ಹಗ್ ಡೇ ಮಹತ್ವವೇನು ತಿಳಿದುಕೊಳ್ಳಿ ?-hug-day

Hug Day

hug-day

ವ್ಯಾಲೆಂಟೈನ್ ವೀಕ್ 2022

 ಇಂದು ಫೆ.12 ವ್ಯಾಲೆಂಟೈನ್ಸ್​ ವೀಕ್​ನ 5 ನೇ ದಿನ, ಅದುವೇ ಹಗ್ ಡೇ.

ರೋಸ್​ ಡೇ, ಚಾಕೋಲೇಟ್​ ಡೇ, ಟೆಡ್ಡಿ ಡೆ, ಪ್ರಾಮಿಸ್​ ಡೇ ನಂತರ ಬರುವುದೇ ಹಗ್​ ಡೇ,ಪ್ರೀತಿಯ ಅಪ್ಪುಗೆಯೊಂದಿಗೆ ಭಾವನೆ ಹಂಚಿಕೊಳ್ಳುವ ದಿನ.

ಒಂದು ಪ್ರೀತಿಯ  ಅಪ್ಪುಗೆ ಸಂಗಾತಿಯ ಸಾವಿರ ನೋವುಗಳಿಗೆ ಮದ್ದು, ಹೌದು ಪ್ರೀತಿಸಿದ ಜೀವದ ಒಂದು ಅಪ್ಪುಗೆ ಬದುಕಿನೆಡೆಗೆ ಹೊಸ ಭರವಸೆ, ಮನ ಪುಟಿದೇಳುವಷ್ಟು ಸಂತಸ ಮೂಡುತ್ತದೆ.

ಇಂದು ಫೆ.12 ವ್ಯಾಲೆಂಟೈನ್ಸ್​ ವೀಕ್​ನ 5 ನೇ ದಿನ, ಅದುವೇ ಹಗ್ ಡೇ ರೋಸ್​ ಡೇ, ಚಾಕೋಲೇಟ್​ ಡೇ, ಟೆಡ್ಡಿ ಡೆ, ಪ್ರಾಮಿಸ್​ ಡೇ ನಂತರ ತನ್ನ ಸಂಗಾತಿಯು ದುಃಖದ ಸಮಯದಲ್ಲಿ ಅಪ್ಪುಗೆ ಪಡೆಯುವ ಮೂಲಕ ಸಂತೋಷ ನೀಡುತ್ತದೆ.

ಪ್ರೀತಿಯ ಅಪ್ಪುಗೆಯೊಂದಿಗೆ ತನ್ನ ಭಾವನೆ ಹಂಚಿಕೊಳ್ಳುವ ದಿನ, ಕೆಲವೊಮ್ಮೆ ಅತೀವ ಸಂತಸವಾದಾಗ ಅಥವಾ ತುಂಬಾ ದುಃಖವಾದಾಗ ಪ್ರೀತಿ ಪಾತ್ರರನ್ನು ಅಪ್ಪಿಕೊಂಡಾಗ ಸಿಗುವ ಸಂತಸ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಿರುತ್ತದೆ.

ಒಂದು ಬಿಗಿ ಅಪ್ಪುಗೆ ಬಾಂಧವ್ಯವನ್ನು  ಇನ್ನಷ್ಟು ಗಟ್ಟಿಗೊಳಿಸುವಂತೆ ಮಾಡುತ್ತದೆ, ಭಾವನೆಯನ್ನು ವ್ಯಕ್ತಪಡಿಸುವ ಒಂದು ಮಾರ್ಗ ಅಪ್ಪುಗೆ ಎಂದು ಹೇಳಬಹುದು.

ಪ್ರೀತಿಯು ಹಾಗೆ ಹೊಸ ಅನುಭವಗಳನ್ನು ನೀಡಿ, ಬದುಕಿನ ಇನ್ನೊಂದು ಮಹತ್ತರ ಘಟ್ಟಕ್ಕೆ ಹೊಸ್ತಿಲಾಗಿರುತ್ತದೆ.

ಪ್ರೇಮಿಗಳ ದಿನಕ್ಕಿಂತ 2 ದಿನ ಮುಂಚೆ ಆಚರಿಸುವ ಈ ಹಗ್ ​ಡೇ ಪ್ರತೀ ಪ್ರೇಮಿಯ ಪಾಲಿನ ವಿಶೇಷವಾದ ದಿನ.

ಒಂದು ಅಪ್ಪುಗೆ ನೀಡುವ ಮೂಲಕ ನಾನಿರುವೆ ನಿನ್ನೊಂದಿಗೆ ಎಂದು  ಸಂತೈಸುವ ಭಾವ ಅನನ್ಯ.

ಹಗ್ಡೇ ಮಹತ್ವ ತಿಳಿದುಕೊಳ್ಳಿ

ಪ್ರೀತಿಯ ನಿಮ್ಮ ಸಂಗಾತಿಯ ಸ್ಪರ್ಶ ಪ್ರತೀ ವ್ಯಕ್ತಿಯಲ್ಲಿ ಸಂತಸದ ಭಾವನೆಯನ್ನು ಮೂಡಿಸುತ್ತದೆ.

ಮೆದುಳು, ನರಗಳಲ್ಲಿ ಖುಷಿಯ ಹಾರ್ಮೋನುಗಳು ಸಂಚರಿಸುತ್ತವೆ, ಹೀಗಾಗಿಯೇ ಹಗ್ ಡೇ ಪ್ರತೀ ಪ್ರೇಮಿಗಳ ಪಾಲಿಗೆ ಮಹತ್ವದ ದಿನ.​

ತನ್ನನ್ನು ಪ್ರೀತಿಸುವ ಜೀವ ಪ್ರೀತಿ ನೀಡಿದಷ್ಟೂ ಸಾಲದು, ಹಾಗಾಗಿ ಹಗ್​ ಡೇ ಕೂಡ ಅದರ ಪಟ್ಟಿಗೆ ಸಲ್ಲುತ್ತದೆ.

ಸಂಬಂಧಗಳನ್ನು ಗಟ್ಟಿಗೊಳಿಸಲು, ಭಾವನೆಗಳನ್ನು ಬೆಸೆಯಲು ಅಪ್ಪುಗೆ ಸಹಕಾರಿಯಾಗುತ್ತದೆ. ಪ್ರೀತಿಯ ಪಯಣವನ್ನು ಸಂಗಾತಿಯು ಜೊತೆ ಇನ್ನಷ್ಟು ಬಲವಾಗಿಸಲು, ಜೀವನದ ದೋಣಿಯಲ್ಲಿ ಸವಿನೆನಪುಗಳ ಬುತ್ತಿಗೆ ಮತ್ತೊಂದಿಷ್ಟು ಸಿಹಿ ಕ್ಷಣಗಳನ್ನು ಸೇರಿಸಿಕೊಳ್ಳಲು ಹಗ್ ಡೇ ಪ್ರೇಮಿಗಳ ಪಾಲಿಗೆ ಒಂದು ಅಮೂಲ್ಯ ದಿನ.

ಹೀಗಾಗಿ ನಿಮ್ಮನ್ನು ಪ್ರೀತಿಸುವ ಜೀವಕ್ಕೆ ಒಂದು ಪ್ರೀತಿಯ ಅಪ್ಪುಗೆ ನೀಡಿ, ಪ್ರೀತಿ ಇನ್ನಷ್ಡು ಗಟ್ಟಿಯಾಗಿ ಖುಷಿಯು ಹೆಚ್ಚುತ್ತದೆ.

ಒಂದು ಪ್ರೀತಿಯ ಹಗ್​ ನೊಂದಿಗೆ ಹಗ್​ ಡೇ ಆರಂಭಿಸಿ, ಪ್ರೀತಿಯ ಜೀವವನ್ನು ಸಂತಸದಿಂದಿಡಿ. ನೀವು ನಿಜವಾಗಿಯೂ ಒಬ್ಬರನ್ನು ಪ್ರೀತಿಸುತ್ತಿದ್ದರೆ ಮನಃಪೂರ್ವಕವಾಗಿ ಆಚರಣೆ ಮಾಡಿ. ಹಗ್​ ಡೇ ಆಚರಣೆಯ ಹೆಸರಿನಲ್ಲಿ ಸಾರ್ವಜನಿಕವಾಗಿ ಅಸಭ್ಯ ವರ್ತನೆ ಮಾಡಬೇಡಿ.

ಜೀವನಕ್ಕೆ ಪ್ರೀತಿಯ ಭರವಸೆಯೇ ಪ್ರಾಮಿಸ್ ಡೇ ?-promise-day

https://www.ndtv.com/india-news/happy-hug-day-2022-wishes-images-wallpapers-quotes-whatsapp-status-sms-messages-photos-pics-and-greetings-2757534

Social Share

Leave a Reply

Your email address will not be published. Required fields are marked *