ಬೀದರ-ಯಶವಂತಪುರ ರೈಲು ಕಲಬುರಗಿಯಿಂದ ಸಂಚಾರ !

Bidar To Yashvanthpura Via Kalaburagi

ಬೀದರ ಜಿಲ್ಲೆ

ಕಲಬುರಗಿ ಭಾಗದ ಜನರ ಬಹುದಿನಗಳ ಬೇಡಿಕೆಗೆ ರೈಲ್ವೆ ಇಲಾಖೆ ಒಪ್ಪಿಗೆಯನ್ನು ನೀಡಿದೆ.

ವಾರದಲ್ಲಿ ನಾಲ್ಕು ದಿನ ಸಂಚಾರ ನಡೆಸುವ ಬೀದರ್-ಯಶವಂತಪುರ ರೈಲು ಕಲಬುರಗಿ ಮಾರ್ಗವಾಗಿ ಸಂಚಾರ ಮಾಡಲಿದೆ.

ಬೀದರ್ ಸಂಸದ ಹಾಗು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ.

‘ಬೀದರ್-ಯಶವಂತಪುರ ರೈಲು ಕಲಬುರಗಿ ಮಾರ್ಗವಾಗಿ ಚಲಿಸಬೇಕೆನ್ನುವುದು ನನ್ನ ಕ್ಷೇತ್ರದ ಜನತೆಯ ಕನಸಾಗಿದೆ.” ಎಂದು ಹೇಳಿದ್ದಾರೆ.

ಕಲಬುರಗಿ ಮೂಲಕ ಬೀದರ್-ಯಶವಂತಪುರ ರೈಲು ಸಂಚಾರ ನಡೆಸಲು ಇಲಾಖೆ ಒಪ್ಪಿಗೆಯನ್ನು ನೀಡಿದೆ.

ಮುಂದಿನ 15 ದಿನದೊಳಗೆ ರೈಲು ಸಂಚಾರಕ್ಕೆ ರೈಲ್ವೆ ಖಾತೆ ಸಚಿವರಿಂದ ಚಾಲನೆ ನೀಡಲಾಗುತ್ತದೆ ಎಂದು ಸಂಸದರು ಫೇಸ್‌ಬುಕ್ ಪೋಸ್ಟ್ ಮೂಲಕ ಮಾಹಿತಿಯನ್ನು ನೀಡಿದ್ದಾರೆ.Bidar To Yashvanthpura Via Kalaburagi

ರೈಲಿನ ಸಂಖ್ಯೆ 16571 ಯಶವಂತಪುರ-ಬೀದರ್ ನಡುವೆ ಮತ್ತು ರೈಲು ಸಂಖ್ಯೆ 16572 ಬೀದರ್-ಯಶವಂತಪುರ ನಡುವೆ ಸಂಚಾರ ನಡೆಸುತ್ತದೆ.

ಬೀದರ – ಯಶವಂತಪುರ ಈ ರೈಲುಗಳು ವಾರದಲ್ಲಿ ನಾಲ್ಕು ದಿನಗಳ ಕಾಲ ಸಂಚಾರ ನಡೆಸಲಿವೆ.bidar new train

ರೈಲಿನ ಸಮಯ ಪಟ್ಟಿ 

01 – ರೈಲು ಸಂಖ್ಯೆ 16571 ಯಶವಂತಪುರ-ಬೀದರ್ ಭಾನುವಾರ, ಸೋಮವಾರ, ಮಂಗಳವಾರ ಮತ್ತು ಗುರುವಾರ ಯಶವಂತಪುರದಿಂದ ಸಂಜೆ 7 ಗಂಟೆಗೆ ಹೋರಾಡುತ್ತದೆ.

ವಾಡಿ, ಕಲಬುರಗಿ, ತಾಜಸುಲ್ತಾನಪುರ, ಕಮಲಾಪುರ, ಹುಮನಾಬಾದ್, ಹಳ್ಳಿಖೇಡ ಮಾರ್ಗವಾಗಿ ಸಂಚಾರ ಮಾಡಿ, ಮರುದಿನ ಬೆಳಗ್ಗೆ 8.45ಕ್ಕೆ ಬೀದರ್ ತಲುಪಲಿದೆ.

02 – ರೈಲು ಸಂಖ್ಯೆ 16571 ಬೀದರ್-ಯಶವಂತಪುರ ಸೋಮವಾರ, ಮಂಗಳವಾರ, ಬುಧವಾರ ಮತ್ತು ಶುಕ್ರವಾರ ಬೀದರ್‌ನಿಂದ ಸಂಜೆ 6.15ಕ್ಕೆ ಹೊರಡಿ, ಇದೇ ಮಾರ್ಗದ ಮೂಲಕ ಸಂಚಾರ ನಡೆಸಿ ಮರುದಿನ ಬೆಳಗ್ಗೆ 7.40ಕ್ಕೆ ಬೆಂಗಳೂರಿನ ಯಶವಂತಪುರ ತಲುಪುತ್ತದೆ.

03 – ಬೀದರ್-ಯಶವಂತಪುರ ರೈಲು ಕಲಬುರಗಿ ಮಾರ್ಗವಾಗಿ ಸಂಚಾರ ನಡೆಸುವುದರಿಂದ ಬೀದರ್ ಕ್ಷೇತ್ರದ ಜನರಿಗೆ ಸಹಾಯವಾಗಲಿದೆ.bidar to bangalore

ಮುಂದಿನ 15 ದಿನಗಳಲ್ಲಿ ಕಲಬುರಗಿ ಮಾರ್ಗವಾಗಿ ರೈಲು ಸಂಚಾರ ನಡೆಸಲು ಚಾಲನೆಯನ್ನು ನೀಡುವ ನಿರೀಕ್ಷೆ ಇದೆ.

ಮುಂದಿನ ದಿನಗಳಲ್ಲಿ ಕಲಬುರಗಿ ಮಾರ್ಗವಾಗಿ ಬೀದರ್‌ಗೆ ಇನ್ನೂ ಹೆಚ್ಚಿನ ರೈಲುಗಳು ಸಂಚಾರ ನಡೆಸಲಿವೆ ಎಂದು ಸಚಿವ ಭಗವಂತ ಖೂಬಾ ಅವರು ಹೇಳಿದ್ದಾರೆ.Bidar To Yashvanthpura Via Kalaburagi

ಕಲಬುರಗಿ ಮಾರ್ಗವಾಗಿ ರೈಲು ಸಂಚಾರ ನಡೆಸಲು ಒಪ್ಪಿಗೆ ನೀಡಿದ ರೈಲ್ವೆ ಸಚಿವರಿಗೆ ಧನ್ಯವಾದವನ್ನು ಸಲ್ಲಿಸಿದ್ದಾರೆ.

ರೈಲು ಸೇವೆ ರದ್ದು

ದೇಸೂರು-ಖಾನಾಪುರ-ಗುಂಜಿ ಭಾಗದಲ್ಲಿ ದೇಸೂರು ಮೊದಲನೇ ಹಂತದ ಜೋಡಿ ಮಾರ್ಗ ಕಾರ್ಯವು ನಡೆಯುತ್ತಿರುವುದರಿಂದ ಈ ಕೆಳಕಂಡ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.bidar new train bangalore

ಮಾರ್ಚ್ 5 ರಿಂದ 20ರ ತನಕ ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17317 ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ-ದಾದರ್ ನಿತ್ಯ ಸೇವೆಯ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದುಗೊಳಿಸಿದೆ.

ಮಾರ್ಚ್ 6 ರಿಂದ 21ರ ತನಕ ದಾದರ್ ನಿಲ್ದಾಣದಿಂದ ಆರಂಭವಾಗುವ ರೈಲು ಸಂಖ್ಯೆ 17318 ದಾದರ್-ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿತ್ಯ ಸೇವೆಯ ಎಕ್ಸ್‌ಪ್ರೆಸ್ ರೈಲು ಸೇವೆ ರದ್ದು ಎಂದು ಪ್ರಕಟಣೆ.

ಭಾಗಶಃ ರದ್ದು

ಮಾರ್ಚ್ 1 ರಿಂದ 31ರ ತನಕ ಮೈಸೂರು-ಅರಸೀಕೆರೆ ಭಾಗದ ನಡುವೆ ಇಂಜಿನಿಯರಿಂಗ್ ಸಂಬಂಧಿತ ಕಾಮಗಾರಿ ನಡೆಯುವ ಹಿನ್ನಲೆಯಲ್ಲಿ ಕೆಳಕಂಡ ರೈಲುಗಳ ಸೇವೆಯನ್ನು ಭಾಗಶಃ ರದ್ದು ಮಾಡಲಾಗಿದೆ.

ದಿನಾಂಕ 1/3/2022 ರಿಂದ 31/3/2022ರ ತನಕ ರೈಲು ಸಂಖ್ಯೆ 07313 ಮೈಸೂರು-ಯಶವಂತಪುರ ನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್ ರೈಲಿನ ಸೇವೆಯು ಮೈಸೂರು-ಹಾಸನ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ.bidar new train

ಹಾಗೂ ಈ ರೈಲು ಹಾಸನ ನಿಲ್ದಾಣದಿಂದ ತನ್ನ ನಿಗದಿತ ನಿರ್ಗಮನದ ಸಮಯಕ್ಕೆ ಹೊರಡುತ್ತದೆ.

ಗುಪ್ತವಾಗಿ ಮದುವೆಯಾದ ಸಲ್ಮಾನ್ ಖಾನ್!-Salman Khan Marriage

https://www.google.com/search?q=way2plot&oq=w&aqs=chrome.1.69i60j69i59l2j69i57j69i60l4.942j0j9&sourceid=chrome&ie=UTF-8

Social Share

Leave a Reply

Your email address will not be published. Required fields are marked *