
Ajay Devgan
ರನ್ ವೇ 34 ಬಗ್ಗೆ
ವಿವಾದದ ಹಿನ್ನೆಲೆಯಿಂದ ನಟ ಅಜಯ್ ದೇವ್ಗನ್ ಅವರು ಕೆಲವು ದಿನಗಳಿಂದ ತುಂಬಾ ಸುದ್ದಿಯಲ್ಲಿದ್ದಾರೆ, ಏಕೆಂದರೆ “ಹಿಂದಿ ರಾಷ್ಟ್ರೀಯ ಭಾಷೆ” ಎಂದು ಹೇಳುವ ಮೂಲಕ ಅನೇಕ ಜನರಿಂದ ತೀವ್ರವಾದ ವಿರೋಧವನ್ನು ಎದುರಿಸುತ್ತಿದ್ದಾರೆ.
ಕಿಚ್ಚ ಸುದೀಪ್, ರಮ್ಯಾ, ಸಿದ್ರಾಮಯ್ಯ ಸೇರಿದಂತ ಹಲವಾರು ಜನ ಅಜಯ್ ದೇವ್ಗನ್ ಮಾತನ್ನು ಖಂಡಿಸಿದ್ದು, ಇದರ ಜೊತೆಗೆ ಮತ್ತೊಂದು ಕಾರಣಕ್ಕಾಗಿ ಇವರು ಸುದ್ದಿಯಲ್ಲಿದ್ದಾರೆ.
ಅಜಯ್ ದೇವ್ಗನ್ ನಟಿಸಿ, ನಿರ್ದೇಶಿಸಿ, ನಿರ್ಮಾಣ ಮಾಡಿರುವ ಹೊಸ ಚಿತ್ರ “ರನ್ ವೇ 34” ಇಂದು ಬಿಡುಗಡೆಯಾಗಿದ್ದು ಈ ಸಿನಿಮಾವನ್ನ ಅಕ್ಷಯ್ ಕುಮಾರ್ ಒಂದು ದಿನ ಮುಂಚಿತವಾಗಿ ನೋಡಿದ್ದಾರೆ.
ಈ ಸಿನಿಮಾದ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು, ಅಜಯ್ ದೇವ್ಗನ್ ಬಗ್ಗೆ ಭಾರಿ ಮೆಚ್ಚುಗೆಯನ್ನು ವ್ಯಕ್ತ ಪಡಿಸಿ ಇದನ್ನು ಸಾಮಾಜಿಕ ಜಾಲತಾಣದ ಮೂಲಕ ಚಿತ್ರದ ವಿಮರ್ಶೆ ತಿಳಿಸಿದ್ದಾರೆ.

ಆದ್ರೆ ನಟ ಅಕ್ಷಯ್ ಕುಮಾರ ಸಿನಿಮಾದ ವಿಮರ್ಶೆ ಮಾಡಿದ ನಂತರ ಮುಖ ಭಂಗವಾಗಿದ್ದು, ಇದು ನಿಮ್ಮ “ಗುಟ್ಕಾ ಗ್ಯಾಂಗ್” ಎಂದು ಜನರು ಟ್ರೊಲ್ ಮಾಡಿದ್ದಾರೆ.
ಅಕ್ಷಯ್ ಮಾಡಿದ ಟ್ವೀಟ್ ತುಂಬಾ ವೈರಲ್ ಆಗುತ್ತಿದೆ, ದಕ್ಷಿಣ ಭಾರತದ ಸಿನಿಮಾಗಳನ್ನು ಕೆಣಕಿರುವ ಅಜಯ್ ದೇವ್ಗನ್ ಈಗ “ರನ್ ವೇ 34” ಚಿತ್ರದ ಮೂಲಕ ಗಲ್ಲಾ ಪೆಟ್ಟಿಗೆಯಲ್ಲಿ ಎಷ್ಟು ಗಳಿಸಿದ್ದಾರೆ ಎಂಬುವುದು ಬಹಳ ಕುತೂಹಲಕಾರಿಯಾಗಿದೆ.
ನಟ ಅಜಯ್ ದೇವ್ಗನ್ ಮತ್ತು ಅಕ್ಷಯ್ ಕುಮಾರ್ ಇಬ್ಬರು ಒಳ್ಳೆಯ ಸ್ನೇಹಿತರು, ಆದರಿಂದ ಈ ಚಿತ್ರ ವಿಶೇಷ ಪ್ರದರ್ಶನ ಷೋಗಳಲ್ಲಿ ನೋಡಿದ ಅಕ್ಷಯ್ ಉತ್ತಮವಾಗಿದೆ ಎಂದು ಹೇಳಿದ್ದಾರೆ.
“ರನ್ ವೇ 34” ಚಿತ್ರವನ್ನು ನಾನು ನೋಡಿದೆ ಅಜಯ್ ದೇವ್ಗನ್ ಅವರೇ ನಿಜವಾಗಿಯೂ ಮಜಾ ಬಂತು, ಎಂಥ ಥ್ರಿಲ್ಲರ್, ಸೂಪರ್ ಆದಂತಹ ವಿಎಫಎಕ್ಷ ಉತ್ತಮವಾದ ನಟನೆ ಮತ್ತು ನಿರ್ದೇಶನ. ಹಾಗೆಯೇ ಸಂಪೂರ್ಣ ಈ ಚಿತ್ರ ತಂಡಕ್ಕೆ ಶುಭವಾಗಲಿ ಎಂದು ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಜಾಹಿರಾತು
ವಿಮಲ್ ಪಾನ್ ಮಸಾಲಾ ಜಾಹಿರಾತಿನಲ್ಲಿ ಅಜಯ್ ದೇವ್ಗನ್ ಮತ್ತು ಅಕ್ಷಯ್ ಕುಮಾರ ನಟಿಸಿರುವುದು ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿತ್ತು.ಇವಾಗ ಈ ವಿಚಾರವನ್ನು ನೆಟ್ಟಿಗರು ಮತ್ತೆ ಎಳೆದು ತಂದಿದ್ದಾರೆ.
ನಿಮ್ಮದ ಗುಟ್ಕಾ ಗ್ಯಾಂಗ್ ಹಾಗಾಗಿ ಪರಸ್ಪರ ಪ್ರೀತಿ ತೋರಿಸುತ್ತಿದ್ದೀರಿ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ.
ಇದೊಂದು ಪೇಡ್ ಪ್ರಚಾರ ಅಕ್ಷಯ್ ಕುಮಾರ ಅವರು ಮುಂಬರುವ ಚಿತ್ರಕ್ಕಾಗಿ ಇಷ್ಟೆಲ್ಲಾ ಮಾಡುತ್ತಿದ್ದಾರೆ ಎಂದು ಕೆಲವರು ಆರೋಪ ಮಾಡಿದ್ದಾರೆ.
ಕ್ಷಮೆ ಕೇಳಿದ ಅಕ್ಷಯ್ ಕುಮಾರ
ಕೆಲವು ದಿನಗಳ ಹಿಂದೆ ಜನರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನೆಲೆಯಲ್ಲಿ ನಟ ಅಕ್ಷಯ್ ಕುಮಾರ ಅವರು ವಿಮಲ್ ಜಾಹೀರಾತಿನಿಂದ ಹೊರಬಂದರು.
ಇದರ ಬಗ್ಗೆ ಇವಾಗ ಸ್ಪಷ್ಟನೆ ನೀಡಿದ ಅವರು “ನನ್ನನ್ನು ಕ್ಷಮಿಸಿ” ಎಲ್ಲ ಅಭಿಮಾನಿಗಳು ಮತ್ತು ನನ್ನ ಹಿತೈಷಿಗಳಲ್ಲಿ ನಾನು ಕ್ಷಮೆ ಕೇಳುತ್ತೇನೆ.
ಕಳೆದ ಕೆಲವು ದಿನಗಳಿಂದ ನೀವು ನೀಡಿದ ಪ್ರಕ್ರಿಯೆಗಳು ನನ್ನಲ್ಲಿ ಆಳವಾದ ಪರಿಣಾಮ ಬೀರಿದೆ, ನಾನು ತಂಬಾಕು ಸೇವನೆಯನ್ನು ಉತ್ತೇಜಿಸುವುದಿಲ್ಲ ವಿಮಲ್ ಜೊತೆ ನಾನು ಕೈ ಜೋಡಿಸುವುದರ ಕುರಿತು ನಿಮ್ಮ ಪ್ರಕ್ರಿಯೆಗಳನ್ನು ನಾನು ಗೌರವಿಸುತ್ತೇನೆ.

ಮಾನವೀಯತೆಯ ಕಾರಣಕ್ಕೆ ನಾನು ಈ ಜಾಹೀರಾತಿನಿಂದ ನಾನು ಹಿಂಜರಿಯುತ್ತೇನೆ, ನಾನು ಒಳ್ಳೆಯ ಉದ್ದೇಶಕ್ಕೆ ಇದರ ಸಂಭಾವನೆಯನ್ನು ನೀಡಲು ನಿರ್ಧರಿಸಿದ್ದೇನೆ.
ಈವಾಗಲೇ ಮಾಡಿಕೊಂಡ ಒಪ್ಪಂದದ ಅವಧಿ ಮುಗಿಯುವವರೆಗೂ ಬ್ರಾಂಡ್ ನವರು ಆ ಜಾಹಿರಾತನ್ನು ಪ್ರಸಾರ ಮಾಡಬಹುದು.
ಆದರೆ ನಾನು ಮುಂಬರುವ ದಿನಗಳಲ್ಲಿ ಜಾಹಿರಾತನ್ನು ಆಯ್ಕೆ ಮಾಡಿಕೊಳ್ಳುವ ಸಮಯದಲ್ಲಿ ಎಚ್ಚರಿಕೆ ವಹಿಸುತ್ತೇನೆ.
ಸದಾ ನಿಮ್ಮ ಪ್ರೀತಿ ಮತ್ತು ಹಾರೈಕೆ ಬಯಸುತ್ತೇನೆ ಎಂದು ಅಕ್ಷಯ್ ಕುಮಾರ್ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.