
Ukraine and Russia
ಗೂಗಲ್ ಮ್ಯಾಪ್
ಗೂಗಲ್ ಮ್ಯಾಪ್ನ ಕೆಲವು ಟೂಲ್ಸ್ಗಳನ್ನು ಉಕ್ರೇನ್ನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ನಿಷ್ಕ್ರಿಯಗೊಳಿಸಿದ್ದಾಗಿ ಗೂಗಲ್ ತಿಳಿಸಿದೆ.
ವಿಶ್ವದ ದಿಗ್ಗಜ ಸರ್ಚ್ ಎಂಜಿನ್ ಹೊಂದಿರುವ ಆಲ್ಪಾಬೆಟ್ ಸಂಸ್ಥೆಯ ಗೂಗಲ್, ಸುರಕ್ಷತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ಮಾಹಿತಿಯನ್ನು ನೀಡಿದೆ.
ಉಕ್ರೇನ್ ಮೇಲೆ ರಷ್ಯಾ ದೇಶವು ಆಕ್ರಮಣ ಮಾಡಿದೆ, ನಾಲ್ಕೈದು ದಿನಗಳಿಂದ ಬೀದಿಬೀದಿಗಳಲ್ಲಿ ಹೊಡೆದಾಟ, ದಾಳಿಗಳು ನಡೆಯುತ್ತಿವೆ.
ಅಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಉಕ್ರೇನ್ನಾದ್ಯಂತ ಟ್ರಾಫಿಕ್ ಸ್ಥಿತಿಗಳ ಹಾಗೂ ವಿವಿಧ ಪ್ರದೇಶಗಳು ಎಷ್ಟು ದಟ್ಟಣೆಯಿಂದ ಕೂಡಿವೆ.
ಇಂತಹ ಮಾಹಿತಿಯನ್ನು ಲೈವ್ ಆಗಿ ತೋರಿಸುವ ಆ್ಯಪ್ಗಳನ್ನು ನಿಷ್ಕ್ರಿಯಗೊಳಿಸಿದ್ದಾಗಿ ಗೂಗಲ್ ತಿಳಿಸಿದೆ.
ರಸ್ತೆ ಮಾರ್ಗ ಸೂಚಿ
ಕೆಲವು ದಿನಗಳಿಂದ ಉಕ್ರಾವ್ಟೋಡರ್ ಎಂಬ ಉಕ್ರೇನ್ನ ಸರ್ಕಾರಿ ಕಂಪನಿಯೊಂದು ಎಲ್ಲ ಕಡೆಗಳಲ್ಲಿರುವ ರಸ್ತೆ ಮಾರ್ಗ ತೋರುವ ಬೋರ್ಡ್ಗಳು, ಸಂಕೇತಗಳನ್ನು ತೆಗೆದು ಹಾಕಿದೆ.
ಗೂಗಲ್ ಮ್ಯಾಪ್ನ ಟ್ರಾಫಿಕ್ ಲೇಯರ್ ಮತ್ತು ಅಂಗಡಿಗಳು, ರೆಸ್ಟೋರೆಂಟ್ಗಳಂತಹ ಪ್ರದೇಶಗಳಲ್ಲಿ ಎಷ್ಟರ ಮಟ್ಟಿಗೆ ಜನದಟ್ಟಣೆ ಇದೆ.
ಯಾವ ಪ್ರಮಾಣದಲ್ಲಿ ಕಾರ್ಯನಿರವಾಗಿವೆ ಎಂಬುದರ ಬಗ್ಗೆ ಲೈವ್ ಮಾಹಿತಿ ನೀಡುವ ಟೂಲ್ಗಳನ್ನು ನಿಷೇಧಗೊಳಿಸಿದೆ.
ಅಂದರೆ ಉಕ್ರೇನ್ನಲ್ಲಿನ ಈ ಮಾಹಿತಿ ಸದ್ಯ ಜಾಗತಿಕವಾಗಿ ಸಿಗುವುದಿಲ್ಲ, ಅಲ್ಲಿನ ಪ್ರಾದೇಶಕ ಆಡಳಿತಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ಹೆಜ್ಜೆಯನ್ನು ಇಡಲಾಗಿದೆ.Ukraine and Russia
ಜನರ ಸುರಕ್ಷತೆಗಾಗಿ ತೆಗೆದುಕೊಂಡ ಈ ಕ್ರಮವನ್ನು ಇದು ಗೂಗಲ್ ಸಾಮಾನ್ಯವಾಗಿ ಹೇಳಿಕೊಂಡಿದೆ.
ಅದಾದ ಮೇಲು ಗೂಗಲ್ ಮ್ಯಾಪ್ನಲ್ಲಿ ಟರ್ನ್ ಬೈ ಟರ್ನ್ ನೇವಿಗೇಶನ್ ಫೀಚರ್ ಬಳಸಿಕೊಂಡು ವಾಹನ ಚಾಲನೆ ಮಾಡಬಹುದು.
ಅಂಥವರಿಗೆ ಲೈವ್ ಮಾಹಿತಿಯನ್ನು ಲಭ್ಯ ಇರಲಿದೆ, ಯುದ್ಧ ಕಾರ್ಮೋಡದ ಮಧ್ಯೆ ಜನರ ಜೀವ ರಕ್ಷಣೆ ಎಷ್ಟು ಮುಖ್ಯವೋ ಅಷ್ಟೇ ಅವರ ಡಾಟಾ ರಕ್ಷಣೆ ಕೂಡ ಮುಖ್ಯ ಎಂದೂ ಗೂಗಲ್ ಅಭಿಪ್ರಾಯ ಹೇಳಿದೆ.
ಇನ್ನು ಕೆಲವು ದಿನಗಳಿಂದ ಉಕ್ರಾವ್ಟೋಡರ್ ಹಾಗೂ ಉಕ್ರೇನ್ನ ಸರ್ಕಾರಿ ಕಂಪನಿಯೊಂದು ಎಲ್ಲ ಕಡೆಗಳಲ್ಲಿರುವ ರಸ್ತೆ ಮಾರ್ಗ ತೋರುವ ಬೋರ್ಡ್ಗಳು, ಸಂಕೇತಗಳನ್ನು ತೆಗೆದುಹಾಕುತ್ತಿದೆ.
ಜನರಿಗೆ ಅನುಕೂಲವಾಗುವಂತೆ ರಸ್ತೆ ಬದಿಯಲ್ಲಿ ರಸ್ತೆ ಮಾರ್ಗ ಸಂಕೇತಗಳ ಬೋರ್ಡ್ಗಳನ್ನು ಹಾಕುವುದು ಸಾಮಾನ್ಯವಾಗಿದೆ.
ಹೊಸದಾಗಿ ಆ ಪ್ರದೇಶಗಳಿಗೆ ಬರುವವರು ಚಿಹ್ನೆಗಳನ್ನು ನೋಡಿಯೇ ದಾರಿ ತಿಳಿದುಕೊಳ್ಳುತ್ತಾರೆ.
ಹಾಗೆಯೇ ಉಕ್ರೇನ್ನಲ್ಲೂ ಹಾಕಲಾಗಿದ್ದ ಮಾರ್ಗಸೂಚಿ ಸೈನ್ ಬೋರ್ಡ್ಗಳನ್ನು ಈ ಕಂಪನಿ ತೆಗೆದು ಹಾಕುತ್ತಿದೆ.
ರಷ್ಯಾದ ಸೈನಿಕರಿಗೆ ಉಕ್ರೇನ್ ನಲ್ಲಿ ದಾರಿಗಳು ಸರಿಯಾಗಿ ಗೊತ್ತಿಲ್ಲ, ಅಲ್ಲದೆ ಅವರು ಅತ್ಯಂತ ಕಳಪೆ ಸಂವಹನ ಸಾಮರ್ಥ್ಯ ಹೊಂದಿದ್ದಾರೆ.
ಹೀಗಾಗಿ ಇಲ್ಲಿನ ಭೂಪ್ರದೇಶಗಳನ್ನು ಸಂಕೇತಗಳ ಸಹಾಯವಿಲ್ಲದೆ ಪ್ರವೇಶ ಮಾಡುವುದಕ್ಕೆ ಬರುವುದಿಲ್ಲ.Ukraine and Russia
ನಾವು ಶತ್ರುಗಳ ದಾರಿ ತಪ್ಪಿಸಲು ಆ ಬೋರ್ಡ್ಗಳನ್ನೆಲ್ಲ ತೆಗೆದುಹಾಕುತ್ತಿದ್ದೇವೆ ಎಂದು ಫೇಸ್ಬುಕ್ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.