ನಂಜನಗೂಡಿನಲ್ಲಿ ಸಪ್ತಪದಿ ಸಾಮೂಹಿಕ ವಿವಾಹ! ನೋಂದಣಿ ಪ್ರಾರಂಭ.

Mass Wedding

ಭಾರತದಲ್ಲಿ, ಮದುವೆಗಳು ಎರಡು ಕುಟುಂಬಗಳ ನಡುವೆ ಆಚರಿಸಲಾಗುವ ಒಂದು ರೀತಿಯ ಆಚರಣೆಯಾಗಿದೆ.

ಇಂದು ಈ ಲೇಖನದ ಅಡಿಯಲ್ಲಿ, ನಾವು ನಮ್ಮ ಓದುಗರೊಂದಿಗೆ ಯೋಜನೆಯ ಅನುಷ್ಠಾನ ಪ್ರಕ್ರಿಯೆಯನ್ನು ಹಂಚಿಕೊಳ್ಳುತ್ತೇವೆ ಅಂದರೆ ಕರ್ನಾಟಕ ಸಪ್ತಪದಿ ವಿವಾಹ ಯೋಜನೆ ಅಥವಾ Mass Wedding ಯೋಜನೆ ಎಂದು ಜನಪ್ರಿಯವಾಗಿದೆ.

ಈ ಲೇಖನದಲ್ಲಿ, ಅರ್ಹತಾ ಮಾನದಂಡಗಳು, ಅಪ್ಲಿಕೇಶನ್ ಪ್ರಕ್ರಿಯೆ, ಪ್ರಯೋಜನಗಳು, ಅಗತ್ಯವಿರುವ ದಾಖಲೆಗಳು ಮತ್ತು ಯೋಜನೆಯ ಸಂಬಂಧಿತ ಅಧಿಕಾರಿಗಳು ಘೋಷಿಸಿದಂತೆ ಇತರ ಎಲ್ಲಾ ವಿವರಗಳನ್ನು ನಾವು ಓದುಗರಿಗೆ ತಲುಪಿಸುತ್ತೇವೆ.

ಕರ್ನಾಟಕ ಸಪ್ತಪದಿ ವಿವಾಹ ಯೋಜನೆ

ಕರ್ನಾಟಕ ಸರ್ಕಾರವು ಸಪ್ತಪದಿ ವಿವಾಹ ಯೋಜನೆ ಎಂದು ಕರೆಯಲ್ಪಡುವ ಹೊಸ ಯೋಜನೆಯನ್ನು ಪ್ರಾರಂಭಿಸಿದೆ ಅಥವಾ ನೀವು ಸಾಮೂಹಿಕ ವಿವಾಹ ಯೋಜನೆ ಎಂದು ಹೇಳಬಹುದು ಮತ್ತು ಈ ಯೋಜನೆಯ ಅನುಷ್ಠಾನದ ಮೂಲಕ, ಕರ್ನಾಟಕ ಸರ್ಕಾರವು ತನ್ನ ನಿವಾಸಿಗಳಿಗೆ ಮುಜರಾಯಿ ಸಾಮೂಹಿಕ ವಿವಾಹ ಯೋಜನೆಯನ್ನು ಎಲ್ಲಾ ಅರ್ಹರಿಗೆ ಒದಗಿಸಲಾಗುವುದು ಎಂದು ಭರವಸೆ ನೀಡಿದೆ.

ತಮ್ಮ ಹಣಕಾಸಿನ ಸಾಮರ್ಥ್ಯದ ಆಧಾರದ ಮೇಲೆ ಅದ್ದೂರಿ ವಿವಾಹವನ್ನು ನಡೆಸಲು ಸಾಧ್ಯವಾಗದ ಅಭ್ಯರ್ಥಿಗಳು.

ಯೋಜನೆಯ ಅನುಷ್ಠಾನದ ಮೂಲಕ ಮುಂಬರುವ 2020 ರಲ್ಲಿ ಮದುವೆಯಾಗಲು ಇಚ್ಛಿಸುವ ಜೋಡಿಗಳಿಗೆ ಸಾಮೂಹಿಕ ವಿವಾಹವನ್ನು ಒದಗಿಸಲಾಗುತ್ತದೆ.

ಕರ್ನಾಟಕ ರಾಜ್ಯ ಸರ್ಕಾರದ ಸಪ್ತಪದಿ ಉಚಿತ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮವನ್ನು ಇದೇ ಮೇ 25ರಂದು ನಂಜನಗೂಡಿನ ಕಂಠೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.

ಇದಕ್ಕೆ ಅಗತ್ಯ ಸಿದ್ದತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಎಸ್ ಮಂಜುನಾಥಸ್ವಾಮಿ ಅವರು ತಿಳಿಸಿದ್ದಾರೆ.

ಇವತ್ತು ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಪ್ತಪದಿ ಉಚಿತ ಸರಳ ವಿವಾಹದ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೇ 25 ರ ಬುಧವಾರ ಬೆಳಗ್ಗೆ 10: 55 ರಿಂದ 11: 40 ರವರೆಗೆ ಕಟಕ ಶುಭ ಲಗ್ನ ದಲ್ಲಿ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಿವಾಹ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. 

ಮದುವೆಗೆ ದುಂದು ವೆಚ್ಚ ಮಾಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವುದದನ್ನು ತಪ್ಪಿಸಲು ಕರ್ನಾಟಕ ಸರ್ಕಾರ ‘ಸಪ್ತಪದಿ’ ಸಾಮೂಹಿಕ ವಿವಾಹ ಯೋಜನೆಯನ್ನು ಜಾರಿಗೆ ತಂದಿದೆ.

ಯೋಜನೆ ವಿಶೇಷತೆ ಎಂದರೆ, ವಧು- ವರನಿಗೆ ಉಡುಗೆ, ಬಂಗಾರದ ಉಡುಗೊರೆ ನೀಡುವ ಜೊತೆಗೆ, ಎರಡೂ ಕಡೆಯ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನೂ ದೇವಾಲಯ ಆಡಳಿತ ಮಂಡಳಿಗಳೇ ನೋಡಿಕೊಳ್ಳುತ್ತವೆ.

ವಿವಾಹದಲ್ಲಿ ಪಾಲ್ಗೊಳ್ಳುವ ವಧು-ವರರು  ಮೇ 13 ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಅವರು ಈ ಮಾಹಿತಿಯನ್ನು ತಿಳಿಸಿದ್ದಾರೆ.

ವಧು-ವರರಿಗೆ ಒಟ್ಟು 55 ಸಾವಿರ ರೂ. ಪ್ರೋತ್ಸಾಹ ಧನ

ಸಪ್ತಪದಿ ಯೋಜನೆಯಲ್ಲಿ ವಿವಾಹವಾಗುವ ವಧು-ವರರಿಗೆ ಸರಕಾರ ಒಟ್ಟು 55 ಸಾವಿರ ರೂ.ಗಳ ಪ್ರೋತ್ಸಾಹ ಧನವನ್ನು ನೀಡುತ್ತಿದೆ.

ವಧು-ವರರು ಪಂಚೆ, ಶರ್ಟ್‌, ಶಲ್ಯ, ಹೂವಿನ ಹಾರ, ಧಾರೆ ಸೀರೆ ಹಾಗೂ ರವಿಕೆ ಕೊಳ್ಳಲು ಅನುದಾನವು ಕೂಡ ನೀಡುತ್ತಿದೆ.

ವರನಿಗೆ ಪೋತ್ಸಾಹ ಧನವಾಗಿ ಹೂವಿನ ಹಾರ, ಪಂಚೆ, ಶರ್ಟ್‌, ಶಲ್ಯ ಖರೀದಿಗೆ 5 ಸಾವಿರ ರೂ, ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆಗಾಗಿ 10 ಸಾವಿರ ನೀಡುತ್ತದೆ.

ವಧುವಿಗೆ ಚಿನ್ನದ ತಾಳಿ, ಎರೆಡು ಚಿನ್ನದ ಗುಂಡು ಒಟ್ಟು  ಅಂದಾಜು 8 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಸಹ ನೀಡಲಾಗುತ್ತದೆ.

ಮದುವೆ ನಿಯಮಗಳು

ವಧು-ವರರ ಎರಡು ಕಡೆಯ ತಂದೆ-ತಾಯಿಯರು ವಿವಾಹಕ್ಕೆ ಒಪ್ಪಿ ವಿವಾಹ ದಿನದಂದು ತಂದೆ-ತಾಯಿ ಉಪಸ್ಥಿತಿ ಹಾಗೂ ಎರಡು ಕಡೆಯಿಂದ ಸಾಕ್ಷಿದಾರರು ಇದ್ದಲ್ಲಿ ಮಾತ್ರ ಈ ಮದುವೆಯನ್ನು ನಡೆಸಲಾಗುವುದು.

ವಧು ವರರ ತಂದೆ-ತಾಯಿಯರು ನಿಧನರಾಗಿದ್ದರೆ, ಅವರ ವಾರಸುದಾರರ ಸಂಪೂರ್ಣ ಒಪ್ಪಿಗೆ ಇದ್ದು ವಿವಾಹ ದಿನದಂದು ಅವರು ಕಡ್ಡಾಯವಾಗಿ ಹಾಜರಿರಬೇಕು.

ಸಾರ್ವಜನಿಕರಿಂದ ಯಾವುದೇ ದೂರು ಬಂದಲ್ಲಿ ಅಂತಹ ವಿವಾಹವಾಗುವ ವಧು-ವರರ ಬಗ್ಗೆ ಪುನರ್ ಪರಿಶೀಲನೆಯನ್ನು ನಡೆಸಲಾಗುವುದು.

ಕಾನೂನು ಕ್ರಮ

ಸರ್ಕಾರದ ನಿಯಮದಂತೆ ಕನಿಷ್ಠ 21 ವರ್ಷ ಗಳು ಹೀಗೆ ಕನಿಷ್ಠ 18 ವರ್ಷಗಳು ಇಬ್ಬರ ವಯಸ್ಸು ತುಂಬಿರಬೇಕು. 

ವಯಸ್ಸಿನ ಬಗ್ಗೆ ಸರ್ಕಾರದ ಅಧಿಕೃತ ದಾಖಲೆಗಳನ್ನು ಸಲ್ಲಿಕೆ ಮಾಡುವುದು, ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ವಧು-ವರರ ಮೊದಲನೇ ವಿವಾಹಕ್ಕೆ ಮಾತ್ರ ಅವಕಾಶವನ್ನು ಕಲ್ಪಿಸಲಾಗಿದೆ.

ಸಾಮೂಹಿಕ ವಿವಾಹಕ್ಕೆ ಸಲ್ಲಿಸುವ ದಾಖಲೆಗಳು ಸುಳ್ಳು ದಾಖಲೆಗಳೆಂದು ದೃಡಪಟ್ಟಲ್ಲಿ ಅಂತಹವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವುದು ಎಂದು ತಿಳಿಸಿದ್ದಾರೆ.

ಈ ಸಭೆಯಲ್ಲಿ ನಂಜನಗೂಡು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯಾದ ರವೀಂದ್ರ,  ಮುಜರಾಯಿ ಇಲಾಖೆಯ ತಹಶೀಲ್ದಾರರಾದ ಕೃಷ್ಣ  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾದ ಎಚ್.ಎಸ್ ಬಿಂದಿಯಾ,  ವಾರ್ತಾಧಿಕಾರಿ ಟಿ. ಕೆ. ಹರೀಶ್ ,  ಸಮಾಜ ಕಲ್ಯಾಣ ಇಲಾಖೆಯ ರಾಜ್ ನಾಯಕ್, ಅರಮನೆ ಮುಜರಾಯಿ ಸಂಸ್ಥೆಯ ವ್ಯವಸ್ಥಾಪಕರಾದ ಎನ್.ಎಸ್ ಶೀಲಾ, ಅವರು ಭಾಗವಹಿಸಿದರು.

ಬೀದರ ಬ್ರಿಮ್ಸ್ ಆಸ್ಪತ್ರೆಯಲ್ಲಿ ಮಾರಣಾಂತಿಕ ಹಲ್ಲೆ!-Bidar News

https://jcs.skillindiajobs.com/

Social Share

Leave a Reply

Your email address will not be published. Required fields are marked *