ನಿಮ್ಮ ರಾಶಿಗಳಲ್ಲಿ ಗಂಡಾಂತರವಿದೆಯೇ ಶಿವರಾತ್ರಿಗೆ ಹೀಗೆ ಮಾಡಿ!

Shivaratri Astrology

ಮಹಾ ಶಿವರಾತ್ರಿ

ಶಿವರಾತ್ರಿಯಂದು ಯಾವ ಮಂತ್ರಗಳಿಂದ ಶಿವನನ್ನು ಜಪಿಸಿದರೆ ಹೆಚ್ಚು ಒಳ್ಳೆಯದು ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.

ಇಲ್ಲಿದೆ ನೋಡಿ ಯಾವ ರಾಶಿಯವರು ಯಾವ ಮಂತ್ರವನ್ನು ಪಠಿಸಿದರೆ ಶಿವನ ಅನುಗ್ರಹವನ್ನು ಪಡೆಯಬಹುದು ಎನ್ನುವ ಮಾಹಿತಿ ಇಲ್ಲಿದೆ.

ದಿನೇ ದಿನೇ ಶಿವರಾತ್ರಿಯ ಹಬ್ಬವು ಹತ್ತಿರ ಬರುತ್ತಿದೆ ಕಷ್ಟಗಳನ್ನು ಕಳೆಯುವ ಮಹಾದೇವನನ್ನು ಭಕ್ತಿಯಿಂದ ಆರಾಧಿಸುವ ದಿನವಿದು.

ಈ ವರ್ಷದಲ್ಲಿ ಹಬ್ಬವು ಮಾರ್ಚ್​ 1ರಂದು ಮಹಾಶಿವರಾತ್ರಿಯನ್ನು ಆಚರಣೆ ಮಾಡಲಾಗುತ್ತದೆ. ಈ ದಿನದಂದು ಶಿವನು ಭಕ್ತರನ್ನು ಅನುಗ್ರಹಿಸುತ್ತಾನೆ ಎನ್ನುವ ನಂಬಿಕೆಯಿದೆ.

ಕ್ಷೀರ ಸಾಗರದ ಮಂಥನದಲ್ಲಿ ಬಂದು ವಿಷವನ್ನು ಸೇವಿಸಿ ನೀಲಕಂಠನೆಂದು ಕರೆಸಿಕೊಳ್ಳುವ  ಮಹಾದೇವನನ್ನು ಆರಾಧಿಸುವ ದಿನವದು,ಮಾಘ ಕೃಷ್ಣ ಚತುರ್ದಶಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.

ಅಂದು ಇಡೀ ದಿನ ಉಪವಾಸ ವೃತ ಕೈಗೊಂಡು,  ರಾತ್ರಿ ಜಾಗರಣೆ ಮಾಡಿ ರುದ್ರಶಂಕರನನ್ನು ಆರಾಧನೆ ಮಾಡಲಾಗುತ್ತದೆ.

ಶಿವನನನ್ನು ಭಕ್ತಿಯಿಂದ ಪೂಜಿಸಲು ಕೆಲವು  ಮಂತ್ರಗಳನ್ನು ಹೇಳಿಕೊಳ್ಳಬಹುದು, ರಾಶಿ ಚಕ್ರಕ್ಕೆ ಅನುಸಾರವಾಗಿ ಮಂತ್ರಗಳನ್ನು ಪಠಿಸಿದರೆ ಸಿದ್ಧಿ ಹೆಚ್ಚು ಎನ್ನಲಾಗುತ್ತದೆ.Shivaratri Astrology

ಹಾಗಾದರೆ ಯಾವ ರಾಶಿಯವರು ಯಾವ ಮಂತ್ರಗಳಿಂದ ಶಿವನನ್ನು ಜಪಿಸಿದರೆ ಹೆಚ್ಚು ಒಳ್ಳೆಯದು ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.

ಇಲ್ಲಿದೆ ನೋಡಿ ಯಾವ ರಾಶಿಯವರು ಯಾವ ಮಂತ್ರವನ್ನು ಪಠಿಸಿದರೆ ಶಿವನ ಅನುಗ್ರಹವನ್ನು ಪಡೆಯಬಹುದು ಎನ್ನುವ ಮಾಹಿತಿ ತಿಳಿದುಕೊಳ್ಳಿ.

ಮೇಷ ರಾಶಿ

ರಾಶಿ ಚಕ್ರದ ಮೊದಲ ರಾಶಿ, ಮೇಷ ರಾಶಿ. ಈ ರಾಶಿಯವರು ಶಿವ ಪಂಚಾಕ್ಷರಿ ಮಂತ್ರವನ್ನು ಪಠಿಸಿದರೆ ಹೆಚ್ಚು ಉತ್ತಮವಾಗಿರುತ್ತದೆ.

ಓಂ ನಮಃ ಶಿವಾಯ ಎನ್ನುವ ಪಂಚಾಕ್ಷರಿ ಮಂತ್ರವನ್ನು ಪಠಿಸಿದರೆ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗಲಿವೆ.

ವೃಷಭ ರಾಶಿ

ಶಿವನ ಆಶೀರ್ವಾದವನ್ನು ಪಡೆಯಲು ವೃಷಭ ರಾಶಿಯ ಜನರು ಓಂ ನಾಗೇಶ್ವರಾಯ ನಮಃ ಮಂತ್ರವನ್ನು ಜಪಿಸಬೇಕು. ಇದು ಅವರ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ.

ಮಿಥುನ ರಾಶಿ

ರಾಶಿ ಚಕ್ರದಲ್ಲಿ ಮಿಥುನ ರಾಶಿಯ ಜನರು ಶಿವರಾತ್ರಿಯಂದು ಓಂ ನಮಃ ಶಿವಾಯ ಕಾಲಂ ಮಹಾಕಾಲ ಕಲಾಂ ಕೃಪಾಲಂ ಓಂ ನಮಃ ಮಂತ್ರವನ್ನು ಜಪಿಸಬೇಕು.

ಈ ಮಂತ್ರದಿಂದ  ಮಹಾದೇವನ ಅನುಗ್ರಹವನ್ನು ಪಡೆಯಬಹದು.

ಕರ್ಕಾಟಕ ರಾಶಿ

ಶಿವರಾತ್ರಿಯ ದಿನ ಕರ್ಕಾಟಕ ರಾಶಿಯವರು ಓಂ ಚಂದ್ರಮೌಳೇಶ್ವರ ನಮಃ ಮಂತ್ರವನ್ನು ಜಪಿಸಬೇಕು, ಶಿವನನ್ನು ಭಕ್ತಿಯಿಂದ ಪೂಜಿಸುವಾಗ ಈ ಮಂತ್ರವನ್ನು ಜಪಿಸಿಕೊಳ್ಳಿ.Shivaratri Astrology

ಸಿಂಹ ರಾಶಿ

ಕಷ್ಟಗಳನ್ನು ಪರಿಹರಿಸಿಕೊಳ್ಳಲು ಶಿವರಾತ್ರಿಯಂದು ಶಿವನ ಆರಾಧನೆಯನ್ನು ಮಾಡಬೇಕು.

ಶಿವನ ಪೂಜೆಯ  ವೇಳೆಯಲ್ಲಿಓಂ ನಮಃ ಶಿವಾಯ ಕಾಲಂ ಮಹಾಕಾಲ ಕಲಾಂ ಕೃಪಾಲಂ ಓಂ ನಮಃ ಮಂತ್ರವನ್ನು ಪಠಿಸಿ.

ಕನ್ಯಾ ರಾಶಿ

ರಾಶಿ ಚಕ್ರದಲ್ಲಿ ಕನ್ಯಾ ರಾಶಿಯ ಜನ ಶಿವರಾತ್ರಿಯಂದು ಓಂ ನಮಃ ಶಿವಾಯ ಕಾಲಂ ಮಹಾಕಾಲ ಕಲಾಂ ಕೃಪಾಲಂ ಓಂ ನಮಃ  ಮಂತ್ರವನ್ನು ಜಪವನ್ನು ಮಾಡಬೇಕು.

ನಿಮ್ಮ ಮಾನಸಿಕ ಗೊಂದಲಗಳಿಗೆ ಪರಿಹಾರ ನೀಡುತ್ತದೆ.

ತುಲಾ ರಾಶಿ

ರಾಶಿ ಚಕ್ರದಲ್ಲಿ ತುಲಾ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿಯಾಗಿ,ಯಶಸ್ಸು ಸಿಗಬೇಕೆಂದರೆ ಶಿವರಾತ್ರಿಯಂದು ಪಂಚಾಕ್ಷರಿ ಮಂತ್ರ ಓಂ ನಮಃ ಶಿವಾಯವನ್ನು 108 ಬಾರಿ ಜಪಿಸಿ.

ವೃಶ್ಚಿಕ ರಾಶಿ

ಈ ರಾಶಿಯ ಜನರು ಓಂ ಹೌಂ ಜೂಂ ಸಃ  ಮಂತ್ರವನ್ನು ಜಪಸಿ, ಶಿವನ ಅನುಗ್ರಹವನ್ನು ಪಡೆದುಕೊಳ್ಳಿ.

ಧನು ರಾಶಿ

ಓಂ ನಮೋ ಶಿವಾಯ ಗುರು ದೇವಾಯ ನಮಃ ಮಂತ್ರವನ್ನು ಧನು ರಾಶಿಯ ಜನರು ಜಪಿಸಿ, ಹಾಲುನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಿ.

ಈ ಮಂತ್ರದಿಂದ ನಿಮ್ಮ  ಕಷ್ಟಗಳು ದೂರವಾಗುತ್ತವೆ.

ಮಕರ ರಾಶಿ

ರಾಶಿ ಚಕ್ರದಲ್ಲಿ ಮಕರ ರಾಶಿಯ ಜನರು ಓಂ ನಮೋ ಶಿವಾಯ ಗುರು ದೇವಾಯ ನಮಃ ಮಂತ್ರವನ್ನು ಜಪಿಸಿ ಭಕ್ತಿಯಿಂದ ಪೂಜಿಸಿದರೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

ಕುಂಭ ರಾಶಿ

ಮಹಾಶಿವರಾತ್ರಿಯಂದು ಕುಂಭ ರಾಶಿಯ ಜನರು ಓಂ ಹೌಂ ಜೂಂ ಸಃ  ಮಂತ್ರವನ್ನು ಪಠಿಸಿ, ಇದರಿಂದ ಅಂದುಕೊಂಡ ಕೆಲಸಗಳು ನೆರವೇರಿ, ನಿಮ್ಮ ಕಷ್ಟಗಳು ದೂರಾಗುತ್ತದೆ.

ಮೀನ ರಾಶಿ

ಓಂ ನಮೋ ಶಿವಾಯ ಗುರು ದೇವಾಯ ನಮಃ  ಮಂತ್ರವನ್ನು 108 ಬಾರಿ ಮೀನ ರಾಶಿಯವರು ಪಠಿಸಿದರೆ ಶಿವನ ಅನುಗ್ರಹ ದೊರೆಯುತ್ತದೆ.

ಶಿವರಾತ್ರಿಯಂದು ಜಪಿಸಲು ಈ ಮಂತ್ರವು  ಸೂಕ್ತವಾಗಿದೆ.

ಆಧುನಿಕ ಕೃಷಿಯಲ್ಲಿ ಡ್ರೋನ್​​ಗಳಿಗೆ ಮೋದಿ ಚಾಲನೆ!-kisan drones

https://www.google.com/search?q=way2plot&oq=w&aqs=chrome.1.69i60j69i59j46i39j69i57j69i60l4.834j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *