
Bhuban Badyakar
ಸೋಶಿಯಲ್ ಮೀಡಿಯಾದಲ್ಲಿ ಕೆಲ ದಿನಗಳ ಹಿಂದೆ ಬದಾಮ್. .. ಬದಾಮ್ . . .ಎ ದಾದಾ ಕಚ್ಚಾ ಬದಾಮ್. . ಅಮರ್ ಕಚೆ ನೆಯ್ಕೋ ಬುಬು ವಜಾ ಬದಾಮ್. ಹಾಡಿನದ್ದೇ ಸದ್ದೂ ಹೆಚ್ಚಾಗಿತ್ತು.
ಈ ಕಚ್ಚಾ ಬದಾಮ್ ಹಾಡಿನ ಸೃಷ್ಟಿಕರ್ತ ಭುಬನ್ ಬಡ್ಯಾಕರ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ, ಯಾಕಂದರೆ ಕಚ್ಚಾ ಬಾದಾಮ್ ಖ್ಯಾತಿಯ ಭುವನ್ ಬಡ್ಯಾಕರ್ ನಟನೆಗೆ ಪಾದಾರ್ಪಣೆ ಮಾಡಲಿದ್ದಾರೆಂಬ ಮಾಹಿತಿ ಒಂದು ತಿಳಿದು ಬಂದಿದೆ.
ಆದರೆ ಯಾವ ಚಿತ್ರ ಅಥವಾ ಏನಂದು ಯಾವುದೇ ಒಂದು ಅಧಿಕೃತ ಮಾಹಿತಿ ಇನ್ನು ಲಭ್ಯವಾಗಿಲ್ಲ, ಒಟ್ಟಿನಲ್ಲಿ ಭುಬನ್ ಬಡ್ಯಾಕರ್ ಅವರ ಒಂದು ಹಾಡಿನಿಂದ ಅನೇಕ ಪ್ರಸಿದ್ಧಿಗೆ ಕಾರಣವಾಯಿತು ಎಂದರೂ ತಪ್ಪಾಗಲಾರದು.
ಚಿತ್ರರಂಗಕ್ಕೆ ಎಂಟ್ರಿ ಭುಬನ್ ಬಡ್ಯಾಕರ್!
ಕಚ್ಚಾ ಬದಾಮ್ ಖ್ಯಾತಿಯ ಭುಬನ್ ಬಡ್ಯಾಕರ್ ಅವರು ಇದೀಗ ನಟನೆ ಮಾಡಲಿದ್ದಾರಂತೆ ಎಂದು ಮಾಹಿತಿ ತಿಳಿದು ಬಂದಿದೆ. ಆದರೆ ಇವರು ಯಾವ ಚಿತ್ರದಲ್ಲಿ ನಟಿಸುತ್ತಿದ್ದಾರೆ, ಯಾವ್ ಪಾತ್ರ ಮಾಡುತ್ತಿದ್ದಾರೆ, ಯಾವ ಭಾಷೆಯಲ್ಲಿ ನಟಿಸುತ್ತಿದ್ದಾರೆ ಎಂದು ಅಧಿಕೃತ ಮಾಹಿತಿ ಲಭ್ಯವಿಲ್ಲ.
ಭುಬನ್ ಬಡ್ಯಾಕರ್ ಅವರ ಖ್ಯಾತಿಗೆ ಅವರು ನಟನೆಗೆ ಬಂದಿರಬಹುದೆಂದು ಅನೇಕರು ಹೇಳುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಈ ಸುದ್ದಿ ತುಂಬಾ ವೈರಲ್ ಆಗುತ್ತಿದೆ.
ಹೊಸ ಮನೆಯ ವೀಡಿಯೊ ವೈರಲ್!
ಇತ್ತೀಚೆಗೆ, ಭುವನ್ ಅವರ ಹೊಸ ಮನೆಯ ಒಂದು ವೀಡಿಯೊ ವೈರಲ್ ಆಗಿತ್ತು, ಭುವನ್ ಇಡೀ ಮನೆಯನ್ನು ಅಮೃತಶಿಲೆಯಿಂದ ಮಾಡಿದರಂತೆ . ಮನೆಯ ಸೀಲಿಂಗ್ ಮೇಲೆ ‘ರಾಧೆ ರಾಧೆ’ ಎಂದು ಬರೆಯಲಾಗಿದೆ.
ಮನೆಯ ಇಂಟೀರಿಯರ್ ಡೆಕೊರೇಶನ್ ನಲ್ಲಿ ಆಧುನಿಕತೆಯೊಂದಿಗೆ ಬೆಂಗಾಲಿ ಸ್ಪರ್ಶ ಎದ್ದು ಕಾಣುತ್ತಿದೆ.
ಭುವನ್ ಇಂಟೀರಿಯರ್ ಡೆಕೊರೇಶನ್ ಗೆ ಮಾತ್ರ 3-4 ಲಕ್ಷ ರೂಪಾಯಿ ಖರ್ಚು ಮಾಡಿದ್ದರಂತೆ. ಇಲ್ಲಿಯವರೆಗೆ ಮನೆ ಕಟ್ಟಲು 6 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಭುವನ್ ಈ ಮಾಹಿತಿಯನ್ನು ತಿಳಿಸಿದ್ದಾರೆ.
3 ಲಕ್ಷ ರೂ.ಗಳ ಒಪ್ಪಂದ!
“ಭುಬನ್ ಅವರೊಂದಿಗೆ ನಾವು 3 ಲಕ್ಷ ರೂ.ಗಳ ಒಪ್ಪಂದ ಮಾಡಿಕೊಂಡಿದ್ದೇವೆ ಹಾಗು ಅವರಿಗೆ ಇಂದು 1.5 ಲಕ್ಷ ರೂ.ಗಳ ಚೆಕ್ ನೀಡಲಾಗಿದೆ ಎಂದು ಹೇಳಿದ್ದಾರೆ.
ಉಳಿದ ಹಣವನ್ನು ಅವರಿಗೆ ಮುಂದಿನ ವಾರ ನೀಡಲಾಗುವುದು, ಹಾಗೆಯೇ ಇದು ಅವರಿಗೆ ದೀರ್ಘ ಕಾಲದಿಂದ ಬಾಕಿ ಇತ್ತು” ಎಂದು ಗೋಧೋಳಿಬೆಳ ಮ್ಯೂಸಿಕ್ ಸಂಸ್ಥೆಯ ಗೋಪಾಲ್ ಘೋಷ್ ತಿಳಿಸಿದ್ದಾರೆ.
ಹೊಟ್ಟೆಪಾಡಿಗಾಗಿ ಹಾಡುತ್ತಿದ್ದ ಭುಬನ್!
ಭುಬನ್ ತನ್ನ ಹೊಟ್ಟೆಪಾಡಿಗೆ ಬೀದಿ ಬೀದಿಗಳಲ್ಲಿ ಕಡಲೆ ಕಾಯಿಯನ್ನು ಮಾರುವ ಸಮಯದಲ್ಲಿ ಹಾಡನ್ನು ಹಾಡುತ್ತ ಕಡಲೆ ಕಾಯಿಯನ್ನು ಮಾರುತ್ತಿದ್ದರು.
ಅಸಲಿಗೆ ಈ ಹಾಡು ಸೃಷ್ಟಿಯಾಗಿದ್ದು ಸಂಗೀತದ ಮೇಲಿನ ಆಸಕ್ತಿಯಿಂದಲ್ಲ, ಹೊರತಾಗಿ ಹೊಟ್ಟೆಪಾಡಿನ ಅನಿವಾರ್ಯತೆಯಿಂದ ಅಷ್ಟೇ.
ಬೀರ್‍ಭೂಮ್ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ಹೋಗುವ ಮೂಲಕ ಕಡಲೇಕಾಯಿ ಮಾರುವಾಗ, ಗ್ರಾಹಕರನ್ನು ಆಕರ್ಷಿಸಲೆಂದು ಭುಬನ್ ಈ ಹಾಡನ್ನು ಸೃಷ್ಟಿಸಿದರಂತೆ.
ತನ್ನ ದ್ವಿಚಕ್ರ ವಾಹನದಲ್ಲಿ ಕಡಲೇಕಾಯಿ ಬೀಜದ ಚೀಲ ಮತ್ತು ತಕ್ಕಡಿಯನ್ನು ಇಟ್ಟುಕೊಂಡು ಊರೂರು ಸುತ್ತಿ ಕಡಲೇಕಾಯಿ ಮಾರುವ ಅವರ ಈ ಹಾಡು ಗ್ರಾಹಕರನ್ನು ತುಂಬಾ ಆಕರ್ಷಣೆ ಮಾಡಿದೆಯಂತೆ.
ಕಡಲೇಕಾಯನ್ನು ಖರೀದಿಸುವ ಗ್ರಾಹಕರು ಬದಾಮ್ ಬದಾಮ್ ಹಾಡನ್ನು ಕೇಳುತ್ತಾ ಅಲ್ಲೇ ನಿಲ್ಲುತ್ತಿದ್ದರು, ಇನ್ನು, ಕಚ್ಚಾ ಬದಾಮಂ ಹಾಡು ರಿಮಿಕ್ಸ್ ಮಾಡಲಾಗಿದ್ದು, ಯೂಟ್ಯೂಬ್‍ನಲ್ಲಿ 50 ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ.