Govt jobs Recruitment-23,000 ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ

Govt jobs Recruitment-23,000 ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ

Govt jobs Recruitment

 ಪ್ರಾಥಮಿಕ ಶಾಲೆಗೆ 18,000, ಪ್ರೌಢಶಾಲೆಗೆ 5,000 ಅತಿಥಿ ಶಿಕ್ಷಕರ ನೇಮಕ
 ಶಿಕ್ಷಣ ಇಲಾಖೆ ಆದೇಶ, 8000 ರು.ವರೆಗೆ ವೇತನ ನಿಗದಿ
 ಇಲಾಖೆಯಲ್ಲಿ ಸುಮಾರು 30 ಸಾವಿರ ಶಿಕ್ಷಕರ ಕೊರತೆ 

ಬೆಂಗಳೂರು(ನ.05):  ರಾಜ್ಯದ(Karnataka) ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕ(Teachers) ಹುದ್ದೆಗಳಿಗೆ 2021-22ನೇ ಸಾಲಿಗೆ ತಾತ್ಕಾಲಿಕವಾಗಿ 23,078 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ(Department of Education) ಆದೇಶಿಸಿದೆ.
ಪ್ರಾಥಮಿಕ ಶಾಲೆಗಳಿಗೆ(Primary Schools) 18000 ಅತಿಥಿ ಶಿಕ್ಷಕರು ಮತ್ತು ಪ್ರೌಢ ಶಾಲೆಗಳಿಗೆ(High Schools) ಎರಡನೇ ಹಂತದಲ್ಲಿ 5078 ಶಿಕ್ಷಕರನ್ನು ನೇಮಕ(Recruitment) ಮಾಡಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ವಿಶಾಲ್‌ ಆದೇಶ ಮಾಡಿದ್ದಾರೆ. ಮೊದಲ ಹಂತದಲ್ಲಿ ಈಗಾಗಲೇ 3200ಕ್ಕೂ ಹೆಚ್ಚು ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಪ್ರತಿ ಜಿಲ್ಲೆ, ತಾಲ್ಲೂಕುಗಳ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಪ್ರತಿಯಾಗಿ ಎಷ್ಟುಮಂದಿ ಅತಿಥಿ ಶಿಕ್ಷಕರನ್ನು(Guest Teachers) ನೇಮಕ ಮಾಡಿಕೊಳ್ಳಬೇಕೆಂಬ ಪಟ್ಟಿಯನ್ನು ಇಲಾಖೆ ಪ್ರಕಟಿಸಿದ್ದು, ಆಯಾ ಶಾಲಾ ಮುಖ್ಯ ಶಿಕ್ಷಕರಿಗೇ ಅತಿಥಿ ಉಪನ್ಯಾಸಕರ ನೇಮಕಾತಿ ಹೊಣೆ ವಹಿಸಲಾಗಿದೆ. ಪ್ರಾಥಮಿಕ ಶಿಕ್ಷಕರನ್ನು ಸೆಪ್ಟೆಂಬರ್‌ ತಿಂಗಳಿಂದ 2022ರ ಮಾರ್ಚ್‌ವರೆಗೆ, ಪ್ರೌಢಶಾಲಾ ಶಿಕ್ಷಕರನ್ನು ಅಕ್ಟೋಬರ್‌ 21ರಿಂದ ಏಪ್ರಿಲ್‌ 2022ರವರೆಗೆ ಅನ್ವಯಿಸುವಂತೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಅತಿಥಿ ಶಿಕ್ಷಕ ಹುದ್ದೆಗೆ ನಿಗದಿಪಡಿಸಿರುವ ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್‌ ಆಧಾರದಲ್ಲಿ ಆಯ್ಕೆ ಮಾಡಬೇಕು ಎಂದು ತಿಳಿಸಿದ್ದಾರೆ.

ನೇಮಕಗೊಳ್ಳುವ ಪ್ರಾಥಮಿಕ ಶಾಲಾ ಅತಿಥಿ ಉಪನ್ಯಾಸಕರಿಗೆ ಮಾಸಿಕ 7500 ರು., ಪ್ರೌಢಶಾಲಾ ಅತಿಥಿ ಉಪನ್ಯಾಸಕರಿಗೆ ಮಾಸಿಕ 8000 ರು. ಸಂಭಾವನೆ(Remuneration೦ ನಿಗದಿಪಡಿಸಲಾಗಿದೆ. ತಾಲ್ಲೂಕುವಾರು ನೇಮಕೊಂಡ ಅತಿಥಿ ಉಪನ್ಯಾಸಕರ ಮಾಹಿತಿ ಸಂಗ್ರಹಿಸಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿಲ್ಲೆಯಿಂದ ಅನುದಾನ ಬಿಡುಗಡೆಗೆ ಬೇಡಿಕೆ ಸಲ್ಲಿಸಬೇಕು. ಆರ್ಥಿಕ ಇಲಾಖೆಯಿಂದ ನೇರವಾಗಿ ತಾಲ್ಲೂಕು ಪಂಚಾಯಿತಿಗಳಿಗೆ ಸಂಭಾವನೆಯ ಹಣ ಬಿಡುಗಡೆಯಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಮಧ್ಯೆ, ಪ್ರಸ್ತುತ ನಡೆಯುತ್ತಿರುವ ಶಿಕ್ಷಕರ ವರ್ಗಾವಣೆ(Transfer) ಪ್ರಕ್ರಿಯೆ ಮೇಲೆ ಯಾವುದೇ ಶಾಲೆಯ ಖಾಲಿ ಹುದ್ದೆಗೆ ವರ್ಗಾವಣೆಯಾಗಿ ಬಂದ ಶಿಕ್ಷಕರ ಸ್ಥಾನಕ್ಕೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದಲ್ಲಿ ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲ್ಲೂಕಿನ ಒಳಗಿನ ಬೇರೊಂದು ಶಾಲೆಗೆ ಆ ಅತಿಥಿ ಶಿಕ್ಷಕರನ್ನು ನಿಯೋಜಿಸಬೇಕು ಎಂದು ತಿಳಿಸಿದೆ.

Govt jobs Recruitment
ಕೋವಿಡ್‌(Covid19) ಹಿನ್ನೆಲೆಯಲ್ಲಿ ತಡವಾಗಿ ಶಾಲೆಗಳು ಆರಂಭವಾಗಿದ್ದು ಆದಷ್ಟು ಬೇಗ ಪಠ್ಯಕ್ರಮ ಬೋಧನೆ ಪೂರ್ಣಗೊಳಿಸಲು ಅನುವಾಗುವಂತೆ ಶೈಕ್ಷಣಿಕ ಹಿತದೃಷ್ಟಿಯಿಂದ ಇಷ್ಟು ದೊಟ್ಟಮಟ್ಟದ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ಅನುಮತಿ ಕೋರಿ ಶಿಕ್ಷಣ ಇಲಾಖೆ ಸರ್ಕಾರಕ್ಕೆ(Government) ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಆರ್ಥಿಕ ಇಲಾಖೆ ಸಹಮತಿ ನೀಡಿತ್ತು. ಮಾಹಿತಿ ಪ್ರಕಾರ ಇಲಾಖೆಯಲ್ಲಿ ಸುಮಾರು 30 ಸಾವಿರ ಶಿಕ್ಷಕರ ಕೊರತೆ ಇದ್ದು ಅತಿಥಿ ಉಪನ್ಯಾಸಕರಿಂದ ಈ ಕೊರತೆ ನಿಭಾಯಿಸಲು ಸರ್ಕಾರ ಮುಂದಾಗಿದೆ.

https://www.freejobalert.com/state-government-jobs/

Karnataka

Post DateRecruitment BoardPost NameQualificationAdvt NoLast DateMore Information
05/11/2021Central Silk BoardTrainer & Training Asst – 60 Posts10th, 12th Class, ITI, Diploma (Engg)17-11-2021Get Details..
03/11/2021ITI LimitedChief Manager/ Manager, Dy. Manager & Other – 41 PostsDegree (Engg.), CA/ ICWA25-11-2021Get Details..
03/11/2021AIISH, MysoreDean, Nursing Superintendent, Asst Gr II & Other – 8 Posts10+2, Diploma, Degree, PG (Relevant Discipline)13/202117-12-2021Get Details..
01/11/2021Women & Child Development Dept, ChikkaballapurAnganwadi Worker / Helper – 90 Posts4th, 9th Class29-11-2021Get Details..
30/10/2021ISROJr Translation Officer – 6 Posts02/202120-11-2021Get Details..
29/10/2021ITI LimitedAEE, Dy. Manager/ Manager – 20 PostsBE/B.Tech (Engg)11-11-2021Get Details..
29/10/2021CSIR-Fourth Paradigm InstituteJunior Secretariat Assistant, Junior Stenographer – 7 Posts10+2/ XII/ PUC01/202127-11-2021Get Details..
28/10/2021Karnataka High CourtTypist – 150 PostsDegree (Relevant Disciplines), Typing Speed10/202127-11-2021Get Details
26/10/2021BRBNMPLDeputy Manager – 6 PostsBE/ B.Tech (Engg)19-11-2021Get Details..
18/10/2021Women & Child Development Dept, MandyaAnganwadi Worker & Helper – 122 Posts04th, 9th Class, SSLC15-11-2021Get Details..
06/10/2021DRDO-DFRLJRF & Research Associate – 5 PostsM.Sc/ M.Tech with NET/ GATE, Ph.D30 DaysGet Details..
04/10/2021KEAAssistant Professor – 1242 PostsPG (Relevant Discipline)06-11-2021Get Details
25/08/2021Central Silk BoardScientist B – 15 PostsDegree (Engg/ Technology (Textile Technology))Get Details..
Social Share

Leave a Reply

Your email address will not be published. Required fields are marked *