ಸಿನಿಮಾದಲ್ಲಿ ನಟಿಸಲು ಸೈ ಎಂದ ಮಾಜಿ ಮುಖ್ಯಮಂತ್ರಿ!

B S Yadiyurappa At Sandalwood

ಬಿಎಸ್​ ಯಡಿಯೂರಪ್ಪ

ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ನಡುವೆ ಮೊದಲಿನಿಂದಲೂ ನಂಟು ಸಂಬಂಧವಿದೆ, ಚಿತ್ರರಂಗದಲ್ಲಿ ಮಿಂಚಿದ ಹಲವರು ರಾಜಕೀಯಕ್ಕೆ ಕಾಲಿಟ್ಟು ಸಾಧನೆ ಮಾಡಿದ್ದಾರೆ.

ಅದೇ ರೀತಿ ರಾಜಕೀಯದಲ್ಲಿ ಸಾಧನೆ ಮಾಡಿದ ಅನೇಕರು ನಂತರ ಸಿನಿಮಾಗಳಲ್ಲಿ ಬಣ್ಣ ಹಚ್ಚಿದವರು ಸಾಕಷ್ಟು ಜನ ಉದಾಹರಣೆಗಳಿವೆ.B S Yadiyurappa At Sandalwood

ಬಿ.ಎಸ್. ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕನ್ನಡದ ಸಿನಿಮಾದಲ್ಲಿ ನಟಿಸಿದ್ದಾರೆ.

ಆ ಸಿನಿಮಾಗೆ “ತನುಜಾ” ಎಂದು ಶೀರ್ಷಿಕೆ ಇಡಲಾಗಿದೆ, ಇದರ ಚಿತ್ರೀಕರಣ ಕೂಡ ಆರಂಭ ಆಗಿದೆ.

ಶೂಟಿಂಗ್​ನಲ್ಲಿ ಬಿಎಸ್​ವೈ ಭಾಗಿಯಾಗಿರುವ ಫೋಟೋಗಳು ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಅಷ್ಟಕ್ಕೂ ಮಾಜಿ ಮುಖ್ಯಮಂತ್ರಿಗೆ ಈ ಚಿತ್ರದಲ್ಲಿ ನಟಿಸಬೇಕು ಎನಿಸಿದ್ದು ಯಾಕೆ? ಅದಕ್ಕೊಂದು ಮುಖ್ಯ ಕಾರಣವಿದೆ.

ಚಿತ್ರದ ನೈಜ ಘಟನೆ  

ಇದು ನೈಜ​ ಘಟನೆ ಆಧರಿಸಿದ ಸಿನಿಮಾ, ಕೊವಿಡ್​ ಸಂದರ್ಭದಲ್ಲಿ ನೀಟ್​ ಪರೀಕ್ಷೆ ಬರೆಯಲು ಸುಮಾರು 350ಕಿಮೀ ದೂರ ಪ್ರಯಾಣ ಮಾಡಿ ಗಮನ ಸೆಳೆದಿದ್ದ ಹುಡುಗಿಯ ಕಥೆ ರೋಚಕತೆಯಿಂದ ಕೂಡಿದೆ.

ಆ ಘಟನೆ ಎಲ್ಲರ ಗಮನ ಸೆಳೆದಿತ್ತು, ಇದನ್ನೇ ಒನ್​ಲೈನ್ ಸ್ಟೋರಿ ಆಗಿಸಿಕೊಂಡು ನಿರ್ದೇಶಕ ಹರೀಶ್ ಎಂ.ಡಿ ಹಳ್ಳಿಯವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ತನುಜಾ ಎಂಬ ಹುಡುಗಿ ಕೊರೊನಾ ಕಾರಣದಿಂದ ನೀಟ್ ಪರೀಕ್ಷೆ ಬರೆಯಲಾಗದೆ ತನ್ನ ಅಸಹಾಯಕತೆಯನ್ನು ಹೇಳಿಕೊಂಡಿದ್ದರು.

ಈ ಸಮಯದಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್ ಮತ್ತು ಪ್ರದೀಪ್ ಈಶ್ವರ್ ಅವರ ಸಹಕಾರದಿಂದ ಪರೀಕ್ಷೆ ಬರೆದು ನೀಟ್ ಪಾಸಾಗಿದ್ದು ಸುದ್ದಿ ಆಗಿತ್ತು.

ಘಟನೆ ನಡೆದಾಗ ಬಿ.ಎಸ್​. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳಾಗಿದ್ದರು, ಈಗ ಚಿತ್ರದಲ್ಲಿ ಕೂಡ ಅವರೇ ಮುಖ್ಯಮಂತ್ರಿಯ ಪಾತ್ರ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ನಟಿಸಲು ಬಿ.ಎಸ್​. ಯಡಿಯೂರಪ್ಪ ಒಪ್ಪಿಕೊಂಡಿರುವುದರಿಂದ ಚಿತ್ರದ ತಂಡಕ್ಕೆ  ದೊಡ್ಡ ಬಲ ಬಂದಂತೆ ಆಗಿದೆ.

ತಮ್ಮ ರಿಯಲ್​ ಲೈಫ್​ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ, ಇದು ಸಿನಿಪ್ರಿಯರ ಮತ್ತು ರಾಜಕೀಯ ವಲಯದವರಲ್ಲಿ ನಿರೀಕ್ಷೆ ಮೂಡಿಸಿದೆ.B S Yadiyurappa At Sandalwood

ಫೆ.19ರಂದು ಮೊದಲ ಬಾರಿಗೆ ಬಿ.ಎಸ್. ಯಡಿಯೂರಪ್ಪ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಅವರ ನಟನೆ ಕಂಡು ಚಿತ್ರತಂಡ ಬಹಳ ಖುಷಿಯಾಗಿದೆ, ರಾಜಕೀಯ ಜೀವನದ ಹಲವು ಘಟ್ಟಗಳಲ್ಲಿ ಯಡಿಯೂರಪ್ಪ ಅವರನ್ನು ಜನರು ಗಮನಿಸಿದ್ದಾರೆ.

ಈಗ ಅವರನ್ನು ಕಲಾವಿದರನ್ನಾಗಿ ನೋಡಲು ಅಭಿಮಾನಿಗಳಿಗೆ ಬಹಳಷ್ಟು ಕಾತುರವಾಗಿದೆ, ಕಾರ್ಯಕರ್ತರ ನಿರೀಕ್ಷೆ ಹೆಚ್ಚಿದೆ.

ಶೀಘ್ರದಲ್ಲೇ ಈ ಚಿತ್ರವನ್ನು ತೆರೆಕಾಣಿಸಬೇಕು ಎಂಬ ಗುರಿ ಇಟ್ಟುಕೊಂಡು ಚಿತ್ರತಂಡ ಕಾರ್ಯನಿರತವಾಗಿದೆ.

ಶಿವಮೊಗ್ಗ ಮತ್ತು ಬೆಂಗಳೂರಿನ ಹಲವು ಲೊಕೇಷನ್​ಗಳಲ್ಲಿ ಶೂಟಿಂಗ್ ನಡೆಯುತ್ತಿದೆ.

‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದಲ್ಲಿ ನಟಿಸಿದ ಸಪ್ತಾ ಪಾವೂರು ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.B S Yadiyurappa At Sandalwood

ಮಾಜಿ ಮಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜೊತೆ ವಿಶ್ವೇಶ್ವರ ಭಟ್, ಕೆ. ಸುಧಾಕರ್, ರಾಜೇಶ್ ನಟರಂಗ, ಕೈಲಾಶ್, ಸಂಧ್ಯಾ ಅರಕೆರೆ, ಬೇಬಿ ಶ್ರೀ ಮುಂತಾದವರು ನಟಿಸಿದ್ದಾರೆ.

 ಪ್ರದ್ಯೋತನ್​ ಸಂಗೀತ ನಿರ್ದೇಶನ, ರವೀಂದ್ರನಾಥ್ ಛಾಯಾಗ್ರಹಣ, ಉಮೇಶ್ ಆರ್.ಬಿ. ಸಂಕಲನ, ಆರ್. ಚಂದ್ರಶೇಖರ್ ಪ್ರಸಾದ್ ಹಾಗೂ ಜೆ.ಎಂ ಪ್ರಹ್ಲಾದ್ ಸಂಭಾಷಣೆಯ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.

ಹರೀಶ್ ಎಂ.ಡಿ ಹಳ್ಳಿ ಅವರು ನಿರ್ದೇಶನ ಮಾಡುತ್ತಿದ್ದಾರೆ, ‘ಬಿಯಾಂಡ್​ ವಿಷನ್ಸ್​ ಸಿನಿಮಾಸ್’​ ಸಂಸ್ಥೆ ಮೂಲಕ ಈ ಚಿತ್ರ ನಿರ್ಮಾಣವಾಗುತ್ತಿದೆ.

ಈ ದೇಶದ ವಾಟ್ಸಾಪ್ ಕಾನೂನು ತಿಳಿದರೆ ಆಶ್ಚರ್ಯವಾಗ್ತೀರಾ!

https://www.google.com/search?q=way2plot&oq=w&aqs=chrome.1.69i60j69i59l2j69i57j69i60l4.951j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *