
BESCOM
ತುರ್ತು ಸಂದರ್ಭಗಳಲ್ಲಿ ಸಮಸ್ಯೆಗಳ ಬಗ್ಗೆ ದೂರು ನೀಡಲು ಮತ್ತು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಎಲ್ಲರಿಗು ಅನುಕೂಲವಾಗುವಂತೆ ಬೆಸ್ಕಾಂ 11 ವಾಟ್ಸಾಪ್ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.
ಮುಂದಿನ ದಿನಗಳಲ್ಲಿ ಸಾರ್ವಜನಿಕರು ತಮ್ಮ ವಾಟ್ಸಾಪ್ ಮೂಲಕವೇ ಬೆಸ್ಕಾಂಗೆ ದೂರು, ಮಾಹಿತಿಯನ್ನು ನೀಡಬಹುದಾಗಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ತಮ್ಮ ಗ್ರಾಹಕರಿಗೆ ತುರ್ತು ಸಂದರ್ಭಗಳಲ್ಲಿ ಸ್ಪಂದಿಸುವ ಸಲುವಾಗಿ 11 ವಾಟ್ಸಾಪ್ ಸಂಖ್ಯೆಗಳನ್ನು ನೀಡಲಾಗಿದೆ.
ಕರ್ನಾಟಕದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ. ಸುನೀಲ್ ಕುಮಾರ್ ಸೂಚನೆಯ ನಂತರ ಈ ಕ್ರಮವು ಕೈಗೊಳ್ಳಲಾಗಿದೆ.
ಏರಿಕೆಯಾಗುತ್ತಿದ್ದ ಗ್ರಾಹಕರ ದೂರು
ಈಗ ಇರುವ ತುರ್ತು ಸಹಾಯವಾಣಿ 1912 ಸಂಖ್ಯೆಗೆ ಮಳೆ ಮತ್ತಿತರ ತುರ್ತು ಸಂದರ್ಭಗಳಲ್ಲಿ ಅನಿಯಮಿತ ಕರೆಗಳು ಬರುತ್ತಿರುವುದರಿಂದ ಸಮಸ್ಯೆಗೆ ಸರಿಯಾಗಿ ಸ್ಪಂದಿಸಲು ಸಿಬ್ಬಂದಿಗೆ ತುಂಬಾ ಕಷ್ಟವಾಗುತ್ತಿತ್ತು.
ಹಲವಾರು ಬಾರಿ ತಮ್ಮ ಕರೆಗಳಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ನಾಗರಿಕರು ಕೂಡ ದೂರಿದರು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಮಹತ್ವದ ನಿರ್ಣಯ ಕೈಗೊಂಡಿರುವ ಬೆಸ್ಕಾಂ ಗ್ರಾಹಕರ ಅನುಕೂಲಕ್ಕಾಗಿ ವಾಟ್ಸಪ್ ಸಹಾಯವಾಣಿಯನ್ನು ಸ್ಥಾಪಿಸಿದೆ.
ಗ್ರಾಹಕರು ತಮ್ಮ ಪ್ರದೇಶದಲ್ಲಿನ ಸಮಸ್ಯೆಗಳು ಮತ್ತು ವಿದ್ಯುತ್ ಸಂಬಂಧಿತ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸಂದೇಶವನ್ನು ವಾಟ್ಸಪ್ ಮೂಲಕ ಕಳುಹಿಸಬಹುದು ಹಾಗು ಅದಕ್ಕೆ ತ್ವರಿತ ಪರಿಹಾರ ಪಡೆಯಬಹುದು.
ಈಗ ಅಸ್ತಿತ್ವದಲ್ಲಿರುವ 1912 ಸಹಾಯವಾಣಿ ಸಂಖ್ಯೆಯೊಂದಿಗೆ ವಾಟ್ಸಪ್ ಸಹಾಯವಾಣಿ ಸಂಖ್ಯೆಗಳು ಕೂಡ ಕಾರ್ಯನಿರ್ವಹಿಸುತ್ತವೆ.
ಸಚಿವ ಸುನಿಲ್ ಕುಮಾರ್
ಗ್ರಾಹಕರ ವಿದ್ಯುತ್ ಸ್ಥಗಿತ ಮತ್ತು ವಿದ್ಯುತ್-ಸಂಬಂಧಿತ ದೂರುಗಳಿಗೆ ತ್ವರಿತ ಪರಿಹಾರಕ್ಕಾಗಿ, ಬೆಸ್ಕಾಂ ತನ್ನ ವ್ಯಾಪ್ತಿಯ 8 ಜಿಲ್ಲೆಗಳಿಗೆ 11 ವಾಟ್ಸಾಪ್ ಸಹಾಯವಾಣಿ ಸಂಖ್ಯೆಗಳನ್ನು ಒದಗಿಸಿ ಕೊಡುತ್ತಿದೆ.
ಸದ್ಯ ಅಸ್ತಿತ್ವದಲ್ಲಿರುವ ಬೆಸ್ಕಾಂ 1912 ರ ಸಹಾಯವಾಣಿ ಸಂಖ್ಯೆಯು ತುರ್ತು ಸಂದರ್ಭಗಳಲ್ಲಿ ದೂರುಗಳು ಹೆಚ್ಚಾಗುತ್ತಿದ್ದ ಕಾರಣ, ಗ್ರಾಹಕರು 1912 ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.
ಗ್ರಾಹಕರು ಎದುರಿಸುತ್ತಿರುವ ಅನಾನುಕೂಲತೆಯನ್ನು ಪರಿಗಣಿಸಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ 8 ಜಿಲ್ಲೆಗಳಿಗೆ ವಾಟ್ಸಪ್ ಸಂಖ್ಯೆಗಳನ್ನು ನೀಡುವಂತೆ ಬೆಸ್ಕಾಂಗೆ ಸೂಚಿಸಿದ್ದಾರೆ ಎಂದು ಬೆಸ್ಕಾಂ ಮಾಹಿತಿ ತಿಳಿಸಿದೆ.
ದೂರುಗಳಿಗೆ ತಕ್ಷಣ ಸ್ಪಂದಿಸುವ ಕ್ರಮ
ಸಹಾಯವಾಣಿ ಕೇಂದ್ರಗಳಲ್ಲಿನ ಗ್ರಾಹಕ ಸೇವಾ ಕಾರ್ಯನಿರ್ವಾಹಕರು ವಾಟ್ಸಪ್ ಸಂದೇಶಗಳನ್ನು ಸ್ವೀಕರಿಸುತ್ತಾರೆ ಹಾಗು ಆದ್ಯತೆಯ ಆಧಾರದ ಮೇಲೆ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಬೆಸ್ಕಾಂ ಕೇಂದ್ರಗಳಿಗೆ ಮಾಹಿತಿಯನ್ನು ನೀಡುತ್ತಾರೆ.
ಈ ಸೌಲಭ್ಯವು ಗ್ರಾಹಕರಿಗೆ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ತ್ವರಿತ ಪರಿಹಾರಗಳನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಬೆಸ್ಕಾಂ ವಿಷಯ ತಿಳಿಸಿದೆ.
ಸಹಾಯವಾಣಿ ಕೇಂದ್ರಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ವಿಭಾಗ ಕಚೇರಿಗಳು & ಸಹಾಯವಾಣಿ ಕೇಂದ್ರಗಳ ನಡುವೆ ಸಮನ್ವತೆ ಸಾಧಿಸಲು, ಸಹಾಯವಾಣಿ ಕೇಂದ್ರಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ.
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು (ಎಇಇ) ಸಹಾಯವಾಣಿ ಕೇಂದ್ರಗಳಲ್ಲಿ ಪಾಳಿ ಆಧಾರದ ಮೇಲೆ ಕೆಲಸ ಮಾಡುತ್ತಾರೆ. ಎಂಜಿಯರ್ ಕಾರ್ಯನಿರ್ವಹಿಸುವುದರಿಂದ ಸಹಾಯವಾಣಿ ಕೇಂದ್ರಗಳಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸಲು ಕೇಂದ್ರಗಳು ಮತ್ತು ವಿಭಾಗ ಕಚೇರಿಗಳ ನಡುವೆ ಉತ್ತಮ ಸಮನ್ವಯವನ್ನು ತರಲು ಸಹಾಯವಾಗುತ್ತದೆ ಎಂದು ಬೆಸ್ಕಾಂನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿಯನ್ನು ತಿಳಿಸಿದ್ದಾರೆ.
8 ಜಿಲ್ಲೆಗಳಲ್ಲಿ ವಾಟ್ಸಪ್ ನಂಬರ್
ಬೆಸ್ಕಾಂ ಗ್ರಾಹಕರಿಗೆ 11 ವಾಟ್ಸಪ್ ಸಂಖ್ಯೆಗಳನ್ನು ಒದಗಿಸಿ ಕೊಡಲಾಗಿದೆ, ನಾಲ್ಕು ವೃತ್ತಗಳನ್ನು (ದಕ್ಷಿಣ, ಉತ್ತರ, ಪಶ್ಚಿಮ ಮತ್ತು ಪೂರ್ವ) ಹೊಂದಿರುವ ಬೆಂಗಳೂರು ನಗರ ಜಿಲ್ಲೆಗೆ ನಾಲ್ಕು ಪ್ರತ್ಯೇಕ ವಾಟ್ಸಪ್ ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ.
ಸಹಾಯವಾಣಿ ನಂಬರ್
ಬೆಂಗಳೂರು ನಗರ ಜಿಲ್ಲೆ ದಕ್ಷಿಣ ವೃತ್ತ – 8277884011
ಪಶ್ಚಿಮ ವೃತ್ತ – 8277884012
ಪೂರ್ವ ವೃತ್ತ – 8277884013
ಉತ್ತರ ವೃತ್ತ – 8277884014
ಕೋಲಾರ – 8277884015
ಚಿಕ್ಕಬಳ್ಳಾಪುರ – 8277884016
ಬೆಂಗಳೂರು ಗ್ರಾಮಾಂತರ – 8277884017
ರಾಮನಗರ – 8277884018 ತುಮಕೂರು – 8277884019
ಚಿತ್ರದುರ್ಗ – 8277884020
ಗೋಡ್ಸೆ ಬಗ್ಗೆ ಪಠ್ಯಪುಸ್ತಕದಲ್ಲಿ ಇರಬಹುದು? ಇದಕ್ಕೆ ಸಾಹಿತಿಗಳ ವಿರೋಧ!