ನೇಹಾ ಕಕ್ಕರಗೆ ಭಾರಿ ಅವಮಾನ!-Neha Kakkar Trolled

Neha Kakkar Trolled

ನೇಹಾ ಕಕ್ಕರ್

ಇವತ್ತಿನ ದಿನಗಳಲ್ಲಿ ಹಲವಾರು ಹಿನ್ನೆಲೆ ಗಾಯಕರು ತಮ್ಮ ದ್ವನಿಯಿಂದ ಬಹಳ ಜನಪರ್ಯತೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ದ್ವನಿಯಿಂದ ಜನರನ್ನು ಅವರ ಕಡೆಗೆ ಗಮನ ಸೆಳೆದುಕೊಳ್ಳುವ ಕೆಲಸವನ್ನು ಮಾಡುತ್ತಾರೆ,ಅವರಲ್ಲಿ ನೇಹಾ ಕಕ್ಕರ್ ಕೂಡ ಆಗಿದ್ದಾರೆ.

ಚಿತ್ರರಂಗದಲ್ಲಿ ಹಾಗು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಅಭಿಮಾನಿ ಬಳಗವನ್ನು ಹೊಂದಿದ ನೇಹಾ ಕಕ್ಕರ್ ಒಂದು ಟ್ರೋಲಿಗೆ ಸಿಕ್ಕಿ ಬಿದ್ದಿದ್ದಾರೆ.

ನೇಹಾ ಕಕ್ಕರ್ ತಮ್ಮ ಧ್ವನಿ, ಹಾಡುಗಳ ಮೂಲಕ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ, ನೇಹಾ ಅವರ ಹಾಡಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ.

ಪ್ರತಿಬಾರಿಯೂ ನೇಹಾ ಅವರ ಹಾಡು ರಿಲೀಸ್ ಆಗುವುದನ್ನೇ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಈ ಬಾರಿ ರಿಲೀಸ್ ಆದ ಹಾಡು ಅದ್ಯಾಕೋ ಅಭಿಮಾನಿಗಳಿಗೆ ಅಷ್ಟೊಂದು ಇಷ್ಟ ಆಗಿಲ್ಲ.Neha Kakkar Trolled

ನೇಹಾ ಕಕ್ಕರ್ ಧ್ವನಿ ಹಾಡಿನಲ್ಲಿ ಬೇರೆ ರೀತಿ ಕೇಳುತ್ತದೆ, ಹಾಗಾಗಿ ನೇಹಾ ಅವರ ಧ್ವನಿ ಮತ್ತು ಹೊಸ ಹಾಡನ್ನು ಟ್ರೋಲ್ ಮಾಡುತ್ತಿದ್ದಾರೆ.

ಅಭಿಮಾನಿಗಳ ಪ್ರತಿಕ್ರಿಯೆ

ಇತ್ತೀಚಿಗೆ ರಿಲೀಸ್ ಆದ ಆಲ್ಬಂ ವೀಡಿಯೊ ಸಾಂಗ್ ‘ನರಾಜಗಿ’. ಈ ಹಾಡಿನಲ್ಲಿ ನೇಹಾ ತಮ್ಮ ಹಳೆಯ ಪ್ರೇಮಿಯನ್ನು ನೆನೆದು ನೋವಿನಲ್ಲಿ ಹಾಡುತ್ತಾಳೆ.

‘ನೀನಿಲ್ಲದೆ ನಾನು ಒಂಟಿ, ಒಂಟಿತನ ಅನುಭವಿಸುತ್ತಿದ್ದೇನೆ’ ಎಂಬ ಸಾಹಿತ್ಯದೊಂದಿಂಗೆ ಹಾಡು ಮುಂದುವರಿಯುತ್ತದೆ.

ಈ ಹಾಡು ಶುರು ಆಗುವುದೇ ಇಂಗ್ಲೀಷ್ ಸಾಹಿತ್ಯದಿಂದ, ಇಂಗ್ಲೀಷ್ ಸಾಹಿತ್ಯವನ್ನು ಹಾಡುವಾಗ ನೇಹಾ ಕಕ್ಕರ್ ಧ್ವನಿ ವಿಭಿನ್ನವಾಗಿ ಕೇಳಿ ಬರುತ್ತದೆ.

ಅದನ್ನು ಆಟೋ ಕಂಪೋಸ್ ಮಾಡಲಾಗಿದೆ, ಯಾಕೆಂದರೆ ಇಂಗ್ಲೀಷ್ ಸಾಹಿತ್ಯದ ಸಾಲುಗಳನ್ನು ಸ್ಟೈಲಿಶ್ ಆಗಿ ಉಚ್ಚರಣೆಯನ್ನು ಮಾಡಲಾಗಿದೆ.

ಹಾಗಾಗಿ ಇದು ನಕಲಿ ಇಂಗ್ಲೀಷ್ ಆ್ಯಕ್ಸೆಂಟ್ ಎಂದು ಟ್ರೋಲ್ಗಳನ್ನೂ ಜನರು ಮಾಡುತ್ತಿದ್ದಾರೆ.

ಈ ಹಾಡು ಜನರ ಮನಸ್ಸನ್ನು ಗೆಲ್ಲುವಲ್ಲಿ ವಿಫಲವಾಗಿದೆ, ಹಾಡು ರಿಲೀಸ್ ಆಗುತ್ತಲೆ ಟ್ರೋಲ್ ಆಗಿದೆ.

ನೇಹಾ ತಮ್ಮ ನೈಜ ಧ್ವನಿಯಲ್ಲಿ ಹಿಂದಿ ಭಾಷೆಯಲ್ಲೇ ಹಾಡು ಬಹುದಿತ್ತು, ಅದು ಬಿಟ್ಟು ಹೀಗೆ ಬಲವಂತವಾಗಿ ಇಂಗ್ಲೀಷ್ ಸಾಹಿತ್ಯ ತುರುಕಿ, ಅದಕ್ಕೆ ಎಫೆಕ್ಟ್ ಕೊಟ್ಟು ಕೆಟ್ಟದಾಗಿ ಕೇಳುವಂತೆ ಮಾಡಿದ್ದಾರಲ್ಲಾ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ನೇಹಾ ಹೊಸ ಹಾಡಿಗೆ ಬಂದ ಕಮೆಂಟ್ಗಳು ಹೀಗಿವೆ. ‘ಬಲವಂತವಾಗಿ ನಕಲಿ ಇಂಗ್ಲಿಷ್ ಉಚ್ಚಾರಣೆ’, ‘ಸೌಂಡ್ ತುಂಬಾನೇ ಇರಿಟೇಟಿಂಗ್ ಆಗುತ್ತಿದೆ.

ಆಟೋಟ್ಯೂನ್ ತುಂಬಾನೇ ಹೆಚ್ಚಾಗಿದೆ’, ‘ನೀವು ಹಿಂದಿಯಲ್ಲೇ ಚೆನ್ನಾಗಿ ಹಾಡಲು ಸಾಧ್ಯವಿಲ್ಲ ಮತ್ತು ನೀವು ಇಂಗ್ಲಿಷ್ ಹಾಡನ್ನು ಪ್ರಯತ್ನಿಸುತ್ತಿದ್ದೀರಿ’, ಎಂದು ಕಾಮೆಂಟ್ ಮಾಡಿದ್ದಾರೆ.Neha Kakkar Trolled

ಹೀಗೆ ನೇಹಾ ಹಾಡಿಗೆ ಮತ್ತು ಧ್ವನಿಗೆ, ಆಕೆಯೆ ಇಂಗ್ಲೀಷ್ ಉಚ್ಚಾರಣೆ ಬಗ್ಗೆ ನೆಗೆಟಿವ್ ಕಮೆಂಟ್ಗಳು ಬಂದಿವೆ.

ಇದು ಒಂದು ಕಡೆ ಆದರೆ ಮತ್ತೊಂದೆಡೆ ನೇಹಾಳ ಹೊಸ ಹಾಡು ಕೆಲವು ಪ್ರೇಕ್ಷಕರಿಗೆ ಇಷ್ಟ ಆಗಿದೆ, ಈ ಹಾಡನ್ನು ಕೆಲವರು ಮೆಚ್ಚಿದ್ದಾರೆ.

ಆದರೆ ಈ ಬಾರಿ ಹೆಚ್ಚಾಗಿ ಟ್ರೋಲ್ ಆಗಿ, ಬಹುತೇಕ ಪ್ರೇಕ್ಷಕರ ಮನ ಗೆಲ್ಲುವಲ್ಲಿ ನೇಹಾ ಹಿಂದೆ ಸರಿದಿದ್ದಾರೆ.

ನೇಹಾ ಕಕ್ಕರ್ ಈ ಹಾಡಿಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದು, ನೇಹಾ ಹಾಡಿರುವ ಈ ಹಾಡಿನಲ್ಲಿ ನೇಹಾ ಜೊತೆಗೆ ಬಾಲಿವುಡ್ ನಟ ಅಕ್ಷಯ್ ಒಬೆರಾಯ್ ಕೂಡ ಇದ್ದಾರೆ.

ಇನ್‍ಸ್ಟಾಗ್ರಾಮ್ IGTV ಯನ್ನು ತೆಗೆದು ಹಾಕಲಿದೆ!

https://www.google.com/search?q=way2plot&oq=w&aqs=chrome.1.69i60j69i59l3j69i60l4.1040j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *