ಹಿಜಾಬ್ ತೀರ್ಪಿಗೆ ಕಾಲೇಜಿಂದ ಹೊರನಡೆದ ವಿದ್ಯಾರ್ಥಿನಿಯರು!

High Court Updates

ಹೈಕೋರ್ಟ್ ತೀರ್ಪು

ಹಿಜಬ್ ಸಂಬಂಧ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬೆನ್ನಲ್ಲೆ ಯಾದಗಿರಿಯ ಸುರಪುರ ತಾಲೂಕಿನ ಕೆಂಬಾವಿ ಪಟ್ಟಣದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಪರೀಕ್ಷೆಯನ್ನು ಬಿಟ್ಟು ಮನೆಗೆ ಹೋಗಿದ್ದಾರೆ.

ಹಿಜಬ್ ತೆಗೆಯದೆ ಬೆಳಗ್ಗೆಯಿಂದ ಕೋರ್ಟ್ ಆದೇಶಕ್ಕೆ ಕಾದು ಕುಳಿತಿದ್ದ ವಿದ್ಯಾರ್ಥಿನಿಯರು ತೀರ್ಪು ಪ್ರಕಟವಾಗುತ್ತಿದ್ದಂತೆಯೇ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪೂರ್ವಭಾವಿ ಪರಿಕ್ಷೆ ಬಿಟ್ಟು ತೆರಳಿದ್ದಾರೆ.

ನಾವು ಹಿಜಬ್ ಬಿಟ್ಟು ಕ್ಲಾಸ್ಗೆ ಬರಲ್ಲ ಎಂದು ಪರೀಕ್ಷೆ ಬಿಟ್ಟು 08 ವಿದ್ಯಾರ್ಥಿಗಳು ಮನೆಗೆ ಹೋಗಿದ್ದಾರೆ.

ನಂತರ ನಗರದ ಜ್ಯೂನಿಯರ್ ಪಿಯು ಕಾಲೇಜು ವಿದ್ಯಾರ್ಥಿನಿ ಅಸ್ರಾ ಮಾಧ್ಯಮದವರೊಂದಿಗೆ ಮಾತನಾಡಿ, ಹೈಕೋರ್ಟ್ ಆದೇಶ ಬಂದರೂ ನಾವು ಹಿಜಬ್ ಧರಿಸುತ್ತೆವೆ, ನಮಗೆ ಶಿಕ್ಷಣ ಹಾಗೂ ಹಿಜಬ್ ಕೂಡ ಮುಖ್ಯವಾಗಿದೆ.

ನಾವು ಹಿಜಬ್ ತೆಗೆಯುವುದಿಲ್ಲ ಹಿಜಬ್ ಧರಿಸಿ ಪೂರಕ ಪರೀಕ್ಷೆ ಬರೆಯುತ್ತೆವೆ, ಹಿಜಬ್ ತೆಗೆದು ಪರೀಕ್ಷೆ ಬರೆಬೇಕೆಂದರೆ ನಾವು ಪರೀಕ್ಷೆ ಬರೆಯಲ್ಲ, ಹಿಜಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಆಗ್ರಹ ಮಾಡಿದ್ದಾರೆ.

ಕೆಂಬಾವಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಶಕುಂತಲಾ ಮಾತನಾಡಿ, ನಾವು ಕೋರ್ಟ್ ಆದೇಶ ಪಾಲಿಸಿ ಅಂತ ಹೇಳಿದ್ದೇವೆ. ನಾವು ಬಹಳಷ್ಟು ಮನವೋಲಿಸಿದರೂ ವಿದ್ಯಾರ್ಥಿನಿಯರು ನಮ್ಮ ಮಾತು ಕೇಳುತ್ತಿಲ್ಲ.

ಹಿಜಬ್ ಹಾಕೊಂಡೇ ಬರುವುದಾಗಿ ಪಟ್ಟು ಹಿಡಿದಿದ್ದಾರೆ, ಅದಕ್ಕೆ ಅವರು ಕ್ಲಾಸ್ ಬಿಟ್ಟು ಹೋಗಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೆ ಪರೀಕ್ಷೆಗೆ ಬಂದಾಗ ಹಿಜಬ್ ತೆಗೆದು ಕುಳಿತುಕೊಳ್ಳಿ ಎಂದಾಗ ವಿದ್ಯಾರ್ಥಿನಿಯರು ತೆಗೆಯಲ್ಲ ಅಂದಿದ್ದು, ಕೋರ್ಟ್ ಆದೇಶ ಬರುವವರೆಗೂ ಕಾಯ್ತೀವಿ ಅಂತ ಅಂದಿದ್ದರು.

ಕೋರ್ಟ್ ಆದೇಶ ಬಂದಾಗ ಕ್ಲಾಸ್ ಬಿಟ್ಟು ಹೋಗುತ್ತೇವೆ ಅಂತ ಬಿಟ್ಟು ಹೋಗಿದ್ದಾರೆ, ನಾವು ಬುರ್ಖಾ, ಹಿಜಬ್ ಬಿಟ್ಟುಕ್ಲಾಸ್ ಗಳಿಗೆ ಬರಲ್ಲ ಅಂತ ಹೇಳಿದ್ದಾರೆ.

ಒಟ್ಟು 35 ಜನ ವಿದ್ಯಾರ್ಥಿನಿಯರು ಕ್ಲಾಸ್ ಬಹಿಷ್ಕರಿಸಿ ಹೊರ ಹೋಗಿದ್ದಾರೆ, ಕೆಲವು ಜನ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿದ್ದು, ನಾವು ಮತ್ತು ಪೋಲಿಸ್ ಇಲಾಖೆಯವರು ಮನವೋಲಿಸಿದ್ದೇವೆ.

ಆದರೂ ಕೂಡ ವಿದ್ಯಾರ್ಥಿನಿಯರು ದಿಕ್ಕರಿಸಿ ಹೊರ ನಡೆದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಹೈಕೋರ್ಟ್ ಐತಿಹಾಸಿಕ ತೀರ್ಪು

Hijab Dp

ಹಿಜಬ್ ಇಸ್ಲಾಂ ಅಗತ್ಯವಾದ ಆಚರಣೆ ಅಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪುನ್ನು ನೀಡಿದೆ, ಅಷ್ಟೇ ಅಲ್ಲದೇ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದಿದೆ.High Court Updates On Hijab

ಎಲ್ಲರೂ ಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ ಖಾಜಿ ನೇತೃತ್ವದ ಪೀಠ ಮನವಿಯನ್ನು ಮಾಡಿದೆ.

ಅಷ್ಟೇ ಅಲ್ಲದೇ ಸರ್ಕಾರದ ಆದೇಶವನ್ನು ಪ್ರಶ್ನಿಸಿ ತರಗತಿಗಳಲ್ಲಿ ಹಿಜಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಗಳನ್ನು ಪೀಠ ವಜಾ ಮಾಡಿದೆ.hijab dp

ಹಿಜಾಬ್ ವಿವಾದದ ಕುರಿತು ಕರ್ನಾಟಕ ಹೈಕೋರ್ಟ್ ಮಂಗಳವಾರ ಅಂದರೆ ಇವತ್ತು ತೀರ್ಪು ನೀಡಿದೆ, ‘ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಲ್ಲ’ ಎನ್ನುವುದು ಹೈಕೋರ್ಟ್ ತೀರ್ಪಿನ ಮುಖ್ಯ ಅಂಶವಾಗಿದೆ.

ಇದರ ಜೊತೆಗೆ ಸಮವಸ್ತ್ರ ನಿಗದಿಪಡಿಸುವ ಅಧಿಕಾರವು ಶಿಕ್ಷಣ ಸಂಸ್ಥೆಗಳಿಗೆ ಇದೆ, ಈ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಕಾನೂನುಬದ್ಧವಾಗಿದೆ ಎಂದು ಹೈಕೋರ್ಟ್ ಹೇಳಿದೆ.

 ಸುಮಾರು 129 ಪುಟಗಳ ಈ ಸುದೀರ್ಘ ತೀರ್ಪಿನಲ್ಲಿ ಹೈಕೋರ್ಟ್ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದೆ, ಕರ್ನಾಟಕ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆ.ಎಂ.ಖಾಜಿ ನ್ಯಾಯ ಪೀಠದಲ್ಲಿದ್ದರು.

ಕರ್ನಾಟಕ ಹೈಕೋರ್ಟ್ ಆದೇಶವು ಹೈಕೋರ್ಟ್ನ ವೆಬ್ಸೈಟ್ನಲ್ಲಿ ಶೀಘ್ರದಲ್ಲಿಯೇ ಸಾರ್ವಜನಿಕವಾಗಿ ಲಭ್ಯವಾಗುತ್ತದೆ.

ಕೋರ್ಟ್ ತೀರ್ಪಿನಲ್ಲಿ 10 ಪ್ರಮುಖ ಅಂಶಗಳಿವು

01. ಹಿಜಾಬ್ ಎಂಬ ಸಂಕೀರ್ಣ ಪರಿಕಲ್ಪನೆ

ಸಾಂಸ್ಥಿಕ ನಡವಳಿಕೆಗಳ ತಜ್ಞೆ ಸಾರಾ ಸ್ಲಿನಿಂಗರ್ ‘ವೀಲ್ಡ್ ವುಮೆನ್: ಹಿಜಾಬ್, ರಿಲಿಜನ್ ಅಂಡ್ ಕಲ್ಚರ್ ಪ್ರಾಕ್ಟೀಸ್’ ಸಂಶೋಧನಾ ಪ್ರಬಂಧದ ಸಾಲುಗಳ ಮೂಲಕ ಆದೇಶದ ಮೊದಲ ಸಾಲು ಪ್ರಾರಂಭವಾಗಿದೆ.

ಹಿಜಾಬ್ನ ಇತಿಹಾಸ ತುಂಬಾ ಸಂಕೀರ್ಣವಾಗಿದೆ, ಕಾಲಾಂತರದಲ್ಲಿ ವಿವಿಧ ಧರ್ಮ ಹಾಗೂ ಸಾಂಸ್ಕೃತಿಕ ಪ್ರಭಾವಗಳನ್ನು ಒಳಗೊಂಡಿದೆ. ಹಿಜಾಬ್ ಧರಿಸುವುದು ಸರಳ ಎಂದು ಹೇಳಲಾಗುತ್ತದೆ.

ಆದರೆ ಧಾರ್ಮಿಕ ನಂಬಿಕೆಯನ್ನು ಒಪ್ಪುವ ಮತ್ತು ಒಪ್ಪದಿರುವುದನ್ನು ಎತ್ತಿ ತೋರಿಸುವುದೂ ಸೇರಿದಂತೆ ಹಲವು ಸಂಕೀರ್ಣ ಅಂಶಗಳನ್ನು ಇದು ಒಳಗೊಂಡಿರುತ್ತದೆ.karnataka high court

02. ಕೋರ್ಟ್ ಪರಿಗಣಿಸಿದ ಅಂಶಗಳು

ವಿಧ್ಯರ್ಥಿಗಳು ಹಿಜಾಬ್ ಧರಿಸುವುದು ಇಸ್ಲಾಂನ ಅವಿಭಾಜ್ಯ ಅಂಗವೇ? ಇದು ಸಾಂವಿಧಾನಿಕ ಹಕ್ಕು ಆಗುತ್ತದೆಯೇ? ಸಮವಸ್ತ್ರ ಕಡ್ಡಾಯಗೊಳಿಸುವುದು ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗುತ್ತದೆಯೇ?

ಕರ್ನಾಟಕದ ಸರ್ಕಾರದ ಆದೇಶವು (ಸಮವಸ್ತ್ರ ಕಡ್ಡಾಯ) ಸಂವಿಧಾನದ ಆಶಯಗಳಿಗೆ ಅನುಗುಣವಾಗಿದೆಯೇ ಎನ್ನುವ ಅಂಶಗಳನ್ನು ನ್ಯಾಯಾಲಯ ಪರಿಶೀಲನೆಗೆ ಪರಿಗಣಿಸಿದೆ.

03. ಸಾಮಾಜಿಕ ಮತ್ತು ಧಾರ್ಮಿಕ ಬದುಕು

ಧಾರ್ಮಿಕ ಬದುಕನ್ನು ಸಾಮಾಜಿಕ ಬದುಕಿನಿಂದ ಪ್ರತ್ಯೇಕಿಸಲು ಆಗುವುದಿಲ್ಲ ಎನ್ನುವ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಅವರ ಮಾತನ್ನು ಹೈಕೋರ್ಟ್ ಉಲ್ಲೇಖ ಮಾಡಿದೆ.

ಭಾರತ ಮತ್ತು ಅಮೆರಿಕ ಸಂವಿಧಾನಗಳು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ತಳೆದಿರುವ ನಿಲುವುಗಳನ್ನೂ ನ್ಯಾಯಮೂರ್ತಿಗಳು ಪರಿಶೀಲನೆ ಮಾಡಿದ್ದಾರೆ.hijab row

04. ಅಂಬೇಡ್ಕರ್ ಭಾಷಣ ಉಲ್ಲೇಖ

ಹಿಜಾಬ್ ಧರಿಸುವುದು ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಾಗುತ್ತದೆಯೇ ಎಂಬ ವಿಚಾರವನ್ನೂ ಕರ್ನಾಟಕ ಹೈಕೋರ್ಟ್ ಪರಿಸೀಲಿಸಿದೆ.

ಅತ್ಯಗತ್ಯ ಧಾರ್ಮಿಕ ಆಚರಣೆ ಎಂದರೆ ಏನು ಎಂದು ವಿವರಿಸಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾಷಣವನ್ನು ಉಲ್ಲೇಖಿಸಿದೆ. ‘ಭಾರತ ದೇಶದಲ್ಲಿ ಹುಟ್ಟಿನಿಂದ ಸಾವಿನವರೆಗೆ ಎಲ್ಲವನ್ನೂ ಧರ್ಮ ಆವರಿಸಿಕೊಂಡಿದೆ.

ಹೀಗಾಗಿ ಧರ್ಮದ ವ್ಯಾಖ್ಯಾನವನ್ನು ಸೀಮಿತಗೊಳಿಸುವ ಅಗತ್ಯವಿದೆ. ಎಲ್ಲ ನಂಬಿಕೆ ಹಾಗೂ ರಿವಾಜುಗಳನ್ನು ಧರ್ಮದ ಅತ್ಯಗತ್ಯ ಭಾಗ ಎನ್ನಬೇಕಿಲ್ಲ’ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ.karnataka news

ಅಂಬೇಡ್ಕರ್ ಅವರ ಈ ಹೇಳಿಕೆಯನ್ನು ಹಿಜಾಬ್ ಧರಿಸುವುದು ಅತ್ಯಗತ್ಯವೇ ಎಂಬ ಪ್ರಶ್ನೆಯನ್ನು ಪರಿಶೀಲಿಸುವಾಗ ನ್ಯಾಯಾಲಯ ಉಲ್ಲೇಖಿಸಿತು.

05. ಸಾಂವಿಧಾನಿಕ ಮೌಲ್ಯ ಮತ್ತು ಧಾರ್ಮಿಕ ಆಚರಣೆ

ಅಗತ್ಯವಾದ ಧಾರ್ಮಿಕ ಆಚರಣೆಗಳು ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿಯೇ ಇರಬೇಕು, ಕಾನೂನು ಎನ್ನುವುದು ಬಿಳಿ ಹಾಳೆಯ ಮೇಲಿರುವ ಕಪ್ಪು ಶಾಯಿ ಅಲ್ಲ ಎಂದಿದೆ ಹೈಕೋರ್ಟ್.

ಯಾವುದೇ ವ್ಯಕ್ತಿಯ ಧಾರ್ಮಿಕ ಹಕ್ಕಿನ ಆಧಾರದಲ್ಲಿ ಏನನ್ನಾದರೂ ಕೋರುವಾಗ ತಾನು ಕೋರುತ್ತಿರುವ ಅಂಶ ಸಂವಿಧಾನದ ಆಶಯಗಳಿಗೆ ಅನುಗುಣವಾಗಿಯೇ ಇದೆ ಎಂಬುದನ್ನು ಸಾಬೀತುಪಡಿಸಿಕೊಳ್ಳಬೇಕು.hijab style

06. ಕುರಾನ್ ಆಧಾರವಾಗಿ

ಇಸ್ಲಾಮಿಕ್ ಕಾನೂನುಗಳಿಗೆ ಪವಿತ್ರ ಕುರಾನ್ ಅನ್ನು ಮಾತ್ರ ಮೂಲ ಆಧಾರವಾಗಿ ಪರಿಗಣಿಸಬಹುದು ಎಂದು ಹೈಕೋರ್ಟ್ ಸ್ಪಷ್ಟತೆ ನೀಡಿದೆ.karnataka news on hijab

ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುತ್ತಾರೆ ಎಂದಿರುವ ಹೈಕೋರ್ಟ್, ಹಿಜಾಬ್ ಬಗ್ಗೆ ಕುರಾನ್ನಲ್ಲಿ ಉಲ್ಲೇಖವಿಲ್ಲ ಎಂದು ತಿಳಿಸಿದೆ.

ಮುಸ್ಲಿಂ ಮಹಿಳೆಯರು ಕಡ್ಡಾಯವಾಗಿ ಹಿಜಾಬ್ ಧರಿಸಬೇಕು ಎಂದು ಕುರಾನ್ ಎಲ್ಲಿಯೂ ಷರತ್ತು ಹಾಕಿಲ್ಲ ಎಂದು ಹೈಕೋರ್ಟ್ ಮಾಹಿತಿ ತಿಳಿಸಿದೆ.

07. ಸಾಂಸ್ಕೃತಿಕ ಕಾರಣಗಳು

ಹಿಜಾಬ್ ಧರಿಸಲು ನಿರ್ದಿಷ್ಟ ಧಾರ್ಮಿಕ ಕಾರಣಗಳು ಅಲ್ಲ, ವಸ್ತ್ರಧಾರಣೆಗೆ ಸಹಜವಾಗಿಯೇ ಸಾಂಸ್ಕೃತಿಕ ಕಾರಣಗಳು ಇರುತ್ತವೆ. ಮಹಿಳೆಯರನ್ನು ಹತ್ತಿಕ್ಕುವ ಹಲವಾರು ಬೆಳವಣಿಗೆಗಳು ಇತಿಹಾಸದಲ್ಲಿ ನಡೆದಿವೆ.

ಇಸ್ಲಾಂ ಹುಟ್ಟಿದ ಸಂದರ್ಭವೂ ಇದಕ್ಕಿಂತ ಭಿನ್ನವಾಗಿ ಇರಲಿಲ್ಲ. ಮುಗ್ಧ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಪವಿತ್ರ ಕುರಾನ್ ಹಲವಾರು ಕ್ರಮಗಳನ್ನು ಸೂಚಿಸಿದೆ.

ಹಿಜಾಬ್ ಎನ್ನುವುದು ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಂಶಗಳ ಕಾರಣದಿಂದ ಬೆಳೆದು ಬಂದ ಆಚರಣೆ. ಧಾರ್ಮಿಕವಾಗಿ ಇದನ್ನು ಅತ್ಯಗತ್ಯ ಆಚರಣೆ ಎನ್ನಲು ಆಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.High Court Updates On Hijab

08. ಆತ್ಮಸಾಕ್ಷಿ ಹಾಗೂ ಧಾರ್ಮಿಕ ಸ್ವಾತಂತ್ರ್ಯ

ಅರ್ಜಿ ಸಲ್ಲಿಸಿದ ಮಹಿಳೆಯರು ಮುಸ್ಲಿಮ್ ಸಮುದಾಯಕ್ಕೆ ಸೇರಿದವರು ಎಂಬ ಅಂಶವನ್ನು ಗಣನೆಗೆ ತೆಗೆದುಕೊಳ್ಳದೇ ಸಂವಿಧಾನದ 25ನೇ ವಿಧಿಯ ಅನ್ವಯ ಪರಿಶೀಲಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.hijab

ಇದಕ್ಕೆ ಪ್ರತಿಕ್ರಿಯಿಸಿರುವ ಹೈಕೋರ್ಟ್, ಆತ್ಮಸಾಕ್ಷಿ ಎನ್ನುವುದು ತೀರಾ ವೈಯಕ್ತಿಕವಾದ ಅಂಶವಾಗಿದೆ.

ಹಿಜಾಬ್ ಧರಿಸುವುದು ಆತ್ಮಸಾಕ್ಷಿ ಅಥವಾ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯ ಎಂದು ಸಾಬೀತು ಪಡಿಸಲು ಅಂಬೇಡ್ಕರ್ ಅವರ ಮಾತಿನ ಆಧಾರದಂತೆ ಅದು ಧರ್ಮದ ಅತ್ಯಗತ್ಯ ಆಚರಣೆ ಎಂಬುದನ್ನು ನಿರೂಪಿಸಬೇಕಾಗುತ್ತದೆ ಎಂದು ಹೇಳಿದೆ.

09. ಸಮವಸ್ತ್ರ ವಿಧಿಸುವ ಅಧಿಕಾರ

ಒಂದು ನಿರ್ದಿಷ್ಟ ವಯೋಮಾನದವರೆಗೆ ಎಲ್ಲರಿಗೂ ಶಿಕ್ಷಣವನ್ನು ಕೊಡುವುದು ಸರ್ಕಾರದ ಕರ್ತವ್ಯವಾಗಿದೆ.

ಇದರೊಂದಿಗೆ ಸಮವಸ್ತ್ರಕ್ಕೆ ಶಿಫಾರಸು ಮಾಡುವ ಅಧಿಕಾರವನ್ನು ಸರ್ಕಾರಕ್ಕೆ ದತ್ತವಾಗಿದೆ, ಅನಗತ್ಯ ಕಟ್ಟಲೆಗಳನ್ನು ಮಕ್ಕಳ ಮೇಲೆ ಹೇರುವಂತಿಲ್ಲ.High Court Updates On Hijab

ನಮ್ಮ ದೇಶದ ಎಲ್ಲ ಮಕ್ಕಳಿಗೂ ಸಂವಿಧಾನಾತ್ಮಕವಾಗಿ ಹಕ್ಕುಗಳಿವೆ, ಹಾಗೆಂದು ಶಾಲೆಗಳು ಶಿಫಾರಸು ಮಾಡುವ ಸಮವಸ್ತ್ರಗಳು ಧಾರ್ಮಿಕ ತಾಟಸ್ತ್ಯ ಮತ್ತು ಸರ್ವರಿಗೂ ಅನ್ವಯವಾಗುವ  ರೀತಿಯಲ್ಲಿ ಇದ್ದಾಗ ಅದರಿಂದ ಯಾವುದೇ ಹಕ್ಕಿನ ಉಲ್ಲಂಘನೆ ಆಗುವುದಿಲ್ಲ.

ಶಾಲಾ ಸಮವಸ್ತ್ರಗಳು ಮಕ್ಕಳಲ್ಲಿ ಭ್ರಾತೃತ್ವ ಹಾಗೂ ಸೌಹಾರ್ದ ಮನಸ್ಥಿತಿಯನ್ನು ಬೆಳೆಸುತ್ತವೆ.

10. ಸರ್ಕಾರದ ಆದೇಶ ಸಂವಿಧಾನಬದ್ಧವಾಗಿದೆ

ಸಮವಸ್ತ್ರ ಸಂಹಿತೆಯನ್ನು ಎಲ್ಲ ಮಕ್ಕಳೂ ಪಾಲಿಸಬೇಕು, ಶಿಕ್ಷಣ ಸಂಸ್ಥೆಗಳು ಎಲ್ಲಾ ಮಕ್ಕಳಿಗೆ ವಿಧಿಸುವ ಈ ನಿರ್ಬಂಧವು ಸಂವಿಧಾನಾತ್ಮಕವಾಗಿದೆ.

ಪುನೀತ ರಾಜಕುಮಾರ ಅವರಿಗೆ “ಗೌರವ ಡಾಕ್ಟರೇಟ್”!

https://www.google.com/search?q=skillindiajobs.com&oq=s&aqs=chrome.1.69i59l3j35i39j69i60l4.1312j0j9&sourceid=chrome&ie=UTF-8

Social Share

Leave a Reply

Your email address will not be published. Required fields are marked *