Mohan Juneja
ಮೋಹನ್ ಜುನೇಜ
ನಟ ಮತ್ತು ಹಾಸ್ಯನಟ ಮೋಹನ್ ಜುನೇಜಾ ಇಂದು ಬೆಳಗ್ಗೆ ನಿಧನರಾಗಿದ್ದು, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಚಿಕಿತ್ಸೆಗೆ ಸ್ಪಂದಿಸದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೋಹನ್ ಅವರು ಹಾಸ್ಯನಟರಾಗಿ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿದ್ದಾರೆ, ಅವರ ವೃತ್ತಿಜೀವನದಲ್ಲಿ ಅವರು 100 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಅವರು ಸೂಪರ್ಹಿಟ್ ಚಿತ್ರ ಕೆಜಿಎಫ್: ಅಧ್ಯಾಯ 1 ಮತ್ತು ಕೆಜಿಎಫ್: ಅಧ್ಯಾಯ 2 ರಲ್ಲಿ ಕಾಣಿಸಿಕೊಂಡಿದ್ದಾರೆ, ಗಣೇಶ್ ಅವರ ವೃತ್ತಿಜೀವನದಲ್ಲಿ ಪ್ರಮುಖ ಬ್ರೇಕ್ ನೀಡಿದ ಚೆಲ್ಲಾಟದಲ್ಲಿ ಅವರ ಪಾತ್ರವು ಇನ್ನೂ ಪ್ರೇಕ್ಷಕರಿಂದ ನೆನಪಿನಲ್ಲಿದೆ.
ಇವರ ನಿಧನಕ್ಕೆ ಅಭಿಮಾನಿಗಳು ಮತ್ತು ಸ್ಯಾಂಡಲ್‌ವುಡ್ ಸಮುದಾಯದ ಸದಸ್ಯರು ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಸಂತಾಪವನ್ನು ಸೂಚಿಸುತ್ತ ಆಘಾತಕ್ಕೊಳಗಾಗಿದ್ದಾರೆ.
ಕನ್ನಡ ಸಿನಿಮಾ ಚಿತ್ರ ರಂಗದಲ್ಲಿ ಮಧು ಮಗ ಎಂದೇ ಖ್ಯಾತಿಯನ್ನು ಪಡೆದಿದ್ದ ಹಾಸ್ಯ ಕಲಾವಿದರಾಗಿದ್ದು, ಕನ್ನಡದ ಚೆಲ್ಲಾಟ , ಕೆಜಿಎಫ್ ಸೇರಿದಂತೆ ಹಲುವು ಸಿನಿಮಾ ಮತ್ತು ಕಿರುತೆರೆಯಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಪ್ರತಿಭಾವಂತ ನಟರಾಗಿದ್ದರು.
ಹೆಸರಾಂತ ಹಾಸ್ಯ ಕಲಾವಿದ ಶ್ರೀಯುತ ಮೋಹನ್ ಜುನೇಜ ಮೇ.06ರಂದು ಶುಕ್ರವಾರ ರಾತ್ರಿ ಅನಾರೋಗ್ಯದ ತೊಂದರೆಯಿಂದ ಚಿಕ್ಕಬಾಣಾವರ ಸಪ್ತಗಿರಿ ಆಸ್ಪತ್ರೆಯಲ್ಲಿ ಇವರನ್ನು ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಮೇ.7ರಂದು ಅವರು ನಿಧನರಾಗಿದ್ದು, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಜೋಗಿ ಸಿನಿಮಾ ಸೇರಿದಂತೆ ಹಲವು ಸಿನಿಮಾ ಹಾಗು ಧಾರವಾಹಿಗಳಲ್ಲಿ ನಟಿಸಿದ್ದ ಕಲಾವಿದ, ತನ್ನ ದೇಹದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
ಮೋಹನ್ ಜುನೇಜಾ ಒಬ್ಬ ಭಾರತೀಯ ಚಲನಚಿತ್ರ ನಟ, ಹಾಗು ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕೆಲಸ ಮಾಡಿದ್ದಾರೆ.
ನೂರಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಮೋಹನ್ ಜುನೇಜ ಚೆಲ್ಲಾಟ ಚಿತ್ರದ ಮಧುಮಗ ಪಾತ್ರ ಮೋಹನ್ ಅವದಿಗೆ ಹೆಚ್ಚು ಖ್ಯಾತಿಯನ್ನು ತಂದು ಕೊಟ್ಟಿತ್ತು.
ಇದಾದ ನಂತ್ರ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಮೋಹನ ಹಾಸ್ಯ ನಟನಾಗಿ ಅಭಿನಯಿಸಿದ್ದಾರೆ.
ವಯಕ್ತಿಕ ಜೀವನ ಹಿನ್ನೆಲೆ
ಅಷ್ಟೇ ಅಲ್ಲದೆ, ಸ್ಯಾಂಡಲ್‌ವುಡ್‌ನ ಅನೇಕ ನಾಯಕ ನಟರ ಜೊತೆ ತೆರೆ ಹಂಚಿಕೊಂಡ ಖ್ಯಾತಿ ಇವರದ್ದಾಗದೆ.
ಮೋಹನ್ ಅವರು ತಮ್ಮ ಕುಟುಂಬದೊಂದಿಗೆ ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿದ್ದರು. ಸದ್ಯ ಅವರ ಪಾರ್ಥೀವ ಶರೀರವನ್ನು ನಿವಾಸಕ್ಕೆ ಕೊಂಡೊಯ್ಯಲಾಗಿದೆ.
ಮೋಹನ್ ಅವರು ಭಾರತದ ಚಲನಚಿತ್ರ ನಟ, ಕನ್ನಡ ಚಲನಚಿತ್ರಗಳಲ್ಲಿನ ಕೆಲಸಕ್ಕಾಗಿ ಹೆಸರು ವಾಸಿಯಾಗಿದ್ದರು, ಭಾರತದ ತಮಿಳುನಾಡಿನಲ್ಲಿ ಹುಟ್ಟಿ ಬೆಳೆದರು.
ಹದಿಹರೆಯದಲ್ಲಿ, ಮೋಹನ್ ನಟನೆಯಿಂದ ಆಕರ್ಷಿತರಾದರು ಮತ್ತು ಪ್ರದರ್ಶನ ವ್ಯವಹಾರದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ನಿರ್ಧಾರ ಮಾಡಿದರು, ಕಾಲೇಜಿನಲ್ಲಿದ್ದಾಗಲೇ ಮೋಹನ್ ಕಾಲೇಜು ನಾಟಕದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
2008 ರ ಕನ್ನಡ ಪ್ರಣಯ ಚಿತ್ರ ಸಂಗಮದಲ್ಲಿ ಪಾದಾರ್ಪಣೆಯನ್ನು ಮಾಡಿದರು, ಹಾಗೆಯೇ ಚಿತ್ರದ ನಿರ್ದೇಶಕ ರವಿವರ್ಮ ಗುಬ್ಬಿ 2009 ರಲ್ಲಿ, ಟ್ಯಾಕ್ಸಿ ನಂಬರ್ ಎಂಬ ಕನ್ನಡ, ತಮಿಳು ಚಿತ್ರದಲ್ಲಿ ನಟಿಸಿದರು.
2010 ರಲ್ಲಿ, ಮೋಹನ್ ನಾರದ ವಿಜಯ ಎಂಬ ಕನ್ನಡ ಭಾಷೆಯ ನಾಟಕದಲ್ಲಿ ಅಭಿನಯಿಸಿದ್ದಾರೆ.
“ಕೆಜಿಎಫ್ 2” ನಲ್ಲೂ ಅಭಿನಯ
ಹಲವಾರು ಚಿತ್ರಗಳಲ್ಲಿ ಹಾಸ್ಯ ನಟರಾಗಿ ನಟನೆ ಮಾಡಿದ್ದಾರೆ ಮತ್ತು ಇತ್ತೀಚಿಗೆ ಬಿಡುಗಡೆಯಾದ ನಮ್ಮ ಕನ್ನಡ ಹೆಮ್ಮೆಯ ಸಿನಿಮಾ ಕೆಜಿಎಫ್ ಚಿತ್ರದಲ್ಲೂ ಮೋಹನ್ ಜುನೇಜ ಬಣ್ಣ ಹಚ್ಚಿದ್ದಾರೆ.
ಮೋಹನ್ ಅವರು ತಾಯಿ ,ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಖ್ಯಾತ ನಟ ಶಿವಕುಮಾರ್ ಸುಬ್ರಮಣ್ಯಂ ನಿಧನ!-Shivakumar Subramanyam Death