
How to get ePAN Online Using Aadhaar Number
ಇ-ಪ್ಯಾನ್
ಆಧಾರ್ ಕಾರ್ಡ್, ಪರ್ಮನೆಂಟ್ ಅಕೌಂಟ್ ನಂಬರ್, ವೋಟರ್ ಐಡಿ -ಇವೆಲ್ಲ ಬಹಳ ಮುಖ್ಯವಾದ ದಾಖಲೆಗಳಿವೆ.
ಸರ್ಕಾರದಿಂದ ದೊರೆಯುವ ಉಪಯೋಗಗಳನ್ನು ಪಡೆಯಬೇಕು ಅಂದರೆ ಇವುಗಳು ತುಂಬ ಮುಖ್ಯವಾಗಿವೆ.
ನಿಮ್ಮ ಬಳಿ ಇವೆಲ್ಲ ಇದೆಯಾ? ಒಂದು ವೇಳೆ ಇಲ್ಲವಾದಲ್ಲಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ನೀವು ಅಪ್ಲೈ ಮಾಡಬಹುದು.
ನಿಮ್ಮ ಬಳಿ ಆಧಾರ್ ಕಾರ್ಡ್ ಇದೆ ಎಂದಾದರೆ ಅದರ ಸಂಖ್ಯೆಯನ್ನು ಬಳಸಿ ePANಗೆ ಅಪ್ಲೈ ಮಾಡಬಹುದು.
ಆದರೆ ಗೊತ್ತಿರಬೇಕಾದ ಸಂಗತಿ ಏನೆಂದರೆ, ಒಂದು ವೇಳೆ ಪ್ಯಾನ್ ಇಲ್ಲ, ಆದರೆ ಸಿಂಧುವಾದ ಆಧಾರ್ ಇದೆ ಹಾಗೂ ಕೆವೈಸಿ ಮಾಹಿತಿ ಅಪ್ಡೇಟ್ ಆಗಿದೆ ಎಂದಾಗ ಮಾತ್ರ ಈ ಸೇವೆಯನ್ನು ಬಳಸಲು ಸಾಧ್ಯ.
ಆಧಾರ್ ಕಾರ್ಡ್ ಅನ್ನು UIDAIನಿಂದ ನೀಡಲಾಗುತ್ತದೆ, ಐಟಿಆರ್ ಫೈಲಿಂಗ್ಗೆ, ಬ್ಯಾಂಕ್ ಖಾತೆ ತೆರೆಯುವುದಕ್ಕೆ ಮುಂತಾದವಕ್ಕೆ ಅದರ ಉಪಯೋಗವಿದೆ.
ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆಯಿಂದ ವಿತರಣೆ ಮಾಡಲಾಗುತ್ತದೆ.
ಇದು ಡಿಜಿಟಲ್ ಸಹಿ ಆದಂಥ ಡಿಜಿಟಲ್ ಅಥವಾ ಎಲೆಕ್ಟ್ರಾನಿಕ್ ಫಾರ್ಮಾಟ್ನ ಪ್ಯಾನ್ಕಾರ್ಡ್.
ಐಟಿಆರ್ ಫೈಲಿಂಗ್ ಮಾಡುವಾಗ ಪ್ಯಾನ್ ನಮೂದಿಸುವುದು ಕಡ್ಡಾಯವಾಗಿದೆ, ನಿಮ್ಮ ಆಧಾರ್ ಹಾಗೂ ಮೊಬೈಲ್ ನಂಬರ್ ಅನ್ನು ಬಳಸಿ ಇ-ಪ್ಯಾನ್ ಜನರೇಟ್ ಮಾಡಬಹುದು.How to get ePAN Online Using Aadhaar Number
ಇದು ನಿಮಗ ಉಚಿತವಾಗಿರುತ್ತದೆ ಮತ್ತು ಆನ್ಲೈನ್ನಲ್ಲಿ ಮಾಡಬಹುದಾಗಿರುತ್ತದೆ.
ಆಧಾರ್ ಕಾರ್ಡ್ ಮೂಲಕ ePANಗೆ ಅಪ್ಲೈ ಮಾಡುವುದು ಹೇಗೆ?
1 – ಆದಾಯ ತೆರಿಗೆಯಾ ಅಧಿಕೃತ ವೆಬ್ಸೈಟ್ ಅಥವಾ ಲಿಂಕ್ – https://www.incometax.gov.in/iec/foportalಗೆ ಗೆ ಹೋಗಬೇಕು.
2 – ಹೋಮ್ ಪೇಜ್ನಲ್ಲಿ ಲಭ್ಯವಿರುವ “ಕ್ವಿಕ್ ಲಿಂಕ್ಸ್” vಇಭಾಗದಿಂದ “ಇನ್ಸ್ಟಂಟ್ ಇಪ್ಯಾನ್” ಆಯ್ಕೆಯನ್ನು ಕ್ಲಿಕ್ ಮಾಡಬೇಕು.
3 – ಹೊಸ ಪುಟವನ್ನು ತೆರೆದುಕೊಳ್ಳುತ್ತದೆ. ಅಲ್ಲಿ ಗೆಟ್ ನ್ಯೂ ಇ-ಪ್ಯಾನ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
4 – ಪ್ಯಾನ್ ವಿತರಣೆಗಾಗಿ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು ಹಾಗೂ ಮುಂದುವರಿಯಿರಿ ಬಟನ್ ಒತ್ತುವ ಮುನ್ನ, ನಾನು ಖಾತ್ರಿ ಪಡಿಸುತ್ತೇನೆ ಎಂಬುದರ ಮೇಲೆ ಟಿಕ್ ಮಾಡಬೇಕು.
5 – ಇದಾದ ಮೇಲೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಅಗತ್ಯ ಸ್ಥಳದಲ್ಲಿ ಒಟಿಪಿ ಹಾಕಬೇಕು ಹಾಗೂ ವ್ಯಾಲಿಡೇಟ್ ಆಧಾರ್ ಒಟಿಪಿ ಹಾಗೂ ಮುಂದುವರಿಯಿರಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
6 – ಒಟಿಪಿ ವ್ಯಾಲಿಡೇಷನ್ ಪುಟದಲ್ಲಿ ಇರುವ ನಿಯಮ, ನಿಬಂಧನಗೆಳನ್ನು ಸಮ್ಮತಿಸಬೇಕು ಹಾಗೂ ಮುಂದುವರಿಯಿರಿ ಬಟನ್ ಮೇಲೆ ಕ್ಲಿಕ್ ಮಾಡಿ.
7 – ನಿಮ್ಮ ಒಟಿಪಿ ಒದಗಿಸಿ, ಬಾಕ್ಸ್ ಚೆಕ್ ಮಾಡಬೇಕು ಮತ್ತು ಇನ್ನೊಂದು ಸಲ ಮುಂದುವರಿಯಿರಿ ಬಟನ್ ಕ್ಲಿಕ್ ಮಾಡಿ.
8 – ಇಮೇಲ್ ಐಡಿಯು ಅಥೆಂಟಿಕೇಟ್ ಆಗಿಲ್ಲ ಅಂತಾದಲ್ಲಿ “ವ್ಯಾಲಿಡೇಟ್ ಇಮೇಲ್ ಐಡಿ” ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
ನಿಮ್ಮ ಕ್ರೆಡೆನ್ಷಿಯಲ್ಸ್ ನಮೂದಿಸಬೇಕು ಹಾಗೂ ಮುಂದುವರಿಯಿರಿ ಎಂಬ ಬಟ್ ಒತ್ತಬೇಕು.How to get ePAN Online Using Aadhaar Number
ಹಂತ 9 – ವ್ಯಾಲಿಡೇಷನ್ಗಾಗಿ ನಿಮ್ಮ ಆಧಾರ್ ಮಾಹಿತಿ ಸಲ್ಲಿಸಿದ ಮೇಲೆ ಅದಕ್ಕೆ ಅಕ್ನಾಲೆಡ್ಜ್ಮೆಂಟ್ ಸಂಖ್ಯೆಯನ್ನು ಬರುತ್ತದೆ.
ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ ಪ್ಯಾನ್ ವಿತರಣೆ ಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ಹಂತ 10 – ಇಪ್ಯಾನ್ ಡೌನ್ಲೋಡ್ ಮಾಡವುದಕ್ಕೆ ಮೊದಲ ಎರಡು ಹಂತಗಳನ್ನು ಪೂರ್ಣಗೊಳಿಸಬೇಕು.
ಚೆಕ್ ಸ್ಟೇಟಸ್/ಡೌನ್ಲೋಡ್ ಪ್ಯಾನ್ ಮೇಲೆ ಕ್ಲಿಕ್ಅನ್ನು ಮಾಡಿ, ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಒದಗಿಸಬೇಕು.
ಸಬ್ಮಿಟ್ ಐಕಾನ್ ಮೇಲೆ ಒತ್ತಬೇಕು, ಒಟಿಪಿ ನಮೂದಿಸುವ ಮೂಲಕ ವ್ಯಾಲಿಡೇಟ್ ಮಾಡಬೇಕು ಮತ್ತು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
ಹಂತ 11 – ಪ್ಯಾನ್ ವಿತರಣೆ ಯಶಸ್ವಿಯಾದಲ್ಲಿ 10 ನಿಮಿಷದೊಳಗಾಗಿ ಪಿಡಿಎಫ್ ಫೈಲ್ ಲಿಂಕ್ ವಿತರಣೆ ಆಗುತ್ತೆ.