ಬೀದರ್ ಮೆಡಿಕಲ್ ಕಾಲೇಜ್ ನಲ್ಲಿ ಹಿಜಾಬ್ ಧರಿಸಿದರೆ ನೋ ಎಂಟ್ರಿ!

bidar-hijab-news

ಬೀದರ್

ರಾಜ್ಯದಲ್ಲಿ ಹಿಜಾಬ್- ಕೇಸರಿ ಶಾಲು ವಿವಾದ ಜೋರಾಗಿ ನಡೆದಿದೆ. ಈ ನಡುವೆ ಬೀದರ್​ನಲ್ಲಿ ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಅವಕಾಶ ನೀಡದ ಘಟನೆ ಬೆಳಕಿಗೆ ಬಂದಿದೆ.

ಬೀದರ್​ನ ಬ್ರಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ನಿನ್ನೆ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ  ತುಂಬಾ ವೈರಲ್ ಆಗುತ್ತಿದೆ.

ನಿನ್ನೆ ಬಿಎಸ್ಸಿ ನರ್ಸಿಂಗ್ ಪರೀಕ್ಷೆ ವೇಳೆ ಹಿಜಾಬ್ ಹಾಕಿಕೊಂಡು ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿಲ್ಲ, ನಿನ್ನೆ ನಡೆದ ಹಿಜಾಬ್ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ.bidar-hijab-news

ಬಿಎಸ್ಸಿ ನರ್ಸಿಂಗ್ ನಿನ್ನೆ ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕರು ಪ್ರವೇಶ ಮಾಡಲು ನಿರಾಕರಿಸಿದ್ದಾರೆ, ಈ ಕುರಿತು ಪರೀಕ್ಷಾ ಮೇಲ್ವಿಚಾರಕ ಡಾ.ಪ್ರದೀಪ್ ರಾಠೋಡ ಸ್ಪಷ್ಟನೆ ನೀಡಿದ್ದಾರೆ.

ಹಿಜಾಬ್ ಧರಿಸಿ ಪರೀಕ್ಷೆ ಬರೆದರೆ ನಕಲು ಸಾಧ್ಯತೆ ಹಿನ್ನೆಲೆಯಲ್ಲಿ ಹಿಜಾಬ್ ಗೆ ಅನುಮತಿ ‌ಕೊಟ್ಟಿಲ್ಲ ಎಂದು  ತಿಳಿಸಿದ್ದಾರೆ.bidar-hijab-news

ಹಾಲ್ ಟಿಕೇಟ್ ನೋಡಿ ಪರೀಕ್ಷೆ ಬರೆಯೋ ಅಭ್ಯರ್ಥಿ ಎಂದು ಖಚಿತ ಪಡಿಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮೊಬೈಲ್ ನಿಷೇಧ

ಹಿಜಾಬ್- ಕೇಸರಿ ಶಾಲು ಕದನಗಳ ನಂತರ ಎಚ್ಚೆತ್ತ ಶಿಕ್ಷಣ ಇಲಾಖೆ, ಸ್ಕೂಲ್ ಕಾಲೇಜು ಆವರಣದಲ್ಲಿ ಮೊಬೈಲ್‌ ಬಳಕೆ ಸಂಪೂರ್ಣ ನಿಷೇಧಕ್ಕೆ ಚರ್ಚೆ ನಡೆಸುತ್ತಿದೆ.

ಸ್ಕೂಲ್ ಕಾಲೇಜಿನಲ್ಲಿ ನಡೆಯುವ ಸಣ್ಣ ಪುಟ್ಟ ಘಟನೆಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಸೋಶಿಯಲ್ ಮೀಡಿಯಾದಲ್ಲಿ ಅಗತ್ಯವಿಲ್ಲದ ವಿಡಿಯೋ ಮಾಡುತ್ತಿದ್ದಾರೆ.

ಶಾಲಾ ಕಾಲೇಜು ಆವರಣದಲ್ಲಿ ಮೊಬೈಲ್‌ ಬಳಕೆ ನಿಷೇಧ ಮಾಡಲು ತಜ್ಞರ ಸಲಹೆ ನೀಡಿದ್ದಾರೆ ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.bidar-hijab-news

ಈಗಾಗಲೇ ತರಗತಿ ಒಳಗೆ ಮೊಬೈಲ್ ನಿಷೇಧವಿದ್ದು, ಕಟ್ಟುನಿಟ್ಟಾಗಿ ಜಾರಿಗೆ ತರಲು ಚರ್ಚೆ ಮಾಡಲಾಗುತ್ತಿದೆ.

ಪರೀಕ್ಷೆ ವೇಳೆ ವಿದ್ಯಾರ್ಥಿಗಳನ್ನ ಪರಿಶೀಲನೆ ಮಾಡುವ ಹಾಗೆ, ಇನ್ನು ಮುಂದೆ ತಪಾಸಣೆ ಮಾಡಿ ಒಳ ಬಿಡುವುದರ ಬಗ್ಗೆ ಚರ್ಚೆ ಮಾಡಲಾಗುತ್ತಿದೆ.

ತುರ್ತು ಮಧ್ಯಪ್ರವೇಶಕ್ಕೆ ಸುಪ್ರೀಂ ನಕಾರ

ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಮತ್ತು ಇತರ ಧಾರ್ಮಿಕ ಉಡುಪುಗಳನ್ನು ನಿಷೇಧಿಸುವ ಕರ್ನಾಟಕ ಹೈಕೋರ್ಟ್‌ನ ಮಧ್ಯಂತರ ಆದೇಶದ ವಿರುದ್ಧದ ಮನವಿಗಳನ್ನು ತುರ್ತಾಗಿ ವಿಚಾರಣೆ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಸುಪ್ರೀಂ ಕೋರ್ಟ್ ಸೂಕ್ತ ಸಮಯದಲ್ಲಿ  ಮಾತ್ರ ಮಧ್ಯ ಪ್ರವೇಶಿಸುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರು ಹೇಳಿದ್ದಾರೆ.

ಈ ವಿಷಯಗಳನ್ನು ರಾಷ್ಟ್ರ ಮಟ್ಟಕ್ಕೆ ಹರಡಲು ಬಿಡಬೇಡಿ, ಸೂಕ್ತ ಸಮಯದಲ್ಲಿ ಮಾತ್ರ ನಾವು ಹಸ್ತಕ್ಷೇಪ ಮಾಡುತ್ತೇವೆ ಎಂದು ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ಕುರಿತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಗವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಈಗಾಗಲೇ ಹೈಕೋರ್ಟ್​ ನಲ್ಲಿ ವಾದ ವಿವಾದಗಳು ಪ್ರಾರಂಭವಾಗಿದ್ದು, ನಿನ್ನೆ ಮಧ್ಯಂತರ ಆದೇಶ ಬಂದಿದೆ.

ನಾವು  ಸಂವಿಧಾನಕ್ಕೆ, ನ್ಯಾಯಾಲಯಕ್ಕೆ ಗೌರವ ಕೊಡುತ್ತೇವೆ.

ಕೋರ್ಟಿನ ಆದೇಶ ಬರೋವರೆಗೂ ಎರಡೂ ಜನ ಸಾಂಪ್ರದಾಯಿಕ ಉಡುಪುಗಳನ್ನು  ತೊಡಬಾರದು.

ಮೊದಲು ಇದ್ದಂತ ವ್ಯವಸ್ಥೆಯಲ್ಲೆ ಮುಂದುವರೆಯುವಂತೆ ಕೋರ್ಟನ ಮಧ್ಯಂತರ ಆದೇಶ ಬಂದಿದೆ ಎಂದು ಹೇಳಿದರು.

ಕೋರ್ಟ್‌ನ ತೀರ್ಪು ಎಲ್ಲರೂ ಗೌರವ ನೀಡಬೇಕು ನ್ಯಾಯಾಲಯದ ಪೀಠದ ನಿರ್ಣಯಕ್ಕೆ ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕು.

ಇದು ಧಾರ್ಮಿಕ  ಕೋಮು ಗಲಭೆಗಳಿಗೆ ದಾರಿಮಾಡಿ ಕೊಡುತ್ತದೆ.

ಮತ್ತೆ ಶುರುವಾಗಿದೆ ಪುನೀತ್ ರಾಜಕುಮಾರ್ ಅಬ್ಬರ !-kannada james teaser

https://tv9kannada.com/latest-news

Social Share

Leave a Reply

Your email address will not be published. Required fields are marked *