ನರೇಗಾ ಉತ್ತಮ ಕೆಲಸಕ್ಕಾಗಿ ಬೀದರ ಮಹಿಳೆಗೆ ಸನ್ಮಾನ!-Bidar News

Bidar News

ಬೀದರ

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹಾತ್ಮಾ ಗಾಂಧಿ ರಾಷ್ಟೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮಹಿಳೆಯ ಉತ್ತಮವಾಗಿ ಕಾರ್ಯ ನಿರ್ವಹಿಸಿ ಮಹಿಳೆಯರು ಆರ್ಥಿಕ ಮತ್ತು ಸಾಮಾಜಿಕ ಸಬಲರಾಗಲು ಉತ್ತಮ ಕಾರ್ಯ ನಿರ್ವಹಿಸಿದ ಮಹಿಳಾ ಮೇಟಿಗಳಿಗೆ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಬೆಂಗಳೂರಿನ ಪಂಚಾಯತ್ ರಾಜ್ ಇಲಾಖೆಯ ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನ ಮಾಡಲಾಯಿತು.womens day

ಈ ಕಾರ್ಯಕ್ರಮದಲ್ಲಿ ಬೀದರ ಜಿಲ್ಲೆಯಿಂದ ಸುಂಧಾಳ್ ಗ್ರಾಮ ಪಂಚಾಯತಿಯ ಯನಗುಂದ ಗ್ರಾಮದ ಮಹಿಳಾ ಮೇಟಿ ಕಲಾವತಿ ಗಂಡ ಶರಣಪ್ಪರವರು ಇಲಾಖೆಯ ವಿಶೇಷ ಸನ್ಮಾನಕ್ಕೆ ಪಾತ್ರರಾಗಿದ್ದು, ಜಿಲ್ಲಾ ಪಂಚಾಯತ್ ಬೀದರ ತಾಲ್ಲೂಕ ಪಂಚಾಯತ್ ಔರಾದ್ ಮತ್ತು ಗ್ರಾಮ ಪಂಚಾಯತ್ ಸುಂಧಾಳ್ ಸಿಬ್ಬಂದಿ ಇದಕ್ಕೆ ಹರ್ಷ ವ್ಯಕ್ತ ಪಡಿಸಿದ್ದಾರೆ.bidar news

ಸನ್ಮಾನಿತರಾದ ಕಾಲಾವತಿಯವರು ಮಹಿಳೆ ಆರ್ಥಿಕ ಸಬಲೀಕರಣಕ್ಕೆ ಸರಕಾರದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅತ್ಯಂತ ಸಹಾಯಕವಾಗಿದ್ದು ಲೊಕ್ಡೌನ್ ನಂತಹ ಸಮಯದಲ್ಲಿ ಕೆಲಸ ನೀಡಿದ ಫಲವಾಗಿ ಬದುಕು ಸಾಗಿಸಲು ನೆರವಾಗಿದೆ. ಇದರಿಂದ ನನ್ನಂತಹ ಅನೇಕ ಮಹಿಳೆಯರಿಗೆ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.bidar karnataka

ಬಲೂನ್ ಮಾರಾಟದ ಹುಡುಗಿ ಇವಾಗ ಮಾಡೆಲ್! ಅಚ್ಚರಿ ಮೂಡಿಸಿದ ಕಥೆ.

https://jcs.skillindiajobs.com/

Social Share

Leave a Reply

Your email address will not be published. Required fields are marked *