
ಕರ್ನಾಟಕದ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆಗೆ 2022ರಲ್ಲಿ ಇನ್ನೂ ಕಾಲ ಕೂಡಿ ಬಂದಿಲ್ಲ.
ಆದರೆ, ಬಿಜೆಪಿ ಸರ್ಕಾರದ ಪ್ರಮುಖ ಸಚಿವ, ಹಿರಿಯ ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹೀಗಾಗಿ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಮತ್ತೊಂದು ಖಾತೆ ತುಂಬಾ ಬೇಕಾಗಿದ್ದು, ಆರಗ ಜ್ಞಾನೇಂದ್ರ ಅವರಿಗೆ ಗೃಹ ಮತ್ತು ಸುನಿಲ್ ಕುಮಾರ್‌ಗೆ ಇಂಧನ ಖಾತೆ ನೀಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದ ಬೊಮ್ಮಾಯಿ.
ಈಗ ಈಶ್ವರಪ್ಪ ಬಳಿ ಇದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಯಾರಿಗೆ ನೀಡಬಹುದು ಎಂಬ ಕುತೂಹಲ ಮೂಡಿಸಿದೆ.
ಭಾರಿ ಬೇಡಿಕೆ, ಒತ್ತಡ ಕಂಡು ಬಂದರೂ ಡಿಸಿಎಂ ಹುದ್ದೆ ಸೃಷ್ಟಿಸದೇ ಸಂಪುಟ ರೂಪಿಸಿದ್ದ ಸಿಎಂ ಬೊಮ್ಮಾಯಿ.
ಮತ್ತೊಮ್ಮೆ ಸಂಪುಟ ವಿಸ್ತರಣೆ ಮಾಡಲು ಮುಂದಾಗಿದ್ದ ಕಾಲದಲ್ಲೇ ಅಕಾಲಿಕವಾಗಿ ಸಚಿವರೊಬ್ಬರು ಸಂಪುಟದಿಂದ ಹೊರ ನಡೆಯಬೇಕಾದ ಪ್ರಸಂಗ ನಡೆದಿದೆ.
ಹೈಕಮಾಂಡ್ ಅಣತಿಯಂತೆ 6 ಹೊಸಬರು, ಅನುಭವವುಳ್ಳರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದ ಬೊಮ್ಮಾಯಿ, ಈಗ ಮುಂದಿನ ಚುನಾವಣೆ ತನಕ ಹಾಲಿ ಸಂಪುಟವನ್ನೇ ಮುಂದುವರೆಸಿದರೂ ಅಚ್ಚರಿಯಾಗಬೇಕಿಲ್ಲ.
ಬಿಬಿಎಂಪಿ ಚುನಾವಣೆ, ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟುಕೊಂಡು ಬಾಕಿ ಉಳಿದಿರುವ 05 ಸ್ಥಾನಗಳನ್ನು ತುಂಬಬಹುದಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಸ್ಥಾನವನ್ನು ಆಗಸ್ಟ್ 4, 2021ರಿಂದ ಏಪ್ರಿಲ್ 15, 2022ರ ತನಕ ಕೆಎಸ್ ಈಶ್ವರಪ್ಪ ನಿಭಾಯಿಸಿದ್ದರು.
ರಾಜೀನಾಮೆಯಿಂದ ತೆರವಾದ ಈ ಖಾತೆಯನ್ನು ಸದ್ಯ ಸಿಎಂ ಬೊಮ್ಮಾಯಿ ತಮ್ಮ ಹತ್ರಾನೇ ಇಟ್ಟುಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಹಿರಿಯ ಸಚಿವರೊಬ್ಬರಿಗೆ ಹೆಚ್ಚುವರಿ ಖಾತೆ ಹೊಣೆ ನೀಡಬಹುದು.
ಸಚಿವರ ಶಿಕ್ಷಣ ಅರ್ಹತೆ
2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು, ಜಾತಿವಾರು ಲೆಕ್ಕಾಚಾರದಂತೆ ಕೂಡಾ ಲಿಂಗಾಯತ, ದಲಿತ, ಹಿಂದುಳಿತ ವರ್ಗಕ್ಕೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಲಾಗಿದೆ.
ಸಚಿವ ಸಂಪುಟದಲ್ಲಿ ಸಿಎಂ ಬೊಮ್ಮಾಯಿ ಸೇರಿದಂತೆ 17 ಸಚಿವರು ಪದವಿ ಶಿಕ್ಷಣವನ್ನು ಮುಗಿಸಿದ್ದರೆ, ಉಳಿದ 12 ಸಚಿವರಲ್ಲಿ ಪಿಯುಸಿ, ಎಸ್‌ಎಸ್‌ಎಲ್‌ಸಿ ಅಥವಾ ಅದಕ್ಕಿಂತ ಕಡಿಮೆ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ.
ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಆಯ್ಕೆಯಾದವರ ಪೈಕಿ 8 ಲಿಂಗಾಯತ, 7 ಒಬಿಸಿ, 7 ಒಕ್ಕಲಿಗ, 3 ದಲಿತ, 1 ಎಸ್ ಟಿ ಮತ್ತು ಒಬ್ಬ ಮಹಿಳೆಗೆ ಸ್ಥಾನವನ್ನು ಕಲ್ಪಿಸಲಾಗಿದೆ.
ಯಡಿಯೂರಪ್ಪ ಸಂಪುಟದಲ್ಲಿದ್ದ ಜಗದೀಶ್ ಶೆಟ್ಟರ್, ಆರ್. ಶಂಕರ್, ಸಿ. ಪಿ. ಯೋಗೇಶ್ವರ್, ಅರವಿಂದ ಲಿಂಬಾವಳಿ, ಶ್ರೀಮಂತ ಪಾಟೀಲ್, ಎಸ್. ಸುರೇಶ್ ಕುಮಾರ್ ಮತ್ತು ಲಕ್ಷ್ಮಣ ಸವದಿ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿತ್ತು.
ಬೊಮ್ಮಾಯಿ ಸಚಿವ ಸಂಪುಟ-Bommai New Cabinet
ಕ್ರಮ ಸಂ. | ಬಸವರಾಜ ಬೊಮ್ಮಾಯಿ ಸಚಿವ ಸಂಪುಟ | ಖಾತೆ |
01 | ಬಸವರಾಜ ಬೊಮ್ಮಾಯಿ | ಮುಖ್ಯಮಂತ್ರಿ, DPAR, ಹಣಕಾಸು, ಗೃಹ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಗುಪ್ತಚರ (ಗೃಹ ಖಾತೆಯಿಂದ), ಸಂಪುಟ ವ್ಯವಹಾರ, |
02 | ಅರಗ ಜ್ಞಾನೇಂದ್ರ | ಗೃಹ(ಗುಪ್ತಚರ ಹೊರತುಪಡಿಸಿ) |
03 | ಗೋವಿಂದ ಎಂ ಕಾರಜೋಳ | ಬೃಹತ್ ಹಾಗೂ ಮಧ್ಯಮ ನೀರಾವರಿ ಇಲಾಖೆ(ಜಲ ಸಂಪನ್ಮೂಲ) |
04 | ಡಾ. ಸಿ.ಎಸ್ ಅಶ್ವಥ ನಾರಾಯಣ | ಉನ್ನತ ಶಿಕ್ಷಣ ಸಚಿವ, ಐಟಿ-ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ, ಹೆಚ್ಚುವರಿಯಾಗಿ ಕೌಶಲ್ಯಾಭಿವೃದ್ಧಿ |
05 | ಆರ್. ಅಶೋಕ | ಕಂದಾಯ(ಮುಜರಾಯಿ ಹೊರತುಪಡಿಸಿ) |
06 | ಉಮೇಶ್ ಕತ್ತಿ | ಅರಣ್ಯ, ಆಹಾರ, ಪಡಿತರ ವಿತರಣೆ, ಗ್ರಾಹಕ ವ್ಯವಹಾರ |
07 | ಬಿ. ಶ್ರೀರಾಮುಲು | ಸಾರಿಗೆ, ಎಸ್ ಟಿ ಅಭಿವೃದ್ಧಿ |
08 | ಬಿ. ಸಿ ನಾಗೇಶ್ | ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಾಗೂ ಸಕಾಲ |
09 | ವಿ ಸೋಮಣ್ಣ | ವಸತಿ |
10 | ಸುನಿಲ್ ಕುಮಾರ್ | ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ |
11 | ಎಸ್ ಅಂಗಾರ | ಬಂದರು, ಒಳನಾಡು ಸಾರಿಗೆ ಮತ್ತು ಮೀನುಗಾರಿಕೆ |
12 | ಕೋಟಾ ಶ್ರೀನಿವಾಸ ಪೂಜಾರಿ | ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಕಲ್ಯಾಣ |
13 | ಜೆ. ಸಿ ಮಾಧುಸ್ವಾಮಿ | ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರ |
14 | ಚಂದ್ರಕಾಂತಗೌಡ ಚೆನ್ನಪ್ಪಗೌಡ ಪಾಟೀಲ | ಲೋಕೋಪಯೋಗಿ |
15 | ಶಂಕರ್ ಬಿ, ಪಾಟೀಲ ಮುನ್ನೇನಕೊಪ್ಪ | ಜವಳಿ, ಸಕ್ಕರೆ |
16 | ಪ್ರಭು ಚೌಹಾಣ್ | ಪಶು ಸಂಗೋಪಣೆ |
17 | ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್ | ಮುಜರಾಯಿ, ಹಜ್ ಮತ್ತು ವಕ್ಫ್ |
18 | ಆಚಾರ್ ಹಾಲಪ್ಪ ಬಸಪ್ಪ | ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ, ಹಿರಿಯ ನಾಗರಿಕರ ಸಬಲೀಕರಣ |
19 | ಆನಂದ್ ಸಿಂಗ್ | ಪ್ರವಾಸೋದ್ಯಮ, ಪರಿಸರ |
20 | ಕೆ. ಸಿ ನಾರಾಯಣ ಗೌಡ | ಕ್ರೀಡೆ, ಯುವಜನ, ರೇಷ್ಮೆ |
21 | ಮುರುಗೇಶ್ ನಿರಾಣಿ | ಬೃಹತ್ ಹಾಗೂ ಮಧ್ಯಮ ಕೈಗಾರಿಕೆ |
22 | ಅರೆಬೈಲು ಹೆಬ್ಬಾರ್ ಶಿವರಾಂ | ಕಾರ್ಮಿಕ |
23 | ಎಸ್. ಟಿ ಸೋಮಶೇಖರ್ | ಸಹಕಾರ |
24 | ಬಸನಗೌಡ ಚನ್ನಬಸವನಗೌಡ ಪಾಟೀಲ್ | ಕೃಷಿ |
25 | ಬಿ.ಎ ಬಸವರಾಜ (ಬೈರತಿ) | ನಗರಾಭಿವೃದ್ಧಿ(ಬೆಂಗಳೂರು ಹೊರತುಪಡಿಸಿ) |
26 | ಡಾ. ಕೆ ಸುಧಾಕರ್ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ |
27 | ಕೆ ಗೋಪಾಲಯ್ಯ | ಅಬಕಾರಿ |
28 | ಎನ್ ನಾಗರಾಜ (ಎಂ.ಟಿ.ಬಿ) | ಸಣ್ಣ ಕೈಗಾರಿಕೆ, ಸಾರ್ವಜನಿಕ ವಲಯ ಕೈಗಾರಿಕೆ |
29 | ಮುನಿರತ್ನ | ತೋಟಗಾರಿಕೆ, ಯೋಜನೆ ಹಾಗೂ ಸಾಂಖ್ಯಿಕ |