ಟೆಂಡರ್ ಸಿಕ್ಕರೂ ಪೂರ್ಣಗೊಳ್ಳದ ಬೀದರ & ಔರಾದ ರಸ್ತೆ!

Bidar To Aurad Road

ಬೀದರ್ ಮತ್ತು ಔರಾದ ನಡುವಿನ ರಸ್ತೆ

Aurad-Bidar Road ಮಧ್ಯೆದ ಹೆದ್ದಾರಿಯನ್ನು ದುರಸ್ತಿ ಮಾಡುವಂತೆ ಜಿಲ್ಲೆಯ ಜನರು ಐದು  ವರ್ಷಗಳಿಂದ  ಸರ್ಕಾರಕ್ಕೆ ಮನವಿಯನ್ನು ಮಾಡುತ್ತಲೇ ಇದ್ದಾರೆ.

ಆದರೆ ಅದರ ಬಗ್ಗೆ ಯಾರೊಬ್ಬರೂ ಗಂಭೀರವಾಗಿಲ್ಲ. ಹೆದ್ದಾರಿಯ ಸುಧಾರಣೆಯ ಬಗ್ಗೆ ಜನರ  ಪಾಲಿಗೆ ಕನಸಾಗಿದೆ.

Bidar to Aurad ಮಧ್ಯದ ರಸ್ತೆಯು ಬಹಳ ಹಾಳಾಗಿದ್ದು, ಈ ರಸ್ತೆಯು ಮೃತ್ಯ ಕೂಪವಾಗಿ ಪರಿಣಮಿಸಿದೆ.

ಇದು ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಟ್ಟರು ಕಳೆದ ಆರು ತಿಂಗಳಗಳಿಂದ ಗುಂಡಿಯನ್ನು ಮುಚ್ಚಲು ಆಗುತ್ತಿಲ್ಲ.

ಮೂರು ತಿಂಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದಾಗಿ ಈ ಹೆದ್ದಾರಿಯು ಸಂಪೂರ್ಣವಾಗಿ ಗುಂಡಿಗಳ ಸ್ವರೂಪವನ್ನು ಪಡೆದಿದೆ.

ಬೀದರ, ಔರಾದ್ ತಾಲ್ಲೂಕಿನ ಜನರಿಗೆ ರಸ್ತೆ ಕಾಮಗಾರಿ ಆಗದಕ್ಕೆ ಅನಾಥ ಪ್ರಜ್ಞೆಯನ್ನು ಕಾಡುತ್ತಿತ್ತು ಇವಾಗ ಅದು ದೂರುವಾಗಿದ್ದು, ಕಳೆದ ಹತ್ತಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದ ಜನರ ನೋವಿಗೆ ಕಾರಣವಾಗಿದೆ.

ಈ ರಾಷ್ಟ್ರೀಯ ಹೆದ್ದಾರಿಯಿಂದಾಗಿ ಔರಾದ್ ತಾಲೂಕಿಗೂ ಕೂಡಾ ಕಾರ್ಖಾನೆಗಳು ಬರಬಹುದು, ಹಿಂದೂಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಈ ತಾಲೂಕು ಇನ್ನಾದರೂ ಹಿಂದುಳಿದ ತಾಲೂಕು ಎಂಬ ಹಣೆ ಪಟ್ಟಿ ಕಳಚಬಹುದೇನೋ ಎಂಬುದು ಸ್ಥಳೀಯರ ಆಶಯವಾಗಿದೆ.

ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಹ ದುಸ್ಥಿತಿ ನಿರ್ಮಾಣವಾಗಿದೆ,

ಮೂರ ತಿಂಗಳ ಹಿಂದೆ ಸುರಿದ ಧಾರಾಕಾ ಮಳೆಯಿಂದಾಗಿ ಈ ಹೆದ್ದಾರಿಯು ಸಂಪೂರ್ಣವಾಗಿ  ಗುಂಡಿಗಳ ರೀತಿಯಲ್ಲಿ ತಯಾರಾಗಿವೆ, ವಾಹನ ಸವಾರರು ಓಡಾಡಲು ಪರದಾಡುತ್ತಿದ್ದಾರೆ.

ಚಿಕ್ಕಪೇಟೆ ಹಾಗೂ ಜನವಾಡ ಮಧ್ಯದ ರಸ್ತೆಯು ತುಂಬಾನೇ ಹಾಳಾಗಿದ್ದು, ರೋಡಿನ ಧೂಳಿನಿಂದ ರಸ್ತೆಯ ಹತ್ತಿರ ಇರುವ ಕೃಷಿಯ ಭೂಮಿಯ ಬೆಳೆಗಳ ಮೇಲೆ ಧೂಳನ್ನು ಕುಡುತ್ತಿರುವುದರಿಂದ ಬೆಳೆಯ ಹಾನಿಗೆ ಕಾರಣವಾಗುತ್ತಿದೆ. 

ರೈತರ ಬೆಳೆಗಳು ನಾಶವಾಗುತ್ತಿವೆ, ರೋಡ್ ಹಾಳಾಗಿದ್ದರಿಂದ ಬಹಳಷ್ಟು ಜನರಿಗೆ ರಸ್ತೆ ಅಪಘಾತವಾಗುತ್ತಿದೆ, ಜನರು ರಾತ್ರಿವೇಳೆ ಓಡಾಡುವಾಗ ಜನರಿಗೆ ತುಂಬಾ ಕಷ್ಟದಾಯಕವಾಗಿದ್ದು, ಹಾಗೂ ಅಪಘಾತವಾಗುವ ಸಂಭವವಿರುತ್ತದೆ.

ಈ ರಸ್ತೆಯು ಹಾಳಾಗಿದ್ದರಿಂದ ಬಸ್ಸುಗಳು ಬರಲು ಬಹಳ ತಡವಾಗಿ ಬರುತ್ತಿವೆ, ಇದರಿಂದಾಗಿ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ಹೋಗಲು ತೊಂದರೆಯಾಗಿತ್ತಿದೆ. 

ಪ್ರಯಾಣ ಮಾಡುವ ಜನಕ್ಕೆ ಹಾಗೂ ಅಕ್ಕ ಪಕ್ಕದಲ್ಲಿದ್ದ ಜನಗಳಿಗೆ ರಸ್ತೆಯ ಧೂಳಿನಿಂದ ಅವರ ಆರೋಗ್ಯದ ಮೇಲೆ  ಪರಿಣಾಮ ಬೀರುತ್ತದೆ, ಇಂತಹ ಕೆಟ್ಟ ಪರಿಸ್ಥಿತಿಯಲ್ಲೂ ಅದರ ಕಾಮಗಾರಿ ಕೆಲಸ ನಡೆಯುತ್ತಿಲ್ಲ.

ರಸ್ತೆಯ ಕಾಮಗಾರಿ ಟೆಂಡರ್

Aurad-Bidar ರಸ್ತೆಯ ಮೇಲೆ ಸಾವಿರಾರು ವಾಹನಗಳು ಓಡಾಡುತಿದ್ದು, ಇದು ಒಂದು ರಾಜ್ಯದಿಂದ ಇನೊಂದ ರಾಜ್ಯಕ್ಕೆ ಹೋಗುವ ರಸ್ತೆಯು ಕೂಡ ಇದಾಗಿದೆ.

ಟೆಂಡರ್ ಆಗಿ ಯಾವತ್ತೋ ಆರಂಭವಾಗಬೇಕಾಗಿದ್ದ ರಸ್ತೆ ಕಾಮಗಾರಿ ಸಂಸದರು – ಗುತ್ತಿಗೆದಾರನ ಹೊಂದಾಣಿಕೆ ಕೊರತೆಯಿಂದ ಮೂರು ವರ್ಷದಿಂದ ಕೆಲಸ ನಿಂತಿದೆ.

45 ಕಿಲೋಮೀಟರ್ ಉದ್ದದ ಔರಾದ್-ಬೀದರ್ ರಸ್ತೆಯನ್ನು 2017 ಜನವರಿ 3ರಂದು ರಾಷ್ಟ್ರೀಯ ಹೆದ್ದಾರಿಯಾಗಿ News ಘೋಷಣೆ ಮಾಡಲಾಗಿತ್ತು.

ಈ ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿ ಪಡಿಸುವ ಮೂಲ ಕೆಲಸವು ಶುರುವಾಗಿರಲಿಲ್ಲ,  ಮುಂಚೆಯೇ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿದ್ದ ಈ ರಸ್ತೆಯನ್ನು ರಾಷ್ಟ್ರೀಯ Highway ಕಲ್ಬುರ್ಗಿ ವಿಭಾಗಕ್ಕೆ ಹಸ್ತಾಂತರ ಮಾಡಲಾಯಿತು.

ಆದರೂ ಕೂಡ ಈ ರಸ್ತೆಯ ಕಾಮಗಾರಿ ಮಾತ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕೈಗೆತ್ತಿಕೊಳ್ಳಲೇ ಇಲ್ಲ. ಹೀಗಾಗಿ ಔರಾದ್-ಬೀದರ್ ರಸ್ತೆಯಲ್ಲಿ ವಾಹನ ಸವಾರರು ಓಡಾಡಲಾಬೇಕಾದರೆ ಪರದಾಡುವಂತಿದೆ.

ಆದ್ರೆ ಇವಾಗ ದ್ವೀಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ  ಔರಾದ್ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 161(ಎ)ರ 45 ಕಿ.ಮೀ.

ಕಾಮಗಾರಿಗೆ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ದೆಹಲಿಯಿಂದಲೇ ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆಯನ್ನು ನೀಡಿದ್ದಾರೆ.

ಈ ರಸ್ತೆಯು 335 ಕೋಟಿ ವೆಚ್ಚದಲ್ಲಿ ದ್ವಿಪಥದ ಹೆದ್ದಾರಿ ನಿರ್ಮಾಣವಾಗಲಿದೆ, ಇನ್ನೂ ಈ ಕಾಮಗಾರಿ ಈ ಹಿಂದೆಯೇ ಹೆದ್ದಾರಿ ಟೆಂಡರ್ ಪ್ರಕ್ರಿಯೆ 2019 ಜುಲೈ 1ಕ್ಕೆ ಮುಗಿದು ಅರ್ಹ ಕಂಪನಿಗೆ ಕಾಮಗಾರಿಯು ಸಿಗಬೇಕಿತ್ತು.

ಆದರೆ, ತಾಂತ್ರಿಕ ಕಾರಣದಿಂದ ಟೆಂಡರ್‌ನಿಂದ ಹೊರಗಿಡಲಾಗಿದ್ದ ಹೈದರಾಬಾದ್‍ನ ಟ್ರ್ಯಾಕ್ ಆ್ಯಂಡ್ ಟವರ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ದೆಹಲಿ ಹೈಕೋರ್ಟ್ ಮೊರೆ ಹೋಗಿ ತಡೆಯಾಜ್ಞೆಯನ್ನು ತಂದಿದೆ.

ಹೀಗಾಗಿ ಈ ಕಾಮಗಾರಿಗೆ ಕೆಲಸವೂ ವಿಳಂಬವಾಯಿತು, ಆದರೆ ಹೈಕೋರ್ಟ್ ಕಂಪನಿಯ ಅರ್ಜಿಯನ್ನು ತಿರಸ್ಕರಿಸಿದ್ದು, ಸರ್ಕಾರದ ಪರವಾಗಿ ತೀರ್ಪುನ್ನು ನೀಡಿದೆ.

ಹೀಗಾಗಿ Bidar ಜನರ ಬಹುದಿನದ ಕನಸಾಗಿದ್ದ ಬೀದರ್- ಔರಾದ್ ರಸ್ತೆ ಕಾಮಗಾರಿಗೆ ಶಂಕು ಸ್ಥಾಪನೆ ನೇರವೇರಿದ್ದು ಶಿಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ.

ಎರಡು ವರ್ಷಗಳ ಅವಧಿಯಲ್ಲಿ ಈ ರಸ್ತೆ ಕಾಮಗಾರಿ ಮುಗಿದು ಸಾರ್ವಜನಿಕರ ಓಡಾಟಕ್ಕೆ ಬಳಕೆಯಾಗಲಿದೆ ಎಂದು ಪ್ರಭು ಚೌಹಾಣ್ ಹೇಳಿದ್ದರು.

ಬೀದರ ಬ್ರಿಮ್ಸ್ ಆಸ್ಪತ್ರೆಯಲ್ಲಿ ಮಾರಣಾಂತಿಕ ಹಲ್ಲೆ!-Bidar News

https://jcs.skillindiajobs.com/

Social Share

Leave a Reply

Your email address will not be published. Required fields are marked *