ನೆಗಡಿಯಿಂದ 20 ವರ್ಷದ ನೆನಪುಗಳನ್ನು ಕಳೆದುಕೊಂಡ ಮಹಿಳೆ!

Claire Muffett Reece

ಕ್ಲೇರ್ ಮಫೆಟ್-ರೀಸ್

ಈಕೆಯ ಸಮಸ್ಯೆಯ ಬಗ್ಗೆ ತಿಳಿದುಕೊಂಡರೆ ಎಲ್ಲರು ಒಂದು ಕ್ಷಣ ಬೆರಗಾಗುತ್ತೀರಾ! ಆಕೆಯ ಸಮಸ್ಯೆಯಿಂದ ಬದುಕಿದ್ದೇ ಬಹಳ ಅದೃಷ್ಟ ಎನ್ನಬಹುದು.

ನೆಗಡಿ, ತಲೆನೋವು, ಮೈಕೈ ನೋವು, ಕೆಮ್ಮು ಯಾರಿಗೆ ಬರುವುದಿಲ್ಲ ಹೇಳಿ, ಬಾರದ ಮನುಷ್ಯರು ಯಾರಾದರೂ ಇದ್ದಾರಾ?

ನಡೆದ ಘಟನೆ

ಇವೆಲ್ಲವೂ ಮಾನವನ ಬಹಳ ಸಾಮಾನ್ಯವಾಗಿ ಬರುವಂತಹ ರೋಗಗಳು, ಇದಕ್ಕೆಲ್ಲ ಯಾರೂ ತಲೆ ಕೆಡಿಸಿಕೊಳ್ಳುವುದೂ ಇಲ್ಲ.

ಕ್ಲೇರ್ ಎಂಬ 43 ವರ್ಷದ ಮಹಿಳೆಗೆ 2021ರಲ್ಲಿ ಒಂದು ರಾತ್ರಿ ಆಕೆಯ ಮಗನಿಂದ ಶೀತ ಬಂದಿತ್ತು.

ಆಕೆ ಮರುದಿನ ಬೆಳಗ್ಗೆ ಎದ್ದಾಗ ಆಕೆಗೆ ಕಳೆದ 20 ವರ್ಷಗಳಿಂದ ಈಚೆಗೆ ನಡೆದಿದ್ದು ಏನೂ ನೆನಪು ಉಳಿದಿರಲಿಲ್ಲ.

ನೆಗಡಿ ಬಂದು ಬೆಳಗ್ಗೆ ಏಳುವಷ್ಟರಲ್ಲಿ ಕಳೆದ 20 ವರ್ಷಗಳ ಎಲ್ಲ ಘಟನೆಗಳನ್ನೂ ಮರೆತಿದ್ದಾರಂತೆ!

ಶೀತದಿಂದ ಶುರುವಾದ ಸಮಸ್ಯೆಯೊಂದು ಮಹಿಳೆಯನ್ನು ಮಾರಣಾಂತಿಕ ರೋಗದತ್ತ ತಳ್ಳಿದೆ, ನೆಗಡಿಯಿಂದ ಹೀಗೆಲ್ಲ ಆಗುತ್ತಾ? ಎಂದು ನಿಮಗೆ ಆಶ್ಚರ್ಯವಾಗಬಹುದು.Claire Muffett Reece

ಕ್ಲೇರ್ ಮಫೆಟ್-ರೀಸ್ ಎಂಬ 43 ವರ್ಷದ ಮಹಿಳೆಗೆ 2021ರಲ್ಲಿ ಒಂದು ರಾತ್ರಿ ಆಕೆಯ ಮಗನಿಂದ ಶೀತ ಬಂದಿತ್ತು.

ನೆಗಡಿಯಿಂದ ತಲೆನೋವು ಕೂಡ ಶುರುವಾಗಿದ್ದರಿಂದ ಬೇಗ ಮಲಗಿದ ಆಕೆ ಮರುದಿನ ಬೆಳಗ್ಗೆ ಎದ್ದಾಗ ಆಕೆಗೆ ಕಳೆದ 20 ವರ್ಷಗಳಿಂದ ಈಚೆಗೆ ನಡೆದಿದ್ದು ಯಾವ ವಿಷಯವು ನೆನಪಿರಲಿಲ್ಲ.

ಇಷ್ಟಕ್ಕೇ ಆಕೆಯ ಆರೋಗ್ಯದ ಸಮಸ್ಯೆ ನಿಲ್ಲಲಿಲ್ಲ, ಕೇವಲ ನೆಗಡಿಯಿಂದ 2 ದಶಕಗಳ ಎಲ್ಲವನ್ನೂ ಮರೆತ ಆಕೆ ನಂತರ 16 ದಿನಗಳವರೆಗೆ ಕೋಮಾಗೆ ಹೋದಳು.

ತನ್ನ ಇಬ್ಬರು ಮಕ್ಕಳು ಮತ್ತು ಗಂಡ ಸ್ಕಾಟ್​ ಜೊತೆಗೆ ಇಂಗ್ಲೆಂಡ್​ನಲ್ಲಿ ಜೀವನ ನಡೆಸುತ್ತಿದ್ದ ಕ್ಲೇರ್ ಈ ರೀತಿಯ ಅನಾರೋಗ್ಯಕ್ಕೀಡಾದ ಬಗ್ಗೆ ಅವರ ಪತಿ ಸ್ಕಾಟ್​ ಮಾಹಿತಿ ನೀಡಿದ್ದಾರೆ.

ನನ್ನ ಹೆಂಡತಿ ಎರಡು ವಾರಗಳ ಕಾಲ ಶೀತದಿಂದ ಬಳಲುತ್ತಿದ್ದಳು, ನಮ್ಮ ಮಗ ಮ್ಯಾಕ್ಸ್​ಗೆ ಮೊದಲು ನೆಗಡಿ ಬಂದಿತ್ತು.

ಅವನಿಂದ ನನ್ನ ಹೆಂಡತಿಗೂ ನೆಗಡಿ ಹರಡಿತು, ಅದಾದ ನಂತರ ಆಕೆಯ ಸ್ಥಿತಿಯು ತುಂಬಾ ವೇಗವಾಗಿ ಕ್ಷೀಣಿಸಲು ಪ್ರಾರಂಭಿಸಿತು.

ನೆಗಡಿಯಿಂದ ರಾತ್ರಿ ಮಲಗಿದ ಆಕೆ ಬೆಳಗಾಗುವಷ್ಟರಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿದ್ದಳು, ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲೆ ಮಾಡಲಾಯಿತು.

ಆಸ್ಪತ್ರೆಯಲ್ಲಿ ಅವಳನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು, 1 ವಾರ ಅಲ್ಲಿದ್ದ ಆಕೆಯನ್ನು ನಂತರ ರಾಯಲ್ ಲಂಡನ್ ಆಸ್ಪತ್ರೆಗೆ ವರ್ಗಾವಣೆ ಮಾಡಲಾಯಿತು.

ಅಲ್ಲಿ ಆಕೆಯ ಮೆದುಳಿಗೆ ರಕ್ತಸ್ರಾವವಾಗಿರಬಹುದು ಎಂದು ವೈದ್ಯರು ಅನುಮಾನಪಟ್ಟರು, ಆದರೆ ಹೆಚ್ಚಿನ ಪರೀಕ್ಷೆಗಳನ್ನು ನಡೆಸಿದಾಗ ಆಕೆ ಎನ್ಸೆಫಾಲಿಟಿಸ್​ನಿಂದ ಬಳಲುತ್ತಿರುವುದು ಎಂದು ತಿಳಿದು ಬಂದಿದೆ.

ಆಕೆ ರಾಯಲ್ ಲಂಡನ್ ಆಸ್ಪತ್ರೆಗೆ ದಾಖಲಾದ ಎರಡು ವಾರಗಳ ನಂತರ ಕ್ಲೇರ್ 20 ವರ್ಷಗಳ ಹಿಂದಿನ ಎಲ್ಲ ನೆನಪನ್ನು ಕಳೆದುಕೊಂಡಿದ್ದಾಳೆ ಎಂದು ಖಚಿತವಾಗಿದೆ.

43 ವರ್ಷ ವಯಸ್ಸಿನ ಕ್ಲೇರ್ ತನ್ನ ಕುಟುಂಬದ ಸದಸ್ಯರ ಮುಖಗಳನ್ನು ನೆನಪಿಟ್ಟುಕೊಂಡಿದ್ದಾರೆ, ಆದರೆ ಮದುವೆ, ಗರ್ಭಧಾರಣೆ, ಹೆರಿಗೆ ಮತ್ತು ರಜಾದಿನಗಳಂತಹ ಪ್ರಮುಖ ಜೀವನದ ಘಟನೆಗಳನ್ನು ಸಂಪೂರ್ಣವಾಗಿ ಮರೆತು ಬಿಟ್ಟಿದ್ದಾರೆ.

ಕ್ಲೇರ್ ಇದೀಗ ಸುದೀರ್ಘ ವಿರಾಮದ ನಂತರ ಮತ್ತೆ ಪತ್ರಕರ್ತೆಯಾಗಿ ಕೆಲಸ ಪ್ರಾರಂಭಿಸಿದ್ದಾರೆ, ಮರೆತು ಹೋದ ಘಟನೆಗಳ ಬಗ್ಗೆ ಆಕೆಯು ತಲೆ ಕೆಡಿಸಿಕೊಂಡಿಲ್ಲ.Claire Muffett Reece

ರಾಧಿಕಾ ಪಂಡಿತ ವಿಮಾನದಲ್ಲಿ ಮಾಡಿದ್ದೇನು ಗೊತ್ತಾ!

https://www.google.com/search?q=way2plot&oq=w&aqs=chrome.1.69i60j69i59j46i39j69i57j69i60l4.1210j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *