
NMC Good News
ಉಕ್ರೇನ್
ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ಗೆ ಭಾರತದಲ್ಲಿ ನೋಂದಣಿ ಬಯಸುವ ವಿದ್ಯಾರ್ಥಿಗಳಿಗೆ ಅವಕಾಶ.
ನ್ಯಾಶನಲ್ ಬೋರ್ಡ್ ಆಫ್ ಎಕ್ಸಾಮಿನೇಶನ್ ನಡೆಸುವ ವಿದೇಶಿ ಮೆಡಿಕಲ್ ಗ್ರಾಜ್ಯುಯೇಟ್ ಪರೀಕ್ಷೆಯಲ್ಲಿ ಪಾಸಾಗಿದ್ದಾರಾ ಎಂಬುದನ್ನು ರಾಜ್ಯ ಮೆಡಿಕಲ್ ಕೌನ್ಸಿಲ್ಗಳು ಖಚಿತಪಡಿಸಿಕೊಳ್ಳಬೇಕು.
ಉಕ್ರೇನ್ನಿಂದ ವೈದ್ಯಕೀಯ ಶಿಕ್ಷಣ ಅರ್ಧಕ್ಕೆ ನಿಲ್ಲಿಸಿ ಇದೀಗ ಭಾರತಕ್ಕೆ ಬಂದಿರುವ ವಿದ್ಯಾರ್ಥಿಗಳಿಗೆ ಭಾರತದಲ್ಲೇ ಇಂಟರ್ನ್ಶಿಪ್ ಮಾಡಲು ರಾಷ್ಟ್ರೀಯ ವೈದ್ಯಕೀಯ ಕಮಿಷನ್ ಅವಕಾಶವನ್ನು ನೀಡಿದೆ.
ವೈದ್ಯಕೀಯ ಪದವೀಧರ ವಿದ್ಯಾರ್ಥಿ 12 ತಿಂಗಳು ಇಂಟರ್ನ್ಶಿಪ್ ಮಾಡುವುದು ಕಡ್ಡಾಯ ಮಾಡಲಾಗಿದೆ.
ವಿದೇಶಿ ವೈದ್ಯಕೀಯ ವಿದ್ಯಾರ್ಥಿಗಳ ಇಂಟರ್ನ್ಶಿಪ್
ಈಗ ಭಾರತಕ್ಕೆ ಬಂದಿರುವ ವಿದೇಶಿ ವೈದ್ಯಕೀಯ ಪದವೀಧರರು ಇಲ್ಲಿಯೇ ಆ ಇಂಟರ್ನ್ಶಿಪ್ ಮಾಡಬಹುದು ಎಂದು ಎನ್ಎಂಸಿ ತನ್ನ ವೆಬ್ಸೈಟ್ http://nmc.org.in. ಯಲ್ಲಿ ಸುತ್ತೋಲೆಯನ್ನು ಹೊರಡಿಸಿದೆ.
ಉಕ್ರೇನ್ನಿಂದ ಭಾರತಕ್ಕೆ ಬಂದ ವಿದೇಶಿ ವೈದ್ಯಕೀಯ ಪದವೀಧರರಲ್ಲಿ ವಿದ್ಯಾರ್ಥಿಗಳಿಗೆ ಕೆಲವರಿಗೆ ಅವರ ಇಂಟರ್ನ್ಶಿಪ್ ಪೂರ್ಣಗೊಂಡಿಲ್ಲ.
ಕೊವಿಡ್ 19 ಪರಿಸ್ಥಿತಿ, ಯುದ್ಧಗಳಂಥ ಕಾರಣದಿಂದ ಅವರಿಗೆ ಇಂಟರ್ನ್ಶಿಪ್ ಪೂರ್ತಿ ಮಾಡಲು ಸಾಧ್ಯವಾಗಿರಲಿಲ್ಲ.
ಈ ವಿಚಾರದಲ್ಲಿ ಅವರು ತುಂಬ ಒತ್ತಡ ಮತ್ತು ಕಷ್ಟವನ್ನು ಅನುಭವಿಸಿದ್ದಾರೆ, ಹೀಗಾಗಿ ಅವರು ತಮ್ಮ ಇಂಟರ್ನ್ಶಿಪ್ ಪೂರ್ತಿ ಮುಗಿಸಲು ಭಾರತದಲ್ಲಿ ಅವಕಾಶ ನೀಡಲಾಗುವುದು.NMC Good News
ಅವರ ಅರ್ಜಿಯನ್ನು ಅರ್ಹ ಎಂದು ಪರಿಗಣಿಸಲಾಗುವುದು ಎಂದು ಎನ್ಎಂಸಿ ತನ್ನ ಸುತ್ತೋಲೆಯಲ್ಲಿ ಮಾಹಿತಿ ತಿಳಿಸಿದೆ.
ನೋಂದಣಿ ಬಯಸುವ ವಿದ್ಯಾರ್ಥಿಗಳು ನ್ಯಾಶನಲ್ ಬೋರ್ಡ್ ಆಫ್ ಎಕ್ಸಾಮಿನೇಶನ್ ನಡೆಸುವ ವಿದೇಶಿ ಮೆಡಿಕಲ್ ಗ್ರಾಜ್ಯುಯೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರಾ ಎಂಬುದನ್ನು ರಾಜ್ಯ ಮೆಡಿಕಲ್ ಕೌನ್ಸಿಲ್ಗಳು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದೆ.
ನೋಂದಣಿಗೆ ಇರುವ ಮಾನದಂಡಗಳನ್ನು ಪೂರೈಸಿರುವ ಅಭ್ಯರ್ಥಿಗೆ 12 ತಿಂಗಳ ಅಥವಾ ಅವರಿಗೆ ಬಾಕಿ ಇರುವ ಅವಧಿಯ ಇಂಟರ್ನ್ಶಿಪ್ಗೆ ಅವಕಾಶವನ್ನು ನೀಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಅಷ್ಟೇ ಅಲ್ಲ, ಈ ವಿದ್ಯಾರ್ಥಿಗಳು ಇಂಟರ್ನ್ಶಿಪ್ ಪಡೆಯುವ ಕಾಲೇಜು ಇವರಿಂದ ಯಾವುದೇ ಶುಲ್ಕ ಪಡೆದಿಲ್ಲ/ಪಡೆಯುವುದಿಲ್ಲ ಎಂಬುದಕ್ಕೆ ರಾಜ್ಯ ಮೆಡಿಕಲ್ ಕೌನ್ಸಿಲ್ಗಳು ಆ ಕಾಲೇಜುಗಳಿಂದ ಭರವಸೆಯನ್ನು ಪಡೆಯಬೇಕು.
ಈ ವಿದೇಶಿ ವೈದ್ಯಕೀಯ ಪದವೀಧರ ವಿದ್ಯಾರ್ಥಿಗಳಿಗೆ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ತರಬೇತಿ ಪಡೆಯುತ್ತಿರುವ ಭಾರತೀಯ ವೈದ್ಯಕೀಯ ಪದವೀಧರರಿಗೆ ನೀಡಲಾಗುತ್ತಿರುವಷ್ಟೇ ಸ್ಟೈಫಂಡ್ ಹಾಗೂ ಇತರ ಸೌಲಭ್ಯಗಳನ್ನು ನೀಡಬೇಕು ಎಂದೂ ಎನ್ಎಂಸಿ ಹೇಳಿದೆ.
ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅನಿವಾರ್ಯ ಪರಿಸ್ಥಿತಿಯಲ್ಲಿ ಭಾರತಕ್ಕೆ ಹಿಂದಿರುಗಿರುವ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು.
ಇಲ್ಲಿನ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿಯೇ ಪ್ರವೇಶ ಕಲ್ಪಿಸಬೇಕು ಎಂದು ಭಾರತೀಯ ವೈದ್ಯಕೀಯ ಒಕ್ಕೂಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವನ್ನು ಬರೆಯಲಾಗಿತ್ತು.national medical commission
ಸದ್ಯದ ಪರಿಸ್ಥಿತಿಯಲ್ಲಂತೂ ಉಕ್ರೇನ್ ಪರಿಸ್ಥಿತಿ ಸರಿಯಾಗಲಿದೆ ಎಂಬುದು ಅನುಮಾನ. national medical commission latest news
ಇದೀಗ ಬಂದಿರುವ ವಿದ್ಯಾರ್ಥಿಗಳು ಮತ್ತೆ ಅಲ್ಲಿ ಹೋಗಿ ಶಿಕ್ಷಣ ಮುಂದುವರಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ಅಸ್ಪಷ್ಟವಾಗಿದೆ.
ಉಕ್ರೇನ್ನಲ್ಲಿರುವ ವೈದ್ಯಕೀಯ ಶಿಕ್ಷಣ ವಿಭಾಗದಿಂದ ಈ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಪ್ರಗತಿ ಹಾಗೂ ವಿವಿಧ ಹಂತದ ಪರೀಕ್ಷೆಗಳಲ್ಲಿ ಪಡೆದಿರುವ ಅಂಕಗಳ ಮಾಹಿತಿ ಪಡೆದುಕೊಳ್ಳಬೇಕು.
ಅದಕ್ಕೆ ಅನುಸಾರವಾಗಿ ಭಾರತದ ವೈದ್ಯಕೀಯ ಶಿಕ್ಷಣ ಕಾಲೇಜುಗಳಲ್ಲಿ ಈ ವಿದ್ಯಾರ್ಥಿಗಳಿಗೆ ಅವಕಾಶ ಕೊಡಬೇಕು.
ತೇರ್ಗಡೆಯಾದ ನಂತರ ಈ ವಿದ್ಯಾರ್ಥಿಗಳನ್ನು ಭಾರತದಲ್ಲಿಯೇ ವಿದ್ಯಾಭ್ಯಾಸ ಮಾಡಿ, ಪದವಿ ಪಡೆದವರ ಸರಿಸಮನಾಗಿ ಶಿಕ್ಷಣ ನೀಡಬೇಕು.national medical commission website
ಹೀಗಾಗಿ ವಿದ್ಯಾರ್ಥಿಗಳಿಗೆ ಇಲ್ಲಿಯೇ ಅನುಕೂಲ ಮಾಡಿಕೊಡಬೇಕೆಂಬ ಬೇಡಿಕೆ ಕೇಳಿ ಬಂದಿದೆ.
ಉಕ್ರೇನ್ ಬಿಕ್ಕಟ್ಟಿನಲ್ಲಿ ಸಿಕ್ಕಿಬಿದ್ದ ಬೀದರ ವಿಧ್ಯಾರ್ಥಿಗಳು ವಾಪಸ್!-Ukraine Russia Crisis