
Karnataka Education Department
ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಜಾ ಮಾಡಬೇಕು ಇದರ ಜೊತೆಗೆ ಪಠ್ಯವನ್ನು ಬದಲಿಸಬೇಕು ಎಂದು ಬೇಡಿಕೆಯನ್ನು ಕರವೇ ಇಟ್ಟಿದೆ.
ಮೇ 31ರ ಪ್ರತಿಭಟನೆಗೆ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ ಬದಲಿಸದೆ ಇದ್ದರೆ ಮುಂದಿನ ದಿನದಲ್ಲಿ ಹೋರಾಟದ ತೀವ್ರತೆ ಹೆಚ್ಚಿಸಲು ನಿರ್ಧಾರ ಕೈಗೊಳ್ಳಲಾಗುತ್ತದೆ.
ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಣೆಗೆ ವಿಪಕ್ಷಗಳು, ಎಡಪಂಥೀಯ ಚಿಂತರು ಹಾಗು ಬುದ್ಧಿಜೀವಿಗಳು ತೀವ್ರ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಸಾಹಿತಿ ದೇವನೂರು ಮಹದೇವ ಅವರ ತಮ್ಮ ಪಠ್ಯಕ್ಕೆ ನೀಡಿದ ಅನುಮತಿ ಹಿಂಪಡೆದುಕೊಳ್ಳುವ ಮೂಲಕ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಕರವೇ ನಾರಾಯಣಗೌಡರು ಸಹ ಟ್ವಿಟರ್ ನಲ್ಲಿ ಸರ್ಕಾರದ ವಿರುದ್ಧ ಆಕ್ರೋಶವು ಹೊರಹಾಕಿ, ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ರಚನೆಯಲ್ಲಿ ಸರ್ಕಾರ ಎಡವಿದೆ ಎಂದು ಆರೋಪ ಮಾಡಿದ್ದಾರೆ.
ಗುರುವಾರ ಎಲ್ಲಾ ಕರವೇ ಜಿಲ್ಲಾ ಪದಾಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದ ನಾರಾಯಾಣಗೌಡರು, ಮೇ 31ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದಾರೆ.
ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆಯು ನಡೆಯಲಿದೆ.
ಮೇ 31ರ ಗಡುವು
ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಜಾ ಮಾಡಬೇಕು ಮತ್ತು ಪಠ್ಯವನ್ನು ಬದಲಿಸಬೇಕು ಎಂದು ಬೇಡಿಕೆಯನ್ನು ಕರವೇ ಇರಿಸಿದೆ.
ಮೇ 31ರ ಪ್ರತಿಭಟನೆಗೆ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ ಬದಲಿಸದೆ ಇದ್ದರೆ ಮುಂದಿನ ದಿನದಲ್ಲಿ ಹೋರಾಟದ ತೀವ್ರತೆ ಹೆಚ್ಚಿಸಲು ನಿರ್ಧಾರ ಮಾಡಿದೆ.
ಪಠ್ಯ ಪರಿಷ್ಕರಣೆಗೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು, ವಿವಿಧ ಸಂಘಟನೆಗಳು ಸರ್ಕಾರಕ್ಕೆ ಮೇ 31ರವರೆಗೆ ಗಡುವು ನೀಡಿದೆ.
ಇನ್ನೂ ಈ ಪ್ರತಿಭಟನೆಗೆ ಸಾಹಿತಿಗಳು, ಚಿಂತಕರು ಮತ್ತು ಶಿಕ್ಷಣ ತಜ್ಞರ ಹೋರಾಟಕ್ಕೆ ಕರವೇ ಸಾಥ್ ನೀಡಲಿದ್ದಾರೆ.
ವಿದ್ಯಾರ್ಥಿ ಸಂಘಟನೆಗಳಿಂದಲೂ ಪ್ರತಿಭಟನೆ
ಇತ್ತ ಪಠ್ಯ ಪರಿಷ್ಕರಣೆ ಹಿಂಪಡೆಯುವಂತೆ ವಿವಿಧ ವಿಧ್ಯಾರ್ಥಿ ಸಂಘಟನೆಗಳಿಂದಲೂ ಕೂಡ ಪ್ರತಿಭಟನಾ ಧರಣಿಗೆ ಕರೆ ನೀಡಿವೆ.
ಮೇ 31 ರ ಪ್ರತಿಭಟನೆಯಲ್ಲಿ ಹಲವು ವಿದ್ಯಾರ್ಥಿ ಸಂಘಟನೆಗಳು ಭಾಗವಹಿಸಲಿವೆ.
SFI, NSUI, AISF, AISA, KVS, DSF, AIRSO, DVP, VBV, VJD ಹಾಗೂ ಬೆಂ ವಿವಿ ಸ್ನಾತಕೋತ್ತರ ಹಾಗು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಭಾಗಿಯಾಗಲಿದೆ.
ವಿವಿಧ ವಿದ್ಯಾರ್ಥಿ ಸಂಘಟನೆಗಳ ಜೊತೆಗೆ ಕರವೇ ನಾರಯಣಗೌಡ ಬಣದಿಂದಲೂ ಪ್ರತಿಭಟನೆ ಮಾಡಲಾಗುತ್ತಿದೆ.
ಹಳೆಯ ಪಠ್ಯಕ್ರಮ ಮುಂದುವರಿಸಲು ಒತ್ತಾಯ!
31 ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಹೋರಾಟ ಮಾಡಲು ಕರವೇ ನಿರ್ಧಾರ ಕೈಗೊಂಡಿದೆ.
31 ರೊಳಗೆ ಹೊಸ ಪಠ್ಯಕ್ರಮದ ಪರಿಷ್ಕರಣ ಸಮತಿಯನ್ನ ವಜಾ ಮಾಡುವಂತೆ ಗಡುವು ನೀಡಿದ್ದು, ಹಳೆಯ ಪಠ್ಯಕ್ರಮವನ್ನೇ ಮುಂದುವರಿಸಬೇಕು ಎಂದು ಕರವೇ ಮನವಿ ಮಾಡಿದೆ.
ಕರವೇ ನಾರಾಯಣಗೌಡರು ಹೇಳಿದ್ದೇನು?
ಕರ್ನಾಟಕದ, ಕನ್ನಡದ ಕೀರ್ತಿ ಶಿಖರಗಳಲ್ಲಿ ಒಬ್ಬರಾದ ಮೇರುಸಾಹಿತಿ ದೇವನೂರು ಮಹಾದೇವ.
ಹತ್ತನೇ ತರಗತಿಯಲ್ಲಿ ಪಠ್ಯಕ್ಕೆ ನೀಡಿದ್ದ ‘ಎದೆಗೆ ಬಿದ್ದ ಅಕ್ಷರ’ ಲೇಖನ ಹಿಂದಕ್ಕೆ ಪಡೆದಿರುವುದನ್ನು ಕೇಳಿ ಆಘಾತವಾಯಿತು ಎಂದು ನಾರಾಯಣಗೌಡರು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕ್ಷಣಕಾಲವೂ ತಡಮಾಡದೆ ಮಧ್ಯೆ ಪ್ರವೇಶಿಸಿ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡರು ಆಗ್ರಹಿಸಿದ್ದಾರೆ. ತಮ್ಮ ಪಠ್ಯವನ್ನು ಹಿಂದಕ್ಕೆ ಪಡೆದ ಘಟನೆ ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿ ನಡೆದಿದೆ ಕರ್ನಾಟಕ ಸರ್ಕಾರಕ್ಕೆ ಇದು ಶೋಭೆ ತರುವ ವಿಷಯವಲ್ಲ ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ನೇಮಕ ಮಾಡುವಾಗಲೇ ಸರ್ಕಾರ ಎಡವಿದೆ!
ಪಠ್ಯಪುಸ್ತಕವನ್ನು ಪುನರ್ ಪರಿಶೀಲನೆಗಾಗಿ ಸಮಿತಿ ನೇಮಕ ಮಾಡಿದಾಗಲೇ ಸರ್ಕಾರ ಕೂಡ ಎಡವಿದೆ.
ಸಮಿತಿಯು ಪಠ್ಯಪುಸ್ತಕ ನೇಮಕ ಮಾಡಲು ಬಲಪಂಥೀಯ ವಿದ್ವಾಂಸರು, ಶಿಕ್ಷಣ ತಜ್ಞರೇ ಬೇಕು ಎಂದಿದ್ದರೆ ಹಲವಾರು ಮಂದಿ ಸಜ್ಜನರು, ಎದೆಯಲ್ಲಿ ನಂಜು ಇಟ್ಟುಕೊಳ್ಳದೆ ಕಾರ್ಯ ನಿರ್ವಹಿಸುವವರು ಲಭ್ಯವಿದ್ದರು. ಆದರೆ ಸರ್ಕಾರ ಇಂಥವರನ್ನು ನೇಮಕ ಮಾಡದೆ ತಪ್ಪೆಸಗಿದೆ.