ಮಹಿಳಾ ದಿನ ಪ್ರಯುಕ್ತ “ನಾರಿ ಶಕ್ತಿ ಪುರಸ್ಕಾರ” ಪ್ರಶಸ್ತಿ!-Nari Shakti Puraskar

Nari Shakti Puraskar

ನವದೆಹಲಿ

‘ಆಜಾದಿ ಕಾ ಅಮೃತ ಮಹೋತ್ಸವ’ ದ ಭಾಗವಾಗಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಯನ್ನು ವಾರಪೂರ್ತಿ ಕಾರ್ಯಕ್ರಮಗಳು 2022 ಮಾರ್ಚ್ 1ರಿಂದ ದೆಹಲಿಯಲ್ಲಿ ಆರಂಭವಾಗಿವೆ.

ಮಹಿಳಾ ದಿನಾಚರಣೆ ಅಂಗವಾಗಿ ಇಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ವಿಶೇಷ ಸಮಾರಂಭ ಆಯೋಜನೆ ಮಾಡಲಾಗಿದೆ.

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸಾಧಕ ಮಹಿಳೆಯರಿಗೆ 2020 ಮತ್ತು 2021ನೇ ಸಾಲಿನ ‘ನಾರಿ ಶಕ್ತಿ ಪುರಸ್ಕಾರ’ ಪ್ರದಾನವನ್ನು ಮಾಡಲಿದ್ದಾರೆ. womens day

ಕೋವಿಡ್-19 ಸಾಂಕ್ರಾಮಿಕ ಸೋಂಕು ಸೃಷ್ಟಿಸಿರುವ ಪ್ರಸ್ತುತ ಪರಿಸ್ಥಿತಿಯಿಂದಾಗಿ 2020ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭವನ್ನು 2021ರಲ್ಲಿ ನಡೆಸಲು ಸಾಧ್ಯವಾಗಿಲ್ಲ.

ಹೀಗಾಗಿ ಈ ಬಾರಿ 2020 ಮತ್ತು 2021ನೇ ಸಾಲಿನ ‘ನಾರಿ ಶಕ್ತಿ ಪುರಸ್ಕಾರ’ ಪ್ರದಾನವು ಮಾಡಲಾಗುತ್ತಿದೆ.

ಪ್ರಶಸ್ತಿ ಪುರಸ್ಕೃತರ ಪ್ರಯತ್ನಗಳು ಹಾಗೂ ಸಾಧನೆಗಳನ್ನು ಶ್ಲಾಘಿಸಲು, ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಮತ್ತಷ್ಟು ಕೆಲಸ ಮಾಡುವಂತೆ ಪ್ರೇರೇಪಿಸಬಹುದು.

ಹಾಗೆಯೇ ಉತ್ತಮ ಸಾಧನೆ ಮಾಡುವಂತೆ ಜನಸಾಮಾನ್ಯರನ್ನು ಪ್ರೇರೇಪಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದವನ್ನು ನಡೆಸಲಿದ್ದಾರೆ.

ಒಟ್ಟಾರೆ, 28 ಪ್ರಶಸ್ತಿಗಳನ್ನು (2020 ಮತ್ತು 2021ನೇ ಸಾಲಿನಲ್ಲಿ ತಲಾ 14 ಪ್ರಶಸ್ತಿಗಳು) 29 ವ್ಯಕ್ತಿಗಳಿಗೆ, ವಿಶೇಷವಾಗಿ ದುರ್ಬಲ ಹಾಗೂ ನಿರ್ಲಕ್ಷಿತ ಮಹಿಳೆಯರ ಸಬಲೀಕರಣಕ್ಕಾಗಿ ವಿಶಿಷ್ಟ ಸೇವೆ ಸಲ್ಲಿಸಿರುವ ಸಾಧಕರ ಅಸಾಧಾರಣ ಕೆಲಸ ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ.Nari Shakti Puraskar To 29 Womens

‘ನಾರಿ ಶಕ್ತಿ ಪುರಸ್ಕಾರ’ವು ಕೇಂದ್ರ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯದ ಉಪ ಕ್ರಮವಾಗಿದೆ.

ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು, ಸಾಮಾಜಿಕ ವ್ಯವಸ್ಥೆಯನ್ನು ಸನ್ಮಾರ್ಗಕ್ಕೆ ಕೊಂಡೊಯ್ಯಲು ಅಸಾಧಾರಣ ಕೊಡುಗೆ ನೀಡುವ ಅಸಾಮಾನ್ಯ ಮಹಿಳೆಯರು ಮತ್ತು ಸಂಸ್ಥೆಗಳನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸಲು ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಕನಸುಗಳನ್ನು ನನಸಾಗಿ ಮಾಡಲು ವಯಸ್ಸು, ಭೌಗೋಳಿಕ ಅಡೆತಡೆಗಳು ಅಥವಾ ಸಂಪನ್ಮೂಲಗಳು ಈ ಸಾಧಕರಿಗೆ ಅಡ್ಡಿಯಾಗಿಲ್ಲ.

ಅವರ ಅದಮ್ಯ ಮನೋಭಾವವು ಸಮಾಜವನ್ನು ಹಾಗೂ ವಿಶೇಷವಾಗಿ ಯುವ ಭಾರತೀಯ ಮನಸ್ಸುಗಳನ್ನು ಲಿಂಗ ಅಸಮಾನತೆ ಮತ್ತು ತಾರತಮ್ಯದ ವಿರುದ್ಧ ನಿಲ್ಲಲು ಪ್ರೇರೇಪಿಸುತ್ತಿದೆ.happy womens day

ಈ ಪ್ರಶಸ್ತಿಗಳು ಸಮಾಜದ ಪ್ರಗತಿಯಲ್ಲಿ ಮಹಿಳೆಯರನ್ನು ಸಮಾನ ಪಾಲುದಾರರನ್ನಾಗಿ ಗುರುತಿಸುವ ಪ್ರಾಮಾಣಿಕವಾದ ಪ್ರಯತ್ನವಾಗಿದೆ.

2020ನೇ ವರ್ಷದ ನಾರಿ ಶಕ್ತಿ ಪುರಸ್ಕಾರದ ವಿಜೇತರನ್ನು ಉದ್ಯಮಶೀಲತೆ, ಕೃಷಿ, ನಾವೀನ್ಯತೆ, ಸಾಮಾಜಿಕ ಕಾರ್ಯ, ಕಲೆ ಮತ್ತು ಕರಕುಶಲ, ವಿಜ್ಞಾನ, ತಂತ್ರಜ್ಞಾನ.

ಎಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರ ಮತ್ತು ವನ್ಯಜೀವಿ ಸಂರಕ್ಷಣೆ ಮುಂತಾದ ವೈವಿಧ್ಯಮಯ ಕ್ಷೇತ್ರಗಳಿಂದ ಆಯ್ಕೆಯನ್ನು ಮಾಡಲಾಗಿದೆ.

ತದನಂತರ 2021ನೇ ಸಾಲಿನ ನಾರಿ ಶಕ್ತಿ ಪುರಸ್ಕಾರ ವಿಜೇತರನ್ನು ಭಾಷಾಶಾಸ್ತ್ರ, ಉದ್ಯಮಶೀಲತೆ, ಕೃಷಿ, ಸಮಾಜಕಾರ್ಯ, ಕಲೆ ಮತ್ತು ಕರಕುಶಲ, ಮರ್ಚೆಂಟ್ ನೇವಿ, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್.Nari Shakti Puraskar To 29 Womens

ಹಾಗೆಯೇ ಗಣಿತಶಾಸ್ತ್ರ, ಶಿಕ್ಷಣ ಮತ್ತು ಸಾಹಿತ್ಯ, ಅಂಗವೈಕಲ್ಯ ಹಕ್ಕುಗಳು ಮತ್ತಿತರ ಕ್ಷೇತ್ರಗಳಿಂದ ಆಯ್ಕೆಯನ್ನು ಮಾಡಲಾಗಿದೆ.

ನಾರಿ ಶಕ್ತಿ ಪುರಸ್ಕಾರ ಪಟ್ಟಿ 2020

  
NameState / UTDomain
 
Anita GuptaBiharSocial Entrepreneur
 
Ushaben Dineshbhai VasavaGujarat    Organic farmer & Tribal Activist
 
Nasira AkhterJammu & Kashmir    Innovator – Environmental Conservation
 
Sandhya DharJammu & KashmirSocial Worker
 
Nivruti RaiKarnataka Country Head, Intel India.
Tiffany BrarKerala Social Worker – Working for Blind people
 
Padma YangchanLadakh Revived the lost cuisine & clothing in Leh region
Jodhaiya Bai BaigaMadhya PradeshTribal Baiga Art Painter
 
Saylee NandkishorMaharashtra Down syndrome affected   Kathak Dancer
 
Vanita Jagdeo BoradeMaharashtra     First Women Snake Rescuer
 
Meera ThakurPunjabSikki Grass Artist
 
Jaya Muthu & Tejamma (Jointly)Tamil NaduArtisans – Toda embroidery
 
Ela Lodh(Posthumous)Tripura  Obstetrician & Gynecologist
Arti RanaUttar Pradesh     Handloom Weaver & Teacher

ನಾರಿ ಶಕ್ತಿ ಪುರಸ್ಕಾರ ಪಟ್ಟಿ 2021

NameState / UTDomain
Sathupati Prasanna SreeAndhra Pradesh     Linguist – preserving minority tribal languages
Tage Rita TakheArunachal PradeshEntrepreneur
Madhulika Ramteke  ChhattisgarhSocial Worker
Niranjanaben Mukulbhai KalarthiGujaratAuthor & Educationist
Pooja SharmaHaryanaFarmer & Entrepreneur
Anshul MalhotraHimachal PradeshWeaver
Shobha GastiKarnataka Social Activist – Working for ending Devadasi system
Radhika MenonKerala  Captain Merchant Navy-First woman     to receive award for        Exceptional Bravery at Sea from IMO
Kamal Kumbhar  MaharashtraSocial Entrepreneur
Sruti MohapatraOdishaDisability Rights Activist
Batool BegamRajasthanMaand & Bhajan Folk Singer
Thara RangaswamyTamil NaduPsychiatrist & Researcher
Neerja MadhavUttar Pradesh     Hindi Author- working for rights for     transgenders&Tibetan refugees
Neena GuptaWest BengalMathematician

ಪೆಟ್ರೋಲ್ ಬೆಲೆ ಏರಿಕೆಗೆ ಜನರಲ್ಲಿ ಆತಂಕ ಸೃಷ್ಟಿಸಿದೆ!

https://jcs.skillindiajobs.com/

Social Share

Leave a Reply

Your email address will not be published. Required fields are marked *