
Bidar News
ಬೀದರ
ಬೀದರ ಜಿಲ್ಲೆಯ ಬ್ರಿಮ್ಸ್ ಆಸ್ಪತ್ರೆಯಲ್ಲಿ ಹಲವಾರು ರೋಗಿಗಳು, ವೈದ್ಯರು, ಹಾಗೂ ನರ್ಸ್ ಮಧ್ಯೆಯೇ ಕೆಲವು ಜನರು ಆಸ್ಪತ್ರೆಗೆ ನುಗ್ಗಿ ಅಲ್ಲಿನ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ವ್ಯಕ್ತಿ ಒಬ್ಬನಿಗೆ ಚಿಕಿತ್ಸೆಗೆಂದು ಇಟ್ಟಿದ ಕತ್ತರಿ, ಬ್ಲೆಡ್, ಮತ್ತು ಕುರ್ಚಿ, ಟೇಬಲ್ ಹಾಗೂ ಪಕ್ಕದಲ್ಲೇ ಇದ್ದ ಸಲೈನ್ ಸ್ಟ್ಯಾಂಡ್ ಹೀಗೆ ಹಲವು ವಸ್ತುಗಳನ್ನು ಎತ್ತಿ ಹಾಕಿ ಮಾರಣಾಂತಿಕ ಹಲ್ಲೆಯ ಘಟನೆಯು ಗುರುವಾರ ನಡೆದಿದೆ.
ಜಿಪಂ ಮಾಜಿ ಸದಸ್ಯ ಸದಸ್ಯ ಫಿರೋಜ್ ಖಾನ್ ಮತ್ತು ಅಬ್ದುಲ್ ರೌಫ್ ಎಂಬುವವರ ಮಧ್ಯ ಹಳೆಯ ದ್ವೇಷವೇ ಈ ಜಗಳಕ್ಕೆ ಕಾರಣವಾಗಿದೆ.
2020ರ ಹಳೆಯ ಪ್ರಕರಣವೊಂದರ ಕುರಿತಂತೆ ನ್ಯಾಯಾಲಕ್ಕೆ ಹಾಜರಾಗಿದ್ದ ಈ ಇಬ್ಬರು ರಾಜಿಸಂಧಾನಕ್ಕೆ ಒಪ್ಪದೇ ಹೊರಬಂದು ಮಾತಿನ ಚಕಮುಕಿ ನಡೆಸಿ ನಂತರ ಇಲ್ಲಿನೆ ಮಾನಿಯಾರ್ ತಾಲೀಮ್ ಪ್ರದೇಶದಲ್ಲಿ ಕೈ ಕೈ ಮಿಲಾಯಿಸಿ ಗಾಯಗೊಂಡಿದ್ದರು.
ICU ಘಟಕ ಫಿರೋಜ್ ಖಾನ್ ಅವರ ಪುತ್ರರಿಬ್ಬರು ಹಾಗೂ ರೌಫ್ ತುರ್ತು ಚಿಕಿತ್ಸೆಗೆ ದಾಖಲಾಗಿದ್ದರು.
ಇದೆ ಸಮಯದಲ್ಲಿ ಹಲವು ಆಸ್ಪತ್ರೆಗೆ ನುಗ್ಗಿ ಭಾರಿ ಗಲಾಟೆ ನಡೆಸಿದ್ದು, ಇಡೀ ಜಿಲ್ಲಾ ಆಸ್ಪತ್ರೆಯ ಅವರಣವೇ ಆತಂಕದಲ್ಲಿತ್ತು.
ICU ಘಟಕ ರಣರಂಗದಂತೆ ಪರಿವರ್ತನೆಯಾಗಿದ್ದು, ತಮ್ಮ ಚಿಕಿತ್ಸೆಗೆಂದು ಬಂದಿದ್ದ ಇತರ ರೋಗಿಗಳು, ಆಸ್ಪತ್ರೆಯ ವೈದ್ಯರು, ಆಸ್ಪತ್ರೆಯ ಸಿಬ್ಬಂದಿಗಳು ಹೆದರಿ ಹೊರಗೆ ಓಡಿ ಬಂದರು.Bidar
ಚಿಕಿತ್ಸಾ ಕೋಣೆ ಪರಿಸ್ಥಿತಿ
ಬ್ರಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಕೊನೆಯಲ್ಲಿ ರೌಫ್ ಮೇಲೆ ಮಾರಣಾಂತಿಕ ಹಲ್ಲೆಯನ್ನು ನಡೆಸಿದ್ದು, ಈ ಸಂದರ್ಭದಲ್ಲಿ ಕೋಣೆಯ ತುಂಬಾ ರಕ್ತ ಸಿಕ್ತವಾಗಿತ್ತು.News
ಆಸ್ಪತ್ರೆಯ ಸಾಮಗ್ರಿಗಳು ಒಡೆದು ಹೋಗಿದ್ದವು, ರೌಫ್ ಮೇಲೆ ಹಲ್ಲೆ ಮಾಡುವ ಸಮಯದಲ್ಲಿ ಕಾರದ ಪುಡಿಯನ್ನು ಎರಚಿ ಕಣ್ಣು ಕಾಣದಂತೆ ಮಾಡಲಾಗಿದೆ ಎಂದು ಫಿರೋಜ್ ಖಾನ್ ಪುತ್ರರು ಹಾಗೂ ಅವರ ಜೊತೆಯಲ್ಲಿದ್ದವರ ವಿರುದ್ಧ ಆರೋಪವನ್ನು ಮಾಡಲಾಗಿದೆ.
ರೌಫ್ ಗೆ ಸ್ಥಳಾಂತರ-Bidar News
ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.Hospital
ಬಹಳ ಗಂಭೀರವಾಗಿ ಗಾಯಗೊಂಡ ಅಬ್ದುಲ್ ರೌಫ್ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಗೆ ರವಾನೆ ಮಾಡಲಾಗಿದೆ.BRIMS
ಈ ಘಟನೆಯಲ್ಲಿ ಗಾಯಗೊಂಡ ಫಿರೋಜ್ ಖಾನ್ ಮತ್ತು ಆತನ ಇಬ್ಬರು ಪುತ್ರರು ಜಿಲ್ಲಾಸ್ಪತ್ರೆಯಲ್ಲಿಯೇ ಚಿಕಿತ್ಸೆಗೆ ದಾಖಾಲಾಗಿದ್ದರೆ.Bidar News
ಬೆಚ್ಚಿಬಿದ್ದ ಜನ
ಒಟ್ಟಾರೆಯಾಗಿ ಹೇಳುವುದಾದರೆ ನಗರದ ಹೃದಯ ಭಾಗದಲ್ಲಿರುವ ಜಿಲ್ಲಾ ಆಸ್ಪತ್ರೆ ಬ್ರಿಮ್ಸ್ ತುರ್ತು ಚಿಕಿತ್ಸಾ ಕೊಠಡಿಯಲ್ಲಿ ಚಿಕಿತ್ಸೆಗೆ ದಾಖಲಾದ ರೋಗಿಯ ಮೇಲೆ ಕಾರದ ಪುಡಿ ಹಾಕಿ, ಅಲ್ಲಿದ್ದ ವಸ್ತುಗಳಿಂದ ಹಲ್ಲೆ ನಡೆಸಿದ ಈ ಜಗಳವು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸುವಂತಿದೆ.
ಜಿಲ್ಲೆಯಲ್ಲಿ ಪೊಲೀಸ್ ಬಿಗಿ ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡಿದೆ. ಪೊಲೀಸರಿ ಆ ಘಟನಾಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಎರಡು ಗುಂಪುಗಳ ಕಡೆಯಿಂದ ದೂರು ಹಾಗೂ ಪ್ರತಿ ದೂರು ದಾಖಲಾಗುವ ಸಂಭವವಿದೆ.BRIMS Bidar
S.P. ಬೀದರ-Bidar News
ಹಳೆಯ ದ್ವೇಷದ ಹಿನ್ನಲೆಯಲ್ಲಿ ಎರಡು ಗುಂಪುಗಳ ಮಧ್ಯ ಜಗಳ ನಡೆದಿದ್ದು, ಜಿಲ್ಲೆಯ ಸಾರ್ವಜನಿಕ ಸ್ಥಳದಲ್ಲಿ ಅದರಲ್ಲೂ ಆಸ್ಪತ್ರೆಗೆ ನುಗ್ಗಿ ಹಲ್ಲೆ ಮಾಡಿರುವ ಕುರಿತಂತೆ ಎಲ್ಲಾ ಸಿಸಿಟಿವಿ, ವಿಡಿಯೋ ತುಣುಕುಗಳು ನಮಗೆ ಸಿಕ್ಕಿವೆ.
ಹಲ್ಲೆ ನಡೆಸಿದ ಮತ್ತು ಅದರ ಕುಮ್ಮಕ್ಕು ನೀಡಿದ ಪ್ರತಿಯೊಬ್ಬರನ್ನು ಬಂಧಿಸಿ ಅವರ ಮೇಲೆ ಕಠಿಣವಾದ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ.
ಮತ್ತು ಇನ್ತಹ ಘಟನೆ ನಡೆಯಲು ಕಾರಣರಾದವರ ಮೇಲೆಯೂ ಶಿಸ್ತು ಕ್ರಮ ಕೈಗೊಂಡು ಇನ್ಮುಂದೆ ಇಂಥ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುತ್ತೇನೆ.