ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಿರುವ 2021ರ ಚಲನಚಿತ್ರಗಳು!

Most Searched Movies In 2021

ಗೂಗಲ್

ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು ಬಳಸುವ ಸರ್ಚ್ ಇಂಜಿನ್ ಗೂಗಲ್, ಇದು ಪ್ರತಿವರ್ಷ ತನ್ನ ಸೈಟಿನಲ್ಲಿ ಅತಿ ಹೆಚ್ಚು ಹುಡುಕಾಡಿದ ಚಿತ್ರಗಳು, ಸೆಲಿಬ್ರಿಟಿಗಳು ಮುಂತಾದ ಮಾಹಿತಿಗಳನ್ನು ಬಿಡುಗಡೆ ಮಾಡುತ್ತದೆ.most search movies

2021 ರಲ್ಲಿ ಭಾರತದಲ್ಲಿ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಾಡಿದ ಚಲನಚಿತ್ರಗಳ ಪಟ್ಟಿಗಳನ್ನು ನೀಡಿದೆ.

1. ಜೈ ಭೀಮ್

ಟಿ.ಜೆ ಜ್ಞಾನವೇಲ್ ನಿರ್ದೇಶನದಲ್ಲಿ ಮೂಡಿ ಬಂದ ಚಲನಚಿತ್ರ, `ಜೈ ಭೀಮ್’ ಈ ವರ್ಷ ಭಾರತದಲ್ಲಿ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಾಡಿದ ಚಲನಚಿತ್ರವಾಗಿ ಹೊರ ಹೊಮ್ಮಿದೆ.india most search movies

ತಮಿಳು ನಟ ಸೂರ್ಯ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಈ ಚಿತ್ರದ ಬುಡಕಟ್ಟು ಜನಾಂಗದ ಶೋಷಣೆ ಹಾಗೂ ಅದರ ವಿರುದ್ಧ ಹೋರಾಡುವ ಒಬ್ಬ ಲಾಯರ್ ಕಥೆಯನ್ನು ಆಧಾರಸಿತ್ತು.

2. ಶೇರಶಾಹ್

ವಿಷ್ಣುವರ್ಧನ್ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ `ಶೇರಶಾಹ್’ ಚಿತ್ರ ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಹೊಂದಿದ ಕ್ಯಾಪ್ಟನ್ ವಿಕ್ರಮ್ ಭಾತ್ರಾ ಜೀವನ ಚರಿತ್ರೆಯ ಆಧಾರವನ್ನು ಹೊಂದಿತ್ತು.

ಚಿತ್ರದಲ್ಲಿ ಸಿದ್ಧಾರ್ಥ ಮಲ್ಹೋತ್ರಾ ,ವಿಕ್ರಮ್ ಪಾತ್ರದಲ್ಲಿ ನಟಿಸಿದ್ದರೆ, ಕೈರಾ ಅಡ್ವಾಣಿ `ಡಿಂಪಲ್ ಚೀಮಾ’ ಪಾತ್ರದಲ್ಲಿ ನಟಿಸಿದ್ದಾರೆ.

3. ರಾಧೆ – ಯುವರ್ ಮೋಸ್ಟ್ ವಾಂಟೆಡ್ ಭಾಯಿ

ಪ್ರಭುದೇವ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ `ರಾಧೆ – ಯುವರ್ ಮೋಸ್ಟ್ ವಾಂಟೆಡ್ ಭಾಯಿ’ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆಯಲ್ಲಿ ದಿಶಾ ಪಠಾಣಿ ಡುಯೆಟ್ ಹಾಡಿದ್ದರು.Most Searched Movies In 2021

ಕೋರಿಯನ್ ಚಿತ್ರವೊಂದರ ರಿಮೇಕ್ ಆದ ಈ ಚಿತ್ರದಲ್ಲಿ ರಣದೀಪ್ ಹೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

4. ಬೆಲ್ ಬಾಟಮ್

ಜಯತೀರ್ಥ ನಿರ್ದೇಶನದಲ್ಲಿ ಮೂಡಿಬಂದ `ಬೆಲ್ ಬಾಟಮ್’ ಚಿತ್ರ ಭಾರತದ ವಿಮಾನ ಹೈಜಾಕ್ ವೊಂದರ ಕಥೆಯನ್ನು ಹೊಂದಿದೆ.

ಅಕ್ಷಯ ಕುಮಾರ್ ನಾಯಕನಾಗಿ ನಟಿಸಿದ್ದ ಈ ಚಿತ್ರ ಭಾರತದ ರಾವ್ ಏಜೆಂಟ್ ಗಳು ದುಬೈನಲ್ಲಿ ಕವರ್ ಆಪರೇಷನ್ ಮೂಲಕ ಹೇಗೆ ಪ್ರಯಾಣಿಕರನ್ನು ಉಳಿಸಿಕೊಳ್ಳುತ್ತಾರೆ ಎಂಬ ಕಥೆಯನ್ನು ಹೊಂದಿತ್ತು.

5. ಇಟೆರ್ನಲ್ಸ್

`ಇಟೆರ್ನಲ್ಸ್’ ಮಾರ್ವೆಲ್ಸ್ ಸೂಪರ್ ಹೀರೋ ಚಿತ್ರ ಸರಣಿಗಳಲ್ಲಿನ 25ನೇ ಚಿತ್ರವಾಗಿದೆ. ಭಾರತದಲ್ಲಿ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಈ ಚಿತ್ರವು ಅಷ್ಟೇನೂ ನಿರೀಕ್ಷೇ ಮೂಡಿಸಿರಲಿಲ್ಲ.

6. ಮಾಸ್ಟರ್

ದಳಪತಿ ವಿಜಯ್ ಹಾಗೂ ವಿಜಯ್ ಸೇತುಪತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ಮಾಸ್ಟರ್ ಚಿತ್ರವನ್ನು ಲೋಕೇಶ್ ಕಣಗರಾಜ್ ನಿರ್ದೇಶನ ಮಾಡಿದ್ದರು.

ಬಾಲಾಪರಾಧಿಗಳನ್ನು ಹೇಗೆ ಕ್ರಿಮಿನಲ್ ಕೃತ್ಯಗಳಿಗೆ ಬಳಸಿಕೊಳ್ಳುತ್ತಾರೆ ಎಂಬುದು ಚಿತ್ರದ ಕಥಾವಸ್ತುವಾಗಿತ್ತು.Most Searched Movies In 2021

7. ಸೂರ್ಯವಂಶಿ

ಅಕ್ಷಯ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಸೂರ್ಯವಂಶಿ ಚಿತ್ರವನ್ನು ರೋಹಿತ್ ಶೆಟ್ಟಿ ನಿರ್ದೇಶನ ಮಾಡಿದ್ದರು.

ಕತ್ರೀನಾ ಕೈಫ್ ನಾಯಕಿಯಾಗಿದ್ದ ಈ ಚಿತ್ರದಲ್ಲಿ ಅಜಯ್ ದೇವಗನ್ ಹಾಗೂ ರಣವೀರ್ ಸಿಂಗ್ ವಿಶೇಷ ಪಾತ್ರಗಳಲ್ಲಿ ನಟಿಸಿದ್ದರು.

8. ಗಾಡ್ಜಿಲ್ಲಾ vs ಕಾಂಗ್

ಮಾನ್‌ಸ್ಟರ್ ಯುನಿವರ್ಸ್ ಚಿತ್ರಗಳಲ್ಲಿ ಒಂದಾದ ಗಾಡ್ಜಿಲ್ಲಾ ವರ್ಸಸ್ ಕಾಂಗ್ ಚಿತ್ರವನ್ನು ಅಡಮ್ ವಿನ್‌ಗಾರ್ಡ್ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರ ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಒಳ್ಳೆಯ ಪ್ರತಿಕ್ರಿಯೆ ಪಡೆಯವುದು ಮಾತ್ರವಲ್ಲದೇ ಒಳ್ಳೆಯ ಗಳಿಕೆ ಮಾಡಿದೆ.

9. ದೃಶ್ಯಂ 2

ಜೀತು ಜೋಸೆಫ್ ನಿರ್ದೇಶನದಲ್ಲಿ ದೃಶ್ಯಂ 2 ಚಿತ್ರ ಮೊದಲ ಭಾಗದಂತೆ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತು.

ಸೂಪರ್ ಸ್ಟಾರ್ ಮೋಹನ್ ಲಾಲ್ ಹಾಗೂ ಮೀನಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರದ ರಿಮೇಕ್ ದೃಶ್ಯ 2 ಹೆಸರಿನಲ್ಲಿ ಕನ್ನಡದಲ್ಲಿ ಮೂಡಿ ಬಂದಿದೆ.

10. ಭುಜ್ – ದಿ ಪ್ರೈಡ್ ಆಫ್ ಇಂಡಿಯಾ

ಭಾರತ ಹಾಗೂ ಪಾಕಿಸ್ತಾನದ ಯುದ್ಧವೊಂದರಲ್ಲಿ ನಡೆದ ಐತಿಹಾಸಿಕ ಘಟನೆ ಕುರಿತಿರುವ ಈ ಚಿತ್ರವನ್ನು ಅಭಿಷೇಕ್ ದುಡೈಯಾ ನಿರ್ದೇಶನ ಮಾಡಿದ್ದಾರೆ.

ಅಜಯ್ ದೇವಗನ್, ಸಂಜಯ್ ದತ್ತ್, ರಾಣಾ ದಗ್ಗುಬಾಟಿ, ಸೋನಾಕ್ಷಿ ಸಿನ್ಹಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಗುಪ್ತವಾಗಿ ಮದುವೆಯಾದ ಸಲ್ಮಾನ್ ಖಾನ್!-Salman Khan Marriage

https://www.google.com/search?q=way2plot&oq=w&aqs=chrome.1.69i60j69i59l3j69i60l4.969j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *