
KGF 2 Collection
ಕನ್ನಡ ‘ಕೆಜಿಎಫ್ 2‘ ಬಾಕ್ಸಾಫೀಸ್‌ನಲ್ಲಿ ಸುನಾಮಿಯನ್ನು ಎಬ್ಬಿಸಿದೆ, ವಿಶ್ವದಾದ್ಯಂತ ಈ ಸಿನಿಮಾ ಕಲೆಕ್ಷನ್ ನಲ್ಲಿ ಬ್ರೇಕ್ ಹಾಕುವುದಕ್ಕೆ ಸಾಧ್ಯವಾಗುತ್ತಿಲ್ಲ.
ಕೇವಲ 4 ದಿನಗಳಲ್ಲಿಯೇ ‘ಕೆಜಿಎಫ್ 2‘ ಭರ್ಜರಿ ಗಳಿಕೆಯನ್ನು ಕಂಡಿದ್ದು, ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಮೂರು ದಿನಗಳಿಗೆ 400 ಕೋಟಿ ಲೂಟಿ ಮಾಡಿದೆ.
ಹೀಗಾಗಿ 4ನೇ ದಿನದ ಗಳಿಕೆ ಮೇಲೆ ಎಲ್ಲರೂ ಕಣ್ಣಿಟ್ಟಿದ್ದಾರೆ.
ನಾಲ್ಕನೇ ದಿನ ಅಂದ್ರೆ, ಭಾನುವಾರ (ಏಪ್ರಿಲ್ 17) ರಂದು ‘ಕೆಜಿಎಫ್ 2’ ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದೂ, ನಾಲ್ಕು ದಿನಗಳಲ್ಲಿಯೇ ಹಿಂದೆಂದೂ ಮಾಡದ ಸಾಧನೆಯನ್ನು ಕನ್ನಡ ಪ್ಯಾನ್ ಇಂಡಿಯಾ ಚಿತ್ರ ಮಾಡಿದೆ.
ಬಾಲಿವುಡ್, ಟಾಲಿವುಡ್, ಕಾಲಿವುಡ್, ಸಿನಿಮಾಗಳ ದಾಖಲೆಗೆ ತುಂಬಾ ಪೈಫೋಟಿಯನ್ನು ನೀಡಿದೆ.

ಈ ಚಿತ್ರವೂ ‘ಕೆಜಿಎಫ್ 2’ ಮೊದಲ ನಾಲ್ಕು ದಿನಗಳ ರಜೆಯನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದು, ವಿಶ್ವದ ಹಲವುಕಡೆ ‘ಕೆಜಿಎಫ್ 2’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಇದರ ಮೂಲಕ RRR ಚಿತ್ರದ ಗಳಿಕೆಗೆ ‘ಕೆಜಿಎಫ್ 2’ ಟಕ್ಕರ್ ಕೊಡುವ ಎಲ್ಲಾ ಸಾಧ್ಯತೆಗಳು ಕೂಡ ಇವೆ. ಹಾಗಾದ್ರೆ, ನಾಲ್ಕು ದಿನಗಳಲ್ಲಿ ಈ ಸಿನಿಮಾ ಗಳಿಸಿದ್ದೆಷ್ಟು? ತಿಳಿಯಲು ಮುಂದೆ ಇನ್ನಷ್ಟು ಓದಿ.
ಬಾಕ್ಸಾಫೀಸ್‌ನಲ್ಲಿ ಧೂಳಿಪಟ!
ಕೆಜಿಎಫ್.. ಕೆಜಿಎಫ್.. ಕೆಜಿಎಫ್.. ಬೇಡ ಅಂದುಕೊಂಡರೂ ಕೆಜಿಎಫ್ ಚಿತ್ರವೇ ಬಿಡುತ್ತಿಲ್ಲ. ವಿಶ್ವದ ಮೂಲೆ ಮೂಲೆಯಲ್ಲೂ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್’ ಬೇಜಾನ್ ಸದ್ದನ್ನು ಮಾಡುತ್ತಿದೆ.

ರಾಜ್ಯ ಅಲ್ಲ. ದೇಶ ಅಲ್ಲ. ಇಡೀ ವಿಶ್ವದ ಬಾಕ್ಸಾಫೀಸ್ ಅನ್ನೇ ದರೋಡೆ ಮಾಡುತ್ತಿದೆ, ಕನ್ನಡದ ಸಿನಿಮಾವೊಂದು ಹಿಂದೆಂದೂ ಈ ಮಟ್ಟಿಗೆ ಸದ್ದು ಮಾಡಿರಲಿಲ್ಲ.
KGF 2 ಮೆಗಾ ಸಕ್ಸಸ್‌ಗೆ ಇಡೀ ಸ್ಯಾಂಡಲ್‌ವುಡ್ ಹಿಗ್ಗಿದೆ. ಕೇವಲ 4 ದಿನಗಳಲ್ಲಿ ‘ಕೆಜಿಎಫ್ 2’ ಸಿನಿಮಾ 550 ಕೋಟಿ ಬಾಚಿಕೊಂಡಿದೆ.
‘ಕೆಜಿಎಫ್ 2’ ಒಟ್ಟು ದಿನದ ಗಳಿಕೆ ಎಷ್ಟು?-
ಸ್ಯಾಂಡಲ್ವುಡ್ ‘ಕೆಜಿಎಫ್ 2’ ಸಿನಿಮಾ 4 ದಿನಗಳಲ್ಲಿ ಹೊಸ ಹೊಸ ದಾಖಲೆಗಳನ್ನು ಮಾಡುತ್ತಿದೆ. ಮೊದಲ ನಾಲ್ಕು ದಿನಗಳಲ್ಲಿ ಈ ಸಿನಿಮಾ 500 ಕೋಟಿ ಕ್ಲಬ್ ಸೇರಿದೆ. ವಿದೇಶದಿಂದಲೇ, ಅದೂ 3 ದಿನಗಳಲ್ಲಿ 81 ಕೋಟಿಯನ್ನು ಕಲೆಹಾಕಿದ್ದು, ಇದು ಕನ್ನಡ ಚಿತ್ರರಂಗದ ಪಾಲಿಗೆ ಹೊಸ ದಾಖಲೆಯೇ.

ಅಸಲಿಗೆ ಕಳೆದ 4 ದಿನಗಳಲ್ಲಿ ‘ಕೆಜಿಎಫ್ 2’ ಬಾಕ್ಸಾಫೀಸ್‌ನಲ್ಲಿ ಎಷ್ಟು ಗಳಿಸಿದೆ ಅನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
Day 1 165.37 Crore, Day 2 139.25 Crore, Day 3 115.08 Crore, Day 4 132.12 Crore, Total 551.83 Crore
ಹೆಚ್ಚು ಗಳಿಕೆ ಕಂಡ ವಿಶ್ವದ ಎರಡನೇ ಸಿನಿಮಾ ‘ಕೆಜಿಎಫ್ 2’
ಸಿನಿಮಾ ಈ ನಾಲ್ಕು ದಿನಗಳಲ್ಲಿ ಹಲವು ದಾಖಲೆಗಳನ್ನು ಇನ್ನು ಮಾಡುತ್ತಿದ್ದು, ಏಪ್ರಿಲ್ 15 ರಿಂದ 17ರವರೆಗೆ ಅತೀ ಹೆಚ್ಚು ಗಳಿಕೆ ಕಂಡ ವಿಶ್ವದ ಎರಡನೇ ಸಿನಿಮಾ ಎಂದು ಕಾಮ್‌ಸ್ಕೋರ್ ವರದಿಯು ಮಾಡಿದೆ.

ಕೇವಲ 19 ದೇಶಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಇಷ್ಟರಲ್ಲೇ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಟ್ರೇಡ್ ಅನಲಿಸ್ಟ್ ರಮೇಶ್ ಬಾಲ ಅವರು ಈ ಮಾಹಿತಿಯನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಹಿಂದಿ ಬೆಲ್ಟ್‌ನಲ್ಲಿ ಬಾಚಿದ್ದೆಷ್ಟು?-
ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ‘ಕೆಜಿಎಫ್ 2’ ಸೂಪರ್ ಕಲೆಕ್ಷನ್ ಮಾಡುತ್ತಿದೆ, ಮೊದಲ ದಿನವೇ 53 ಕೋಟಿ, ಎರಡನೇ ದಿನ 45.7 ಕೋಟಿ, ಮೂರನೇ ದಿನ 42.50 ಕೋಟಿ.
ನಾಲ್ಕನೇ ದಿನವೂ 45 ರಿಂದ 50 ಕೋಟಿ ಗಳಿಕೆ ಗಳಿಸಿರಬಹುದು ಎಂದು ಅಂದಾಜು ಮಾಡಲಾಗಿದೆ. ಹೀಗಾಗಿ ಕೇವಲ ಬಾಲಿವುಡ್‌ನಲ್ಲಿಯೇ 180 ರಿಂದ 190 ಕೋಟಿ ಗಳಿಕೆ ಕಂಡಿರಬಹುದು ಎಂದು ಅಂದಾಜಿದೆ.