
james-teaser
ಜೇಮ್ಸ್ ಟೀಸರ್
ಪುನೀತ್ ರಾಜ್‌ಕುಮಾರ್ ಅಭಿನಯದ ‘ಜೇಮ್ಸ್’ ಚಿತ್ರವನ್ನು ನೋಡಲು ಸಿನಿ ಪ್ರೇಮಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಈಗಾಗಲೇ ಚಿತ್ರದ ಪೋಸ್ಟರ್ಗಳು ತುಂಬಾ ನಿರೀಕ್ಷೆ ಹುಟ್ಟಿಸಿವೆ, ಗಣರಾಜ್ಯೋತ್ಸವ ಸಂದರ್ಭದಲ್ಲಿ ಪುನೀತ್ ಸೈನಿಕನ ಗೆಟಪ್ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು.
ಇದೀಗ ಚಿತ್ರತಂಡ ಮೊದಲೇ ತಿಳಿಸಿದಂತೆ ಟೀಸರ್ ರಿಲೀಸ್ ಮಾಡಿದೆ, ಟೀಸರ್ ಅಭಿಮಾನಿಗಳ ಮನಗೆಲ್ಲುತ್ತಿದ್ದು, ಮೋಡಿ ಮಾಡುತ್ತಿದೆ.
1 ನಿಮಿಷ 27 ಸೆಕೆಂಡ್ಗಳ ಟೀಸರ್‌ನಲ್ಲಿ ‘ಜೇಮ್ಸ್’ನ ಒಂದು ಸಣ್ಣ ಪರಿಚಯವಿದೆ, ಪಕ್ಕಾ ಆಕ್ಷನ್ ಪ್ಯಾಕ್ ಸಿನಿಮಾ ಇದಾಗಿರಲಿದೆ ಎನ್ನುವದಕ್ಕೆ ಟೀಸರ್ ಸಾಕ್ಷಿ ಒದಗಿಸಿದೆ.
ಅಪ್ಪುಗೆ ಶಿವಣ್ಣ ಕಂಠದಾನ ಮಾಡಿದ್ದು, ಒಂದು ಪವರ್ಫುಲ್ ಡೈಲಾಗ್ ಕೂಡ ಟೀಸರ್ನಲ್ಲಿದೆ. ‘ಭಾವನೆಗಳು ಬ್ಯುಸಿನೆಸ್ಗಿಂತ ದೊಡ್ಡದು- ಜೇಮ್ಸ್’ ಎಂಬ ಬರಹವನ್ನು ಟೀಸರ್‌ನಲ್ಲಿ ತೋರಿಸಲಾಗಿದೆ.
ಈ ಮೂಲಕ ಜೇಮ್ಸ್ ಪಾತ್ರವೂ ಹೀಗೆಯೇ ಇರಲಿದೆ ಎಂಬುವುದನ್ನು ಚಿತ್ರತಂಡ ಪರೋಕ್ಷವಾಗಿ ತಿಳಿಸಿದೆ,ಡಾರ್ಕ್ ಮಾರ್ಕೆಟ್ ಕುರಿತ ಕತೆಯನ್ನು ಚಿತ್ರ ಒಳಗೊಂಡಿರಲಿದೆ ಎಂಬ ಸುಳಿವೂ ಇದೆ.
ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ಜೇಮ್ಸ್‌ನ ಪವರ್ ಪ್ಯಾಕ್ಡ್ ಟೀಸರ್ ಇಂದು ಬಿಡುಗಡೆಯಾಗಿದೆ.
ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅಭಿನಯದ ಚಿತ್ರವು ಅವರ ಜನ್ಮದಿನದಂದು ಮಾರ್ಚ್ 17 ರಂದು ತಮಿಳು, ಹಿಂದಿ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
ಅಪ್ಪು ಅವರ ಅಕಾಲಿಕ ಮರಣದಿಂದ ಮೌನದ ಗುಂಗಿನಲ್ಲಿದ್ದ ಅಭಿಮಾನಿಗಳಿಗೆ ಜೇಮ್ಸ್ ಟೀಸರ್ ಹರುಷವು ತಂದಿದೆ,ಅವರ ಅಭಿನಯಕ್ಕೆ ಮತ್ತೊಮ್ಮೆ ಸಲಾಂ ಹೊಡೆದಿದ್ದಾರೆ.
ಬೆಳ್ಳಿ ಪರದೆಯ ಮೇಲೆ ಧೊಡ್ಮನೆಯ ಮೂವರ ಸಹೋದರರನ್ನು ಮೊದಲ ಬಾರಿಗೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಚಿತ್ರ ತಂಡವು ಅಪ್ಪು ಅವರ ಜನ ದಿನಕ್ಕೆ ಜೇಮ್ಸ್ ಚಿತ್ರ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ, ಜನ್ಮ ದಿನದಂದು ಮತ್ತೊಮ್ಮೆ ಅವರನ್ನು ಪರದೆಯ ಮೇಲೆ ನೋಡಬಹುದು.
ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಜೇಮ್ಸ್ ಚಿತ್ರಕ್ಕೆ ಸಹೋದರನಾದ ನಟ ಶಿವರಾಜ್ ಕುಮಾರ್ ಅವರು ದ್ವನಿಯನ್ನು ನೀಡಿದ್ದಾರೆ.
ಜೇಮ್ಸ್ ಚಿತ್ರದ ಬಗ್ಗೆ
ಸೆಕ್ಯೂರಿಟಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುವ ಜೇಮ್ಸ್ ಸಂತೋಷ್ ಕುಮಾರ್ ಎಂಬ ಪಾತ್ರದ ಸುತ್ತ ಕಥೆ ಸುತ್ತುತ್ತದೆ.
ಟೀಸರ್‌ನಲ್ಲಿ ಪುನೀತ್ ರಾಜ್‌ಕುಮಾರ್ ಅತ್ಯಂತ ಆಕರ್ಷಕವಾಗಿ ಕಾಣಿಸಿಕೊಂಡಿದ್ದರಿಂದ ಅವರ ಅಭಿಮಾನಿಗಳು ಭಯಗೊಂಡಿದ್ದಾರೆ.
ಪ್ರಿಯಾ ಆನಂದ್ ನಾಯಕಿ, ನಟರಾದ ಶರತ್ ಕುಮಾರ್, ಶ್ರೀಕಾಂತ್ ಆದಿತ್ಯ ಮೆನನ್, ಮುಖೇಶ್ ರಿಸಿ, ರಂಗಾಯಣ ರಘು, ಅವಿನಾಶ್, ಸಾಧು ಕೋಕಿಲ, ಚಿಕ್ಕಣ್ಣ, ಅನು ಪ್ರಭಾಕರ್, ಸುಚೇಂದ್ರ ಪ್ರಸಾದ್, ಮತ್ತು ಕೇತನ್ ಕರಂಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರವನ್ನು ಚೇತನ್ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ.
ಜೇಮ್ಸ್ ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಹಾಗು ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮೊದಲ ಬಾರಿಗೆ ಮೂವರು ರಾಜ್‌ಕುಮಾರ್ ಸಹೋದರರು ತೆರೆಯು ಹಂಚಿಕೊಂಡಿರುವುದು ವೀಕ್ಷಕರ ನಿರೀಕ್ಷೆಯನ್ನು ಹೆಚ್ಚಿಸಿದೆ.
ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ, ಡಾ.ರವಿ ವರ್ಮಾ, ರಾಮ್ ಲಕ್ಷ್ಮಣ್, ಚೇತನ್ ಡಿ’ಸೋಜಾ, ಅರ್ಜುನ್ ಮಾಸ್ಟರ್ ಮತ್ತು ವಿಜಯ್ ಮಾಸ್ಟರ್ ಸಾಹಸ ಸಂಯೋಜನೆ ಮಾಡಿದ್ದಾರೆ.
ಸ್ವಾಮಿ ಜೆ ಗೌಡ ಅವರ ಛಾಯಾಗ್ರಹಣವಿದೆ.