LPG Good News
ನವದೆಹಲಿ
ನೀವೂ ಕೂಡ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಬುಕ್ ಮಾಡುತ್ತಿದ್ದರೆ ಖಂಡಿತಾ ಈ ಸುದ್ದಿ ಓದಲೇಬೇಕು, ಗ್ಯಾಸ್ ಸಿಲಿಂಡರ್ ಬುಕ್ ಮಾಡುವುದು ಈಗ ತುಂಬಾ ಸುಲಭವಾಗಿದೆ.
LPG ಸಂಪರ್ಕಕ್ಕಾಗಿ ಕೇವಲ ಒಂದು ಮಿಸ್ಡ್ ಕಾಲ್ ನೀಡಿದ ನಂತರ ನೀವು ಸುಲಭವಾಗಿ LPG ಸಂಪರ್ಕವನ್ನು ಪಡೆಯುತ್ತೀರಿ.
ಐಒಸಿ ಮಿಸ್ಡ್ ಕಾಲ್ ನಲ್ಲಿ ಗ್ಯಾಸ್ ಸಿಲಿಂಡರ್ ಸಂಪರ್ಕ ನೀಡುತ್ತಿದೆ, ಹೌದು ಈಗ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಎಲ್ಲಿಗೂ ಹೋಗುವ ಅವಶ್ಯಕತೆಯಿಲ್ಲ.
ಮನೆಯಲ್ಲಿಯೇ ಕುಳಿತು ಸುಲಭವಾಗಿ ಎಲ್ ಪಿಜಿ ಸಿಲಿಂಡರ್ ಬುಕ್ ಮಾಡಬಹುದು, ಸರ್ಕಾರಿ ತೈಲ ಕಂಪನಿಗಳು ಗ್ರಾಹಕರಿಗೆ ಎಲ್ ಪಿಜಿ ರೀಫಿಲ್ ಮಾಡಲು ವಿಶೇಷ ಸೌಲಭ್ಯ ನೀಡಿದೆ.
ಇಂಡಿಯನ್ ಗ್ಯಾಸ್ ಗ್ರಾಹಕರಿಗೆ LPG ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡುವುದಕ್ಕೆ ಈಗ ಮಿಸ್ಡ್ ಕಾಲ್ ಮಾಡಬೇಕು.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದೆ.
ಈಗ ಗ್ರಾಹಕರು ಮಿಸ್ಡ್ ಕಾಲ್ ನೀಡುವ ಮೂಲಕವೂ ಗ್ಯಾಸ್ ಸಂಪರ್ಕವನ್ನು ಪಡೆದುಕೊಳ್ಳಬಹುದು.
ಈ ನಂಬರಗೆ ಮಿಸ್ಡ್ ಕಾಲ್ ಮಾಡಿ ಮಿಸ್ಡ್ ಕಾಲ್ ಮೂಲಕ ಸಂಪರ್ಕದ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್.LPG Good News
ಹೊಸ ಸಂಪರ್ಕಕ್ಕಾಗಿ ಕಂಪನಿಯು 8454955555 ಸಂಖ್ಯೆಗೆ ಮಿಸ್ಡ್ ಕಾಲ್ ಮಾಡಬೇಕು ಎಂದು ತಿಳಿಸಿದೆ.
ಅದರ ನಂತರ ಕಂಪನಿಯು ಆ ವ್ಯಕ್ತಿಯನ್ನು ಸಮೋಅರ್ಕಾ ಮಾಡುತ್ತದೆ, ಕಂಪನಿಯು ನಿಮ್ಮನ್ನು ಸಂಪರ್ಕಿಸುತ್ತದೆ ಮತ್ತು ಆಧಾರ್ ಮತ್ತು ವಿಳಾಸದ ಮೂಲಕ ಹೊಸ ಗ್ಯಾಸ್ ಸಂಪರ್ಕವನ್ನು
ಮಾಹಿತಿ ನೀಡುತ್ತದೆ.
ಈ ಸೌಲಭ್ಯವನ್ನು ಯಾರು ಬೇಕಾದರೂ ಪಡೆಯಬಹುದು, ಇದಕ್ಕಾಗಿ ನಿಮಗೆ ನಿರ್ದಿಷ್ಟವಾಗಿ ಆಧಾರ್ ಕಾರ್ಡ್ ಅವಶ್ಯಕತೆವಿರುತ್ತದೆ.
ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಮಿಸ್ಡ್ ಕಾಲ್ ನೀಡುವ ಮೂಲಕ ನೀವು ಮತ್ತೆ ಹೊಸ ಗ್ಯಾಸ್ ಸಂಪರ್ಕವನ್ನು ಪಡೆಯಬಹುದು.
ನಿಮ್ಮ ಕುಟುಂಬದಲ್ಲಿ ಯಾರಾದರೂ ಗ್ಯಾಸ್ ಸಂಪರ್ಕವನ್ನು ಹೊಂದಿದ್ದರೆ ಹಾಗೂ ವಿಳಾಸ ಒಂದೇ ಆಗಿದ್ದರೆ, ನೀವು ಇನ್ನೂ ಗ್ಯಾಸ್ ಸಂಪರ್ಕವನ್ನು ತೆಗೆದುಕೊಳ್ಳಬಹುದು.
ಆದರೆ ಇದಕ್ಕಾಗಿ ಒಮ್ಮೆ ಗ್ಯಾಸ್ ಏಜೆನ್ಸಿಗೆ ತೆರಳಿ ಹಳೆ ಗ್ಯಾಸ್ ಸಂಪರ್ಕಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಿ ಪರಿಶೀಲನೆಯನ್ನು ಮಾಡಿಸಿಕೊಳ್ಳಬೇಕು.
ಆ ನಂತರವೇ ಆ ವಿಳಾಸದಲ್ಲಿ ಗ್ಯಾಸ್ ಸಂಪರ್ಕ ನಿಮಗೆ ಸಿಗುತ್ತದೆ.
LPG ಸಿಲಿಂಡರ್ ಬುಕ್ ಮಾಡುವ ವಿಧಾನಗಳು
1. ನಿಮ್ಮ ನೋಂದಾಯಿತ ಸಂಖ್ಯೆಯಿಂದ 8454955555 ಗೆ ಮಿಸ್ಡ್ ಕಾಲ್ ನೀಡಬೇಕು.
2. LPG ಸಿಲಿಂಡರ್ಗಳನ್ನು ಭಾರತ್ ಬಿಲ್ ಪಾವತಿ ವ್ಯವಸ್ಥೆ (BBPS) ಮೂಲಕವೂ ಮರುಪೂರಣ ಮಾಡಬಹುದಾಗಿದೆ.
3.ಬುಕಿಂಗ್ ಅನ್ನು IndianOil ನ ಅಪ್ಲಿಕೇಶನ್ ಅಥವಾ https://cx.indianoil.in ಮೂಲಕವೂ ಮಾಡಬಹುದು.
4. ಗ್ರಾಹಕರು 7588888824 ನಲ್ಲಿ WhatsApp ಸಂದೇಶದ ಮೂಲಕವೂ ಸಂಪರ್ಕ ಮಾಡಬಹುದು.LPG Good News
5. ಇದಲ್ಲದೆ, 7718955555 ಗೆ SMS ಮತ್ತು IVRS ಮೂಲಕ ಬುಕಿಂಗ್ ಮಾಡಬಹುದು. 6. ಸಿಲಿಂಡರ್ ಅನ್ನು Amazon ಹಾಗೂ Paytm ಮೂಲಕವೂ ಬುಕಿಂಗ್ ಮಾಡಬಹುದು.
ಸಂಪರ್ಕ ಲಿಂಕ್ ಮಾಡುವುದು ಹೇಗೆ
LPG ಪಾಸ್ಬುಕ್, ಇ-ಆಧಾರ್ ಕಾರ್ಡ್ ಹಾಗೂ ಲಿಂಕ್ ಮಾಡುವ ಅಪ್ಲಿಕೇಶನ್ನಂತಹ ದಾಖಲೆಗಳನ್ನು ತಯಾರಿಸಿ.
ನೀವು ಇಂಡೇನ್ನ ವೆಬ್ಸೈಟ್ನಿಂದ ಅರ್ಜಿಯನ್ನು ನಮೂನೆ ಡೌನ್ಲೋಡ್ ಮಾಡಬಹುದು.
ಇದಕ್ಕಾಗಿ ನೀವು ಈ ವೆಬ್ಸೈಟ್ ಗೆ ಹೋಗಿ – http://mylpg.in/docs/unified_form-DBTL.pdf ಈ ಅರ್ಜಿ ನಮೂನೆಯು ಈ ರೀತಿ ಕಾಣುತ್ತದೆ.
ತದನಂತರ, ನೀವು ನಿಮ್ಮ ಗ್ರಾಹಕ ID ಮತ್ತು ಇತರ ಮಾಹಿತಿಯನ್ನು ನಮೂದಿಸಿ. ಸಂಬಂಧಪಟ್ಟ ಕಛೇರಿಯಲ್ಲಿ (ಏಜೆನ್ಸಿ) ಸಲ್ಲಿಸಿ ಅಥವಾ ಅಂಚೆಯ ಮೂಲಕ ಕಳುಹಿಸಿ.LPG Good News
ಇದಕ್ಕಾಗಿ ನೀವು ಸ್ವೀಕೃತಿಯನ್ನು ಹೊಂದಿರುವಿರಾ ಎಂದು ಖಚಿತ ಮಾಡಿಕೊಳ್ಳಿ.
ನೀವು ನೀಡಿದ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿದ ನಂತರ, ಅಧಿಕಾರಿಗಳು ನಿಮ್ಮ ಇಂಡೇನ್ ಗ್ಯಾಸ್ ಸಂಪರ್ಕವನ್ನು ಆಧಾರ್ನೊಂದಿಗೆ ಲಿಂಕ್ annu ಮಾಡುತ್ತಾರೆ.