Anand Arya
ಆನಂದ ಆರ್ಯ
ಬಹಳಷ್ಟು ನಟ ನಟಿಯರ ಹಾಗೆ ಕಾಣುವ ವ್ಯಕಿಗಳು ತುಂಬಾ ಜನ ಇದ್ದಾರೆ, ಅವರಂತೆ ಕಾಣುವ , ಹೇರ್ ಸ್ಟೈಲ್, ನಡೆಯುವುದು, ಮಾತು ಇತ್ಯಾದಿ.
ಸಾಮಾನ್ಯವಾಗಿ ಹೇಳುವುದಾದರೆ ಖ್ಯಾತ ತಾರೆಯರಂತೆಯೇ ಇರುವ ವ್ಯಕ್ತಿಗಳು ಜನರ ಗಮನ ಸೆಳೆಯುತ್ತಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇರುವುದನ್ನೂ ನೀವು ನೋಡುತ್ತೀರಾ.
ಇದೀಗ ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಟರಂತೆಯೇ ಇರುವ ಕಲಾವಿದರೊಬ್ಬರು ಹೊಸ ಚಿತ್ರಕ್ಕೆ ನಾಯಕ ನಟರಾಗಿದ್ದಾರೆ.
ಹೌದು. ಸ್ಯಾಂಡಲ್ವುಡ್ ಪವರ್ಸ್ಟಾರ್ ಪುನೀತ್ ರಾಜಕುಮಾರ ಅವರಂತೆಯೇ ಇರುವ ಕಲಾವಿದ ಆನಂದ್ ಆರ್ಯ.
ಸದ್ಯಕ್ಕೆ ಇವರೇ ಎಲ್ಲೆಡೆ ಸಖತ್ ಸುದ್ದಿಯಲ್ಲಿದ್ದಾರೆ,ಅವರನ್ನು ನೋಡಿದರೆ ನೀವು ಒಂದು ಕ್ಷಣ ಅಪ್ಪುರಂತೆಯೇ ಇದ್ದಾರಲ್ಲಾ! ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬಹುದು.Anand Arya
ಪುನೀತ್ ಅವರಂತೆ ಹಾವ ಭಾವವಿದೆ, ಅವರಂತೆ ಮಾತನಾಡುತ್ತೀರಿ ಎಂದು ತುಂಬಾ ಜನರು ಆನಂದ್ ಆರ್ಯಗೆ ಹೇಳಿದ್ದಾರಂತೆ.
ಇದಕ್ಕೆ ಪ್ರತಿಕ್ರಿಯಿಸಿರುವ ಆನಂದ್ ಆರ್ಯ, ‘‘ಪುನೀತ್ ಸರ್ ನನಗೆ ಆದರ್ಶ, ಆದರೆ ಎಲ್ಲೂ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ’ಎಂದಿದ್ದಾರೆ.
ಇತ್ತೀಚೆಗಷ್ಟೇ ಆನಂದ್ ಆರ್ಯ ಅವರ ಹೊಸ ಸಿನಿಮಾದ ಮುಹೂರ್ತವಾಗಿದೆ, ಪುನೀತ್ ಭಾವಚಿತ್ರಕ್ಕೆ ನಮಿಸಿ ಚಿತ್ರದ ಮುಹೂರ್ತವನ್ನು ನಡೆಸಲಾಯಿತು.
“ಮಾರಕಾಸ್ತ್ರ” ಆನಂದ ಆರ್ಯ
ಸಂದಾಲ್ ವುಡ್ ನಲ್ಲಿ ವಿಭಿನ್ನ ಕತಾ ವಸ್ತುಗಳನ್ನು ಇಟ್ಟುಕೊಂಡು ಹೊಸ ಸಿನಿಮಾಗಳು ಸಾಲು ಸಾಲಾಗಿ ಬರುತ್ತಿವೆ.
ಅದೇ ರೀತಿ ಮಾರಕಾಸ್ತ್ರ ಸಿನಿಮಾದ ಮುಹೂರ್ತ ಕೂಡ ಇತ್ತೀಚೆಗೆ ನಡೆಯಿತು, ಆನಂದ ಆರ್ಯ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದು ಅವರಿಗೆ ಎರಡನೇ ಸಿನಿಮಾ, ನಿರ್ದೇಶಕನಾಗಿ ಗುರುಮೂರ್ತಿ ಸುನಾಮಿ ಆ್ಯಕ್ಷನ್ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಕೋಮಲ ನಟರಾಜ್ ಬಂಡವಾಳ ಹಾಕಿದ್ದಾರೆ.Anand Arya
ಮಿರಾಕಲ್ ಮಂಜು ಸಾಹಿತ್ಯವನ್ನು ಬರೆದು ಸಂಗೀತ ಕೂಡಾ ನೀಡುತ್ತಿದ್ದಾರೆ.
ಈ ಸಮಯದಲ್ಲಿ ಮಾತನಾಡಿದ ನಾಯಕ ಆನಂದ್ ಆರ್ಯ ತಮ್ಮ ನಿಜ ಜೀವನದ ಹಿನ್ನೆಲೆ ಹೇಳಿಕೊಂಡಿದ್ದಾರೆ.
ಅವರು ಇದಕ್ಕಿಂತ ಮೊದಲು ’ಛಾಯೆ’ ಎನ್ನುವ ಸಿನಿಮಾ ಮಾಡಿದ್ದರಂತೆ, ಅದಕ್ಕೂ ಮುನ್ನ ಇಂಟೀರಿಯರ್ ಡಿಸೈನರ್ ಆಗಿದ್ದರಂತೆ.
ಇದೀಗ ಒಂದೆರಡು ಪ್ರಾಜೆಕ್ಟ್ ಸಿಕ್ಕಿದೆ ಎಂದು ಆನಂದ್ ಹೇಳಿದ್ದಾರೆ, ಈ ಮಾರಕಾಸ್ತ್ರ ಸಿನಿಮಾ ಸಿಕ್ಕಿದ್ದು ಒಂದು ಎಂಟು ಹತ್ತು ತಿಂಗಳ ಹಿಂದೆ.
ಆಗ ಕತೆ ಕೇಳಿದಾಗ ಒಂದು ಐದು ಪ್ರತಿಶತ ಮಾತ್ರ ಅರ್ಥವಾಗಿತ್ತು, ಸಿನಿಮಾದ ಟೈಟಲ್ ‘ದೇಶದ ರಕ್ಷಣೆಗಾಗಿ’ ಎಂದು ಇದನ್ನು ಕೇಳಿ ಸಿನಿಮಾವನ್ನು ಒಪ್ಪಿಕೊಂಡೆ.
ಈ ಸಿನಿಮಾದ ಕುರಿತು ಮತ್ತಷ್ಟು ಹೇಳುವುದಾದರೆ ಇದು ಡಿಟೆಕ್ಟಿವ್ ಪಾತ್ರ.
ಹಾಡುಗಳು, ಸಾಹಿತ್ಯ ಎಲ್ಲವೂ ಬಹಳ ಅದ್ಭುತವಾಗಿ ಮೂಡಿಬಂದಿವೆ.
ಇದರ ಹಾಡನ್ನು ಕೇಳುತ್ತಾ ಎಲ್ಲೋ ಒಂದೆಡೆ ಅಪ್ಪು ಸರ್ ಬಹಳ ನೆನಪಾದರು ಎಂದು ಆನಂದ್ ಆರ್ಯ ಹೇಳಿದ್ದಾರೆ.
2000ನೇ ಕಾಲಘಟ್ಟದಲ್ಲೇ ಪುನೀತ್ ಸರ್ ಬಂದಿದ್ದರು ನಮಗೆ ಅವರು ಸ್ಫೂರ್ತಿ.Anand Arya
ಚಿತ್ರಕ್ಕಾಗಿ ತಮ್ಮಿಂದ ಏನು ಸಾಧ್ಯವಾಗುತ್ತದೋ ಅದನ್ನು ಕೊಡುತ್ತೇನೆ ಎಂದು ಹೇಳಿದ್ದಾರೆ.
ದೇಶಪ್ರೇಮ ಹಾಗೂ ಲೇಖನಿಯ ಶಕ್ತಿಯನ್ನು ‘ಮಾರಕಾಸ್ತ್ರ’ ಚಿತ್ರದಲ್ಲಿ ಕಟ್ಟಿಕೊಡಲಾಗುತ್ತದೆ ಎಂದು ಚಿತ್ರತಂಡ ಮಾಹಿತಿ ತಿಳಿಸಿದೆ.
ಮಾರ್ಚ್ ನಿಂದ ಚಿತ್ರದ ಶೂಟಿಂಗ್ಚಿತ್ರೀಕರಣ ಆರಂಭವಾಗಲಿದೆ, ಚಿತ್ರಕ್ಕೆ ಮಾಧುರ್ಯ ನಾಯಕಿಯಾಗಿದ್ದಾರೆ.
ಮತ್ತೆ ಶುರುವಾಗಿದೆ ಪುನೀತ್ ರಾಜಕುಮಾರ್ ಅಬ್ಬರ !-kannada james teaser