ಹಿಜಾಬ್ ಹಿನ್ನೆಲೆಯಲ್ಲಿ ಮುಖದ ಸ್ಕಾರ್ಫ್ ಬ್ಯಾನ್ ಮಾಡಿದ ರಾಷ್ಟ್ರಗಳ ಪಟ್ಟಿ!

Hijab Bans Countries

ಬೆಂಗಳೂರು

ದೇಶಾದ್ಯಂತ ಪರಿಣಾಮ ಬೀರದ ಹಿಜಾಬ್ ವಿವಾದಕ್ಕೆ ಸ್ವಲ್ಪ ಮಟ್ಟಿಗೆ ತೆರೆಬಿದ್ದಂತಾಗಿದೆ, ಕರ್ನಾಟಕ ಹೈಕೋರ್ಟ್ ಮಂಗಳವಾರ ಹಿಜಾಬ್ ವಿವಾದದ ತೀರ್ಪುನ್ನು ಪ್ರಕಟಿಸಿದೆ.hijab

ಕರ್ನಾಟಕ ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಹಿಜಾಬ್ ವಿವಾದ ನಿರ್ಬಂಧ ವಿಚಾರದಲ್ಲಿ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ.

ಶಾಲಾ ಕಾಲೇಜಿನ ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದೆ.

ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಹಿಜಾಬ್ ವಿವಾದ ಕುರಿತಂತೆ ಹೈಕೋರ್ಟ್ ನ ಪೂರ್ಣ ಪೀಠದ ತೀರ್ಪಿನಿಂದಾಗಿ ಸದ್ಯ ಒಂದು ಹಂತಕ್ಕೆ ತಲುಪಿದೆ.

ಆದರೆ ಈ ಕಾನೂನು ಹೋರಾಟ ಇಲ್ಲಿಗೆ ಮುಗಿಯವುದಿಲ್ಲ, ಇದು ಸುಪ್ರೀಂಕೋರ್ಟ್ ಗೆ ಹೋಗುವುದು ಖಚಿತವಾಗಿದೆ.

ಆದರೂ ಹೈಕೋರ್ಟ್ ಎಲ್ಲ ಸಾಂವಿಧಾನಿಕ, ಧಾರ್ಮಿಕ ಮತ್ತಿತರ ಸೂಕ್ಷ್ಮ ಅಂಶಗಳನ್ನು ಪರಿಶೀಲನೆ ಮಾಡಿ ಮಹತ್ವದ ತೀರ್ಪು ನೀಡಿದೆ.

ಅದರಲ್ಲಿ ನ್ಯಾಯಪೀಠ ಸತತ 11 ದಿನ ಆಲಿಸಿದ ವಾದ-ಪ್ರತಿವಾದಗಳನ್ನು ಆಧರಿಸಿ ನಾಲ್ಕು ಪ್ರಶ್ನೆಗಳನ್ನು ರಚಿಸಿ, ಅವುಗಳಿಗೆ ಸೂಕ್ತವಾದ ಉತ್ತರವನ್ನು ನೀಡಿದೆ.karnataka high court

ಹೈಕೋರ್ಟ್ ತೀರ್ಪಿನ ವಿರುದ್ಧ ಸಾಕಷ್ಟು ಪರ ಮತ್ತು ವಿರೋಧಗಳು ವ್ಯಕ್ತವಾಗಿವೆ, ಕೆಲವರು ಕೋರ್ಟ್ ತೀರ್ಪನ್ನು ಸ್ವಾಗತಿಸಿದರೆ ಇನ್ನೂ ಕೆಲವರು ತೀರ್ಪನ್ನು ಅಲ್ಲಗಳಿದಿದ್ದಾರೆ.hijabs

ರಾಜ್ಯದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧಾರ ಮಾಡಿದ್ದಾರೆ.

2002 ಜನವರಿ 1 ರಂದು ಉಡುಪಿಯ ಪ್ರಿ-ಯೂನಿವರ್ಸಿಟಿ ಕಾಲೇಜಿನ ಆರು ವಿದ್ಯಾರ್ಥಿನಿಯರು ಕರಾವಳಿ ಪಟ್ಟಣದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಕಾಲೇಜು ಅಧಿಕಾರಿಗಳು ಹಿಜಾಬ್ ಧರಿಸಿ ತರಗತಿಗೆ ಪ್ರವೇಶ ನಿರಾಕರಿಸುವುದನ್ನು ವಿರೋಧ ಮಾಡಿದರು, ತರಗತಿಗಳಲ್ಲಿ ಹಿಜಾಬ್ ಧರಿಸಲು ಅನುಮತಿಯನ್ನು ಕೋರಿದರು.Hijab Bans Countries

ಅಲ್ಲಿಯವರೆಗೆ ವಿದ್ಯಾರ್ಥಿಗಳು ಸ್ಕಾರ್ಫ್ ಧರಿಸಿ ಕ್ಯಾಂಪಸ್‌ಗೆ ಬರುತ್ತಿದ್ದರು, ಆದರೆ ಅದನ್ನು ತೆಗೆದು ತರಗತಿಗೆ ಪ್ರವೇಶ ಮಾಡುವಂತೆ ಹೇಳಿದ್ದಾರೆ.Hijab Bans Countries

ಕಾಲೇಜು ಪ್ರಾಂಶುಪಾಲರಾದ ರುದ್ರೇಗೌಡ ಮಾತನಾಡಿ ಕಳೆದ 35 ವರ್ಷಗಳಲ್ಲಿ ಯಾರೂ ಹಿಜಾಬ್ ಧರಿಸದೆ ವಿದ್ಯಾರ್ಥಿಗಳು ತರಗತಿಗೆ ಬರಬಾರದು ಎನ್ನುವ ನಿಯಮವನ್ನಾಗಲಿ ಸೂಚನೆಯನ್ನಾಗಲಿ ಸಂಸ್ಥೆಯು ನೀಡಿಲ್ಲ.

ಆದರೆ ಈ ಹಿಜಾಬ್ ಬೇಕು ಎನ್ನುವ ಪಟ್ಟಿನ ಬೇಡಿಕೆಯೊಂದಿಗೆ ಬಂದ ವಿದ್ಯಾರ್ಥಿಗಳಿಗೆ ಹೊರಗಿನ ಶಕ್ತಿಗಳ ಬೆಂಬಲವಿದೆ ಎಂದು ಹೇಳಿದರು.karnataka

ಬಳಿಕ ಹಿಜಾಬ್ ವರ್ಸಸ್ ಕೇಸರಿ ಸ್ಕಾರ್ಫ್ ಸಮಸ್ಯೆ ಕರ್ನಾಟಕದ ಹಲವು ಜಿಲ್ಲೆಯ ಭಾಗಗಳಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಹರಡಿತು.

ರಾಜ್ಯ ಸರ್ಕಾರವು ಫೆಬ್ರವರಿ 9 ರಿಂದ ಫೆಬ್ರವರಿ 15 ರವರೆಗೆ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ಹಾಗೂ ಫೆಬ್ರವರಿ 9 ರಿಂದ ಫೆಬ್ರವರಿ 16 ರವರೆಗೆ ಪದವಿ ಮತ್ತು ಡಿಪ್ಲೋಮಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಿತು.

ಹೈಕೋರ್ಟ್‌ನ ಪೂರ್ಣ ಪೀಠವು ಫೆಬ್ರವರಿ 10 ರಿಂದ ಪ್ರಕರಣದ ವಿಚಾರಣೆಯನ್ನು ದಿನನಿತ್ಯದ ಆಧಾರದ ಮೇಲೆ ನಡೆಯುತ್ತಿದೆ, ತನ್ನ ಮಧ್ಯಂತರ ಆದೇಶದಲ್ಲಿ, ಪೀಠವು ಆಂದೋಲನದಿಂದ ನಲುಗಿರುವ ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸುವಂತೆ ರಾಜ್ಯ ಸರ್ಕಾರವನ್ನು ಕೇಳಿದೆ ಮತ್ತು ತಡೆಯಾಜ್ಞೆ ನೀಡಿದೆ.news

ಮುಖಕ್ಕೆ ಸ್ಕಾರ್ಫ್ ಗಳನ್ನೂ ಬ್ಯಾನ್ ಮಾಡಿದ ದೇಶಗಳು

ನಂತರ ಹುಡುಗಿಯರು ಹಿಜಾಬ್ ಪರಿಹಾರ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಮೊರೆ ಹೋದರು, ಫೆಬ್ರವರಿ 5 ರಂದು ವಿದ್ಯಾರ್ಥಿಗಳು ಶಾಂತಿ, ಸೌಹಾರ್ದತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಬಟ್ಟೆಯನ್ನು ಧರಿಸುವುದನ್ನು ನಿರ್ಬಂಧಿಸುವ ಸರ್ಕಾರದ ಆದೇಶವನ್ನು ರದ್ದುಗೊಳಿಸಿದ್ದಾರೆ.

ಸದ್ಯ ಅಂತಿಮ ಆದೇಶವನ್ನು ಹೊರಬಂದಿದ್ದು ವಿದ್ಯಾರ್ಥಿಗಳು ತರಗತಿಯಲ್ಲಿ ಹಿಜಾಬ್ ಮತ್ತು ಕೇಸರಿ ಸ್ಕಾರ್ಫ್‌ಗಳನ್ನು ಧರಿಸುವಂತಿಲ್ಲ, ಹೀಗೆ ಹಲವಾರು ದೇಶಗಳು ಹಿಜಾಬ್ ಮುಖ ಮತ್ತು ತಲೆಯ ಹೊದಿಕೆಗಳನ್ನು ನಿಷೇಧ ಮಾಡಿವೆ.

01. ಫ್ರಾನ್ಸ್

02. ಸ್ವಿಟ್ಜರ್ಲೆಂಡ್ ೦

03. ಟರ್ಕಿ

04. ಡೆನ್ಮಾರ್ಕ್

05. ಬೆಲ್ಜಿಯಂ

06. ನೆದರ್ಲ್ಯಾಂಡ್ಸ್

07. ಇಟಲಿ

08. ಆಸ್ಟ್ರಿಯಾ

09. ಬಲ್ಗೇರಿಯಾ

10.ಶ್ರೀಲಂಕಾ

11.ರಷ್ಯಾ

ಮೋದಿ ಅವರ ರಾಜಕೀಯ ಪುಸ್ತಕ ಬಿಡುಗಡೆಗೆ ಸಜ್ಜು!-Modi@20 Book

https://jcs.skillindiajobs.com/

Social Share

Leave a Reply

Your email address will not be published. Required fields are marked *