
ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಯುದ್ಧದ ಹಾದಿಯಲ್ಲಿರುವ ಸಮಯದಲ್ಲಿ, ಜೆಡಿಎಸ್ ತನ್ನ ಪದಾಧಿಕಾರಿಗಳನ್ನು ತೊಡಗಿಸಿಕೊಂಡಿದೆ ಮತ್ತು ನೀರಿನ ಸಂಬಂಧಿತ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಶನಿವಾರ ತನ್ನ ‘ಜನತಾ ಜಲಧಾರೆ’ ಅಭಿಯಾನವನ್ನು ಪ್ರಾರಂಭಿಸಿದೆ.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮಂಡ್ಯದ ಕೃಷ್ಣರಾಜ ಸಾಗರದಿಂದ (ಕೆಆರ್ಎಸ್) ನೀರು ಸಂಗ್ರಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಆಲಮಟ್ಟಿ ಅಣೆಕಟ್ಟೆಗೆ ಭೇಟಿ ನೀಡಿದ್ದಾರೆ.
ಪೂರ್ಣ ಜನಾದೇಶದೊಂದಿಗೆ ಜೆಡಿಎಸ್ ಅಧಿಕಾರಕ್ಕೆ ಬಂದರೆ, ಬಾಕಿ ಉಳಿದಿರುವ ಎಲ್ಲಾ ನದಿ ನೀರು ಯೋಜನೆಗಳನ್ನು ನಿಗದಿತ ಸಮಯದಲ್ಲಿ ಜಾರಿಗೊಳಿಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಕನಕಪುರ ತಾಲೂಕಿನ ಮೇಕೆದಾಟು ಅನಿತಾ ಕುಮಾರಸ್ವಾಮಿ, ಹಾಸನದ ಹೇಮಾವತಿಯಲ್ಲಿ ಹೆಚ್.ಡಿ.ರೇವಣ್ಣ, ಚಿಕ್ಕಬಳ್ಳಾಪುರ ವಿಧುರಾಶ್ವತದಲ್ಲಿ ನಿಖಿಲ್, ಮಾಂಜ್ರಾ ನದಿಯಲ್ಲಿ ಬಂಡೆಪ್ಪ ಕಾಶೆಂಪೂರ್, 15 ನದಿಗಳಿಂದ ಏಕಕಾಲಕ್ಕೆ ನೀರು ಸಂಗ್ರಹಿಸಲಾಗುವುದು.

ಭೀಮೆಯಲ್ಲಿ ನಾಗನಗೌಡ ಕುಂದಕೂರ, ಟಿಬಿ ಡ್ಯಾಂನಲ್ಲಿ ವೆಂಕಟರಾವ್ ನಾಡಗೌಡ, ಕೊಡಗಿನ ತಲಕಾವೇರಿಯಲ್ಲಿ ಸಾ.ರಾ.ಮಹೇಶ್, ಎತ್ತಿನಹೊಳೆಯಲ್ಲಿ ಎಚ್.ಕೆ.ಕುಮಾರಸ್ವಾಮಿ ಮತ್ತು ಕಬಿನಿಯಲ್ಲಿ ಅಶ್ವಿನ್ ಕುಮಾರ್.
ಕಬಿನಿ ಜಲಾಶಯದಲ್ಲಿ ಜನತಾ ಜಲಧಾರೆ ವಾಹನಕ್ಕೆ ಪೂಜೆಯನ್ನು ಸಲ್ಲಿಸುವ ಮೂಲಕ ಯಾತ್ರೆಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಚಾಲನೆ ನೀಡಿದರು.
ಬೀಚನಹಳ್ಳಿ ಸರ್ಕಾರಿ ಶಾಲಾ ಆವರಣದ ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯ್ತು. ಎಂಎಲ್ಎ ಎಂ.ಅಶ್ವಿನ್ ಕುಮಾರ್, ಎಂಎಲ್ಸಿ ಸಿ.ಎನ್. ಮಂಜೇಗೌಡ, ಮಾಜಿ ಶಾಸಕರಾದ ಟಿ.ಬಿ.ಚಿಕ್ಕಣ್ಣ, ಶರವಣ ಸೇರಿ ಸ್ಥಳೀಯ ಮುಖಂಡರು ಭಾಗವಹಿಸಿದರು.
ನಾಳೆಯಿಂದ ಮಂಡ್ಯ ಜಿಲ್ಲೆಯಲ್ಲಿ 7 ದಿನಗಳ ಕಾಲ ಜಲಧಾರೆ ವಾಹನ ಸಂಚಾರ ನಡೆಯಲಿದೆ, ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ದೇವೇಗೌಡರು, ರಾಜ್ಯದಲ್ಲಿ ಜಲ ಸಂಪನ್ಮೂಲಕ್ಕೆ ಕೊರತೆಯಿಲ್ಲ.

ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಬಿಜೆಪಿ- ಕಾಂಗ್ರೆಸ್ ಸಹಕಾರ ಕೊಡುತ್ತಿಲ್ಲ ಎಂದು ಬೇಸರವನ್ನು ಹೊರ ಹಾಕಿದರು.
ಕಾವೇರಿ, ಕಬಿನಿ, ಕೃಷ್ಣ ಸೇರಿದಂತೆ ಬಹುತೇಕ ಅಂತರ್ ರಾಜ್ಯ ನದಿಗಳು, ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಮಾಡಬೇಡಿ ಅಂತ ನಾನು ರಾಜ್ಯಸಭೆಯಲ್ಲಿ ಕೈಮುಗಿದು ಮನವಿಯನ್ನು ಮಾಡಿದೆ.
ಯಾವ ಪಕ್ಷದವರೂ ನನಗೆ ಸಹಕಾರ ಕೊಡಲಿಲ್ಲ, ನಮ್ಮದು ಪ್ರಾದೇಶಿಕ ಪಕ್ಷ. ಜನರಲ್ಲಿ ಜಾಗೃತಿ ಬಂದರೆ ಸಹಜವಾಗಿ ಒಳ್ಳೆಯ ಆಯ್ಕೆ ಮಾಡುತ್ತಾರೆ. ಆದ್ದರಿಂದ ಜಲಧಾರೆ ಯಾತ್ರೆ ಮೂಲಕ ಜನ ಜಾಗೃತಿಯನ್ನು ಮೂಡಿಸುತ್ತಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದವರು ಏನು ಮಾಡಿಲ್ಲ?
ಇದೇ ಸಮಯದಲ್ಲಿ ಪರ್ಸೆಂಟೇಜ್ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿದ ದೇವೇಗೌಡರು, ರಾಜಕಾರಣದಲ್ಲಿ ಯಾರೂ ಸತ್ಯವಂತರು ಎಂದು ಪ್ರಶ್ನೆ ಮಾಡಿದರು.
ಅವರ ಮೇಲೆ ಇವರು, ಇವರ ಮೇಲೆ ಅವರು ಮಾತನಾಡುತ್ತಿರುತ್ತಾರೆ, ಆದರೆ ಕಾಂಗ್ರೆಸ್ ಪಕ್ಷದವರು ಏನೂ ಮಾಡಿಯೇ ಇಲ್ವೇ ?
ಯಾರು ಸಾಚ ಇದ್ದಾರೆ ಹೇಳಿ ಎಂದು ತಿರುಗಿ ಪ್ರಶ್ನೆ ಮಾಡಿದರು, ಕಾಂಗ್ರೆಸ್ ಸರ್ಕಾರ ಇದ್ದಾಗ 10 % ಸರ್ಕಾರ ಅಂತ ಪ್ರಧಾನಿಯೇ ಆರೋಪವನ್ನು ಮಾಡಿದ್ರು.
ಆಗಲೂ ಕೂಡ ನಾನು ಆರೋಪ ಮಾಡಲಿಲ್ಲ, ಈಗಲೂ ಅಷ್ಟೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ಕೊಡುವುದಿಲ್ಲ.
ರಾಜಕೀಯದಲ್ಲಿ ಭ್ರಷ್ಟಾಚಾರ ಎಲ್ಲ ಕಡೆ ತುಂಬಿ ಹೋಗಿದೆ, ರಾಜಕಾರಣ ಹೇಳಲಾಗದಷ್ಟು ಕೆಟ್ಟು ಹೋಗಿದೆ ಎಂದು ಬೇಸರದ ಮಾತುಗಳನ್ನು ಆಡಿದರು.
ರಾಜ್ಯದಲ್ಲಿ ಯಾರೂ ಒಂದಾಗಲ್ಲ
ನೀರಿನ ವಿಚಾರ ಬಂದಾಗ ತಮಿಳುನಾಡಿನ ಎಲ್ಲ ಪಕ್ಷಗಳೂ ಒಂದಾಗುತ್ತವೆ, ಆದರೆ ನಮ್ಮ ರಾಜ್ಯದಲ್ಲಿ ಯಾರೂ ಕೂಡ ಒಂದಾಗಲ್ಲ.
ಪಂಚ ರತ್ನ, ಮಹದಾಯಿ ಸಾಕಷ್ಟು ನೋವಿದೆ, ಜಲ ಸಂಪನ್ಮೂಲ ಸಚಿವರು ನನಗೆ ಮೂರು ಸಲ ಅಪಾಯಿಂಟ್ಮೆಂಟ್ ಕೊಟ್ಟರು. ಮನೆಗೆ ಹೋದಾಗ ಚಕ್ಕರ್ ಎಂದು ಅಸಮಾಧಾನವನ್ನು ಹೊರ ಹಾಕಿದರು.
ಜನತಾ ಜಲಧಾರೆ-Janata Jaladhare

ಬಿಜೆಪಿ ಜತೆ ಚುನಾವಣಾ ಪೂರ್ವ ಮೈತ್ರಿ ವಿಷಯಕ್ಕೆ ಪ್ರತಿಕ್ರಿಯಿಸಿ, ಕೆಲವರು ಉತ್ಪ್ರೇಕ್ಷೆಯಿಂದ ಮಾತನಾಡುತ್ತಾರೆ.
ಜೆಡಿಎಸ್ ಕಾರ್ಯಕ್ರಮಗಳನ್ನು ನೋಡಿ ಒಂದಲ್ಲಾ ಒಂದು ಬಣ್ಣ ಕಟ್ಟುತ್ತಾರೆ, ಆದರೆ ನಮ್ಮ ಜತೆ ಬಿಜೆಪಿಯ ಯಾರಾದರೂ ಇಲ್ಲಿಗೆ ಬಂದಿದ್ದಾರಾ? ಸುಮ್ನೆ ಯಾರೋ ಏನೋ ಹೇಳ್ತಾರೆ ಹೇಳಲಿ ಬಿಡಿ.
ಗುತ್ತಿಗೆದಾರರ ಸಂಘದಿಂದ ಪರ್ಸೆಂಟೇಜ್ ಆರೋಪ ಪ್ರತಿಕ್ರಿಯಿಸಲು ದೇವೇಗೌಡರು ನಿರಾಕರಣೆ ಮಾಡಿದರು.
ಇದು ನನಗೆ ಸಂಬಂಧವಿಲ್ಲ, ನನ್ನ ಮಗ ಪಿಡಬ್ಲ್ಯೂಡಿ ಮಿನಿಸ್ಟರ್ ಆಗಿದ್ದಾನ, ನೀರಾವರಿ ಸಚಿವ ಆಗಿದ್ದಾನಾ.?. ನನ್ನ ಮಗ ಸಚಿವ ಆಗಿದ್ರೆ ಅದರ ಬಗ್ಗೆ ಮಾತನಾಡುತ್ತಿದ್ದೆ.
ಅವರು ಆರೋಪ ಮಾಡಿಕೊಳ್ಳಲಿ ಬಿಡಿ ನಮಗೇನು ಎಂದರು, ನನಗೆ ತಲೆಯಲ್ಲಿ ಶಕ್ತಿ ಇದೆ ಆದರೆ ಕಾಲಿನಲ್ಲಿ ಇಲ್ಲ ಎಂದು ಹೇಳಿದರು.

ರಾಜ್ಯದ ಜನರಲ್ಲಿ ನಾನು ವಿನಂತಿ ಮಾಡುತ್ತೇನೆ, ಏಕೆಂದರೆ ನಾವೆಲ್ಲ ರೈತರ ಮಕ್ಕಳು. ಅಧಿಕಾರಕ್ಕೆ ದೇವೇಗೌಡರು ಹೋರಾಟ ಮಾಡಲ್ಲ.
ಜೀವಿತ ಜಾಲದಲ್ಲಿ ನನ್ನ ಹೋರಾಟಕ್ಕೆ ಫಲ ಸಿಕ್ಕಿಲ್ಲ ಅನ್ನೋ ಸಂಕಷ್ಟವಿದೆ, ಕುಮಾರಸ್ವಾಮಿ ಅವರ ಮೆದುಳಿನ ಕೂಸು ಜನತಾ ಜಲಧಾರೆ ಕಾರ್ಯಕ್ರಮವಾಗಿದೆ.
ನಾನು ರೈತನಾಗಿ ನೀರಿನ ಹೋರಾಟದಲ್ಲಿ ಭಾಗವಹಿಸಿದ್ದೇನೆ. ನೀರಿಗಾಗಿ ಮುಂದಿನ ದಿನಗಳಲ್ಲಿ ಒಟ್ಟಾಗಿ ಹೋರಾಟ ಮಾಡಬೇಕಿದೆ ಎಂದು ಕರೆಯನ್ನು ಕೊಟ್ಟರು.