ರಾಜ್ಯ ಬಜೆಟನಲ್ಲಿ ಕೃಷಿ ಕ್ಷೇತ್ರಕ್ಕೆ ಎಷ್ಟು ಆಧ್ಯತೆ!

Karnataka State Farming Budget 2022

ಕೃಷಿ ಕ್ಷೇತ್ರದ ಬಜೆಟ

ಶ್ರೀ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022-2023ನೇ ಸಾಲಿನ ತಮ್ಮ ಮೊದಲ ರಾಜ್ಯ ಬಜೆಟ್ ಮಂಡನೆ ಮಾಡಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ 33,700 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ.

ಈ ಬಾರಿಯ ಬಜೆಟ್ ಗಾತ್ರ ಕಳೆದ ಬಾರಿಗಿಂತ ಶೇ. 7.7 ಹೆಚ್ಚಾಗಿದೆ.

ಈ ಬಾರಿ 2,53,165 ಕೋಟಿ ರೂ. ಬಜೆಟ್​ ಮಂಡನೆ ಮಾಡಿದ್ದು ಈ ಪೈಕಿ 33,700 ಕೋಟಿ ರೂಪಾಯಿ ಕೃಷಿ ಕ್ಷೇತ್ರಕ್ಕೆ ಮೀಸಲು ಇಟ್ಟಿದ್ದಾರೆ.

ರೈತ ಶಕ್ತಿಯ ಯೋಜನೆ, ಯಶಸ್ವಿ ಯೋಜನೆ ಮೊದಲಾದ ಪ್ರಸ್ತಾಪ ಮಾಡಿದ್ದಾರೆ.

ಡಿಸೇಲ್‌ ಸಹಾಯಧನ, ಮಿನಿ ಆಹಾರ ಪಾರ್ಕ್ ನಿರ್ಮಾಣ, ಬಡ್ಡಿ ರಿಯಾಯಿತಿ ಯೋಜನೆ, ಗ್ರಾಮೀಣ ರೈತರಿಗೆ ಆರೋಗ್ಯ ಸೇವೆ, ಹೈಟೆಕ್‌ ಸರ್ಕಾರಿ ರೇಷ್ಮೇ ಗೂಡು ಮಾರುಕಟ್ಟೆ ನಿರ್ಮಾಣ.

ರೇಷ್ಮೆ ತರಬೇತಿಯ ಕೇಂದ್ರ, ಪಶುಚಿಕಿತ್ಸಾಲಯ, ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ಮೊದಲಾದವುಗಳನ್ನು ಘೋಷಣೆ ಮಾಡಲಾಗಿದೆ.

ಹಾಗಾದರೆ ಕೃಷಿ ಕ್ಷೇತ್ರಕ್ಕೆ ಒಟ್ಟಾಗಿ ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಿ ನೀಡಿದ್ದು ಏನು ಎಂಬ ಬಗ್ಗೆ ತಿಳಿಯಲು ಮುಂದೆ ಓದಿ….

ಕೃಷಿ ಕ್ಷೇತ್ರಕ್ಕೆ ನೀಡಿದ್ದೇನು?

01. ರೈತ ಶಕ್ತಿಯ ನೂತನ ಯೋಜನೆಯಡಿ ಕೃಷಿ ಯತ್ರೋಪಕರಣಗಳ ಬಳಕೆ ಉತ್ತೇಜನಕ್ಕೆ ಪ್ರತಿ ಎಕರೆಗೆ 250 ರೂಪಾಯಿಗಳಂತೆ ಡೀಸೆಲ್ ಸಹಾಯಧನ, 600 ಕೋಟಿ ರೂಪಾಯಿ ಅನುದಾನ

02. ಕೆಪೆಕ್‌ ಮೂಲಕ ಕೃಷಿ ಉತ್ಪನ್ನಗಳ ಕೊಯ್ಲಿನೋತ್ತರ ನಿರ್ವಹಣೆ, ಮಾರಾಟ ಹಾಗೂ ರಫ್ತು ಮಾಡಲು 50 ಕೋಟಿ ರೂಪಾಯಿ ಹಂಚಿಕೆ.

03. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಪಿಪಿಪಿ ಮಾದರಿಯಲ್ಲಿ ಮಿನಿ ಆಹಾರ ಪಾರ್ಕ್ ಸ್ಥಾಪನೆ.state agreeculture budget

04. ದ್ರಾಕ್ಷಿ ಬೆಳೆಯ ಸಂಗ್ರಹಣೆ, ಸಂಸ್ಕರಣೆ ಮತ್ತು ಸಾಗಾಣಿಕೆಗೆ ವಿಜಯಪುರ ಜಿಲ್ಲೆ, ತೊರವಿಯಲ್ಲಿ 35 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಶೈತ್ಯ ಸಂಗ್ರಹ ಸ್ಥಾಪನೆಯ ವ್ಯವಸ್ಥೆ.

ಹಾಗೂ ಶೀತಲೀಕೃತ ಸರಕು ಸಾಗಣೆ ವಾಹನದ ಪೂರೈಕೆ

05. ಬಡ್ಡಿ ರಿಯಾಯಿತಿ ಯೋಜನೆಯಡಿ ಮೂರು ಲಕ್ಷ ಹೊಸ ರೈತರೂ ಸೇರಿದಂತೆ 33 ಲಕ್ಷ ರೈತರಿಗೆ 24,000 ಕೋಟಿ ಸಾಲ ವಿತರಣೆಯ ಗುರಿ

06. ಗ್ರಾಮೀಣ ರೈತರಿಗೆ ಆರೋಗ್ಯ ಸೇವೆಯನ್ನು ಒದಗಿಸಲು ಪರಿಷ್ಕೃತ ರೂಪದಲ್ಲಿ ಯಶಸ್ವಿನಿ ಯೋಜನೆ ಮರು ಜಾರಿ ಮಾಡಲಾಗುತ್ತದೆ.

07. ರಾಜ್ಯ ಸರ್ಕಾರದಿಂದ ಯಶಸ್ವಿನಿ ಯೋಜನೆಗೆ 300 ಕೋಟಿ ರೂಪಾಯಿಯು  ಅನುದಾನವನ್ನು ಮಾಡಲಾಗಿದೆ.

08. 57 ತಾಲ್ಲೂಕುಗಳಲ್ಲಿ 642 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ

09. ಜಲಾನಯನ ಅಭಿವೃದ್ಧಿಯ ಘಟಕ 2.0 ಜಾರಿ.Karnataka State Farming Budget 2022

10.ಬಳ್ಳಾರಿ ಜಿಲ್ಲೆಯ ಹಗರಿ ಹಾಗೂ ಬೆಳಗಾವಿ ಜಿಲ್ಲೆ, ಅಥಣಿಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆ

ನೀರಾವರಿ ಯೋಜನೆಗಳಿಗೆ ಕೊಟ್ಟಿದ್ದೇನು?

01. ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಮಾರಾಟವನ್ನು ಮಾಡುವ ಪ್ರತಿ ಟನ್‌ ದ್ವಿತಳಿ ರೇಷ್ಮೆಗೂಡಿಗೆ ಹತ್ತು ಸಾವಿರ ರೂಪಾಯಿ ಪ್ರೋತ್ಸಾಹದ ಧನ.agreeculture budget 2022

02. ದ್ವಿತಳಿ ಮೊಟ್ಟೆ ಉತ್ಪಾದಿಸಿ ಶೈತೀಕರಿಸಲು ಮದ್ದೂರು, ರಾಣೆಬೆನ್ನೂರು ಹಾಗೂ ದೇವನಹಳ್ಳಿಯಲ್ಲಿ 15 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಶೈತ್ಯಾಗಾರ ನಿರ್ಮಾಣ

03. ಕಲಬುರಗಿ ಹಾಗೂ  ಹಾವೇರಿ ಜಿಲ್ಲೆಯಲ್ಲಿ ಮೂವತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್‌ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ

04. ದ್ವಿತಳಿ ಭಿತ್ತನೆ ಗೂಡಿಗೆ ಪ್ರತಿ ಕೆಜಿಗೆ 50,000 ರೂ. ಪ್ರೋತ್ಸಾಹಧನವನ್ನು ಅಧಿಕ ಮಾಡಲಾಗುತ್ತದೆ

05. ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಪ್ರೋತ್ಸಾಹ ಧನ

06. ಮಂಡ್ಯ ಜಿಲ್ಲೆ, ಕೆಆರ್‌ ಪೇಟೆಯಲ್ಲಿ ರೇಷ್ಮೆಯ ತರಬೇರತಿ ಕೇಂದ್ರ

07. ನೂರು ನೂತನ ಪಶುಚಿಕಿತ್ಸಾಲಯಗಳ ಪ್ರಾರಂಭ.cm bommayi karnataka

08. ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯವನ್ನು ನೀಡಲು ರಾಜ್ಯದಲ್ಲಿ ಮೊದಲ ಬಾರಿಗೆ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್‌ ಸ್ಥಾಪನೆ

09. ಈ ಬ್ಯಾಂಕ್‌ಗೆ ರಾಜ್ಯ ಸರ್ಕಾರದಿಂದ ನೂರು ಕೋಟಿ ರೂಪಾಯಿ ಬಂಡವಾಳ ಹೂಡಿಕೆ

10. ರಾಜ್ಯದಲ್ಲಿ ಇರುವ ಗೋಶಾಲೆಗಳ ಸಂಖ್ಯೆಯನ್ನು ನೂರಕ್ಕೆ ಏರಿಕೆ ಮಾಡಲಾಗುತ್ತದೆ

11. ರಾಜ್ಯದಲ್ಲಿ ಗೋಶಾಲೆಗಳಿಗೆ ಐವತ್ತು ಕೋಟಿ ರೂಪಾಯಿ ಅನುದಾನ.cm bommayi

12. ಗೋಶಾಲೆಗಳಲ್ಲಿನ ಗೋವುಗಳ ದತ್ತು ಪಡೆಯುವುದನ್ನು ಪ್ರೋತ್ಸಾಹಿಸಲು ರಾಜ್ಯದಲ್ಲಿ ಮೊದಲ ಬಾರಿಗೆ ಪುಣ್ಯಕೋಟಿ ದತ್ತು ಯೋಜನೆಗೆ ಚಾಲನೆ

13. ಹಾವೇರಿಯಲ್ಲಿ ಮೆಗಾಡೈರಿ ಸ್ಥಾಪನೆ.Karnataka State Farming Budget 2022

14. ಶಿವಮೊಗ್ಗ, ದಾವಣಗೆರೆ-ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ

15. ಆಕಸ್ಮಿಕವಾಗಿ ಕುರಿ/ಮೇಕೆ ಮರಣ ಹೊಂದಿದರೆ ಸಾಕಣಿಕೆದಾರರು ಅಥವಾ ವಲಸೆ ಕುರಿಗಾರರ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ವಿಮಾನ ಸೌಲಭ್ಯ.karnataka cm basavaraj bommayi budget

16. ಆಳ ಸಮುದ್ರ ಮೀನುಗಾರಿಕೆ ಉತ್ತೇಜನಕ್ಕೆ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಸಂಯೋಜನೆಯೊಂದಿಗೆ ನೂರು ಆಳ ಸಮುದ್ರ ಮೀನುಗಾರಿಕಾ ಹಡಗುಗಳಿಗೆ ನೆರವು ನೀಡಲು ಮತ್ಸ್ಯಸಿರಿ ಯೋಜನೆ ಜಾರಿ

ಬಜೆಟ್ನಲ್ಲಿ ಮೇಕೆದಾಟು ಯೋಜನೆಗೆ 1 ಸಾವಿರ ಕೋಟಿ ಘೋಷಣೆ!

https://www.google.com/search?q=way2plot&oq=w&aqs=chrome.1.69i60j69i59l3j69i60l4.1015j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *