ಬೀದರ ಜಿಲ್ಲೆಗೆ ಮಾದರಿಯಾದ ಗುಡಪಳ್ಳಿ ಪಂಚಾಯತ!-Gudapalli Panchayat

Gudapalli Panchayat

ಬೀದರ ಜಿಲ್ಲೆಯ ಔರಾದ ತಾಲೂಕಿನ ಗುಡಪಳ್ಳಿ ಗ್ರಾಮದಲ್ಲಿ ಜನರ ವಾಸ್ತವಿಕ ಪರಿಸ್ಥಿತಿಯನ್ನು ಅರಿತುಕೊಂಡು ಹಾಗೂ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಆಲೋಚಿಸಿ ಅಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಕ್ರಿಯೇಟಿವ್ ಫೌಂಡೇಶನ ಮೂಲಕ  ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅದರಲ್ಲಿ ಪ್ರಮುಖವಾದವು ಈ ಕೆಳಗೆ ವಿವರಿಸಲಾಗಿದೆ.

ಗುಡಪಳ್ಳಿ ಪಂಚಾಯತ ಕಚೇರಿ ಹಸಿರು ಆವರಣ-Gudapalli Panchayat

ಇಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಗ್ರೀನ್ ಸಿಟಿ ಹಾಗೂ ಕ್ಲೀನ್ ಅಡ್ಮಿನಿಸ್ಟ್ರೇಷನ್ ಮಾಡುವುದಕ್ಕೆ ಅನೇಕ ಕಾರ್ಯಕ್ರಮಗಳನ್ನುಹಾಗೂ ಅನೇಕ ಸ್ವಚ್ಛತಾ ಅಭಿಯಾನಗಳು ಹಮ್ಮಿಕೊಂಡು ಜನರಲ್ಲಿ ಅರಿವು ಮೂಡಿಸುತಿದ್ದು.

ಆದರಿಂದ ಪಂಚಾಯತ ಆವರಣದಲ್ಲಿ ಶಿಸ್ತು ಮತ್ತು ಸ್ವಚ್ಛತೆಗೆ ಆಧ್ಯತೆಯನ್ನು ನೀಡಿ ಈ ಉತ್ತಮ ಕಾರ್ಯಗಳನ್ನು ಕ್ರಿಯೇಟಿವ್ ಫೌಂಡೇಶನ್ ಮೂಲಕ ಮಾಡಲಾಗಿದೆ.

ಅಭಿವೃದ್ಧಿ ಆಗುವ ಮೊದಲು ಗ್ರಾಮ ಪಂಚಾಯತ ಕಚೇರಿಯ ಎದುರುಗಡೆಯಲ್ಲಿರುವ ಉದ್ಯಾನಕ್ಕೆ ಮೀಸಲಿರುವ ಜಾಗವು ಬಹಳ ಅಸ್ತವೆಸ್ಥಾವಾಗಿದ್ದಿತು ಇದನ್ನು ಗಮನಿಸಿ ಇದರ ಬದಲಾವಣೆಗೆ ಯೋಜನೆಯನ್ನು ಮಾಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.

ಕಚೇರಿಯ ಆವರಣದ ಮುಂದೆ ಇರುವ ಉದ್ಯಾನವನ್ನು ಸರಿಪಡಿಸಿ ಪಂಚಾಯತಿಯ ಸ್ವಚ್ಛತೆ ಮತ್ತು ಶಿಸ್ತಿನ ಗುರಿಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಕ್ರಿಯೇಟಿವ್ ಫೌಂಡೇಶನ ಅಡಿಯಲ್ಲಿ ಇಂತಹ ಉತ್ತಮವಾದ ಅಭಿವೃದ್ಧಿಯು ಮಾಡಿ ಜಿಲ್ಲೆಯ ಬೇರೆ ಬೇರೆ ಪಂಚಾಯಿತಿಗಳಿಗೆ ಮಾದರಿಯಾಗಿದ್ದಾರೆ.

ಪಂಚಾಯಿತಿಯ ಆವರಣದ ಹಚ್ಚ ಹಸಿರು ಉದ್ಯಾನವನ್ನು ನೋಡಿ ಗ್ರಾಮಸ್ಥರು ಇದಕ್ಕೆ ಉತ್ತಮವಾದ ಪ್ರತಿಕ್ರಿಯೆಯನ್ನು ವ್ಯಕ್ತ ಪಡಿಸಿದ್ದಾರೆ.

ಪ್ರಾಥಮಿಕ ಶಾಲಾ ಆವರಣ

ವಿದ್ಯಾರ್ಥಿಗಳಿಗೆ ಓದುವುದು ಎಷ್ಟು ಮುಖ್ಯವೋ ಹಾಗೆಯೇ ಪಾಠದ ಜೊತೆಗೆ ಆಟವು ಅಷ್ಟೇ ಮುಖ್ಯವಾಗಿದೆ.

ಗುಡಪಳ್ಳಿ ಗ್ರಾಮದ ಸರಕಾರಿ ಶಾಲೆಯ ಆಟದ ಮೈದಾನವು ಆಟ ಆಡಲು ಬಾರದ ಸ್ಥಿತಿಯಲ್ಲಿ ಹಾಳಾಗಿತ್ತು, ಶಾಲೆಯ ಮಕ್ಕಳಿಗೆ ಆಡಲು ಬಹಳ ತೊಂದರೆಯಾಗುತ್ತಿತ್ತು. ಇದನ್ನು ಅರಿತ ಪಂಚಾಯತ ಅಧಿಕಾರಿಗಳು ಅಭಿವೃದ್ಧಿ ಪಡಿಸಿದ್ದಾರೆ.

ಕ್ರೀಡೆಗಳನ್ನು ಆಡುವುದರಿಂದ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ. ಆಟದಿಂದ ಕೂಡ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಬಹುದು, ಇದರಲ್ಲಿಯೂ ಕೂಡ ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಕ್ರೀಡೆಯಲ್ಲಿ ಸಾಧಿಸಬಹುದು.

ಇದನ್ನು ಗಮನಿಸಿ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಸರಕಾರಿ ಶಾಲೆಯ ಆಟದ ಮೈದಾನಕ್ಕೆ ಆಧ್ಯತೆ ನೀಡಿ ಅದಕ್ಕೆ ಬೇಕಾದ ಸಾಮಗ್ರಿಗಳು ಮತ್ತು ಗ್ರೌಂಡನ್ನು ಕ್ರಿಯೇಟಿವ್ ಫೌಂಡೇಶನ್ ಮೂಲಕ ಅಭಿವೃದ್ಧಿ ಪಡಿಸಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ.

ಡಿಜಿಟಲ್ ಗ್ರಂಥಾಲಯ

ಮೊದಲು ಈ ಗುಡಪಳ್ಳಿ ಗ್ರಾಮದ ಗ್ರಂಥಾಲಯ ತುಂಬಾ ಅವ್ಯವಸ್ಥೆಗೆ ಕಾರಣವಾಗಿತ್ತು, ಓದುವ ಸ್ಥಳವು ಶಿಸ್ತು ಮತ್ತು ಸ್ವಚ್ಛತೆಯಿಂದ ಕೂಡಿರಬೇಕು ಆದರೆ ಇದು ಸರಿಯಾಗಿರಲಿಲ್ಲ.

ಗ್ರಾಮೀಣ ಭಾಗದಲ್ಲಿನ ಬಡ ಕುಟುಂಬದ ಜನರು ತಮ್ಮ ಜೀವನ ನಡೆಸಲು ಕಷ್ಟಕರವಾದ. ಹಾಗೆಯೇ ಅವರ ಮಕ್ಕಳ ಭವಿಷ್ಯದ ಶಿಕ್ಷಣದ ಬಗ್ಗೆ ಬಹಳ ಗಮನ ಕೊಡುವುದು ಅಷ್ಟೇ ಮುಖ್ಯವಾಗಿದೆ.

ಏಕೆಂದರೆ ದಿನಗೂಲಿ ಮಾಡಿ ತನ್ನ ಜೀವನ ನಡೆಸುತ್ತಿರುವ ಇವರಿಗೆ ತಮ್ಮ ಮಕ್ಕಳ ಓದಿಗಾಗಿ ಸರಕಾರ ಕಡೆಯಿಂದ ಗ್ರಾಮ ಪಂಚಾಯತಗಳಲ್ಲಿ ಡಿಜಿಟಲ್ ಲೈಬ್ರೆರಿ, ಗಣಕಯಂತ್ರದ ಶಿಕ್ಷಣ.

ಆಟದ ಮೈದಾನ ಹಾಗೂ ಉದ್ಯಾನಗಳನ್ನು ನಿರ್ಮಿಸುವುದು ಗ್ರಾಮೀಣ ಪ್ರದೇಶಗಳಲ್ಲಿ ತುಂಬಾ ಅವಶ್ಯಕವಾಗಿದೆ.

ಅನೇಕ ವಿದ್ಯಾರ್ಥಿಗಳಿಗೆ ತಮ್ಮ ಕಷ್ಟದಿಂದ ಓದಲು ಮತ್ತು ಉತ್ತಮವಾದ ಶಿಕ್ಷಣವನ್ನು ಪಡೆಯದೇ ಅವರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಯಾರು ಎಷ್ಟೇ ಬಡತನದಿಂದ ಬಂದರು, ಬರದೇ ಇದ್ದರು ಗ್ರಾಮದ ಎಲ್ಲಾ ಮಕ್ಕಳಿಗೆ ಸಮಾನವಾದ ರೀತಿಯಲ್ಲಿ ಶಿಕ್ಷಣ ಸಿಗಬೇಕೆಂಬ ಕಾರಣದಿಂದ ಈ ಅಭಿವೃದ್ಧಿ ಕಾರ್ಯ ಮಾಡಲಾಗಿದೆ.

ಎಷ್ಟೇ ಅಭಿವೃದ್ಧಿ ಹೊಂದದ ಹಳ್ಳಿಯಾದರು ಅಲ್ಲಿನ ವಿದ್ಯಾರ್ಥಿಗಳಿಗೆ ತೊಂದರೆಯಾಗದಿರಲು ಸರ್ಕಾರದಿಂದ ಇಂತಹ ಒಳ್ಳೆಯ ಯೋಜನೆಗಳನ್ನು ತರುವುದು ಬಹಳ ಮುಖ್ಯವಾಗಿದೆ.

ಬಡ ಕುಟುಂಬದಿಂದ ಬಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಕಂಪ್ಯೂಟರ್ ಹಾಗೂ ಬೆಲೆಯುಳ್ಳ ಪುಸ್ತಕಗಳನ್ನು ಖರೀದಿ ಮಾಡಲು ಆಗುವುದಿಲ್ಲ ಅವಾಗ ಗ್ರಾಮ ಪಂಚಾಯತದಿಂದ ಬಂದಂತಹ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಪಂಚಾಯತ ಒಳ್ಳೆಯ ಕಾರ್ಯಗಳಿಂದ ಮಕ್ಕಳಿಗೆ ಉತ್ತಮವಾದ ಸೌಲಭ್ಯ ದೊರಕುವುದು ತುಂಬಾ ಖುಷಿಯ ವಿಚಾರವಾಗಿದೆ.

ಏಕೆಂದರೆ ಸರಕಾರಿ ನೌಕರಿಯನ್ನು ಪಡೆದುಕೊಳ್ಳಲು ಹಲವಾರು ಜನ ಕೋಚಿಂಗ್ ಸೆಂಟರಗಳಿಗೆ ಹೋಗುತ್ತಾರೆ.

ಆದರೆ ಬಡ ಜನ ವಿದ್ಯಾರ್ಥಿಗಳು ಹಣದ ಅಭಾವದಿಂದ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿ ಕೋಚಿಂಗ್ ಪಡೆದುಕೊಳ್ಳಲು ಆಗುವುದಿಲ್ಲ.

ಆದ ಕಾರಣ ಬೇರೆ ಕಡೆ ಹೋಗಿ ಕೋಚಿಂಗ್ ಪಡೆದುಕೊಳ್ಳುವ ಬದಲು ಈ ಡಿಜಿಟಲ್ ಲೈಬ್ರೆರಿಯಲ್ಲೇ ಅಧ್ಯಯನ ಮಾಡುವ ಸೌಲಭ್ಯ ಒದಗಿಸಿದೆ.

ಹಾಗೆಯೇ ಪಾಠದ ಜೊತೆಗೆ ಕ್ರೀಡೆಗಳನ್ನು ಆಟವಾಡಲು ಗ್ರಾಮದಲ್ಲಿಯೇ ಸರಕಾರಿ ಶಾಲೆಯ ಆಟದ ಮೈದಾನಗಳನ್ನು ನವೀಕರಿಸಿದ್ದಾರೆ.

ಪಿಡಿಒ ಸಂತೋಷ ಪಾಟೀಲ ಅವರ ವಿಶೇಷ ಕಾಳಜಿಯಿಂದ ಮತ್ತು ಎಲ್ಲ ಸದಸ್ಯರ ಒಗ್ಗಟ್ಟಿನಿಂದ ಮಾಡಿದ ಕೆಲಸದ ಪ್ರತಿಫಲವಾಗಿ ಈ ತರಹದ ಗುಣಮಟ್ಟದ ಕೆಲಸಗಳು ಗುಡಪಳ್ಳಿ ಪಂಚಾಯತನಲ್ಲಿ ಆಗಿವೆ.

ನರೇಗಾ ಉತ್ತಮ ಕೆಲಸಕ್ಕಾಗಿ ಬೀದರ ಮಹಿಳೆಗೆ ಸನ್ಮಾನ!-Bidar News

https://digitalindiahelpline.com/

Social Share

Leave a Reply

Your email address will not be published. Required fields are marked *