ಮೃತ ನವೀನ ತಂದೆಯ ಮಾತು ಗೊಂದಲ ಸೃಷ್ಟಿಸಿದೆ!

Naveen Death Is Becoming Political

ರಷ್ಯಾ ಮತ್ತು ಉಕ್ರೇನ್ ದಾಳಿ

ಉಕ್ರೇನ್ ರಷ್ಯಾ ಮತ್ತು ಯುದ್ಧವು ಇಡಿ ಜಗತ್ತನ್ನು ತಲ್ಲಣಗೊಳಿಸುತ್ತಿದೆ, ಈ ಬಗ್ಗೆ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳು ಆಂತಕವನ್ನು ವ್ಯಕ್ತಪಡಿಸಿದೆ.

ರಷ್ಯಾ ಉಕ್ರೇನ್ ನ ಮೇಲೆ ದಾಳಿ ಮಾಡಿದ ಕಾಲದಿಂದಲ್ಲೂ ಈವರೆಗೂ ಅನೇಕ ಸಾವು ನೋವುಗಳು ಉಂಟಾಗಿವೆ, ಉಕ್ರೇನ್ ನಲ್ಲಿ ಬೇರೆ ಬೇರೆ ದೇಶಗಳ ವಿದ್ಯಾರ್ಥಿಗಳು ನಾಗರಿಕರು ನೆಲೆಸಿದ್ದಾರೆ.

ಇದರಲ್ಲಿ ಭಾರತೀಯ ವಿದ್ಯಾರ್ಥಿಗಳು ಕೂಡ ಇದ್ದಾರೆ, ಭಾರತ ಸರ್ಕಾರ ರಷ್ಯಾ ಮತ್ತು ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ತುಂಬಾ ಸೂಕ್ಷ್ಮವಾಗಿ ಎಲ್ಲವನ್ನು ಗಮನಿಸುತ್ತಿದೆ.

ಜೊತೆಗೆ ಭಾರತ ಸರ್ಕಾರ ಕೆಲವೊಂದು ಪ್ರಮುಖ ಕ್ರಮಗಳನ್ನು  ಕೈಗೊಂಡಿದೆ..

ಆದರೆ ನಿನ್ನೆ ಕರ್ನಾಟಕ ಮೂಲದ ವಿದ್ಯಾರ್ಥಿ ನವೀನ್‌ ಶೇಖರಪ್ಪ ರಷ್ಯಾ ದಾಳಿಗೆ ಉಕ್ರೇನ್ ನಲ್ಲಿ ಮೃತ ಪಟ್ಟಿದ್ದಾರೆ.

ಈ ಬಗ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಅರವಿಂದ್ ಬಾಗ್ಚಿ ಟ್ವೀಟ್ ಅವರು ಮಾಡಿದ್ದರು.

ಸರ್ಕಾರವು ಇದರ ಬಗ್ಗೆ ಸ್ಪಷ್ಟನೆಯನ್ನು ನೀಡಿತ್ತು, ಇದು ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಭಾರತ ಮೂಲದ ವ್ಯಕ್ತಿಯ ಮೊದಲ ಹತ್ಯೆಯಾಗಿದೆ.dead naveen

ಕರ್ನಾಟಕ ಮೂಲದ ವ್ಯಕ್ತಿಯಾಗಿರುವ ನವೀನ್‌ ಶೇಖರಪ್ಪ ಸಾವಿನಿಂದ ಇನ್ನಷ್ಟು ಆಂತಕವನ್ನು ಸೃಷ್ಟಿಯಾಗಿದೆ.

ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅಲರ್ಟ್ ಆಗಿದೆ ಎಂದು ಹೇಳಲಾಗಿದ್ದು, ಆದರೆ ಸರ್ಕಾರ ನೀತಿ ಸರಿಯಿಲ್ಲ, ಕಠಿಣ ಕ್ರಮಗಳನ್ನು ತೆಗೆದುಕೊಂಡಿ ಎಂಬ ಪರ-ವಿರೋಧಗಳು ವ್ಯಕ್ತವಾಗುತ್ತಿವೆ.

ಕೇಂದ್ರ ಸರ್ಕಾರದ ಕ್ರಮ

ಕೇಂದ್ರ ಸರ್ಕಾರ ಉಕ್ರೇನ್ ನಲ್ಲಿರುವ ತನ್ನ ದೇಶದ ವಿದ್ಯಾರ್ಥಿಗಳ ಮತ್ತು ಪ್ರಜೆಗಳನ್ನು  ಕರೆತರುವ ಕೆಲಸವನ್ನು ಮಾಡುತ್ತಿದೆ.

ಈಗಾಗಲೇ ಏರ್ ಇಂಡಿಯಾ ಕಳೆದ ಮೂರು ದಿನಗಳಿಂದ 1600 ಭಾರತೀಯರನ್ನು ಕರೆದುಕೊಂಡು ಬಂದಿದೆ.

ಸುರಕ್ಷಿತವಾಗಿ ಅವರನ್ನು ಭಾರತಕ್ಕೆ ಕರೆತರುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದು, ಆದರೆ ನಿನ್ನೆ ನಡೆದ ನವೀನ್ ಸಾವಿನ ಘಟನೆಯಿಂದ ಸರ್ಕಾರ ಸರಿಯಾದ ಕಾರ್ಯವನ್ನು ಮಾಡುತ್ತಿಲ್ಲ ಮತ್ತು ಪ್ರಧಾನಿ ಮೋದಿ ಪ್ರಮುಖ ಕ್ರಮಗಳನ್ನು ವಹಿಸಿಲ್ಲ ಎಂದು ಟೀಕಿಸಿದ್ದಾರೆ.

ಆಪರೇಷನ್ ಗಂಗಾ

ಸೋಮವಾರದಂದು  ರಷ್ಯಾ- ಉಕ್ರೇನ್ ಶಾಂತಿ ಮಾತುಕತೆ ನಡುವೆಯೇ ಭಾರತ ಉಕ್ರೇನ್‌ನಲ್ಲಿ ಸಿಲುಕಿರುವ  ಭಾರತೀಯರನ್ನು  ಸ್ಥಳಾಂತರ ಮಾಡುವ ‘ಆಪರೇಷನ್ ಗಂಗಾ’ ಕಾರ್ಯಾಚರಣೆಯನ್ನು ಮುಂದುವರೆಸುತ್ತಿದೆ.

ರೋಮಾನಿಯಾದ ರಾಜಧಾನಿ ಬುಚಾರೆಸ್ಟ್‌ನಿಂದ 182 ಭಾರತೀಯ  ಜನವಿರುವ ವಿಮಾನ ಟೇಕಾಫ್ ಆಗಿದೆ.

ಆಪರೇಷನ್ ಗಂಗಾದ 7ನೇ ವಿಮಾನ ಇದಾಗಿದ್ದು, ಬುಚಾರೆಸ್ಟ್‌ನಿಂದ ವಿಮಾನ ಮುಂಬೈಗೆ ಬರಲಿದೆ.

ಈಗಾಗಲೇ ಇದರ ಬಗ್ಗೆ ಕುರಿತು  ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್  ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ ಸೋಮವಾರ ಸಂಜೆ ಉನ್ನತ ಮಟ್ಟದಲ್ಲಿ ಅಧಿಕಾರಿಗಳ ಸಭೆಯು ನಡೆಯಿತು.naveen death ukrain 

ಇದರ ಜೊತೆಗೆ ಎಲ್ಲ ಅಧಿಕಾರಿಗಳನ್ನು ಸೂಚನೆಯನ್ನು ಹಾಗೂ ಅಲ್ಲಿರುವ  ಭಾರತೀಯರನ್ನು ಹೇಗೆ ಭಾರತಕ್ಕೆ ಕರೆದು ತರುವುದು ಎಂಬ ಬಗ್ಗೆ ಸಲಹೆಯನ್ನು ನೀಡಿದ್ದಾರೆ.Naveen Death Is Becoming Political

ಈಗಾಗಲೇ ಆಪರೇಷನ್ ಗಂಗಾ ಸೂಕ್ಷ್ಮವಾಗಿ ಮತ್ತು ಬಹಳ ವೇಗವಾಗಿ ಸಾಗುತ್ತಿದೆ ಎಂದು ಮೋದಿ ಮತ್ತು ಹಲವು ಸಚಿವರು ಹೇಳಿದ್ದಾರೆ.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಭಾರತೀಯರ ರಕ್ಷಣಾ ಕಾರ್ಯಾಚರಣೆಗಾಗಿ ನಾಲ್ವರು ಸಚಿವರ ತಂಡವನ್ನು ನಿಯೋಜನೆ ಮಾಡಿದ್ದಾರೆ.

ಸೋಮವಾರ ಭಾರತದ ವಿದೇಶಾಂಗ ಸಚಿವಾಲಯ ನೀಡಿದ ಮಾಹಿತಿಯಂತೆ ಆಪರೇಷನ್ ಗಂಗಾ ಅಡಿ ಇದುವರೆಗೂ 8000 ಜನರನ್ನು ರಕ್ಷಣೆ ಮಾಡಿದೆ.

ರಾಜ್ಯ ಸರ್ಕಾರ

ರಾಜ್ಯದಲ್ಲಿ ಈಗಾಗಲೇ ಅಧಿಕಾರಿಗಳ ತಂಡವನ್ನು ರಚನೆ ಮಾಡಿದ್ದು ಮತ್ತು ಇದಕ್ಕಾಗಿ ನೊಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ.

ಈ ಅಧಿಕಾರಿಗಳು ಕೇಂದ್ರ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದು ಕರ್ನಾಟಕದ ವಿದ್ಯಾರ್ಥಿಗಳನ್ನು ಕೂಡ ಶೀಘ್ರ ರಾಜ್ಯಕ್ಕೆ ಕರೆ ತರುವಂತೆ ಮಾಹಿತಿ ತಿಳಿಸಿದ್ದಾರೆ.

ಈಗಾಗಲೇ 13 ವಿದ್ಯಾರ್ಥಿಗಳು ರಾಜ್ಯಕ್ಕೆ ಬಂದಿದ್ದು, ಮುಂದೆ ಯಾವೆಲ್ಲ ಕ್ರಮಗಳನ್ನು  ತೆಗೆದುಕೊಳ್ಳಬಹುದು ಎಂಬುವುದರ ಬಗ್ಗೆ ಈ ಅಧಿಕಾರಿಗಳನ್ನು ಚರ್ಚಿಸಿದ್ದಾರೆ.naveen death

ಉಕ್ರೇನ್ ದೇಶದಿಂದ ಜನ ಪಲಾಯನ

ಉಕ್ರೇನ್‌ನಿಂದ 5,00,000ಕ್ಕೂ ಹೆಚ್ಚು ನಿರಾಶ್ರಿತರು ಅಕ್ಕಪಕ್ಕದ ದೇಶಗಳಿಗೆ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಮುಖ್ಯಸ್ಥ ಫಿಲಿಪ್ಪೊ ಗ್ರಾಂಡಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

 ಉಕ್ರೇನ್‌ನಿಂದ 2,80,000ಕ್ಕಿಂತ ಹೆಚ್ಚು ಜನರು ಪೋಲೆಂಡ್ ದೇಶವೊಂದಕ್ಕೆ ಓಡಿಹೋಗಿದ್ದಾರೆ.

85 ಸಾವಿರ ಜನರು ಹಂಗೇರಿಗೆ, 36,000 ಜನರು ಮಾಲ್ಡೊವಾಗೆ, 32,500 ಜನರು ರೊಮೇನಿಯಾಗೆ, 30,000 ಜನರು ಸ್ಲೋವಾಕಿಯಾಗೆ ಜನರು ಪಲಾಯನ ಮಾಡಿದ್ದಾರೆ ಎಂದು ತಿಳಿಸಿದೆ.

ಉಕ್ರೇನ್ ದೇಶದ ನಾಗರಿಕರು ಮುಕ್ತವಾಗಿ ರಾಜಧಾನಿ ಕೀವ್‌ನಿಂದ ಹೊರ ಹೋಗಬಹುದು ಎಂದು ರಷ್ಯಾ ಸೇನೆಯು ಸೋಮವಾರ ಹೇಳಿದೆ.

ಜನರು ಕೀವ್-ವಾಸಿಲ್ಕಿವ್ ಹೆದ್ದಾರಿ ಮೂಲಕ ಹೊರ ಹೋಗಬಹುದು, ಈ ದಾರಿ ಸುರಕ್ಷಿತವಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ ಇಗೋರ್ ಕೊನಾಶೆಂಕೋವ್ ಜನರಿಗೆ ಹೇಳಿದ್ದಾರೆ.

ರಷ್ಯಾ ಉಕ್ರೇನ್‌ ಮೇಲೆ ದಾಳಿ ಆರಂಭ ಮಾಡಿದ ನಂತರ ಎರಡು ದೇಶಗಳ ಜೊತೆ ಮೊದಲ ಮಾತುಕತೆ ಸೋಮವಾರ ನಡೆದಿದೆ.

ಬೆಲರೂಸ್ ಹಾಗೂ ಉಕ್ರೇನ್ ಗಡಿಯಲ್ಲಿರುವ ಪ್ರದೇಶದಲ್ಲಿ ಸಭೆ ನಡೆಯಿತು, ತಕ್ಷಣ ಕದನ ವಿರಾಮ ಘೋಷಣೆ ಮಾಡಬೇಕು ಎಂದು ಉಕ್ರೇನ್ ರಷ್ಯಾದ ಮೇಲೆ ಒತ್ತಡ ಹಾಕಿದೆ.Naveen Death Is Becoming Political

ರಾಜಕೀಯವಾಗಿ ಪರಿಣಮಿಸುತ್ತಿದೆ ನವೀನ್ ಸಾವು ?

ಸೋಮವಾರ ನವೀನ್ ರಷ್ಯಾ ದಾಳಿಯಲ್ಲಿ ಉಕ್ರೇನ್ ದೇಶದಲ್ಲಿ ಸಾವನ್ನಪ್ಪಿದ್ದಾರೆ, ಈ ಬಗ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ.

ಇದೀಗ ಈ ಘಟನೆಯ ನಂತರ ಅಲ್ಲಿರುವ ತಮ್ಮ ಮಕ್ಕಳ ಬಗ್ಗೆ ಪೋಷಕರಿಗೆ ಆಂತಕ ಹುಟ್ಟಿಸಿದೆ, ಇದರ ಮಧ್ಯ ಜನಪ್ರತಿನಿಧಿಗಳು ಹೇಳಿಕೆಯು ರಾಜಕೀಯ ತಿರುವು ಪಡೆಯುವಂತಿದೆ.naveen death

ಈ ಬಗ್ಗೆ ಸರ್ಕಾರಕ್ಕೂ ತಲೆನೋವು ಶುರುವಾಗಿದೆ, ನೆನ್ನೆಯಿಂದ ಕಾಂಗ್ರೆಸ್ – ಬಿಜೆಪಿ ಈ ಬಗ್ಗೆ ಟ್ವಿಟ್ ಸಮರಗಳು ತುಂಬಾ ನಡೆಯುತ್ತಿದೆ.

ರಾಜಕೀಯ ನಾಯಕರ ಟ್ವೀಟ್

ಸಿದ್ದರಾಮಯ್ಯ ಟ್ವೀಟ್

ಹೊಸ ಕನಸುಗಳನ್ನು ಹೊಂದಿರುವ ಯುವ ವೈದ್ಯಕೀಯ ವಿದ್ಯಾರ್ಥಿಯ ಜೀವಗಳನ್ನು ಉಳಿಸುವಲ್ಲಿ ಸರ್ಕಾರವು ವಿಫಲವಾಗಿದೆ.

ರಷ್ಯಾದಿಂದ ಸಾಕಷ್ಟು ಎಚ್ಚರಿಕೆಗಳನ್ನು ನೀಡಲಾಗಿದೆ ಮತ್ತು ಸ್ಥಳಾಂತರಿಸುವಿಕೆಗೆ ತಯಾರಿ ನಡೆಸಲು ಸರ್ಕಾರಕ್ಕೆ ತುಂಬಾ ಸಮಯವಿತ್ತು.

ಡಿಕೆ ಶಿವಕುಮಾರ್ ಟ್ವೀಟ್

ಉಕ್ರೇನ್‌ನಲ್ಲಿ ಇನ್ನೂ ನೂರಾರು ಕನ್ನಡಿಗರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸುತ್ತಿವೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಈಗಾಗಲೇ ನವೀನ ಮರಣ ಹೊಂದಿದ್ದು,  ನವೀನ್‌ ವಯಸ್ಸಿನ ಇನ್ನೂ ಅನೇಕರು ಅಲ್ಲಿ ಸಿಲುಕಿದ್ದಾರೆ, ಅವರನ್ನು ಏನು ಅಪಾಯವಿಲ್ಲದೆ ಹಾಗೇ ಕರೆದುಕೊಂಡು ತರಬೇಕು ಆ ಪರಿಸ್ಥಿತಿ ನೋಡಿದರೆ ಆತಂಕವಾಗುತ್ತಿದೆ.

ಬಸವರಾಜ್ ಬೊಮ್ಮಾಯಿ ಟ್ವೀಟ್

ಉಕ್ರೇನ್ ನಲ್ಲಿ ಶೆಲ್ ಗಳ ದಾಳಿಗೆ ಕರ್ನಾಟಕದ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತಪಟ್ಟಿದ್ದಾರೆ.

ಇದು ಒಂದು ದುರಂತದ ಸಂಗತಿ, ಈ ಕುರಿತು ನವೀನ್ ಅವರ ತಂದೆ ಶೇಖರಗೌಡ ಅವರಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಸಾಂತ್ವನ ಹೇಳಿದ್ದೇನೆ‌.

ನವೀನ ಅವರ ಮೃತ ದೇಹವನ್ನು ಭಾರತ ದೇಶಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆಸಲಾಗುವುದು.

ಕುಮಾರಸ್ವಾಮಿ ಟ್ವೀಟ್

ಕೇಂದ್ರ ಸರಕಾರ ಅಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿಗಳನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಬೇಕು.

ಕನ್ನಡಿಗರ ರಕ್ಷಣೆಗೆ ರಾಜ್ಯ ಸರಕಾರವೂ ಮತ್ತಷ್ಟು ಕ್ಷಿಪ್ರವಾಗಿ ಕೆಲಸ ಮಾಡಬೇಕು. ಇನ್ನೊಂದು ಜೀವ ಹೋಗಲೂ ಅವಕಾಶ ಮಾಡಿಕೊಡಬಾರದು.

ಉಕ್ರೇನ್‌ ಭಾರತೀಯ ರಾಯಭಾರ ಕಚೇರಿ ಸೂಕ್ತವಾಗಿ ಸ್ಪಂದಿಸುತ್ತಿವಲ್ಲವೆಂಬ ಆರೋಪವೂ ಕೂಡಾ ಕೇಳಿಬರುತ್ತಿದೆ.

ಸರ್ಕಾರದ ವಿರುದ್ಧ ಆಕ್ರೋಶ

ಟ್ವಿಟರ್ ನಲ್ಲಿ ಸರ್ಕಾರದ ವಿರುದ್ಧ ಬಹಳ ಅಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ, ಈ ಬಗ್ಗೆ ಟ್ವಿಟರ್ ನಲ್ಲಿ ಪರ -ವಿರೋಧಗಳು ಛ್ರ್ಚೆ ನಡೆಯುತ್ತಿವೆ.

ಸರ್ಕಾರ ನವೀನ ಅವರ ಜೀವ ತೆಗೆದುಕೊಂಡಿದೆ, ಇದರ ಜೊತೆಗೆ ಜಾತಿ ವಾದಗಳು ಸೃಷ್ಟಿಯಾಗುತ್ತಿವೆ.

ಭಾರತದಲ್ಲಿ ಮೀಸಲಾತಿ ಭೂತದಿಂದ ಒಂದು ಬಳಿಯನ್ನು ಪಡೆದುಕೊಂಡಿದೆ, ನವೀನ್ ಗೆ ದೇಶದಲ್ಲಿ ಯಾವುದೇ ಮೆಡಿಕಲ್ ಕಾಲೇಜಿನಲ್ಲಿ ಸಿಟ್ ಸಿಕ್ಕಿಲ್ಲ ಆ ಕಾರಣಕ್ಕೆ ಅವರು ವಿದೇಶಕ್ಕೆ ಹೋಗಿದ್ದಾರೆ.

ಅಭ್ಯರ್ಥಿಯು GMAT ಅಥವಾ GRE ನಲ್ಲಿ 97% ಸ್ಕೋರ್ ಮಾಡಬೇಕಾದರೆ, ಅವನು ಬೇರೆ ಯಾವುದಾದರೂ ದೇಶದಲ್ಲಿದ್ದರೆ ಅವನು ಹಾರ್ವರ್ಡ್ ಅಥವಾ ಸ್ಟ್ಯಾನ್‌ಫೋರ್ಡ್‌ನಲ್ಲಿ ಸಂಪೂರ್ಣ ಅನುದಾನಿತ ವಿದ್ಯಾರ್ಥಿಯ ವೇತನದಲ್ಲಿ ಓದುಬಹುದು.

ಆದರೆ ದುಃಖದ ಸಂಗತಿಯೆಂದರೆ, ನವೀನ್ ಶೇಖರಪ್ಪ ಮೆರಿಟ್‌ನಲ್ಲಿ ಭಾರತದಲ್ಲಿ ವೈದ್ಯಕೀಯ ಸೀಟು ಪಡೆಯಲು ಸಾಧ್ಯವಾಗಲಿಲ್ಲ ಎಂದು ಐಪಿಎಸ್  ಅಧಿಕಾರಿ ಕಾರ್ತೀಕೇಯ ಜಿ ಟ್ವಿಟ್ ಮಾಡಿ ತಿಳಿಸಿದ್ದಾರೆ.

ಆಪರೇಟಿಂಗ್ ಗಂಗಾ ಕಾರ್ಯಕ್ರಮದಲ್ಲಿದ್ದ ಏರ್ ಇಂಡಿಯಾ ವಿಮಾನಗಳ ಜೊತೆ ಸ್ಪೈಸ್ ಜೆಟ್ ಕೂಡ ಸಹಾಯ ಮಾಡುತ್ತಿದೆ.

ಭಾರತೀಯ ವಾಯುಸೇನೆ ಕೂಡ ಕಾರ್ಯಾಚರಣೆಗೆ ವೇಗ ನೀಡಲು ಇಂದಿನಿಂದ ಪ್ರಾರಂಭಿಸಿದೆ.

ತೆರವು ಕಾರ್ಯಾಚರಣೆ ಉಸ್ತುವಾರಿಗೆ ನಿಯೋಜಿತರಾಗಿರುವ ನಾಲ್ವರು ಕೇಂದ್ರದ ಸಚಿವರು ತಮಗೆ ಹೊಣೆಗಾರಿಕೆ ವಹಿಸಿರುವ ಗಡಿ ದೇಶಗಳಲ್ಲಿ ಆಗಲೇ ಕೆಲಸದಲ್ಲಿ ಮಾಡುತ್ತಿದ್ದಾರೆ. ಆದರೂ ಭಾರತದಲ್ಲಿ  ಸರ್ಕಾರವನ್ನು ವಿರೋಧಿಸಲೆಂದೇ ಹುಟ್ಟಿದವರು ಇದ್ದಾರೆ ಎಂಬುದು ವಿಪರ್ಯಾಸವೇ ಸರಿಯಾಗಿದೆ.

ನವೀನ್ ತಂದೆಯ ಹೇಳಿಕೆಯಿಂದ ಟ್ವಿಟರ್ ಗದ್ದಲ

ಹೌದು ಮೃತ ನವೀನ್ ಅವರ ತಂದೆ ಹೇಳಿದ ಆ ಒಂದು ಹೇಳಿಕೆಯಿಂದ ದೇಶದಲ್ಲಿ ಈ ಬಗ್ಗೆಬಹಳಷ್ಟು ಚರ್ಚೆಗಳು ನಡೆಯುತ್ತಿದೆ.

ಮಗ ನವೀನ್ ಗೆ ಮೀಸಲಾಯಿತಿಯಿಂದ ಇಲ್ಲಿ ಸಿಟ್ ಸಿಗಲಿಲ್ಲ ಇದು ಬೇಸರ ವಿಷಯ, ಪ್ರತಿಭೆ ಇರುವ ವಿದ್ಯಾರ್ಥಿಗಳಿಗೆ ಅವಕಾಶವೇ ಇಲ್ಲ. 

ನನ್ನ ಮಗನಿಗೆ ಮಾರ್ಕ್ಸ್ ಇದ್ದರು ಸಿಟ್ ಸಿಕ್ಕಿಲ್ಲ, ಆ ಕಾರಣದಿಂದ ನಾನು ಅವನನ್ನು ವಿದೇಶಕ್ಕೆ ಕಳುಹಿಸಿದ್ದೇನೆ.

ಆದರೆ ಇವಾಗ ನನ್ನ ಮಗನನ್ನು ಕಳೆದುಕೊಂಡೆ, ನಮ್ಮ ದೇಶದ ಸರ್ಕಾರ ಮತ್ತು ವ್ಯವಸ್ಥೆ ಮೊದಲು ಬದಲಾಗಬೇಕು ಎಂದು ಹೇಳಿದ ಒಂದು ಹೇಳಿಕೆ ಬಾರಿ ಸದ್ದು ಮಾಡುತ್ತಿದೆ.Naveen Death Is Becoming Political

JEE ಮೇನ್ಸ್ 2022ರ ಪರೀಕ್ಷೆಯ ನೋಂದಣಿ ಪ್ರಾರಂಭವಾಗಿದೆ!

https://www.google.com/search?q=way2plot&oq=w&aqs=chrome.1.69i60j69i59l2j69i60l5.1495j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *