ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಒಂದು ಗುಡ್ ನ್ಯೂಸ್!

Govt Employees DA Increase

ನವದೆಹಲಿ

ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ಗುಡ್​ನ್ಯೂಸ್​ ಒಳ್ಳೆಯ ಸಂದೇಶವನ್ನು ನೀಡುತ್ತಿದೆ.

ಕೊವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕತೆಯ ಬೆಳವಣಿಗೆಯ ನಿಧಾನಗತಿಯಲ್ಲಿ ಸಾಗುತ್ತಿದೆ.

ಇದರ ಮಧ್ಯದಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಿಶೇಷವಾದ ಮುಂಗಡ ಯೋಜನೆಯನ್ನು ಪ್ರಕಟಿಸುವ ಸಾಧ್ಯತೆಯಿದೆ.

ಈ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರಿಗೆ 10,000 ರೂ. ನೀಡಲು ಚಿಂತನೆ ಮಾಡುತ್ತಿದೆ.

ಬಡ್ಡಿ ರಹಿತ ಮುಂಗಡವು ಉದ್ಯೋಗಿಗಳಿಗೆ ದೊಡ್ಡ ಉತ್ತೇಜನವನ್ನು ನೀಡುತ್ತಿದೆ.

ತಮ್ಮ ಡಿಎ ಬಾಕಿಗಳಿಗಾಗಿ ಕಾಯುತ್ತಿರುವ ಉದ್ಯೋಗಿಗಳು 2022ರ ಮಾರ್ಚ್ 18ರಂದು ಹೋಳಿ ಹಬ್ಬಕ್ಕೂ ಮೊದಲೇ ಶುಭ ಸುದ್ದಿಯನ್ನು ಸ್ವೀಕರಿಸುವ ಸಾಧ್ಯತೆಯಿದೆ.Govt Employees DA Increase

ಕೇಂದ್ರ ಸರ್ಕಾರವು ತುಟ್ಟಿಭತ್ಯೆಯನ್ನು (DA)  3% ರಷ್ಟು ಹೆಚ್ಚಳ ಮಾಡುವ ಸಾಧ್ಯತೆಯಿದೆ.

ವರದಿಯ ಪ್ರಕಾರ

ಕೇಂದ್ರ ಸರ್ಕಾರಿ ನೌಕರರಿಗೆ ಒಂದು ಸಿಹಿಯಾದ ವಿಚಾರ ತಮ್ಮ ಡಿಎ ಬಾಕಿಗಳಿಗಾಗಿ ಕಾಯುತ್ತಿರುವ ಉದ್ಯೋಗಿಗಳು ಮಾರ್ಚ್ 18, 2022 ರಂದು ಹೋಳಿ ಹಬ್ಬದ ಮೊದಲೇ ಬರಬಹುದು.


ಕೇಂದ್ರ ಸರ್ಕಾರವು ತುಟ್ಟಿಭತ್ಯೆಯನ್ನು 3% ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ – ಜನವರಿ 1, 2022 ರಿಂದ ಜಾರಿಗೆ ಬಂದಿದೆ.

ಎಲ್ಲಾ ಉದ್ಯೋಗಿಗಳು ಮಾರ್ಚ್‌ನಲ್ಲಿ ಪೂರ್ಣ ವೇತನವನ್ನು ಪಡೆಯುತ್ತಿದ್ದು, ಇದರಲ್ಲಿ ಜನವರಿ ಮತ್ತು ಫೆಬ್ರವರಿಗೆ ಇರುವ ಡಿಎ ಬಾಕಿ ಇದೆ.

ಲೆವೆಲ್-1 ಉದ್ಯೋಗಿಗಳ ಡಿಎ ಬಾಕಿಯು 11,880 ರಿಂದ 37,554 ರವರೆಗೆ ಬದಲಾಗಿದೆ ಎಂದು ಜೆಸಿಎಂನ ರಾಷ್ಟ್ರೀಯ ಮಂಡಳಿಯ ಶಿವ ಗೋಪಾಲ್ ಮಿಶ್ರಾ ತಿಳಿಸಿದ್ದಾರೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020ರಲ್ಲಿ ಗೆಜೆಟೆಡ್ ಮತ್ತು ನಾನ್-ಗೆಜೆಟೆಡ್ ಉದ್ಯೋಗಿಗಳಿಗೆ ಒಂದು ಬಾರಿಯ ಕ್ರಮವಾಗಿ ವಿಶೇಷ ಫೆಸ್ಟಿವ್ ಮುಂಗಡ ಯೋಜನೆಯನ್ನು ಸ್ಮರಿಸಿದ್ದಾರೆ.

ಕಳೆದ ವರ್ಷವೂ ದೀಪಾವಳಿ ಹಬ್ಬದ ಸಮಯದಲ್ಲಿ ಕೇಂದ್ರ ಸರ್ಕಾರ ತುಟ್ಟಿ ಭತ್ಯೆ (DA) ಹೆಚ್ಚಿಸಿತ್ತು.

ಕೇಂದ್ರ ಸರ್ಕಾರಿ ನೌಕರರು ಈಗಾಗಲೇ ಶೇ. 31ರಷ್ಟು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ.

7 ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ, ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ಮಾತ್ರ ನೀಡಲಾಗುತ್ತದೆ.

ಮಾರ್ಚ್‌ನಲ್ಲಿ ತುಟ್ಟಿ ಭತ್ಯೆ ಹೆಚ್ಚಳ ಘೋಷಣೆಯಾಗುವ ನಿರೀಕ್ಷೆಯಿದೆ.

ಎಲ್ಲಾ ಕೇಂದ್ರ ಸರ್ಕಾರಿ ನೌಕರರು 2021ರ ಮಾರ್ಚ್ 31 ರೊಳಗೆ 10,000 ರೂಪಾಯಿಗಳ ಬಡ್ಡಿ ರಹಿತ ಮುಂಗಡವನ್ನು ಪಡೆಯಲು ಅನುಮತಿಸಲಾಗಿದೆ.Govt Employees DA Increase

ಬಡ್ಡಿ ರಹಿತ ಮುಂಗಡವನ್ನು ಉದ್ಯೋಗಿಯಿಂದ ಗರಿಷ್ಠ 10 ಕಂತುಗಳಲ್ಲಿ ಮರುಪಡೆಯಬಹುದಾಗಿದೆ.

ಉದ್ಯೋಗಿಗಳಿಗೆ ಮುಂಗಡ ಮೌಲ್ಯದ ಪ್ರಿ-ಲೋಡೆಡ್ ರುಪೇ ಕಾರ್ಡ್ ಅನ್ನು ಒದಗಿಸಲಾಗಿದೆ.

 ಕಾರ್ಡ್‌ನ ಬ್ಯಾಂಕ್ ಶುಲ್ಕವನ್ನೂ ಸರ್ಕಾರವೇ ಭರಿಸಿತ್ತು.

ರುಪೇ ಕಾರ್ಡ್ ಮೂಲಕ ಮುಂಗಡ ವಿತರಣೆಯು ಡಿಜಿಟಲ್ ಪಾವತಿಯ ವಿಧಾನವನ್ನು ಖಾತ್ರಿಗೊಳಿಸುತ್ತದೆ.

ಆಧುನಿಕ ಕೃಷಿಯಲ್ಲಿ ಡ್ರೋನ್​​ಗಳಿಗೆ ಮೋದಿ ಚಾಲನೆ!-kisan drones

https://www.google.com/search?q=way2plot&oq=w&aqs=chrome.1.69i60j69i59j46i39j69i59j69i60l4.906j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *