ದರ್ಶನ ಅವರ ಬಾಕ್ಸ್ ಆಫೀಸ್ ಫ್ಲಾಪ್ ಸಿನಿಮಾಗಳು!

Darshan

darshan kannada flop movies

ಚಾಲೆಂಜಿಂಗ್ ಸ್ಟಾರ್ ದರ್ಶನ

ದರ್ಶನ್ ಸುಮಾರು ಎರಡು ದಶಕಗಳ ಸಿನಿಮಾ ಜೀವನದಲ್ಲಿ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಇಂದು ಕನ್ನಡದ ಟಾಪ್ ನಟರಾಗಿದ್ದಾರೆ.

ಲೈಟ್ ಬಾಯ್ ಆಗಿ ಸಿನಿ ಜರ್ನಿ ಪ್ರಾರಂಭಿಸಿ, ನಂತರ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕನಾಗಿ ಬಿಗ್ ಬ್ರೇಕ್ ಪಡೆದುಕೊಂಡರು.

1. ನಿನಗೋಸ್ಕರ

ಚಿತ್ರ ಬಿಡುಗಡೆ ದಿನಾಂಕ – 27 Sep 2002

ಮುಖ್ಯ ಪಾತ್ರದಲ್ಲಿ ನಟ ದರ್ಶನ ಮತ್ತು ಭಾವನಾ ಪಾನಿ

ಯೋಗೀಶ್ ಹುಣಸೂರು ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಹಾಗೂ  ನವೀನ್ ಮಯೂರು ನಾಯಕನಾಗಿ ನಟಿಸಿದ್ದರು. ಈ ಸಿನಿಮಾದ  ಕಥೆ 1997 ರಲ್ಲಿ ತೆರೆಕಂಡ ಇಂಗ್ಲೀಷ್ ನ `ಅಡಿಕ್ಟಡ ಟು ಲವ್’ ಚಿತ್ರದ ಮೇಲೆ ಆಧಾರಿತವಾಗಿತ್ತು.

2. ಕಿಟ್ಟಿ

ಚಿತ್ರ ಬಿಡುಗಡೆ ದಿನಾಂಕ – 29 Nov 2002

ಮುಖ್ಯ ಪಾತ್ರದಲ್ಲಿ ನಟ ದರ್ಶನ ಮತ್ತು ನವ್ಯ ನಟರಾಜನ್

ಜಿ.ಕೆ.ಮುದ್ದುರಾಜ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ದರ್ಶನ್ ಜೊತೆ ನವ್ಯ ನಟರಾಜನ್ ನಾಯಕಿಯಾಗಿ ನಟಿಸಿದ್ದರು.

3. ನೀನಂದ್ರೆ ಇಷ್ಟ

ಚಿತ್ರ ಬಿಡುಗಡೆ ದಿನಾಂಕ – 2003

ಮುಖ್ಯ ಪಾತ್ರದಲ್ಲಿ ನಟ ದರ್ಶನ ಮತ್ತು ಮಾಳವಿಕಾ

ಬಿ ಮಲ್ಲೇಶ್ ನಿರ್ದೇಶನದಲ್ಲಿ ಮೂಡಿ ಬಂದ  ಈ ಚಿತ್ರದಲ್ಲಿ ದರ್ಶನ್ ಜೊತೆ ಹರೀಶ್ ರಾಜ್ (ಬಿಗ್ ಬಾಸ್ ಸೀಸನ್ 7 ಖ್ಯಾತಿ) ಕೂಡ ನಾಯಕರಾಗಿ ನಟಿಸಿದ್ದರು.ಚಿತ್ರ ತ್ರೀಕೋನ ಪ್ರೇಮಕಥೆ ಹೊಂದಿತ್ತು

4. ಲಂಕೇಶ್ ಪತ್ರಿಕೆ

ಚಿತ್ರ ಬಿಡುಗಡೆ ದಿನಾಂಕ – 16 May 2003

ಮುಖ್ಯ ಪಾತ್ರದಲ್ಲಿ ನಟ ದರ್ಶನ ಮತ್ತು ವಸುಂಧರಾ ದಾಸ್

ಇಂದ್ರಜಿತ್ ಲಂಕೇಶ್ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಜೊತೆ ತೆಲುಗು ನಟಿ ವಸುಂಧರಾ ದಾಸ್ ನಾಯಕಿಯಾಗಿ ನಟಿಸಿದ್ದರು..

5. ನಮ್ಮ ಪ್ರೀತಿಯ ರಾಮು

ಚಿತ್ರ ಬಿಡುಗಡೆ ದಿನಾಂಕ – 14 Nov 2003

ಮುಖ್ಯ ಪಾತ್ರದಲ್ಲಿ ನಟ ದರ್ಶನ ಮತ್ತು ನವ್ಯ ನಟರಾಜನ್

ದರ್ಶನ್ ಸಿನಿಜೀವನದ ಅತ್ತುತ್ತಮ ಚಿತ್ರಗಳಲ್ಲಿ ಒಂದಾದ ಈ ಚಿತ್ರದಲ್ಲಿ ದರ್ಶನ್ ರವರು ಅಂಧನ ಪಾತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ಉತ್ತಮ ವಿಮರ್ಶೆಗಳು ಬಂದರೂ, ಬಾಕ್ಸಾಫೀಸಿನಲ್ಲಿ ಯಶಸ್ಸು ಕಾಣಲಿಲ್ಲ.darshan kannada flop movies

6. ಅಣ್ಣಾವ್ರು

ಚಿತ್ರ ಬಿಡುಗಡೆ ದಿನಾಂಕ – 18 Apr 2005

ಮುಖ್ಯ ಪಾತ್ರದಲ್ಲಿ ನಟ ದರ್ಶನ ಮತ್ತು ಕನಿಕಾ

ತಮಿಳಿನಲ್ಲಿ ರಜಿನಿಕಾಂತ್ ಮತ್ತು ಮುಮ್ಮೂಟಿ ನಟಸಿದ್ದ ಚಿತ್ರ ರಿಮೇಕ್ ಆದ ಈ ಚಿತ್ರದಲ್ಲಿ ಕನ್ನಡದಲ್ಲಿ ದರ್ಶನ್ ಮತ್ತು ಅಂಬರೀಶ ನಟಿಸಿದರು. ಮಹಾಭಾರತದ ಅರ್ಜುನ್ ಮತ್ತು ಕರ್ಣನ ಪಾತ್ರಗಳ ಛಾಯೆ ಚಿತ್ರದ ಮುಖ್ಯ ಪಾತ್ರಗಳ ಮೇಲಿತ್ತು.

7. ದರ್ಶನ್

ಚಿತ್ರ ಬಿಡುಗಡೆ ದಿನಾಂಕ – 09 Apr 2004

ಮುಖ್ಯ ಪಾತ್ರದಲ್ಲಿ ನಟ ದರ್ಶನ ಮತ್ತು ನವನೀತ್

ರಮೇಶ್ ಕಿಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ತೆಲಗು ನಟಿ ನವನೀತ್ ನಟಿಸಿದರು..

8. ಸರ್ದಾರ

ಚಿತ್ರ ಬಿಡುಗಡೆ ದಿನಾಂಕ – 03 Dec 2004

ಮುಖ್ಯ ಪಾತ್ರದಲ್ಲಿ ನಟ ದರ್ಶನ ಮತ್ತು ಗುರ್ಲಿನ್ ಚೋಪ್ರಾ

ಮೆಜೆಸ್ಟಿಕ್ ಮತ್ತು ದಾಸ ಚಿತ್ರಗಳ ನಂತರ ಮತ್ತೆ ಪಿ.ಎನ್.ಸತ್ಯ ದರ್ಶನ್ ಗೆ ನಿರ್ದೇಶಿಸಿದ ಚಿತ್ರ ಸರ್ದಾರ. ಆದರೆ ಮೊದಲೆರೆಡ ಚಿತ್ರಗಳಂತೆ ಈ ಚಿತ್ರ ಯಶಸ್ಸು ಕಾಣಲಿಲ್ಲ. ನಾಯಕಿಯಾಗಿ ಗುರ್ಲಿನ್ ಚೋಪ್ರಾ ನಟಿಸಿದ್ದರು.

9. ತಂಗಿಗಾಗಿ

ಚಿತ್ರ ಬಿಡುಗಡೆ ದಿನಾಂಕ – 20 Oct 2006

ಮುಖ್ಯ ಪಾತ್ರದಲ್ಲಿ ನಟ ದರ್ಶನ ಮತ್ತು ಪೂನಂ ಬಾಜ್ವಾ

ದರ್ಶನ್ ಜೊತೆ ಪಿ.ಎನ್.ಸತ್ಯ ನಿರ್ದೇಶನದ ನಾಲ್ಕನೇ ಚಿತ್ರ ತಂಗಿಗಾಗಿ..ಪೂನಂ ಬಾಜ್ವಾ ನಾಯಕಿಯಾಗಿ ನಟಿಸಿದ್ದರೆ, ಶ್ವೇತಾ ಚೆಂಗಪ್ಪ ದರ್ಶನ್ ತಂಗಿ ಪಾತ್ರದಲ್ಲಿ ನಟಿಸಿದ್ದರು.

10. ಭೂಪತಿ

ಚಿತ್ರ ಬಿಡುಗಡೆ ದಿನಾಂಕ – 16 Feb 2007

ಮುಖ್ಯ ಪಾತ್ರದಲ್ಲಿ ನಟ ದರ್ಶನ ಮತ್ತು ಶೆರೀನ್

ಎಸ್ ಗೋವಿಂದ ನಿರ್ದೇಶನದ ಚಿತ್ರ ಭೂಪತಿಯಲ್ಲಿ ದರ್ಶನ್ ಜೊತೆ ಶೆರಿನ್ ನಾಯಕಿಯಾಗಿ ನಟಿಸಿದ್ದರು. ರಾಜ್ಯದ ಮುಖ್ಯಮಂತ್ರಿ ಮಗಳನ್ನು ಪ್ರೀತಿಸುವ ನಾಯಕನ ಕಥೆಯನ್ನು ಚಿತ್ರ ಹೊಂದಿತ್ತು.darshan kannada flop movies

11. ಅರ್ಜುನ್

ಚಿತ್ರ ಬಿಡುಗಡೆ ದಿನಾಂಕ – 16 Aug 2008

ಮುಖ್ಯ ಪಾತ್ರದಲ್ಲಿ ನಟ ದರ್ಶನ ಮತ್ತು ಮೀರಾ ಚೋಪ್ರಾ

ಶಾಹುರಾಜ್ ಸಿಂಧೆ ನಿರ್ದೇಶನ ಈ ಚಿತ್ರದಲ್ಲಿ ದರ್ಶನ ಪೋಲಿಸ್ ಅಧಿಕಾರಿಯಾಗಿ ನಟಿಸಿದ್ದರು. ಅನಂತನಾಗ್ ದರ್ಶನ್ ತಂದೆಯ ಪಾತ್ರದಲ್ಲಿ ನಟಿಸಿದ್ದರು.

12. ಅಭಯ್

ಚಿತ್ರ ಬಿಡುಗಡೆ ದಿನಾಂಕ – 02 Oct 2009

ಮುಖ್ಯ ಪಾತ್ರದಲ್ಲಿ ನಟ ದರ್ಶನ ಮತ್ತು ಆರತಿ ಥಾಕುರ್

ಮಹೇಶ್ ಬಾಬು ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಜೊತೆ ಆರತಿ ಠಾಕೂರ್ ನಾಯಕಿಯಾಗಿ ನಟಿಸಿದ್ದರು. 2009 ರ ಗಾಂಧಿ ಜಯಂತಿಯಂದು ತೆರೆಕಂಡ ಈ ಚಿತ್ರ ಬಾಕ್ಸಾಫೀಸಿನಲ್ಲಿ ಯಶಸ್ಸು ಕಾಣಲಿಲ್ಲ.

13. ಪ್ರಿನ್ಸ್

ಚಿತ್ರ ಬಿಡುಗಡೆ ದಿನಾಂಕ – 01 Apr 2011

ಮುಖ್ಯ ಪಾತ್ರದಲ್ಲಿ ನಟ ದರ್ಶನ ಮತ್ತು ನಿಕಿತಾ

ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಚಿತ್ರದಲ್ಲಿ ದರ್ಶನ್ ಜೊತೆ ನಿಖಿತಾ ತುಕ್ರಾಲ್ ನಾಯಕಿಯಾಗಿ ನಟಿಸಿದರು. ಈ ಚಿತ್ರ ತೆಲುಗಿನಲ್ಲಿ ರವಿತೇಜ ಅಭಿನಯದ ಶಾಕ್ ಚಿತ್ರದ ರಿಮೇಕ್ ಆಗಿತ್ತು..

14. ವಿರಾಟ್

ಚಿತ್ರ ಬಿಡುಗಡೆ ದಿನಾಂಕ – 29 Jan 2016

ಮುಖ್ಯ ಪಾತ್ರದಲ್ಲಿ ನಟ ದರ್ಶನ ಮತ್ತು ಇಶಾ ಚಾವ್ಲಾ, ವಿಧಿಶಾ ಶ್ರೀವಾಸ್ತವ್

ಹೆಚ್ ವಾಸು ನಿರ್ದೇಶನದಲ್ಲಿ ಮೂಡಿಬಂದಿದ್ದ ವಿರಾಟ್ ಚಿತ್ರದಲ್ಲಿ ದರ್ಶನ್ ಜೊತೆ ಮೂವರು ನಾಯಕಿಯರು ನಟಿಸಿದ್ದರು.

15. ಚಕ್ರವರ್ತಿ

ಚಿತ್ರ ಬಿಡುಗಡೆ ದಿನಾಂಕ – 14 Apr 2017

ಮುಖ್ಯ ಪಾತ್ರದಲ್ಲಿ ನಟ ದರ್ಶನ ಮತ್ತು ದೀಪಾ ಸನ್ನಿಧಿ

ಚಿಂತನ್ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಜೊತೆ ದೀಪಾ ಸನ್ನಿಧಿ ನಾಯಕಿಯಾಗಿ ನಟಿಸಿದ್ದರು. ದಿನಕರ್ ತೂಗುದೀಪ್, ಕುಮಾರ ಬಂಗಾರೆಪ್ಪ, ಆದಿತ್ಯ ಮತ್ತು ಸೃಜನ್ ಲೋಕೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದರು.

ಯಶ್ ನಟಿಸಿದ ಎಲ್ಲಾ ಹಿಟ್ ಅಂಡ್ ಫ್ಲಾಪ್ ಚಿತ್ರಗಳು!

https://www.google.com/search?q=way2plot&oq=w&aqs=chrome.1.69i60j69i59l3j69i60l4.1096j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *