
Covid 4th Wave
ಕೋವಿಡ್ ಒಂದನೇ ಅಲೆ, ಎರಡನೇ ಅಲೆ ಹಾಗೂ ಮೂರನೇ ಅಲೆಯಲ್ಲಿ ತನ್ನ ಉಗ್ರ ರೂಪವನ್ನು ತೋರಿಸಿದ್ದ ಕೋರೋಣ ವೈರಸ್ ಮಹಾಮಾರಿ ರೋಗವು ಈಗ ನಾಲ್ಕನೇ ಅಲೆ ರೂಪದಲ್ಲಿ ಒಕ್ಕರಿಸಲು ಹವಣಿಸುತ್ತಿದೆ.
ಚೀನಾ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಕೊರೋನ ಕೇಸ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತಿದ್ದು.
ದಿನಕ್ಕೆ ಲಕ್ಷಾಂತರ ಕೇಸ್‌ಗಳು ಪತ್ತೆಯಾಗುತ್ತಿದ್ದು, ಚೀನಾದ ಅನೇಕ ನಗರಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ.
ಈ ಕಡೆ ಭಾರತದಲ್ಲೂ ಕೂಡ ದೆಹಲಿ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆಯನ್ನು ಕರೆದಿದ್ದಾರೆ, ಇದೇ ಏಪ್ರಿಲ್ 27ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರೊಂದಿಗೆ ಪ್ರಧಾನಿ ಸಭೆ ನಡೆಸಲಿದ್ದು, ಈ ಮೀಟಿಂಗ್ ಅತ್ಯಂತ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.

ದೇಶದಲ್ಲಿ ಕೊರೋನಾ ವೈರಸ್ ಕೇಸ್‌ಗಳು ಕಡಿಮೆ ಆಗುತ್ತಿದ್ದಂತೆ ಜನರು ಮೈ ಮರೆತಿದ್ದಾರೆ, ರೂಲ್ಸ್‌ಗಳನ್ನು ಗಾಳಿಗೆ ತೂರಿ, ಬೇಜವಾಬ್ದಾರಿಯಿಂದ ಇದ್ದಾರೆ.
ಹೀಗಾಗಿ ಮತ್ತೆ ಕೇಸ್ ಜಾಸ್ತಿಯಾಗಿದ್ದು, ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದ್ದು, ಇನ್ನು ಮತ್ತೊಮ್ಮೆ ಲಾಕ್ ಡೌನ್ ಜಾರಿಗೆ ತರಬೇಕೋ ಅಥವಾ ಟಫ್ ರೂಲ್ಸ್ ಜಾರಿ ಮಾಡಬೇಕೋ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಏಪ್ರಿಲ್ 27ಕ್ಕೆ ಪ್ರಧಾನಿ ಸಭೆ
ಕೋವಿಡ್ ಕೇಸ್‌ಗಳ ಏರಿಕೆಯಾಗುವ ಹಿನ್ನೆಲೆಯಲ್ಲಿ ಏಪ್ರಿಲ್ 27ರಂದು ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆಯನ್ನು ನಡೆಸಲಿದ್ದು.
ಎಲ್ಲಾ ರಾಜ್ಯಗಳ ಸಿಎಂಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರೊಂದಿಗೆ ಮೋದಿ ಚರ್ಚಿಸಲಿದ್ದಾರೆ.
ಪ್ರಧಾನಿ ಕಚೇರಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಲಿರುವ ಪ್ರಧಾನಿ, ರಾಜ್ಯಗಳ ಕೋವಿಡ್ ಪ್ರಕರಣಗಳ ಕುರಿತಂತೆ ಮಾಹಿತಿಯನ್ನು ಪಡೆಯಲಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾಹಿತಿ ತಿಳಿಸಿದ್ದಾರೆ.
ದೇಶದಲ್ಲಿ ಲಾಕ್ ಡೌನ್!

ಕೊರೋನಾ ಕೇಸ್‌ಗಳು ಕಡಿಮೆ ಆಗುತ್ತಿದ್ದಂತೆ ಜನರು ಮೈಮರೆತಿದ್ದು, ರೂಲ್ಸ್‌ಗಳನ್ನು ಗಾಳಿಗೆ ತೂರಿ, ಬೇಜವಾಬ್ದಾರಿಯಿಂದ ಇದ್ದಾರೆ.
ಹೀಗಾಗಿ ಮತ್ತೆ ಕೊರೋನಾ ಕೇಸ್ ಜಾಸ್ತಿಯಾಗಿದ್ದು, ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ. ಇನ್ನು ಮತ್ತೊಮ್ಮೆ ಲಾಕ್ ಡೌನ್ ಜಾರಿಗೆ ತರಬೇಕೋ ಅಥವಾ ಟಫ್ ರೂಲ್ಸ್ ಜಾರಿ ಮಾಡಬೇಕೋ ಎನ್ನುವ ಬಗ್ಗೆ ಚರ್ಚೆ ನಡೀತಿದೆ.
ಸಿಎಂ ನೇತೃತ್ವದಲ್ಲಿ ಇಂದು ಮಹತ್ವದ ಸಭೆ
ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲು ಸರ್ಕಾರ ಮತ್ತೆ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಇಂದು ಉನ್ನತ ಮಟ್ಟದ ಸಭೆಯನ್ನು ನಡೆಸಲಿದ್ದಾರೆ.
ಕರ್ನಾಟಕದಲ್ಲಿ ನಾಲ್ಕು ವಾರದ ಬಳಿಕ ಕೊರೊನಾ ನಾಲ್ಕನೇ ಅಲೆಯ ಆರಂಭದ ಬಗ್ಗೆ ತಜ್ಞರ ತಂಡ ಮುನ್ಸೂಚನೆ ಕೊಟ್ಟಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ಸಚಿವರು, ತಜ್ಞರು ಭಾಗಿ
ಸಭೆಯಲ್ಲಿ ಕಂದಾಯ ಸಚಿವ ಅಶೋಕ್, ಆರೋಗ್ಯ ಸಚಿವ ಡಾ. ಸುಧಾಕರ್, ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಮತ್ತು ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು ಸದಸ್ಯರು ಭಾಗಿಯಾಗಲಿದ್ದಾರೆ.
ರಾಜ್ಯದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಇದೆ.
ಕೊರೋನಾ ಕೇಸ್ ಹೆಚ್ಚಳ
ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ 2,527 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ತಿಳಿದು ಬಂದಿವೆ.

ಇದರೊಂದಿಗೆ ಭಾರತದಲ್ಲಿ ಒಟ್ಟು ಸಾಂಕ್ರಾಮಿಕ ಪ್ರಕರಣಗಳ ಸಂಖ್ಯೆ 4,3054,952ಕ್ಕೆ ಏರಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 15,079 ಕ್ಕೆ ಏರಿಕೆಯಾಗಿದೆ.
ಇನ್ನೂ 33 ಜನರ ಸಾವಿನೊಂದಿಗೆ ದೇಶದಲ್ಲಿ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದವರ ಸಂಖ್ಯೆ 5,22,149 ಕ್ಕೆ ಏರಿಕೆಯಾಗಿದೆ.
ಹೆಚ್ಚಾಗುತ್ತಾ ಕೊರೋನಾ ಸೋಂಕು?
ಆರ್ ವ್ಯಾಲ್ಯೂ 1ಕ್ಕಿಂತ ಕಡಿಮೆ ಇದ್ದರೆ ಸಾಂಕ್ರಾಮಿಕ ಮುಕ್ತಾಯದ ಹಂತದ ಸಾಗುತ್ತಿದೆ ಎಂದು ಪರಿಗಣಿಸಲಾಗಿದ್ದು,
ಆದರೆ ದೆಹಲಿಯಲ್ಲಿ ಕಳೆದ 3 ತಿಂಗಳಲ್ಲೇ ಮೊದಲ ಬಾರಿಗೆ, ಕಳೆದ ವಾರ ಆರ್ ವ್ಯಾಲ್ಯೂ ಶೇ.1ರ ಗಡಿ ದಾಟುವ ಮೂಲಕ ಆತಂಕ ಹುಟ್ಟುಹಾಕಿತ್ತು.
ಇದೀಗ ಸತತ 2ನೇ ವಾರ ಕೂಡಾ ಹರಡುವಿಕೆ ಪ್ರಮಾಣ ಹೆಚ್ಚು ಕಡಿಮೆ ಅದೇ ಮಟ್ಟದಲ್ಲಿ ಇರುವ ಕಾರಣ, ಮುಂದಿನ ವಾರಗಳಲ್ಲಿ ಸೋಂಕಿತರ ಪ್ರಮಾಣ ಇನ್ನಷ್ಟು ಹೆಚ್ಚುವ ಆತಂಕ ಎದುರಾಗಿದೆ.