ಗೋಡ್ಸೆ ಬಗ್ಗೆ ಪಠ್ಯಪುಸ್ತಕದಲ್ಲಿ ಇರಬಹುದು? ಇದಕ್ಕೆ ಸಾಹಿತಿಗಳ ವಿರೋಧ!

School Syllabus

School Syllabus

ಕರ್ನಾಟಕದ ರಾಜ್ಯದ ಶಾಲಾ ವಿದ್ಯಾರ್ಥಿಗಳ ಪರಿಷ್ಕೃತ ಪಠ್ಯ ಪುಸ್ತಕ  ಈಗ ವಿವಾದಕ್ಕೆ ಕಾರಣವಾಗಿದ್ದು, ಪಠ್ಯ ಪುಸ್ತಕ ಮರು ಪರಿಷ್ಕರಣೆ  ಅಸಮರ್ಪಕವಾಗಿದೆ ಎಂಬ ಆಕ್ಷೇಪಗಳು ಕೇಳಿ ಬಂದಿವೆ.

ಯಾವುದೇ ಕಾರಣಕ್ಕೂ ಪರಿಷ್ಕೃತ ಪಠ್ಯ ಪುಸ್ತಕ ಜಾರಿಗೆ ತರಬಾರದು ಅಂತ ಆಗ್ರಹಿಸಿ ನಾಡಿನ ಹಲವು ಸಾಹಿತಿಗಳು, ಪ್ರಗತಿಪರ ಚಿಂತಕರು ರಾಜ್ಯ ಸರ್ಕಾರಕ್ಕೆ ಪತ್ರವನು ಬರೆಯುತ್ತಿದ್ದಾರೆ. 

‘ಶಿಕ್ಷಣ ಇಲಾಖೆ ಪಠ್ಯಪುಸ್ತಕ ಮರು ಪರಿಷ್ಕರಣೆ ಪ್ರಕ್ರಿಯೆ ಪೂರ್ವಗ್ರಹಪೀಡಿತವಾಗಿದೆ. ಇದೇ ಪದ್ಧತಿ ಮುಂದುವರಿದರೆ ಮುಂದೆ ಗೋಡ್ಸೆ ಕುರಿತ ಅಧ್ಯಾಯವು ಪಠ್ಯಪುಸ್ತಕಗಳಲ್ಲಿ ಸೇರಿಸುವ ದಿನಗಳು ದೂರವಿಲ್ಲ’ ಎಂದು ಸಾಹಿತಿಗಳು ಪತ್ರದಲ್ಲಿ ಆರೋಪ ಮಾಡಿದ್ದಾರೆ.

ಪಠ್ಯಪುಸ್ತಕ ಮರು ಪರಿಷ್ಕರಣೆ ಜಾರಿಯಾಗಬಾರದು ಅಂತ ಆಗ್ರಹ ಮಾಡಿ ಸುಮಾರು 71ಕ್ಕೂ ಹೆಚ್ಚು ಸಾಹಿತಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಈ ಪತ್ರಕ್ಕೆ ಕೆ.ಮರುಳಸಿದ್ದಪ್ಪ, ವಿಜಯಾ, ರಾಜೇಂದ್ರ ಚೆನ್ನಿ, ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ಟಿ.ಆರ್.ಚಂದ್ರಶೇಖರ್, ಹಿ.ಶಿ. ರಾಮಚಂದ್ರೇಗೌಡ.

ವಿ.ಪಿ. ನಿರಂಜನಾರಾಧ್ಯ, ಕಾಳೇಗೌಡ ನಾಗವಾರ, ಕುಂ.ವೀರಭದ್ರಪ್ಪ, ರಹಮತ್ ತರಿಕೆರೆ, ವಸಂತ ಬನ್ನಾಡಿ ಸೇರಿದಂತೆ ಸುಮಾರು 71 ಮಂದಿ ಒಪ್ಪಿಗೆ ಸೂಚಿಸಿದ್ದಾರೆ.

ಸಾಹಿತಿಗಳ ಆರೋಪ?

ಕನ್ನಡ ನಾಡಿನ ಅಸ್ಮಿತೆ, ಕನ್ನಡ ಭಾಷೆಯ ಘನತೆಗಳನ್ನು ಗಾಳಿಗೆ ತೂರುವ ರೋಹಿತ್ ಚಕ್ರತೀರ್ಥರವರ ಸಮಿತಿ, ಅದಕ್ಕೆ ಬದಲಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪಕರಲ್ಲಿ ಒಬ್ಬರಾದ ಹಡಗೇವಾರ್‌ರವರ ‘ನಿಜವಾದ ಆದರ್ಶ ಮರುಷ ಯಾರಾಗಬೇಕು’,

ಮತ್ತು ಬನ್ನಂಜೆ ಗೋವಿಂದಾಚಾರ್ಯ ಅವರ  ‘ಶುಕನಾಸನ ಉಪದೇಶ’ ಶತಾವಧಾನಿ ಗಣೇಶ್ ಅವರ  ‘ಶ್ರೇಷ್ಠ ಭಾರತೀಯ ಚಿಂತನೆಗಳು, ಶಿವಾನಂದ ಕಳವೆ ಅವರ ‘ಸ್ವದೇಶಿ ಸೂತ್ರದ ಸರಳ ಹಬ್ಬ’ ಪಠ್ಯಗಳನ್ನು ಸೇರಿಸಲಾಗಿದೆ.

ಯಾವ ಕಾರಣಕ್ಕೆ ಕನ್ನಡದ ಪ್ರಮುಖ ಲೇಖಕ, ಲೇಖಕಿಯರ ಪಠ್ಯಗಳನ್ನು ಕೈ ಬಿಟ್ಟಿದ್ದಾರೆ ಎನ್ನುವುದಕ್ಕೆ ಯಾವುದೇ ಕಾರಣಗಳನ್ನು ಕೊಟ್ಟಿಲ್ಲ ಅಂತ ಪತ್ರದಲ್ಲಿ ಆರೋಪ ಮಾಡಿದ್ದಾರೆ.

ಹೆಗಡೆವಾರ್ ಭಾಷಣ ಸೇರ್ಪಡೆಗೆ ವಿರೋಧ

ಶಿಕ್ಷಣ ತಜ್ಞರಲ್ಲದ, ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಸಂಶೋಧನೆ ಕೈಗೊಳ್ಳದ ರೋಹಿತ್‌ ಚಕ್ರತೀರ್ಥರವರನ್ನು ಯಾವ ಮಾನದಂಡದಲ್ಲಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ?

ಈ ಪ್ರಶ್ನೆಗೆ ಸಂಬಂಧಪಟ್ಟವರು ಯಾರು ಉತ್ತರ ನೀಡಿಲ್ಲ, ಈ ಸಮಿತಿ ಏಕಪಕ್ಷೀಯವಾಗಿ 10ನೇ ತರಗತಿಯ ಪಠ್ಯ ಪರಿಷ್ಕರಿಸಲಾಗಿದೆ’ ಎಂದು ಹೇಳಿದ್ದಾರೆ.

ಹೆಡಗೇವಾರ್ ಅವರ ಭಾಷಣವನ್ನು ಸೇರಿಸುವುದರ ಕಾರಣ ಮಾತ್ರ ಹೇಳದೇ ಹೋದರೂ ಅರ್ಥವಾಗುತ್ತದೆ, ಆದರೆ ಒಟ್ಟಾರೆಯಾಗಿ ಇಲ್ಲಿ ಯಾವುದೇ ರೀತಿಯ ಪಾರದರ್ಶಕತೆ ಕಂಡು ಬರುತ್ತಿಲ್ಲ ಅಂತ ಸಾಹಿತಿಗಳು ಆರೋಪ ಮಾಡಿದ್ದಾರೆ.

ಪರಿಷ್ಕರಣಾ ಸಮಿತಿ ಅಧ್ಯಕ್ಷರ ವಿರುದ್ಧ ಆಕ್ರೋಶ!

ಆರ್‌ಎಸ್‌ಎಸ್‌ ಸಂಸ್ಥಾಪಕ ಕೆ.ಬಿ.ಹೆಡಗೇವಾರ್ ಅವರ ಭಾಷಣವನ್ನು ಪಠ್ಯದಲ್ಲಿ ಸೇರಿಸಿರುವುದನ್ನು ಸಮರ್ಥಿಸಿಕೊಂಡಿರುವ ಸಚಿವರು, ಜವಾಬ್ದಾರಿಯುತ ಹಾಗು ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಂಡಿಲ್ಲ ಅಂತ ಸಾಹಿತಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು ಉಡಾಫೆಯಿಂದ ಮಾತನಾಡಿದ್ದಾರೆ ಪತ್ರದಲ್ಲಿ ಕೂಡ ದೂರಿದ್ದಾರೆ.

“ಪಠ್ಯಪುಸ್ತಕದಲ್ಲಿ ಬದಲಾವಣೆ ಮಾಡಬಾರದು”

ಯಾವುದೇ ಕಾರಣಕ್ಕೂ ಪಠ್ಯಪುಸ್ತಕದಲ್ಲಿ ಬದಲಾವಣೆ ಮಾಡಬಾರದು’ ಎಂದು ಪತ್ರದಲ್ಲಿ ಆಕ್ಷೆಪ ಮಾಡಿರುವ ಸಾಹಿತಿಗಳು, ಪಠ್ಯಪುಸ್ತಕಗಳ ರಚನೆ ಹಾಗು ಪರಿಷ್ಕರಣೆ ಶಿಕ್ಷಣ ತಜ್ಞರ ಮೂಲಕವೇ ನಡೆಯಬೇಕು.

ಚುನಾವಣಾ ಆಯೋಗದಂತೆ ಪಠ್ಯ ಪುಸ್ತಕಗಳ ರಚನೆ & ಪರಿಶೀಲನೆಗೆ ಒಂದು ಸ್ವಾಯತ್ತ ಆಯೋಗ ರಚಿಸಬೇಕು ’ ಎಂದು ಸಲಹೆಯನ್ನು ನೀಡಿದ್ದಾರೆ.

ಬೀದರ ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿಯ ಶಾಕ್!-Bidar ACB Raid News

https://jcs.skillindiajobs.com/

Social Share

Leave a Reply

Your email address will not be published. Required fields are marked *