ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?-PMAY

PMAY

PMAY

ಪ್ರಧಾನ ಮಂತ್ರಿ ಆವಾಸ್ ಯೋಜನೆ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಭಾರತ ಸರ್ಕಾರದ ಒಂದು ಉಪಕ್ರಮವಾಗಿದ್ದು, 31 ಮಾರ್ಚ್ 2022 ರೊಳಗೆ 2 ಕೋಟಿ (20 ಮಿಲಿಯನ್) ಕೈಗೆಟುಕುವ ಮನೆಗಳನ್ನು ನಿರ್ಮಿಸುವ ಗುರಿಯೊಂದಿಗೆ ನಗರ ಬಡವರಿಗೆ ಕೈಗೆಟುಕುವ ಮನೆಗಳನ್ನು ಒದಗಿಸಲಾಗುವುದು.

ಭಾರತ ಸರ್ಕಾರವು ಪ್ರಾರಂಭಿಸಿದ ವಸತಿ ಯೋಜನೆಯಾಗಿದ್ದು, ಇದನ್ನು 25ನೇ ಜೂನ್ 2015ರಂದು ಪ್ರಾರಂಭ ಮಾಡಲಾಗಿದೆ.

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು (UTs) ಹಾಗು ಕೇಂದ್ರೀಯ ನೋಡಲ್ ಏಜೆನ್ಸಿಗಳ (CNAs) ಮೂಲಕ ಎಲ್ಲ ಅರ್ಹ ಕುಟುಂಬಗಳು/ಫಲಾನುಭವಿಗಳಿಗೆ ಸುಮಾರು 1.12 ಕೋಟಿ.

ಮನೆಗಳ ವ್ಯಾಲಿಡೇಟ್ ಬೇಡಿಕೆ ವಿರುದ್ಧ ಮನೆಗಳನ್ನು ಒದಗಿಸಲು ಮಿಷನ್ ಅನುಷ್ಠಾನ ಸಂಸ್ಥೆಗಳಿಗೆ ಕೇಂದ್ರ ಸರಕಾರವು ಸಹಾಯವನ್ನು ಒದಗಿಸುತ್ತದೆ.

ಆರ್ಥಿಕವಾಗಿ ದುರ್ಬಲ ವರ್ಗಗಳು, ನಗರ ಪ್ರದೇಶದ ಕಡಿಮೆ-ಆದಾಯದ ಗುಂಪುಗಳು ಮತ್ತು ಗ್ರಾಮೀಣ ಪ್ರದೇಶದ ಬಡವರ ಅನುಕೂಲಕ್ಕಾಗಿ ಈ ಯೋಜನೆಯಿದೆ.

ಈ ಹಿಂದಿನ ಯೋಜನೆಗಳಿಗಿಂತ ಭಿನ್ನ ಎಂಬಂತೆ ಆರ್ಥಿಕ ದುರ್ಬಲ ವರ್ಗದವರು (EWS) ಹಾಗೂ ಕಡಿಮೆ ಆದಾಯದ ಗುಂಪಿನಿಂದ (LIG) ಮಹಿಳೆಯರ ಸಬಲೀಕರಣದ ಕಡೆಗೆ ಸರ್ಕಾರದ ಪ್ರಯತ್ನಗಳ ಮುಂದುವರಿಕೆಯಾಗಿ, PMAY (U) ಈ ಮಿಷನ್ ಅಡಿಯಲ್ಲಿ ಕುಟುಂಬದ ಮಹಿಳಾ ಮುಖ್ಯಸ್ಥರು ಮನೆಯ ಮಾಲೀಕರು ಅಥವಾ ಸಹ-ಮಾಲೀಕರಾಗಿರಬೇಕು ಎಂಬ ಕಡ್ಡಾಯವಾದ ನಿಬಂಧನೆ ಮಾಡಲಾಗಿದೆ.

ಈ ಯೋಜನೆಯು ಆರ್ಥಿಕವಾಗಿ ದುರ್ಬಲ, ಕಡಿಮೆ-ಆದಾಯದ ಮತ್ತು ಮಧ್ಯಮ-ಆದಾಯದ ಗುಂಪುಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳಿಗೆ ವಸತಿ ಸಾಲಗಳ ಮೇಲಿನ ಬಡ್ಡಿ ಸಬ್ಸಿಡಿಗಳನ್ನು ಸಹ ನೀಡುತ್ತದೆ.

ಅಂದಹಾಗೆ ಈ ಕಾರ್ಯಕ್ರಮವನ್ನು ಕ್ರಮವಾಗಿ ನಗರ ಮತ್ತು ಗ್ರಾಮೀಣ ಜನರಿಗೆ ಅನುಕೂಲವಾಗುವ ಪಿಎಂಎವೈ ನಗರ (PMAY – U) ಹಾಗೂ ಪಿಎಂಎವೈ ಗ್ರಾಮೀಣ (PMAY – G) ಎಂದು ಎರಡು ವಿಭಾಗಗಳಾಗಿ ವಿಂಗಡಣೆ ಮಾಡಲಾಗಿದೆ.

ಇದು ಎರಡು ಘಟಕಗಳನ್ನು ಹೊಂದಿದೆ

ಪ್ರಧಾನ ಮಂತ್ರಿ ಆವಾಸ್ ಯೋಜನೆ ನಗರ ಬಡವರಿಗೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀನ್) (PMAY-G ಮತ್ತು PMAY-R) ಗ್ರಾಮೀಣ ಬಡವರಿಗೆ.

ಮನೆಗಳು ಶೌಚಾಲಯ, ಸೌಭಾಗ್ಯ ಯೋಜನೆ ವಿದ್ಯುತ್ ಸಂಪರ್ಕ, ಉಜ್ವಲ ಯೋಜನೆ LPG ಸಂಪರ್ಕ, ಕುಡಿಯುವ ನೀರಿನ ಪ್ರವೇಶ ಮತ್ತು ಜನ್ ಧನ್ ಬ್ಯಾಂಕಿಂಗ್ ಸೌಲಭ್ಯಗಳು ಇತ್ಯಾದಿಗಳನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆಯನ್ನು ಇತರ ಯೋಜನೆಗಳೊಂದಿಗೆ ಸಂಯೋಜಿಸಲಾಗಿದೆ.

28 ಡಿಸೆಂಬರ್ 2019 ರಂತೆ ಒಟ್ಟು 1.12 ಕೋಟಿ ಬೇಡಿಕೆಯ ವಿರುದ್ಧ ಒಟ್ಟು 1 ಕೋಟಿ ಮನೆಗಳನ್ನು ಅನುಮೋದಿಸಲಾಗಿದೆ.

Pradhan Mantri Awas Yojana 80 ಲಕ್ಷ ಮನೆಗಳು 2022-23ರಲ್ಲಿ ಪೂರ್ಣಗೊಳ್ಳಲಿವೆ!

ಮಂಗಳವಾರ ಲೋಕಸಭೆಯಲ್ಲಿ ಬಜೆಟ್  (Budget 2022) ಮಂಡಿಸಿದ  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.

ಇವರು 2022-23ನೇ ಸಾಲಿನಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗುರುತಿಸಲಾದ ಅರ್ಹ ಫಲಾನುಭವಿಗಳಿಗೆ 80 ಲಕ್ಷ ಮನೆಗಳನ್ನು ಪೂರ್ಣಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ.

ಈ ಯೋಜನೆಯನ್ನು ಪೂರ್ಣಗೊಳಿಸಲು ಸುಮಾರು 48,000 ಕೋಟಿಗಳನ್ನು ಮಂಜೂರು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

“2022-23 ರಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಗುರುತಿಸಲಾದ ಪಿಎಂ ಆವಾಸ್ ಯೋಜನೆಯ ಅರ್ಹ ಫಲಾನುಭವಿಗಳಿಗೆ 80 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗುವುದು ಮತ್ತು ಈ ಉದ್ದೇಶಕ್ಕಾಗಿ 48,000 ಕೋಟಿಗಳನ್ನು ನಿಗದಿಪಡಿಸಲಾಗಿದೆ ಎಂದು ಹಣಕಾಸು ಸಚಿವರು ಬಜೆಟ್ ಭಾಷಣದಲ್ಲಿ ಹೇಳಿದರು. 

ನಗರ ಪ್ರದೇಶಗಳಲ್ಲಿ ಮಧ್ಯಮ ವರ್ಗ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಕೈಗೆಟಕುವ ದರದಲ್ಲಿ ವಸತಿಗಳನ್ನು ಉತ್ತೇಜಿಸಲು ಎಲ್ಲಾ ಭೂಮಿ ಹಾಗೂ ನಿರ್ಮಾಣ ಸಂಬಂಧಿತ ಅನುಮೋದನೆಗಳಿಗೆ ಅಗತ್ಯವಿರುವ ಸಮಯವನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ಕಾರ್ಯ ಮಾಡುತ್ತದೆ.

ಪಿಎಂ ಆವಾಸ್ ಯೋಜನೆ ಮಿಷನ್ 25 ಜೂನ್ 2015 ರಂದು ಕಾರ್ಯರೂಪಕ್ಕೆ ಬಂದಿತು, ಇದು ಎಲ್ಲರಿಗೂ ವಸತಿ ನೀಡುವ ಉದ್ದೇಶದ ಈ ಯೋಜನೆ ಆಗಿದೆ.

ಪಿಎಂ ಆವಾಸ್ ಯೋಜನೆಯಡಿ 80 ಲಕ್ಷ ಮನೆಗಳು 2022-23ರಲ್ಲಿ ಪೂರ್ಣಗೊಳ್ಳಲಿವೆ!

Nirmala Sitharaman

ಮಂಗಳವಾರ ಲೋಕಸಭೆಯಲ್ಲಿ ಬಜೆಟ್  (Budget 2022) ಮಂಡಿಸಿದ  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.

ಇವರು 2022-23ನೇ ಸಾಲಿನಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗುರುತಿಸಲಾದ ಅರ್ಹ ಫಲಾನುಭವಿಗಳಿಗೆ 80 ಲಕ್ಷ ಮನೆಗಳನ್ನು ಪೂರ್ಣಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ.

ಈ ಯೋಜನೆಯನ್ನು ಪೂರ್ಣಗೊಳಿಸಲು ಸುಮಾರು 48,000 ಕೋಟಿಗಳನ್ನು ಮಂಜೂರು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

“2022-23 ರಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಗುರುತಿಸಲಾದ ಪಿಎಂ ಆವಾಸ್ ಯೋಜನೆಯ ಅರ್ಹ ಫಲಾನುಭವಿಗಳಿಗೆ 80 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗುವುದು ಮತ್ತು ಈ ಉದ್ದೇಶಕ್ಕಾಗಿ 48,000 ಕೋಟಿಗಳನ್ನು ನಿಗದಿಪಡಿಸಲಾಗಿದೆ ಎಂದು ಹಣಕಾಸು ಸಚಿವರು ಬಜೆಟ್ ಭಾಷಣದಲ್ಲಿ ಹೇಳಿದರು. 

ನಗರ ಪ್ರದೇಶಗಳಲ್ಲಿ ಮಧ್ಯಮ ವರ್ಗ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಕೈಗೆಟಕುವ ದರದಲ್ಲಿ ವಸತಿಗಳನ್ನು ಉತ್ತೇಜಿಸಲು ಎಲ್ಲಾ ಭೂಮಿ ಹಾಗೂ ನಿರ್ಮಾಣ ಸಂಬಂಧಿತ ಅನುಮೋದನೆಗಳಿಗೆ ಅಗತ್ಯವಿರುವ ಸಮಯವನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ಕಾರ್ಯ ಮಾಡುತ್ತದೆ.

ಪಿಎಂ ಆವಾಸ್ ಯೋಜನೆ ಮಿಷನ್ 25 ಜೂನ್ 2015 ರಂದು ಕಾರ್ಯರೂಪಕ್ಕೆ ಬಂದಿತು, ಇದು ಎಲ್ಲರಿಗೂ ವಸತಿ ನೀಡುವ ಉದ್ದೇಶದ ಈ ಯೋಜನೆ ಆಗಿದೆ.

ಯೋಜನೆ

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ವೈಶಿಷ್ಟ್ಯಗಳೆಂದರೆ, ಸರ್ಕಾರವು 6.5% (EWS ಮತ್ತು LIG ಗಾಗಿ), 4% MIG-I ಗಾಗಿ ಮತ್ತು 3% MIG-II ರಷ್ಟು ಗೃಹ ಸಾಲಗಳ ಮೇಲೆ ಬಡ್ಡಿ ಸಬ್ಸಿಡಿಯನ್ನು ಒದಗಿಸುತ್ತದೆ.

ಸಾಲದ ಪ್ರಾರಂಭದಿಂದ ಕ್ರೆಡಿಟ್ ಲಿಂಕ್ ಸಬ್ಸಿಡಿ ಯೋಜನೆ (CLSS) ಅಡಿಯಲ್ಲಿ 20 ವರ್ಷಗಳ ಅವಧಿಗೆ ಫಲಾನುಭವಿಗಳು. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆಗಳನ್ನು ಪರಿಸರ ಸ್ನೇಹಿ ತಂತ್ರಜ್ಞಾನದ ಮೂಲಕ ನಿರ್ಮಿಸಲಾಗುವುದು.

ಪಿಎಂಎವೈ ಅಡಿಯಲ್ಲಿ ಯಾವುದೇ ವಸತಿ ಯೋಜನೆಯಲ್ಲಿ ನೆಲ ಅಂತಸ್ತುಗಳನ್ನು ಮಂಜೂರು ಮಾಡುವಾಗ, ವಿಕಲಚೇತನರು ಮತ್ತು ವೃದ್ಧರಿಗೆ ಆದ್ಯತೆ ನೀಡಲಾಗುತ್ತದೆ.

ಪಿಎಂ ಆವಾಸ್ ಯೋಜನೆಯ ವಿಭಾಗಗಳು

ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ 04 ಭಾಗಗಳಿವೆ.

ಅವುಗಳೆಂದರೆ

01. ಆರ್ಥಿಕವಾಗಿ ದುರ್ಬಲ ವಿಭಾಗ (EWS): ಕುಟುಂಬದ ವಾರ್ಷಿಕ ಆದಾಯ ರೂ. 3 ಲಕ್ಷಕ್ಕಿಂತ ಹೆಚ್ಚಿರಬಾರದು.

02. ಕಡಿಮೆ ಆದಾಯದ ಗುಂಪು (LIG): ಕುಟುಂಬದ ವಾರ್ಷಿಕ ಆದಾಯ ರೂ. 3 ಲಕ್ಷದಿಂದ ರೂ. 6 ಲಕ್ಷ.

03. ಮಧ್ಯಮ ಆದಾಯ ಗುಂಪು (MIGs): ಕುಟುಂಬದ ವಾರ್ಷಿಕ ಆದಾಯ ರೂ. 6 ಲಕ್ಷದಿಂದ ರೂ. 18 ಲಕ್ಷ.

04. ಕೊಳೆಗೇರಿ ನಿವಾಸಿಗಳು: ಕೊಳೆಗೇರಿ ಪ್ರದೇಶಗಳಲ್ಲಿ ವಾಸಿಸುವ ಜನರು.

ಅರ್ಜಿ ಸಲ್ಲಿಸುವುದು ಹೇಗೆ?

ನೀವು PMAYಗೆ ಅರ್ಹತೆ ಪಡೆದ ವರ್ಗವನ್ನು ಗುರುತಿಸಿ.

ಆ ನಂತರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: http://pmaymis.gov.in.

ನಿಮ್ಮನ್ನು ಬೇರೆ ಪುಟಕ್ಕೆ ಮರು ನಿರ್ದೇಶಿಸಲಾಗುತ್ತದೆ, ಅಲ್ಲಿ ನಿಮ್ಮ ಆಧಾರ್ ವಿವರಗಳನ್ನು ನಮೂದಿಸಬೇಕು.

ನಿಮ್ಮ ವೈಯಕ್ತಿಕ, ಆದಾಯ, ಬ್ಯಾಂಕ್ ಖಾತೆ ವಿವರಗಳು ಮತ್ತು ಪ್ರಸ್ತುತ ವಸತಿ ವಿಳಾಸದೊಂದಿಗೆ ಆನ್‌ಲೈನ್ PMAY ಅರ್ಜಿಯನ್ನು ಭರ್ತಿ ಮಾಡಿ.

ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ, ನಿಖರತೆಗಾಗಿ ವಿವರಗಳನ್ನು ಪರಿಶೀಲಿಸಿ ಮತ್ತು ಅದನ್ನು ಸಲ್ಲಿಸಿ.

ಆಫ್‌ಲೈನ್‌ ಅರ್ಜಿ ಸಲ್ಲಿಸುವುದು ಹೇಗೆ?

ರಾಜ್ಯ ಸರಕಾರಗಳು ನಿರ್ವಹಿಸುವ ಸಾಮಾನ್ಯ ಸೇವಾ ಕೇಂದ್ರದಲ್ಲಿ (CSC) ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬರುತ್ತದೆ.

ಆಫ್‌ಲೈನ್ ಫಾರ್ಮ್‌ಗಳನ್ನು ಕೇವಲ ರೂ. 25 ಜತೆಗೆ ಜಿಎಸ್​ಟಿ ಜತೆ ಭರ್ತಿ ಮಾಡಬಹುದು.

ಈ ಯೋಜನೆಯಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಯಾವುದೇ ಖಾಸಗಿ ವ್ಯಕ್ತಿಗಳು ಅಥವಾ ಕಂಪನಿಗಳು ಹಣವನ್ನು ಸಂಗ್ರಹ ಮಾಡಲು ಅನುಮತಿಸುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

ನೀವು ಯಾವುದೇ ಬ್ಯಾಂಕ್, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿ ಅಥವಾ ಹೌಸಿಂಗ್ ಫೈನಾನ್ಸ್ ಕಂಪೆನಿಗೆ ಭೇಟಿ ನೀಡಬಹುದು ಹಾಗೂ ಯೋಜನೆಯ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು.

ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ನೀವು ಫಾರ್ಮ್‌ನಲ್ಲಿ ಉಲ್ಲೇಖಿಸಲಾದ ಸಂಪೂರ್ಣ ದಾಖಲೆಗಳನ್ನು ಸಲ್ಲಿಸಬೇಕು ಮತ್ತು ಅರ್ಹತೆಯನ್ನು ಪರಿಶೀಲಿಸಬೇಕು.

ಕೊಳೆಗೇರಿ ನಿವಾಸಿಗಳು ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬಹುದು?

– ಪಿಎಂ ಆವಾಸ್ ಯೋಜನೆಯ ಅಧಿಕೃತ ವೆಬ್​ಸೈಟ್ pmaymis.gov.in ನಲ್ಲಿ ಲಾಗ್ ಇನ್ ಮಾಡಿ

– ‘ಸಿಟಿಜನ್ ಅಸೆಸ್‌ಮೆಂಟ್’ ಡ್ರಾಪ್‌ಡೌನ್‌ನಲ್ಲಿ ‘ಸ್ಲಂ ನಿವಾಸಿಗಳಿಗಾಗಿ’ ಆಯ್ಕೆ ಮಾಡಿ.

– ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು submit ಕ್ಲಿಕ್ ಮಾಡಿ.

– ಒದಗಿಸಿದ ಮಾಹಿತಿಯು ಎಲ್ಲ ಸರಿಯಾಗಿದ್ದರೆ, ಮುಂದಿನ ಪುಟಕ್ಕೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ. ಅಲ್ಲಿನ ನಿಮ್ಮ ಹೆಸರು, ಆದಾಯ, ಸಂಖ್ಯೆಗೆ ಸಂಬಂಧಿಸಿದ ಎಲ್ಲ ಸಂಬಂಧಿತ ಮಾಹಿತಿಯನ್ನು ನೀವು ನೀಡಬೇಕು. ಕುಟುಂಬದ ಸದಸ್ಯರ, ವಸತಿ ವಿಳಾಸ, ಸಂಪರ್ಕ ಸಂಖ್ಯೆ, ಕುಟುಂಬದ ಮುಖ್ಯಸ್ಥನ ವಯಸ್ಸು, ಧರ್ಮ, ಜಾತಿ ಮತ್ತು ಮುಂತಾದವುಗಳನ್ನು ಸಹ ಭಾರ್ತಿ ಮಾಡಿ.

PM ಕಿಸಾನ್ ಸಮ್ಮಾನ್ ನಿಧಿಯ KYC ಅಪ್ಡೇಟ್!-Pm Kisan KYC

https://jcs.skillindiajobs.com/

Social Share

Leave a Reply

Your email address will not be published. Required fields are marked *