BJP’S Halal Person
ಬಿಜೆಪಿಯಿಂದ ಮೊಟ್ಟ ಮೊದಲ ಹಲಾಲ್ ಆದ ವ್ಯಕ್ತಿ ಕೆ.ಎಸ್.ಈಶ್ವರಪ್ಪ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಣುಕಿಸಿ ಮಾತಾಡಿದ್ದಾರೆ.
ಹಲಾಲ್ ಆಗಲು ಇನ್ನು ತುಂಬಾ ಜನರ ಸರದಿ ಬರಲಿದೆ ಎಂದು ಭವಿಷ್ಯವನ್ನು ನುಡಿದರು, ಕೋವಿಡ್ ಸಮಯದಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ಆಗಿದೆ.
ಇನ್ನೂ ಅನೇಕ ಸಚಿವರು ಭ್ರಷ್ಟಾಚಾರಕ್ಕೆ ಬಲಿ ಆಗಲಿದ್ದು, ಬಿಜೆಪಿ ಸರ್ಕಾರದಲ್ಲಿ ಶೇ.40 ಕಮಿಷನ್ ಇದೆ.
ಇದು ಕೇವಲ ರಾಜೀನಾಮೆ ಅಲ್ಲ, ಬಂಧನ ಆಗೋವರೆಗೆ ಹೋರಾಟ ಮಾಡುತ್ತೇವೆ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಈಶ್ವರಪ್ಪ ಅವರೇ ಕಾರಣ ಎಂದು ಸತೀಶ್ ಜಾರಕಿಹೊಳಿ ಆರೋಪವನ್ನು ಮಾಡಿದರು.
ಹೊಸಪೇಟೆಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಈಶ್ವರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆಯನ್ನು ಕೊಟ್ಟಿದ್ದಾರೆ.
ಕಾಂಗ್ರೆಸ್ ಗೆ ಪ್ರತಿಭಟನೆ ಮಾಡುವ ನೈತಿಕ ಹಕ್ಕಿಲ್ಲ, ಇವರ ಅನೇಕರು ಬೇಲ್ ಮೇಲಿದ್ದಾರೆ. ಅರ್ಕಾವತಿಯಲ್ಲಿ ರೀಡೂ ಮೂಲಕ ಅಕ್ರಮ ಮಾಡಿರೋರು ಕಾಂಗ್ರೆಸ್ ಪಕ್ಷದವರು.
ರೀಡೂ ಕೇಸ್ ನ ತನಿಖೆ ನಡೆಸಿದರೆ ಹಲವರು ಜೈಲಿಗೆ ಹೋಗ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಅಣ್ಣಾ ಹಜಾರೆ ಚಾರ್ಮ್
ಡಿಕೆ ಶಿವಕುಮಾರ್ ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಡಿಕೆಶಿಗೆ ಅಣ್ಣಾ ಹಜಾರೆ ಅವರ ಚಾರ್ಮ್ ಇದೆ. ಯಾವುದೇ ಭ್ರಷ್ಟಾಚಾರದ ಆರೋಪ ಅವರ ಮೇಲಿಲ್ಲ ಅವರಂಥ ಪ್ರಾಮಾಣಿಕ ವ್ಯಕ್ತಿ ಎಲ್ಲಾದ್ರೂ ಸಿಕ್ತಾರಾ ಎಂದು ವ್ಯಂಗ್ಯವಾಗಿ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
ಡಿಕೆ ಶಿವಕುಮಾರ್ ದೇಶಕ್ಕಾಗಿ ಜೈಲಿಗೆ ಹೋಗಿ ಬಂದವರು, ಡಿಕೆಶಿಯವರು ತ್ಯಾಗಮೂರ್ತಿ. ಅವರಂಥವರು ಭ್ರಷ್ಟಾಚಾರ ದ ಬಗ್ಗೆ ಮಾತಾಡೋದ್ರಲ್ಲಿ ಅರ್ಥವಿದೆ.
ವಿಧಾನಸೌಧದ ಗೋಡೆ ತಟ್ಟಿದ್ರೆ ದುಡ್ಡು ಸಿಗುತ್ತೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವು ಬಾರಿ ಪೊಲೀಸರಿಗಿಂತ ಕಳ್ಳರೇ ಬುದ್ದಿವಂತರಿರ್ತಾರೆ ಅವರಿಗೆ ಈ ರೀತಿಯ ಮಾಹಿತಿಗಳು ಸಿಗ್ತವೆ ಎಂದು ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ.
ಸಂತೋಷ್ ಸಾವಿನ ಬಗ್ಗೆ ಹಲವು ಅನುಮಾನಗಳಿವೆ, ಅವರು ಸಾಯೋಕು ಮುನ್ನ ಡೆತ್ ನೋಟ್ ಬರೆದಿದ್ರಾ ಅಥವಾ ಸತ್ತ ಮೇಲೆ ಡೆತ್ ನೋಟ್ ಬರೆದರಾ?
ಏಕೆಂದರೆ ಸಾಯೋಕೆ ಮುನ್ನ ಡೆತ್ ನೋಟ್ ಬರೆಯೋರು, ತನ್ನ ಸ್ವಂತ ಕೈನಲ್ಲಿ ಡೆತ್ ನೋಟ್ ಬರೀತಾರೆ, ನಂತರ ಅದಕ್ಕೆ ಸಹಿ ಕೂಡ ಹಾಕ್ತಾರೆ.
ಆದರೆ ಇದರಲ್ಲಿ ವಾಟ್ಸಾಪ್ ನಿಂದ ಸಂದೇಶ ಬಂದಿದೆ, ಹೀಗಾಗಿ ಇದರ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ ಎಂದು ಹೇಳಿದರು.
ಇದರಲ್ಲಿ ಮಹಾನ್ ನಾಯಕನ ಕೈವಾಡ ಇದೆಯಾ ಅಥವಾ ಬೇರೆ ಏನಾದರೂ ಇದೆಯಾ, ಎಂಬುದರ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಹೇಳಿದರು..
ಡಿ.ಕೆ.ಶಿ. ಹೇಳಿಕೆ
ಸಿಎಂ ಗೆ ನೀರಾವರಿ ಇಲಾಖೆ ಗುತ್ತಿಗೆದಾರರು ದೂರು ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಸಣ್ಣ ಸಣ್ಣ ಗುತ್ತಿಗೆದಾರರನ್ನ ಕೊಳ್ಳುವ ಕೆಲಸ ಮಾಡಿದ್ದಾರೆ.
ಸಣ್ಣ ಪುಟ್ಟ ಅವರಿಂದ ಕಮಿಷನ್ ಪಡೆಯೋಕೆ ಆಗೋಲ್ಲ ಅಂತಾ ದೊಡ್ಡವರಿಗೆ ಕೊಡ್ತಾ ಇದಾರೆ. ಸಣ್ಣ ಗುತ್ತಿಗೆದಾರರು ಪರ ಇರುತ್ತೇವೆ ಎಂದು ಹೇಳಿದ್ದಾರೆ.
ನಾನು ವೀರಶೈವ ಲಿಂಗಾಯತ ಧರ್ಮ ಪ್ರಸ್ತಾಪ ಮಾಡಿದ್ದೆ ಅದಕ್ಕೆ ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು, ಯಾವ ಧರ್ಮವು ಕೂಡ ಒಡೆಯಬಾರದು ಎಂಬುದು ನನ್ನ ನಂಬಿಕೆ.
ವೀರಶೈವ ಧರ್ಮದಲ್ಲಿ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಮಾತಿದೆ.
ವೀರಶೈವ ಧರ್ಮದ ವಿಚಾರವಾಗಿ ನನ್ನ ಮಾತುಗಳನ್ನ ಶ್ರೀಗಳು ಮೆಚ್ಚಿ ನಮ್ಮ ಮನೆಗೆ ಬಂದಿದ್ದರು ಎಂದು ತಿಳಿಸಿದರು.
ಸ್ಫೋಟಕ ಮಾಹಿತಿ
ಹರ್ಷನ ಕೊಲೆ ಬಳಿಕ ಷಡ್ಯಂತ್ರ ಮಾಡಿದ್ದಾರೆ, ಕೆಲವರು ಏನೇನೋ ಮಾಡಬೇಕು ಅಂತಾ ಪ್ಲಾನ್ ಮಾಡಿದ್ದೂ, ಒಂದು ಟ್ರಸ್ಟ್ ಇದೆ ಅದರಲ್ಲಿ ದೊಡ್ಡ ದೊಡ್ಡವರು ಇದ್ದಾರೆ.
ಇದಕ್ಕೆ ಬೇಕಾದ ವಸ್ತುಗಳನ್ನ ಸಂಗ್ರಹ ಮಾಡಿದ್ದು, ಆದರೆ ಶಿವಮೊಗ್ಗದಲ್ಲಿನ ಪೊಲೀಸರು ಬುದ್ದಿವಂತರಿದ್ದಾರೆ.
ಅವರಿಗೆ ಅಭಿನಂದನೆ ತಿಳಿಸ್ತೀನಿ, ಏಕೆಂದರೆ ಪೋಲಿಸರು ಅವರನ್ನ ಬಂಧಿಸಿಲ್ಲ ಅಂದಿದ್ರೆ ರಾಜ್ಯದಲ್ಲಿ ಅಶಾಂತಿ ಸೃಷ್ಠಿ ಮಾಡುವ ಹುನ್ನಾರ ಇತ್ತು ಎಂದು ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟರು.
ರವಿ ಅಣ್ಣ ಏನೋ ಮಾತಾಡಿದ್ದಾರೆ, ಅವರು ತುಂಬಾ ದೊಡ್ಡವರಿದ್ದಾರೆ.
ಅವರು ಆಫೀಸರ್ ಗೆ ಹೆದರಿಸಿ ಬೆದರಿಸಿರುವ ವಿಷಯಗಳಿವೆ, ಮುಂದೆ ಎಲ್ಲಾ ಆಚೆ ಬರುತ್ತದೆ. ಅವರು ಪಾಪಾ.. ಕುಟುಂಬಕ್ಕೆ ಮಾತನಾಡಿರೋದು ಫೋನ್ ಕಾಲ್ ಮಾಡಿದ್ದು ಎಲ್ಲವೂ ಇದೆ. ಮುಂದೆ ತನಿಖೆಯಿಂದ ಆಚೆ ಬರುತ್ತದೆ. ಯಾವ ಫ್ಯಾಮಿಲಿ, ಯಾವ ಪ್ರಕರಣ ಅಂತ ಹೇಳದೇ ಸಿ.ಟಿ.ರವಿಗೆ ಡಿಕೆ ಶಿವಕುಮಾರ್ ಎಚ್ಚರಿಕೆಯನ್ನು ನೀಡಿದರು.