಡಲು ಅನುಕೂಲವಾಗುವಂತೆ ಹೈಪರ್ಲ್ಯಾಪ್ಸ್ ಆಪ್ಅನ್ನು ಕೂಡ ಇನ್ಸ್ಟಾಗ್ರಾಂ ಪರಿಚಯ ಮಾಡಿತ್ತು.
ಆದರೆ ಈಗ ಎರಡೂ ಆಪ್ ಸೇವೆಗಳು ಏಕಾಏಕಿ ನಿಲ್ಲಿಸಲಾಗಿವೆ, ಗೂಗಲ್ ಪ್ಲೇ ಸ್ಟೋರ್ನಲ್ಲಿ ಬೂಮರಾಂಗ್ ಆಪ್ ಜನಪ್ರಿಯ ಆಪ್ಗಳಲ್ಲಿ ಒಂದಾಗಿತ್ತು.
ಸುಮಾರು 100 ಮಿಲಿಯನ್ಗೂ ಹೆಚ್ಚು ಬಾರಿ ಅದನ್ನು ಡೌನ್ಲೋಡ್ ಮಾಡಲಾಗಿತ್ತು, ಈ ಮೊದಲು ಬೂಮರಾಂಗ್ ಹಾಗೂ ಹೈಪರ್ಲ್ಯಾಪ್ಸ್ ಆಪ್ಗಳು ಸ್ವತಂತ್ರ ಅಪ್ಲಿಕೇಶನ್ಗಳಾಗಿದ್ದವು.
ಪ್ರಸ್ತುತ ಇನ್ಸ್ಟಾಗ್ರಾಂ ನಿರ್ವಹಿಸುತ್ತಿರುವ ಆಪ್ಗಳಲ್ಲಿ ‘ಲೇಔಟ್’ ಆಪ್ ಮಾತ್ರ ಸ್ವತಂತ್ರವಾಗಿ ಹೊರಗೆ ಲಭ್ಯಾವಾಗಿದೆ, ಇದು ಹಲವು ಫೋಟೋಗಳನ್ನು ಸೇರಿಸಿ ಒಂದೇ ಫೋಟೋ ಮಾಡುವ ಆಯ್ಕೆ ಹೊಂದಿದೆ.Another shock for Instagram users
ಐಜಿಟಿವಿ ಆಪ್ ಸೇವೆ ಇನ್ನುಮುಂದೆ ಲಭ್ಯವಿರುವುದಿಲ್ಲ ಎಂದು ಈ ಹಿಂದೆ ಇನ್ಸ್ಟಾಗ್ರಾಂ ಘೋಷಣೆ ಮಾಡಿತ್ತು.
ಕಂಪನಿ ಈ ಕುರಿತು ಸ್ಪಷ್ಟನೆ ನೀಡುತ್ತಾ, ಐಜಿಟಿವಿಯನ್ನು ಇನ್ಸ್ಟಾಗ್ರಾಂ ವಿಡಿಯೋ ಆಗಿ ರಿಬ್ರಾಂಡ್ ಮಾಡುವುದಾಗಿ ಹೇಳಿತ್ತು.
ಬೂಮರಾಂಗ್ & ಹೈಪರ್ಲ್ಯಾಪ್ಸ್ ಸೌಲಭ್ಯ
ರೀಲ್ಸ್ನಂತಹ ಉಪಕ್ರಮಗಳ ಮೇಲೆ ಉತ್ತಮವಾಗಿ ಗಮನಹರಿಸುವ ಸಲುವಾಗಿ ತನ್ನ ಸ್ವತಂತ್ರ IGTV ಅಪ್ಲಿಕೇಶನ್ ಅನ್ನು ಮುಚ್ಚುವ ಯೋಜನೆಯನ್ನು Instagram ದೃಢಪಡಿಸಿತ್ತು.
ಇದು ಅದರ ಟೈಮ್ಲ್ಯಾಪ್ಸ್ ವೀಡಿಯೊ ಅಪ್ಲಿಕೇಶನ್ ಹೈಪರ್ಲ್ಯಾಪ್ಸ್ ಅನ್ನು ಒಳಗೊಂಡಿದೆ, ಇದನ್ನು ಮೊದಲು 2014 ರಲ್ಲಿ ಪ್ರಾರಂಭ ಮಾಡಲಾಯಿತು ಮತ್ತು ಲೂಪಿಂಗ್ ವೀಡಿಯೊ ಅಪ್ಲಿಕೇಶನ್ ಬೂಮರಾಂಗ್ ಅನ್ನು 2015 ರಲ್ಲಿ ಪ್ರಾರಂಭಿಸಲಾಯಿತು.
ಎರಡರಲ್ಲಿ, ಬೂಮರಾಂಗ್ ದೊಡ್ಡ ಅನುಸ್ಥಾಪನಾ ನೆಲೆಯನ್ನು ಹೊಂದಿತ್ತು, ಆಪ್ಟೋಪಿಯಾ ಡೇಟಾವು ಬೂಮರಾಂಗ್ 301 ಮಿಲಿಯನ್ ಜೀವಿತಾವಧಿಯ ಜಾಗತಿಕ ಡೌನ್ಲೋಡ್ಗಳನ್ನು ಕಂಡಿದೆ ಎಂದು ತಿಳಿಸಿದೆ.instagram reels download
ಹೈಪರ್ಲ್ಯಾಪ್ಸ್ಗಾಗಿ ಕೇವಲ 23 ಮಿಲಿಯನ್ಗೆ ಹೋಲಿಸಿದರೆ, ಇದರ ಜೊತೆಗೆ, ಬೂಮರಾಂಗ್ ಅನ್ನು ತೆಗೆದುಹಾಕುವ ಸಮಯದಲ್ಲಿ ದಿನಕ್ಕೆ ಸರಾಸರಿ 26,000 ಡೌನ್ಲೋಡ್ಗಳನ್ನು ಹೊಂದಿತ್ತು ಎಂದು ಸಂಸ್ಥೆಯು ಗಮನ ಹರಿಸಿದೆ.
ಆದಾಗ್ಯೂ, ಬೂಮರಾಂಗ್ Apple App Store ಹಾಗೂ Google Play ಎರಡರಲ್ಲೂ ಇರುವಿಕೆಯಿಂದ ಪ್ರಯೋಜನ ಪಡೆಯಿತು.
ಪ್ರಸ್ತುತ ಎರಡು ಸ್ವತಂತ್ರ ಆಪ್ಗಳನ್ನು ತೆಗೆದಿರುವ ಬಗ್ಗೆ ಇನ್ಸ್ಟಾಗ್ರಾಂ ಅಧಿಕೃತ ಹೇಳಿಕೆ ಇನ್ನು ನೀಡಿಲ್ಲ.
ಆದರೆ ಇನ್ಸ್ಟಾಗ್ರಾಂ ಮೂಲ ಆಪ್ಗೆ ಬೂಮರಾಂಗ್ ಹಾಗೂ ಹೈಪರ್ಲ್ಯಾಪ್ಸ್ ಸೇವೆ ಸೇರಿಸುವ ಮೂಲಕ ಬಳಕೆದಾರರಿಗೆ ಎಲ್ಲಾ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ನೀಡಲು ಇನ್ಸ್ಟಾಗ್ರಾಂ ಮುಂದಾಗಿದೆ ಎಂದು ತಿಳಿಸಿದೆ.
ಇನ್ಸ್ಟಾಗ್ರಾಂ 2010ರಲ್ಲಿ ಫೋಟೋ ಹಾಗೂ ವಿಡಿಯೋ ಹಂಚಿಕೊಳ್ಳುವ ಕಾರಣದಿಂದ ಸೃಷ್ಟಿಯಾಗಿದ್ದ ಸಾಮಾಜಿಕ ಜಾಲತಾಣವಾಗಿದೆ.
ಇದನ್ನು ಕೆವಿನ್ ಸಿಸ್ಟ್ರೋಮ್ ಹಾಗೂ ಮೈಕ್ ಕ್ರೈಗರ್ ತಯಾರಿಸಿದ್ದರು, 2012ರಲ್ಲಿ ಫೇಸ್ಬುಕ್ 1 ಬಿಲಿಯನ್ ಡಾಲರ್ ನೀಡಿ ಇನ್ಸ್ಟಾಗ್ರಾಂಅನ್ನು ಖರೀದಿ ಮಾಡಿತ್ತು.Another shock for Instagram users
ಭಾರತದಲ್ಲಿ ಟಿಕ್ಟಾಕ್ ಬ್ಯಾನ್ ಆದ ನಂತರ ಇನ್ಸ್ಟಾಗ್ರಾಂ ರೀಲ್ಸ್ ಪರಿಚಯವಾಯಿತು, ಇದರ ಮೂಲಕ ಇನ್ಸ್ಟಾಗ್ರಾಂ ಮತ್ತಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ.
ಪ್ರಸ್ತುತ ಇನ್ಸ್ಟಾಗ್ರಾಂನಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳಲು ಹಲವು ರೀತಿಯ ಆಯ್ಕೆಗಳಿವೆ, ಸಣ್ಣ ತುಣುಕುಗಳು, ದೀರ್ಘ ಕಾಲಾವಧಿಯ ವಿಡಿಯೋಗಳು, ಲೈವ್ ಸ್ಟ್ರೀಮ್ಗಳನ್ನು ಮಾಡಲು ಪ್ರತ್ಯೇಕವಾದ ಆಯ್ಕೆಗಳಿವೆ.
ಇದರೊಂದಿಗೆ ಫೋಟೋ ಹಂಚಿಕೊಳ್ಳುವ ಆಯ್ಕೆ ಕೂಡ ಜನಪ್ರಿಯವಾಗಿದೆ, ರೀಲ್ಸ್ ಸೃಷ್ಟಿಸುವವರಿಗೆ ಹಣ ಗಳಿಸುವ ಆಯ್ಕೆ ನೀಡುವ ಬಗ್ಗೆಯೂ ಇನ್ಸ್ಟಾಗ್ರಾಂ ಪ್ರಸ್ತುತವಾಗಿ ಕಾರ್ಯನಿರ್ವಹಿಸುತ್ತಿದೆ.