ಏಳನೇ ಬಾರಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಮಹಿಳಾ ತಂಡ!- World Cup

World Cup

ವಿಶ್ವಕಪ್

ಆಸ್ಟ್ರೇಲಿಯಾದ ಮಹಿಳೆಯರ ಕ್ರಿಕೆಟ್ ತಂಡವು ಏಳನೇ ಬಾರಿ ಏಕದಿನ World Cup ಕಿರೀಟವನ್ನು ಧರಿಸಿದೆ.

ಇದರೊಂದಿಗೆ ವಿಶ್ವ ಕ್ರಿಕೆಟ್ ತನ್ನ ಪಾರಮ್ಯವನ್ನು ವಿಸ್ತರಿಸಿದೆ, ಭಾನುವಾರ ನಡೆದ ಫೈನಲ್ ನಲ್ಲಿ ಅಲೀಸಾ ಹೀಲಿ ದಾಖಲಿಸಿದ ಅಮೋಘ ಶತಕದ ಬಲದಿಂದ ಇಂಗ್ಲೆಂಡ್ ವಿರುದ್ಧ 71 ರನ್ ಗಳಿಂದ ಜಯಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು 50 ಓವರ್ ಗಳಲ್ಲಿ 5 ವಿಕೆಟ್ ಗಳಿಗೆ 356 ರನ್ ಗಳಿಸಲಾಗಿದೆ

ಹೀಲಿ ಶತಕದಾಟದಿಂದಾಗಿ ಆಸ್ಟ್ರೇಲಿಯಾ ಬ್ರಹತ್ ಮೊತ್ತ ದಾಖಲಿಸಲು ಸಾಧ್ಯವಾಯಿತು

ಗುರಿ ಬೆನ್ನಟ್ಟಿದ ಕಳೆದ ಬಾರಿಯ ಚಾಂಪಿಯನ್ ಇಂಗ್ಲೆಂಡ್ 43 .4 ಓವರ್ ಗಳಲ್ಲಿ 285 ರನ್ ಗಳಿಸಿ ಆಲೌಟ್ ಆಗಿದೆ 

ನಥಾಲಿ ಶಿವರ್(148 ;121 ಎ )ದಿಟ್ಟ ಆಟವಾಗಿ ಮಾತ್ರ ಇಂಗ್ಲೆಂಡ್ ಅಭಿಮಾನಿಗಳ ಮನದಲ್ಲಿಯೇ ಉಳಿಯಿತು

ಇಂಗ್ಲೆಂಡ್ ತಂಡಕ್ಕೆ ಆಸ್ಟ್ರೇಲಿಯಾದ ಮೇಗನ್ ಶುಟ್ (42 ಕ್ಕೆ 2 )ಆರಂಭದಲ್ಲಿಯೇ ಆಘಾತ ನೀಡಿದರು. ಡೇನಿಯಲ್ ವಯಟ್ ಮತ್ತು ಟ್ಯಾಮಿ ಬೆಮೌಂಟ್ ಅವರ ವಿಕೆಟ್ ಗಳನ್ನು ಕಬಳಿಸಿದರು.

ಹಾಗೆ ಅವರ ಹಾದಿಯಲ್ಲಿಯೇ ಸಾಗಿದ ಲೆಗ್ ಸ್ಪಿನ್ನರ್ ಅಲನಾ ಕಿಂಗ್ (64  ಕ್ಕೆ 3 )ಹಾಗೆ  ಇಂಗ್ಲೆಂಡ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದ್ದಾರೆ.

ಹೀಲಿ ದಾಖಲೆ

ಟಾಸ್ಕ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು, ಆಸ್ಟ್ರೇಲಿಯಾದ ಆರಂಭಿಕ ಜೋಡಿ ಹೀಲಿ ಮತ್ತು  ರಚೆಲ್ ಹೇಯ್ನ್ಸ್ ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 160 ರನ್ ಸೇರಿಸಿ ಅಮೋಘ ಆರಂಭ ನೀಡಿದ್ದಾರೆ

ಹೀಲಿ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ನಲ್ಲಿ (ಮಹಿಳೆ ಮತ್ತು ಪುರುಷರು ಸೇರಿ )ಗರಿಷ್ಠ ವೈಯಕ್ತಿಕ ಸ್ಕೋರ್ ಗಳ ದಾಖಲೆಯನ್ನು ಬರೆದಿದ್ದಾರೆ.

ಗಿಲ್ ಕ್ರಿಸ್ಟ್ (149 ;2007 ),ನಥಾಲಿ ಶಿವರ್ (148 ;ಇದೇ ಪಂದ್ಯ), ಕಿರಿ ಪಾಟಿಂಗ್ (140 ; 2003 )ಅವರನ್ನು ಹೀಲಿ ಹಿಂದಕ್ಕಿದರು.

ತಂಡವು ಗಳಿಸಿದ 356 ರನ್ ಗಳು ಎರಡನೇ ಅತೀ ಹೆಚ್ಚು ಸ್ಕೋರ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

2003 ರಲ್ಲಿ ಭಾರತದ ಎದುರು ಆಸ್ಟ್ರೇಲಿಯಾ ಪುರುಷರ ತಂಡವು 2 ವಿಕೆಟ್ ಗಳಿಗೆ 359 ರನ್ ಗಳಿಸಿ ಗರಿಷ್ಠ  ಸ್ಥಾನಕ್ಕೇರಿ ಸ್ಕೋರ್ ಪಡೆದಿದೆ.

ಸಂಕ್ಷಿಪ್ತ  ಸ್ಕೋರ್

ಆಸ್ಟ್ರೇಲಿಯಾ 50 ಓವರ್ ಗಳಲ್ಲಿ 5 ಕ್ಕೆ 356 (ಅಲೀಸಾ ಹೀಲಿ 170 ,ರಚೆಲ್ ಹೇಯ್ನ್ಸ್ 68 ,ಬೆಥ್ ಮೊನಿ 62 ಅನ್ಯಾ ಶ್ರಬ್ ಸೊಲ್ 46 ಕ್ಕೆ 3 )

ಹಾಗೆ ಇಂಗ್ಲೆಂಡ್ :43 .4 ಓವರ್ ಗಳಲ್ಲಿ 285 (ಟ್ಯಾಮಿ ಬೆಮೌಂಟ್ 27 , ಹಿಥರ್ ನೈಟ್ 26 ,ನಥಾಲಿ ಶಿವರ್ ಔಟಾಗದೆ 148 ,ಅಮಿ ಜೋನ್ಸ್ 20 ,

ಸೋಫಿಯಾ ಚಾರ್ಲೋಟ್ ಡೀನ್ 21 ,ಮೇಘನ್ ಶೂಟ್ 42 ಕ್ಕೆ 2 ಅಲನಾ ಕಿಂಗ್ 64 ಕ್ಕೆ 3 ,ಜೆಸ್ ಜಾನ್ಸೆನ್ 53 ಕ್ಕೆ 3 )

ಫಲಿತಾಂಶ ಆಸ್ಟ್ರೇಲಿಯಾ ತಂಡಕ್ಕೆ 71 ರನ್ ಗಳಿಂದ ಜಯವಾಗಿದೆ, ಪಂದ್ಯ ಮತ್ತು ಟೂರ್ನಿಯ ಆಟಗಾರ್ತಿ ಅಲೀಸಾ ಹೀಲಿ.

ಪತ್ನಿಯ ದಾಖಲೆ ಕಣ್ತುಂಬಿಕೊಂಡ ಸ್ಟಾರ್ಕ್

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಅವರು ಭಾನುವಾರ ಶತಕದ ದಾಖಲೆ ಮಾಡಿದ ತಮ್ಮ ಪತ್ನಿ ಅಲೀಸಾ ಹೀಲಿ ಅವರ ಆಟವನ್ನು ಕಣ್ತುಂಬಿಕೊಂಡರು.

ಹಾಗೆ 2015 ರಲ್ಲಿ ಆಸ್ಟ್ರೇಲಿಯಾ ಪುರುಷರ ತಂಡವು ಏಕದಿನ ಕ್ರಿಕೆಟ್ ವಿಶ್ವಕಪ್ ಗೆದೆಯಲಾಯಿತು ಆಗ ಟೂರ್ನಿಯ ಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರರಾಗಿದ್ದ ಸ್ಟಾರ್ಕ್ ಅವರೊಂದಿಗೆ ಹೀಲಿ ಟ್ರೋಫಿ ಹಿಡಿದು ಸಮಭ್ರಮಿಸಲಾಗಿದೆ.

ಇದೀಗ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಶ್ರೇಷ್ಠ ಆಟಗಾರ್ತಿ ಗೌರವಗಳಿಸಿದ ವಿಕೆಟ್ ಕೀಪರ್ ಹಿಲಿಯೊಂದಿಗೆ ಸ್ಟಾರ್ಕ್ ಸಂಭ್ರಮಿಸಿದ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.

ಹಲಾಲ್ ಎಂದರೇನು? ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ!

https://jcs.skillindiajobs.com/

Social Share

Leave a Reply

Your email address will not be published. Required fields are marked *