Love Birds
ಲವ್ ಮಾಕ್ಟೇಲ್ ಹಾಗೂ ಲವ್ ಮಾಕ್ಟೇಲ್ 2 ಚಿತ್ರದ ಮೂಲಕ ಮೋಡಿ ಮಾಡಿದ್ದ ಜೋಡಿ ಮಿಲನಾ ನಾಗರಾಜ್ ಹಾಗು ಡಾರ್ಲಿಂಗ್ ಕೃಷ್ಣ ಮತ್ತೆ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ.
ರಿಯಲ್ ಲೈಫ್ ಕಪಲ್, ಈಗ ರೀಲ್ ಕಪಲ್ ಆಗಿ ಜನರಿಗೆ ಮನರಂಜನೆ ನೀಡಲು ವೇದಿಕೆ ಸಿದ್ದರಾಗಿದ್ದಾರೆ ಎನ್ನಬಹುದು.
ಹೌದು, ಲವ್ ಬರ್ಡ್ಸ್ ಹೆಸರಿನ ಚಿತ್ರ ಸೆಟ್ಟೇರಿದ್ದು ಅದರಲ್ಲಿ ಕೃಷ್ಣ & ಮಿಲನಾ ನಾಯಕ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ.
ರೋಮಿಯೋ ಹಾಗೂ ರಾಗ ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನಿರ್ದೇಶಕ ಪಿ.ಸಿ. ಶೇಖರ್ ಈ ಚಿತ್ರದ ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ.
ಮಿಲನಾ ಹಾಗೂ ಕೃಷ್ಣ ಅಭಿಮಾನಿಗಳು ಜೋಡಿಯನ್ನು ಮತ್ತೆ ತೆರೆ ಮೇಲೆ ಕಾಣಲು ತುಂಬಾ ಕಾತರದಿಂದ ಕಾಯುತ್ತಿದ್ದಾರೆ.
ನಿರ್ದೇಶಕರ ಪ್ರಕಾರ ಈ ಚಿತ್ರವೂ ವಿಭಿನ್ನ ಪ್ರೇಮಕತೆಯಾಗಿದ್ದು, ಸಾಮಾನ್ಯವಾಗಿ ಎಲ್ಲರೂ ಪ್ರೀತಿಸಿ ಮದುವೆಯಾಗುತ್ತಾರೆ. ಪ್ರೀತಿಸಿದ ವ್ತಕ್ತಿಯನ್ನು ಪಡೆಯಲು ಹರಸಾಹಸ ಮಾಡುವವರೂ ಕೂಡ ಇದ್ದಾರೆ.
ಆದರೆ ಈ ಚಿತ್ರ ಮದುವೆಯಾದ ಜೋಡಿಗಳು ನಂತರ ಪ್ರೀತಿಯಲ್ಲಿ ಬೀಳುವ ಕಥಾ ಹಂದರವನ್ನು ಹೊಂದಿದ್ದು, ಇಲ್ಲದೆ ಮಹಿಳೆಯರನ್ನು ಹೆಚ್ಚಾಗಿ ಕೇಂದ್ರಿಕರಿಸಿದೆ ಎನ್ನಬಹುದು.
ಸುಳಿವು ಕೊಟ್ಟ ನಿರ್ದೇಶಕರು
ಈಗಿನ ಮಹಿಳೆಯರು ಗಂಡನ ಮೇಲೆ ಅವಲಂಬಿತರಾಗಿರಲ್ಲ ತಾವು ದುಡಿದು, ತಮ್ಮ ಕಾಲ ಮೇಲೆ ನಿಲ್ಲುವ ಶಕ್ತಿಯು ಅವರಿಗಿದೆ.
ಯಾವುದೇ ಸಂಬಂಧದಲ್ಲಿ ಸಣ್ಣ ಸಣ್ಣ ಸಮಸ್ಯೆಗಳು ಮಾಮೂಲಿ ಆದರೆ ಅದನ್ನು ಹೇಗೆ ನಿಭಾಯಿಸಿಕೊಂಡು ಹೋಗುತ್ತೇವೆ ಎಂಬುದು ಮುಖ್ಯ ಎನ್ನುವುದನ್ನ ಈ ಕಥೆ ಹೇಳುತ್ತದೆ.
ಇನ್ನು ಈ ಚಿತ್ರಕ್ಕೆ ಕೃಷ್ಣ ಅವರನ್ನು ಮೊದಲೇ ನಾಯಕನಾಗಿ ಆಯ್ಕೆ ಮಾಡಲಾಗಿತ್ತು, ನಾಯಕಿಯ ಹುಡುಕಾಟ ಮಾಡುತ್ತಿದ್ದಾಗ, ಅವರ ಹೆಂಡತಿ ಮಿಲನಾ ಅವರನ್ನೇ ಮಾಡಿದರೆ ಆ ಪಾತ್ರಕ್ಕೆ ನ್ಯಾಯ ಸಿಗುತ್ತದೆ.
ಅವರಿಬ್ಬರು ಸ್ಯಾಂಡಲ್ವುಡ್ನ ಮೇಡ್ ಫಾರ ಈಚ್ ಅದರ್ ಕಪ್ ಎಂದು ಶೇಖರ್ ಮಿಲನಾ ಹಾಗೂ ಕೃಷ್ಣ ಜೋಡಿಯನ್ನು ಹಾಡಿ ಹೊಗಳಿದ್ದು, ಎಲ್ಲದ್ದಕ್ಕಿಂತ ಹೆಚ್ಚಾಗಿ ಅವರಿಬ್ಬರು ಅದ್ಭುತ ನಟನೆಯು ಮಾಡುತ್ತಾರೆ.
ಜನರಿಗೆ ಈ ಜೋಡಿ ಎಂದರೆ ಬಹಳ ಇಷ್ಟ, ಈಗಾಗಲೇ ಜನರಿಗೆ ಹತ್ತಿರವಿರುವ ಜೋಡಿಯನ್ನು ಇಟ್ಟುಕೊಂಡು ಸಿನೆಮಾ ಮಾಡುವುದು ಜನರಿಗೆ ಇನ್ನಷ್ಟು ಹತ್ತಿರವಾಗಲು ಸಾಧ್ಯವಾಗುತ್ತದೆ ಎಂಬುದು ನಿರ್ದೇಶಕರ ಅಭಿಪ್ರಾಯವಾಗಿದೆ.
ಈ ಚಿತ್ರದ ಬಗ್ಗೆ ಮಾತನಾಡಿರುವ ನಟಿ ಮಿಲನಾ ನಾಗರಾಜ್, ಲವ್ ಮಾಕ್ಟೇಲ್ ನಂತರ ನಮಗೆ ತುಂಬಾ ಆಫರ್ಗಳು ಬಂದಿವೆ.
ನಾವು ಜನರಿಗೆ ಇಷ್ಟವಾಗುವ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಸುಮ್ಮನಿದ್ವಿ ಅಷ್ಟೇ.
ಈ ಲವ್ ಬರ್ಡ್ಸ್ ಕತೆಯನ್ನು ಕೇಳಿದಾಗ ನಮಗೆ ಬಹಳ ಇಷ್ಟವಾಯಿತು. ಅಲ್ಲದೇ ಶೇಖರ್ ಅವರು ಉತ್ತಮ ನಿರ್ದೇಶಕ ಸಹ, ಹಾಗಾಗಿ ನಾವು ಈ ಕತೆಯನ್ನು ಒಪ್ಪಿದ್ದು, ಜನರಿಗೆ ಇಷ್ಟವಾಗುತ್ತದೆ ಎಂಬ ನಮ್ಮ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಒಂದು ಸ್ಥಳದಲ್ಲಿ 18 ಸೆಟ್ ಹಾಕಿ, ಕೇವಲ ಒಂದೇ ಶೆಡ್ಯೂಲ್ನಲ್ಲಿ ಪೂರ್ತಿ ಚಿತ್ರದ ಚಿತ್ರೀಕರಣ ಮುಗಿಸಲು ನಿರ್ದೇಶಕರು ಹಾಗೂ ನಿರ್ಮಾಪಕರು ನಿರ್ಧಾರ ಮಾಡಿದ್ದಾರೆ.
ಅರ್ಜುನ್ ಜನ್ಯ ಸಂಗೀತ
ಈ ಚಿತ್ರದಲ್ಲಿ ಕೂಡ ಅದ್ಭುತ ಹಾಡುಗಳಿದ್ದು, ಮ್ಯೂಸಿಕ್ ಮಾಂತ್ರಿಕ ಅರ್ಜಿನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಇದು ಶೇಖರ್ ಹಾಗು ಅರ್ಜುನ್ಯ ಜನ್ಯ ಅವರ 9 ನೇ ಕಾಂಬಿನೇಷನ್ ಎನ್ನಲಾಗುತ್ತಿದೆ.
ಅಲ್ಲದೇ ಅದ್ಬುತ ನಟ, ನಟಿಯರಾದ ರಂಗಾಯಣ ರಘು, ವೀಣಾ ಸುಂದರ್, ಸಾಧುಕೋಕಿಲಾ, ಅವಿನಾಶ್ ಸೇರಿದಂತೆ ಉತ್ತಮ ತಾರಬಳಗವನ್ನು ಈ ಚಿತ್ರವು ಹೊಂದಿದೆ.
ಲವ್ ಮಾಕ್ಟೇಲ್ ನಂತರ ಮತ್ತೆ ಈ ಜೋಡಿ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದ್ದು, ಮತ್ತೊಂದು ಹಿಟ್ ಚಿತ್ರದ ಭರವಸೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ.