
James Kannada Movie Review
ಜೇಮ್ಸ್ ಸಿನಿಮಾ
ಪುನೀತ್ ರಾಜಕುಮಾರ್ ಹೀರೋ ಆಗಿ ನಟಿಸಿರುವ ಕೊನೆಯ ಸಿನಿಮಾವಾಗಿದ್ದರಿಂದ” ಜೇಮ್ಸ್” ಚಿತ್ರದ ಬಗ್ಗೆ ಅಭಿಮಾನಿಗಳು ಬಹಳಷ್ಟು ಭಾವನಾತ್ಮಕ ನಂಟು ಹೊಂದಿದ್ದಾರೆ.
ಈ ಸಿನಿಮಾದ ಕೆಲಸಗಳು ನಡೆಯುತ್ತಿರುವಾಗಲೇ ಅಪ್ಪು ನಮ್ಮನ್ನು ಅಗಲಿ ಹೋಗಿದ್ದು ಬಹಳ ನೋವಿನ ಸಂಗತಿಯಾಗಿದೆ, ಆದಕಾರಣ” ಜೇಮ್ಸ್” ಚಿತ್ರವನ್ನು ಅಪ್ಪು ಹುಟ್ಟಿದ ದಿನವೇ ಬಿಡುಗಡೆ ಮಾಡಲಾಗಿದೆ.puneeth raajkumar
ಅಪ್ಪು ನಮ್ಮ ಜೊತೆ ಇಲ್ಲಾ ಎನ್ನುವ ನೋವನ್ನು ಮನದಲ್ಲಿಟ್ಟುಕೊಂಡು ಅಭಿಮಾನಿಗಳು ಸಿನಿಮಾವನ್ನು ನೋಡುತ್ತಿದ್ದಾರೆ, ಅವರನ್ನು ಮತ್ತೆ ದೊಡ್ಡ ಪರದೆಯ ಮೇಲೆ ನೋಡುತ್ತಿರುವುದು ಅಭಿಮಾನಿಗಳಿಗೆ ಒಂದು ಕಡೆ ಸಂತೋಷ ತಂದಿದೆ.
ಮತ್ತೊಂದು ಕಡೆ ಅವರು ನಮ್ಮ ಜೊತೆ ಇಲ್ಲಾ ಎನ್ನುವ ನೋವು ಕೂಡ ಕಾಡುತ್ತಿದೆ,ಅಪ್ಪುನ ದೊಡ್ಡ ಪರದೆಯಲ್ಲಿ ಸಂಭ್ರಮಿಸೋಕ್ಕೆ ಕೊನೆಯ ಅವಕಾಶ.James Kannada Movie Review
ಒಬ್ಬಸೈನಿಕನ ಕಥೆ
ದೇಶಕ್ಕಾಗಿ ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ಮೇಜರ್ ಸಂತೋಷ ಕುಮಾರ್ (ಪುನೀತ್ ರಾಜಕುಮಾರ್) ಆತ ಎದುರಾಳಿ ಎದೆಯಲ್ಲಿ ನಡುಕು ಹುಟ್ಟಿಸುವ, ಶತ್ರುಗಳು ಎಷ್ಟೇ ಬರಲಿ ಎಲ್ಲರನ್ನು ಎದುರಿಸುವ ಸಾಮರ್ಥ್ಯವುಳ್ಳವನು.
ಓನ್ಲಿ ಒನ್ ಮ್ಯಾನ್ ಶೋ ಚಿತ್ರವಾಗಿದೆ, ಅಷ್ಟು ಪವರ್ ಫುಲ್ ಇರುವ ಜೇಮ್ಸಗೆ ಗೆಳೆಯರೇ ಜೀವ, ಕುಟುಂಬ, ಅವರಿಗೋಸ್ಕರ ಏನು ಮಾಡಲು ರೆಡಿ. review
ಆದರೆ ಈ ಚಿತ್ರದಲ್ಲಿ ನಾಯಕ ನಟ ಬೆಂಗಳೂರಿನಲ್ಲಿ ಒಂದು ಸೆಕ್ಯೂರಿಟಿ ಏಜೆನ್ಸಿ ನಡೆಸುತ್ತಿರುತ್ತಾನೆ.
ನಾಯಕನ ಉದ್ದೇಶವೇನು ?ಯಾವ ಕಾರಣಕ್ಕಾಗಿ ಸೆಕ್ಯೂರಿಟಿ ಏಜೆನ್ಸಿ ನಡೆಸುತ್ತಿದ್ದಾರೆ? ಮೇಜರ್ ಸಂತೋಷ ಶತ್ರುಗಳ ರಕ್ಷಣೆಗೆ ಕಾವಲಾಗಿದ್ದಾರೆ.
ಚಿತ್ರಕ್ಕೆ ಜೇಮ್ಸ್ ಹೆಸರು ಹೇಗೆ ಬಂತ್ತು? ಈ ಯಲ್ಲಾ ಪ್ರಶ್ನೆಗಳೊಂದಿಗೆ ಸಿನಿಮಾ ಮುಂದುವರೆಯುತ್ತದೆ.kannada review
ಮನಸೆಳೆಯುವ ದೃಶಗಳು
ಜೇಮ್ಸ್ ಸಿನಿಮಾದ ಆರಂಭದಲ್ಲಿ ಅವರ ಎಂಟ್ರಿ ಥ್ರಿಲ್ ನೀಡುತ್ತದೆ, ಕಾರ್ ಚೇಸಿಂಗ್ ದೃಶಗಳು ನೋಡುವವರ ಮೈಯಲ್ಲಿ ರೋಮಾಂಚನವಾಗುತ್ತದೆ.kannada movie
ಮೊದಲು ಶತ್ರುಗಳ ರಕ್ಷಣೆ ಮಾಡಿ ಬಳಿಕ ಅವರಿಗೆ ದುಸ್ವಪ್ನವಾಗಿ ಕಾಡುವ ಮೇಜರ್ ಸಂತೋಷ ಆಗಿ ಅಪ್ಪು ಗಮನ ಸೆಳೆಯುತ್ತಾರೆ.
ಫೈಟಿಂಗ್ ದೃಶ್ಯಗಳಲ್ಲಿ ಅವರ ಪವರ್ ಎದ್ದು ಕಾಣುತ್ತದೆ, ಹಾಗೆಯೇ ಅವರ ಡಾನ್ಸ್ ಸ್ಟೆಪ್ಪ್ಗಳ ಮೂಲಕ ಅಪ್ಪು ಪರದೆಯಲ್ಲಿ ಮಿಂಚಿದ್ದಾರೆ.
ಈ ಸಿನಿಮಾದಲ್ಲಿ ಹೆಚ್ಚಾಗಿ ವಿಲನ್ ಗಳಿದ್ದಾರೆ, ಶ್ರೀಕಾಂತ್, ಆರ್ ಶರ್ಟ್ ಕುಮಾರ್, ಮುಕೇಶ ರಿಷಿ, ಆದಿತ್ಯ ಮೆನನ್ ಮೊದಲಾದವರು ವಿಲನ್ ಆಗಿ ಅಭಿಮಾನಿಗಳ ಮನಸೆಳೆದಿದ್ದಾರೆ.James Kannada Movie Review
ಸಾಧುಕೋಕಿಲ,ಅನು ಪ್ರಭಾಕರ್ ಮೊದಲಾದವರು ಈ ಸಿನಿಮಾದಲ್ಲಿ ಪಾತ್ರವಹಿಸಿದ್ದು, ಶೈನ್ ಶೆಟ್ಟಿ, ಚಿಕ್ಕಣ್ಣ, ತಿಲಕ್, ಹರ್ಷ ಈ ನಾಲ್ಕು ಜನ ಪುನೀತ್ ಸ್ನೇಹಿತರ ಪಾತ್ರವಹಿಸಿ ಜನರ ಗಮನ ಸೆಳೆದಿದ್ದಾರೆ.
ರಾಘವೇಂದ್ರ ರಾಜಕುಮಾರ್ ಹಾಗು ಶಿವರಾಜ್ ಕುಮಾರ್ ಪಾತ್ರವವನ್ನು ಚಿತ್ರಮಂದಿರದಲ್ಲೇ ಕಣ್ತುಂಬಿಕೊಳ್ಳಬಹುದು.
ಸಂಗೀತ ಮೂಲಕ ನಿರ್ದೇಶಕ ಚರಣ್ ರಾಜ್ ಸಂಗೀತದ ಮೂಲಕ ಚಿತ್ರವನ್ನು ಗಮನ ಸೆಳೆದಿದ್ದಾರೆ.james
ಸ್ವಾಮಿ ಗೌಡ ಛಾಯಾಗ್ರಹಣ ಚಿತ್ರದ ಅಂದ ಹೆಚ್ಚಿಸಿದ್ದು, ಕಾರ್ ಚೇಸಿಂಗ್ ದೃಶಗಳನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ.
ಕೆಲವು ದೃಶಗಳಿಗೆ ಕತ್ತರಿ ಹಾಕುವ ಅವಕಾಶ ಸಂಕಲನಕಾರ ದೀಪು ಎಸ್.ಕುಮಾರ್ ಅವರಿಗೆ ಇತ್ತು.
ಚಿತ್ರ ತಂಡ
ಕಲಾವಿದರು : ಪುನೀತ್ ರಾಜಕುಮಾರ್, ಪ್ರಿಯಾ ಆನಂದ್, ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಶರತ್ ಕುಮಾರ್, ಅನುಪ್ರಭಾಕರ್ ಮೊದಲಾದವರು.kannada james movie
ನಿರ್ದೇಶನ : ಚೇತನ್ ಕುಮಾರ್
ಗಾಯಕರು : ಚರಣ್ ರಾಜ್
ನಿರ್ಮಾಣ : ಕಿಶೋರ ಪ್ರೊಡಕ್ಷನ್ಸ್