
kisan drones
ಪ್ರಧಾನಮಂತ್ರಿ ನರೇಂದ್ರ ಮೋದಿ
ಫೆ.18 ನಿನ್ನೆ ಭಾರತದ ವಿವಿಧ ನಗರಗಳು, ಪಟ್ಟಣಗಳಲ್ಲಿ 100 ಕಿಸಾನ್ ಡ್ರೋನ್ಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆಯನ್ನು ತೋರಿದರು.
ಕೃಷಿ ಭೂಮಿಗಳಿಗೆ ಕೀಟನಾಶಕ ಸಿಂಪಡಣೆ ಮಾಡುವ ಡ್ರೋನ್ಗಳು ಇವಾಗಿದ್ದು, ಇದರಿಂದ ರೈತರಿಗೆ ತುಂಬ ಅನುಕೂಲವಾಗಲಿವೆ.
ಹಾಗೆಯೇ ಆಧುನಿಕ ಕೃಷಿ ಪದ್ಧತಿಯ ನಿರ್ಮಾಣ ಅಡಿಯಲ್ಲಿ ಇದೊಂದು ಹೊಸ ಅಧ್ಯಾಯವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
100 ಕಿಸಾನ್ ಡ್ರೋನ್ಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮೋದಿ, ಈ ಮೊದಲು ಡ್ರೋನ್ ಕೇವಲ ಸೇನೆಗೆ ಸಂಬಂಧಪಟ್ಟಿದ್ದು.kisan drones
ವೈರಿಗಳ ಜೊತೆ ಹೋರಾಡಲು ಬಳಸಲಾಗುತಿತ್ತು, ಆದರೆ ಪ್ರಸ್ತುತ 21ನೇ ಶತಮಾನದಲ್ಲಿ ಆಧುನಿಕ ಕೃಷಿ ಪದ್ಧತಿಯೆಡೆಗಿನ ಒಂದು ಹೆಜ್ಜೆಯಾಗಿ ಪರಿಗಣಿಸಲ್ಪಟ್ಟಿದೆ.
ಈ ಕಿಸಾನ್ ಡ್ರೋನ್ಗಳಿಂದಾಗಿ ಡ್ರೋನ್ ವಲಯದ ಅಭಿವೃದ್ಧಿಯಲ್ಲಿ ಮೈಲಿಗಲ್ಲು ಸೃಷ್ಟಿಯಾಗುವ ಜೊತೆಗೆ, ಅನಂತ ಅವಕಾಶಗಳು ಸೃಷ್ಟಿಯಾಗುತ್ತವೆ ಎಂಬ ಬಗ್ಗೆ ನನಗೆ ಭರವಸೆ ಇದೆ ಎಂದು ಹೇಳಿದರು.
ಪ್ರಧಾನಿ ಮೋದಿ ಈ ವರ್ಷದ ಗಣರಾಜ್ಯೋತ್ಸವ ಬೀಟಿಂಗ್ ರಿಟ್ರೀಟ್ ಆಚರಣೆಯಲ್ಲಿ 100 ಡ್ರೋನ್ಗಳು ಪ್ರದರ್ಶನ ನೀಡಿದ್ದವು.
ಹಾಗೇ, ಮುಂದಿನ ಎರಡು ವರ್ಷಗಳಲ್ಲಿ ಗರುಡಾ ಏರೋಸ್ಪೇಸ್ ಸುಮಾರು 1 ಲಕ್ಷ ಡ್ರೋನ್ಗಳ ತಯಾರಿಕೆಯ ಗುರಿ ಹೊಂದಿದೆ ಎಂಬ ಮಾಹಿತಿಯನ್ನು ನನಗೆ ತಿಳಿಸಲಾಗಿದೆ.
ಇದು ಯುವಜನರಿಗೆ ಉದ್ಯೋಗಾವಕಾಶ ನೀಡುತ್ತದೆ, ಅಷ್ಟೇ ಅಲ್ಲ ಸಂಶೋಧನಾಸಕ್ತರಿಗೂ ಹೊಸ ಅವಕಾಶ ತೆರೆದುಕೊಳ್ಳಲಿದೆ ಎಂದರು.
ರೈತರಿಗೆ ಸಹಾಯವಾಗಲು ಕಿಸಾನ್ ಡ್ರೋನ್ ಗಳನ್ನೂ ನಿನ್ನೆ ಪ್ರಧಾನಿ ಮೋದಿಯವರು ಇದಕ್ಕೆ ಚಲನೆಯನ್ನು ನೀಡಿದ್ದಾರೆ.
ದೇಶದಲ್ಲಿ ಸ್ವಾಮಿತ್ವ ಯೋಜನೆಯಡಿ, ಡ್ರೋನ್ ಮೂಲಕ ಭೂ ದಾಖಲೀಕರಣವನ್ನು ಮಾಡಲಾಗುತ್ತಿದೆ.
ಈ ಬಾರಿ ಕೊರೊನಾ ಲಸಿಕೆ ಅಭಿಯಾನ ಶುರುವಾದಾಗ ಅದೆಷ್ಟೋ ಪ್ರದೇಶಗಳಿಗೆ ಡ್ರೋನ್ ಮೂಲಕವೇ ಔಷಧಗಳು, ಲಸಿಕೆಗಳನ್ನು ಕೊಡಲಾಗಿದೆ.kisan drones
ಈ ಮಧ್ಯೆ ಕೃಷಿಯಲ್ಲೂ ಡ್ರೋನ್ ಬಳಕೆ ಪ್ರಾರಂಭವಾಗಿದ್ದು ತುಂಬ ಸಂತೋಷದ ಸಂಗತಿಯಾಗಿದೆ.
ಬೆಳೆಗಳಿಗೆ ಕೀಟನಾಶಕ ಸಿಂಪಡಿಸಲು, ಕೀಟನಾಶಕ ಸಾಗಿಸಲು ಡ್ರೋನ್ ಬಳಕೆ ಮಾಡುತ್ತಿರುವುದು ಖಂಡಿತ ಹೊಸ ವಿಧಾನ ಎಂದೂ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಸ್ತುತ 2022-23ನೇ ಬಜೆಟ್
ಬಜೆಟ್ಸಮಯದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೃಷಿ ವಲಯದ ಆಧುನಿಕತೆಗೆ ಒತ್ತುಕೊಡುವುದಾಗಿ ಹೇಳಿದ್ದರು.
ಕೃಷಿ ವಲಯದ ಆಧುನಿಕರಣಕ್ಕಾಗಿ ಕೇಂದ್ರ ಸರ್ಕಾರ ಕಿಸಾನ್ ಡ್ರೋನ್ಗಳಿಗೆ ಉತ್ತೇಜನ ನೀಡಲಿದೆ ಎಂದರು.
ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ರೈತರಿಗೆ ಡಿಜಿಟಲ್ ಮತ್ತು ಹೈಟೆಕ್ ಸೇವೆಗಳನ್ನು ನೀಡುತ್ತೇವೆ ಎಂದೂ ಹೇಳಿದ್ದರು.kisan drones
ಅಷ್ಟೇ ಅಲ್ಲ, ಬೆಳೆ ಮೌಲ್ಯಮಾಪನ, ಭೂ ದಾಖಲೆಗಳ ಡಿಜಿಟಲೀಕರಣ ಮಾಡಲು, ಬೆಳೆಗಳಿಗೆ ಕೀಟನಾಶಕಗಳು, ಪೋಷಕಾಂಶಗಳ ಸಿಂಪಡಣೆ ಮಾಡಲು ಕಿಸಾನ್ ಡ್ರೋನ್ಗಳನ್ನು ಬಳಸಿಕೊಳ್ಳಲಾಗುವುದು ಎಂದೂ ಹೇಳಿದ್ದರು.