ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ಸಾಲ ಪಡೆದ ಖಿಲಾಡಿ!-sunny Leon

Sunny Leon

sunny Leon credits

ನವದೆಹಲಿ

ನೀಲಿ ಚಿತ್ರಗಳಲ್ಲಿ ಸಖತ್ ಸದ್ದು ಮಾಡುತ್ತಾ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ಸ್ಟಾರ್ ನಟಿ ಸನ್ನಿ ಲಿಯೋನ್ ಯಾರಿಗೆ ಗೊತ್ತಿಲ್ಲ ಹೇಳಿ.

ಚಿತ್ರಗಳಲ್ಲಿ ಹಾಗು ಪೋಷಕ ಪಾತ್ರದಲ್ಲಿಯೂ ತನ್ನ ನಟನೆಯ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ದಿನೇ ದಿನೇ ವಂಚನೆಗಳು ಒಂದೊಂದು ರೀತಿಯಲ್ಲಿ ನಡೆಯುತ್ತಿದ್ದು, ಅದೇ ರೀತಿಯಲ್ಲಿ ಈ ನಟಿಗೂ ಆ ತೊಂದರೆ ಉಂಟಾಗಿದೆ.

ಈ ಸ್ಟಾರ್ ನಟಿಯ ಪ್ಯಾನ್ ಕಾರ್ಡ್ ಅನ್ನು ಬಳಸಿಕೊಂಡು ಒಬ್ಬ ವ್ಯಕ್ತಿ ಎರಡು ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದಾನೆ.

ಈ ಮಾಹಿತಿ ಕುರಿತು ಸ್ವತಃ ನಟಿ ಸನ್ನಿ ಲಿಯೋನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

“ನನಗೇ ಈ ತರಹ ಆಗಿದೆ, ಕೆಲವು ಮೂರ್ಖರು 2000 ರೂಪಾಯಿ ಸಾಲವನ್ನು ಪಡೆದುಕೊಳ್ಳಲು ನನ್ನ ಪ್ಯಾನ್ ಕಾರ್ಡ್ ಅನ್ನು ಉಪಯೋಗಿಸಿದ್ದಾರೆ.sunny Leon credits

ಇದರಿಂದ ನನ್ನ CIBIL ಸ್ಕೋರ್ ಅನ್ನು FCK ಮಾಡಿದ್ದಾರೆ”, ಎಂದು ಸನ್ನಿ ಲಿಯೋನ್ ತಮ್ಮ ಕ್ರೆಡಿಟ್ ಸ್ಕೋರ್ ಅನ್ನು ತಿಳಿಸಿದ್ದಾರೆ.

ಚಿತ್ರರಂಗದ ನಟ ಮತ್ತು ನಟಿಯರು ನಮ್ಮ ಆಪ್ತರು ಅಂತಾ ಹೇಳಿಕೊಂಡು ವಂಚನೆ ಮಾಡುತ್ತಿದ್ದ  ಕಾಲ ಹೋಗಿದೆ.

ಆನ್ ಲೈನ್ ಮುಖಾಂತರವೆ ಬ್ಯಾಂಕ್ ಖಾತೆಗೆ ಕನ್ನ ಹಾಕುವವರ ಸಂಖ್ಯೆ ಹೆಚ್ಚಾಗಿದೆ, ಇಂಥವರ ಮಧ್ಯೆ ಇಲ್ಲೊಬ್ಬ ಭೂಪ ಡಿಫರೆಂಟ್ ಆಗಿ ಸುದ್ದಿಯಲ್ಲಿದ್ದಾರೆ.

ಕೇವಲ 2000 ರೂಪಾಯಿ ಸಾಲ ಪಡೆಯುವುದಕ್ಕೆ ಸನ್ನಿ ಲಿಯೋನ್ ಹೆಸರನ್ನು ಬಳಸಿಕೊಂಡಿದ್ದಾನೆ.

ಧಣಿ ಸ್ಟಾಕ್ಸ್ ನಲ್ಲಿ ಸಾಲ

ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಪ್ಯಾನ್ ಕಾರ್ಡ್ ಅನ್ನು ಬಳಸಿಕೊಂಡಿರುವ ಆರೋಪಿ ಧಣಿ ಸ್ಟಾಕ್ಸ್ ಲಿಮಿಟೆಡ್ ಎಂಬ ಫೈನ್ಯಾನ್ಸ್ ಸಂಸ್ಥೆಯ ಮೂಲಕ 2 ಸಾವಿರ ರೂಪಾಯಿ ಸಾಲವನ್ನು ಪಡೆದಿದ್ದಾನೆ.

ಸನ್ನಿ ಲಿಯೋನ್ ತನ್ನ ಪಾನ್ ಕಾರ್ಡ್ ಅನ್ನು ಸಾಲ ಪಡೆಯಲು ಬಳಕೆಯನ್ನು ಮಾಡಲಾಗುತ್ತದೆ.

ಹಾಗೂ ಸಂಶಯಾಸ್ಪದ ವಿಧಾನವನ್ನು ಬಳಸಿಕೊಂಡು ಫೋರ್ಜರಿ ಮಾಡಲು ಬಳಸಲಾಗುತ್ತಿದೆ ಎಂದು ಹೇಳಿಕೊಂಡಿದ್ದಾಳೆ.

ವ್ಯಕ್ತಿಯ ವಂಚನೆ ಮಾಡಿರುವ ಬಗ್ಗೆ ಸನ್ನಿ ಲಿಯಾನ್ ಟ್ವೀಟ್ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಸಂಸ್ಥೆಯು ಸಮಸ್ಯೆಯನ್ನು ಬಗೆಹರಿಸಿದೆ.

ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ, “ಇದನ್ನು ತ್ವರಿತವಾಗಿ ಸರಿಪಡಿಸಿದ್ದಕ್ಕಾಗಿ @IVLSecurities @ibhomeloans @CIBIL_Official ಅವರಿಗೆ ಧನ್ಯವಾದಗಳು.

ಇಂತಹ ಸಮಸ್ಯೆಗಳು ಮತ್ತೆ ಆಗದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಿ, ಮುಂದಿನ ದಿನಗಳಲ್ಲಿ ಇಂಥ ಸಮಸ್ಯೆಗಳನ್ನು ತಪ್ಪಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ ಎಂದು ನಾನು ತಿಳಿದಿದ್ದೇನೆ.sunny Leon credits

ಕೆಟ್ಟ CIBIL ಜೊತೆಗೆ ವ್ಯವಹರಿಸಲು ಯಾರೊಬ್ಬರೂ ಬಯಸುವುದಿಲ್ಲ,” ಎಂದು ಸನ್ನಿ ಲಿಯೋನ್ ತಮ್ಮ ಎರಡನೇ ಟ್ವೀಟ್ ಮೂಲಕ ಸಂದೇಶದಲ್ಲಿ ಬರೆದುಕೊಂಡಿದ್ದಾರೆ.

ತನ್ನ ಪ್ಯಾನ್ ಕಾರ್ಡ್ ಬಳಸಿ ಕೇವಲ 2,000 ಸಾಲ ಪಡೆಯುವ ವಂಚನೆ ನಡೆದಿದೆ ಎಂದು ಬಾಲಿವುಡ್ ನಟಿ ಸನ್ನಿ ಲಿಯೋನ್ ಆರೋಪ ಮಾಡಿದ್ದಾರೆ.

ಇದು ಅವರ ಕ್ರೆಡಿಟ್ ಸ್ಕೋರ್ ಮೇಲೂ ಪರಿಣಾಮವನ್ನು ಬೀರಿದೆ, ತನ್ನ ಪ್ಯಾನ್ ಕಾರ್ಡ್ ಅನ್ನು ಸಾಲ ಪಡೆಯಲು ಬಳಸಲಾಗುತ್ತಿದೆ ಮತ್ತು ಸಂಶಯಾಸ್ಪದ ವಿಧಾನವನ್ನು ಬಳಸಿಕೊಂಡು ಫೋರ್ಜರಿ ಮಾಡಲು ಬಳಸಲಾಗುತ್ತಿದೆ.

ಸಿಎಸಕೆ ತಂಡಕ್ಕೆ ಜನರ ತೀವ್ರ ಆಕ್ರೋಶ!-boycott csk

https://timesofindia.indiatimes.com/topic/Sunny-Leone

Social Share

Leave a Reply

Your email address will not be published. Required fields are marked *