
India Team Players Injured
ಕ್ರಿಕೇಟ್
ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಟೀಮ್ ಇಂಡಿಯಾದ ಇಬ್ಬರು ಆಟಗಾರರು ಹೊರಬಿದ್ದಿದ್ದಾರೆ.
ಈ ಮೊದಲು ಗಾಯದ ಕಾರಣ ದೀಪಕ್ ಚಹರ್ ಸರಣಿಯಿಂದ ಹೊರಬಿದ್ದಿದ್ದರು, ಇದೀಗ ಸರಣಿ ಆರಂಭಕ್ಕೆ ದಿನ ಮಾತ್ರ ಉಳಿದಿರುವಾಗ ಸೂರ್ಯಕುಮಾರ್ ಯಾದವ್ ಕೂಡ ಸರಣಿಗೆ ಹೊರಬಿದ್ದಿದ್ದಾರೆ.
ಭಾನುವಾರ ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ T20I ಪಂದ್ಯದ ಫೀಲ್ಡಿಂಗ್ ವೇಳೆ ಸೂರ್ಯಕುಮಾರ್ ಮೂಳೆ ಮುರಿತಕ್ಕೆ ಒಳಗಾಗಿದ್ದರು.
ಮತ್ತೊಂದು ಕಡೆ ಬೌಲಿಂಗ್ ಸಮಯದಲ್ಲಿ ದೀಪಕ್ ಚಹರ್ ಉಳುಕಿನ ಸಮಸ್ಯೆ ಆದುದರಿಂದ ಇಬ್ಬರು ಆಟಗಾರರು ಶ್ರೀಲಂಕಾ ವಿರುದ್ದದ ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.India Team Players Injured
ಯಾವುದೇ ಆಟಗಾರರಾಗಿದ್ದರು ಅರೋಗ್ಯ ಮೊದಲು ಉತ್ತಮವಾಗಿರಬೇಕು ಅವಾಗ ಆಟ ಆಡಲು ಸಾಧ್ಯವಾಗುತ್ತದೆ.
ಇಂಡಿಯಾ ಟೀಮಿನಲ್ಲಿ ಆಟಗಾರರು ಹೇಗೆ ಆಡುತ್ತಾರೆ ಎಂಬುವುದು ನಾವು ಕಾದು ನೋಡಬೇಕಾಗಿದೆ.
ಭರ್ಜರಿ ಫಾರ್ಮ್ನಲ್ಲಿದ್ದ ಸೂರ್ಯಕುಮಾರ್ ಯಾದವ್ ಗಾಯಗೊಂಡಿರುವುದು ಇದೀಗ ಟೀಮ್ ಇಂಡಿಯಾ ಚಿಂತೆಯನ್ನು ಹೆಚ್ಚು ಮಾಡಿದೆ.
ಏಕೆಂದರೆ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಭರ್ಜರಿ ಪ್ರದರ್ಶನ ನೀಡುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು.
ಉತ್ತಮ ಆಟಗಾರರಾಗಿದ್ದ ಇಬ್ಬರು ಇಂಡಿಯಾ ಟೀಮಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಇಲ್ಲ ಎಂದು ನಮಗೆ ತಿಳಿದು ಬಂದಿದೆ.
ಇದೀಗ ಲಂಕಾ ಸರಣಿಯಿಂದ ಹೊರಗುಳಿದಿರುವ ಕಾರಣ ಬದಲಿ ಆಟಗಾರ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆವಿದೆ.
ಇನ್ನು ಈ ಸರಣಿಯಿಂದ ವಿಶ್ರಾಂತಿಯ ಕಾರಣ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಹೊರಗುಳಿದಿದ್ದಾರೆ.
ಹಾಗೆಯೇ ಗಾಯದಿಂದ ಬಳಲುತ್ತಿರುವ ಕೆಎಲ್ ರಾಹುಲ್ ಕೂಡ ಸರಣಿಗೆ ಬಾರದಂತಾಗಿದೆ. ಇದೀಗ ಸೂರ್ಯಕುಮಾರ್ ಯಾದವ್ ಹಾಗೂ ದೀಪಕ್ ಚಹರ್ ಕೂಡಾ ಬರಲು ಸಾಧ್ಯವಿಲ್ಲ. ಹೀಗಾಗಿ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಶ್ರೀಲಂಕಾ ವಿರುದ್ದ ಟೀಮ್ ಇಂಡಿಯಾ ಹೇಗೆ ಪ್ರದರ್ಶನ ನೀಡಲಿದೆ ಕಾದು ನೋಡಬೇಕಷ್ಟೆ.
ಟಿ20 ಸರಣಿಗೆ ಟೀಮ್ ಇಂಡಿಯಾ
ರೋಹಿತ್ ಶರ್ಮಾ(ನಾಯಕ), ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್(ವಿಕೆಟ್ ಕೀಪರ್).
ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರವೀಂದ್ರ ಜಡೇಜಾ, ಯುಜುವೇಂದ್ರ ಚಹಾಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ(ಉಪನಾಯಕ), ಅವೇಶ್ ಖಾನ್.India Team Players Injured
ಭಾರತ vs ಶ್ರೀಲಂಕಾ ಟಿ20 ಸರಣಿ ಪಟ್ಟಿ
24 ಫೆಬ್ರುವರಿ – ಮೊದಲ ಟಿ20, ಲಕ್ನೋ
ಫೆಬ್ರುವರಿ 24 – 2ನೇ ಟಿ20, ಧರ್ಮಶಾಲಾ
24 ಫೆಬ್ರುವರಿ – 3ನೇ ಟಿ20, ಧರ್ಮಶಾಲಾ
ಭಾರತ vs ಶ್ರೀಲಂಕಾ ಟೆಸ್ಟ್ ಸರಣಿ ಪಟ್ಟಿ
ಮಾರ್ಚ್ 4 – 8 – ಮೊದಲ ಟೆಸ್ಟ್, ಮೊಹಾಲಿ
ಮಾರ್ಚ್ 12 -16 – 2ನೇ ಟೆಸ್ಟ್, ಬೆಂಗಳೂರು