ಪದ್ಮಶ್ರೀಗೆ ಒಲಿದು ಬಂದ ಹಾಜಬ್ಬ ನಾಮಾಂಕಿತ ಹರೇಕಳದ ಬರಿಗಾಲ ಅಕ್ಷರ ಸಂತ

ಪದ್ಮಶ್ರೀಗೆ ಒಲಿದು ಬಂದ ಹಾಜಬ್ಬ ನಾಮಾಂಕಿತ ಹರೇಕಳದ ಬರಿಗಾಲ ಅಕ್ಷರ ಸಂತ

ಪದ್ಮಶ್ರೀಗೆ ಒಲಿದು ಬಂದ ಹಾಜಬ್ಬ ನಾಮಾಂಕಿತ ಹರೇಕಳದ ಬರಿಗಾಲ ಅಕ್ಷರ ಸಂತ 📖

“….ಜಿ ನಮಸ್ತೆ. ಢೇರ್ ಸಾರಿ ಬಧಾಯಿಯಾ ಆಪ್ಕೋ, ಆಪ್ ದೇಶ್ ಕೆ ಸಬ್ಸೆ ಬಡೀ ಪುರಸ್ಕಾರ್ ‘ಪದ್ಮಶ್ರೀ’ ಕೆ ಪಾತ್ರ ಹುಯೇ ಹೈ. ಅಗಲೇ ದಿನೋ ಮೆ ಆಪ್ ಕೋ ದೆಲ್ಲೀ ಕಿ ರಾಷ್ಟ್ರಪತಿ ಭವನ್ ಸೆ ನ್ಯೋತಾ ದೀ ಜಾಯೆಗಿ…”- ಪದ್ಮಶ್ರೀಗೆ ಒಲಿದು ಬಂದ ಹಾಜಬ್ಬ

ದಕ್ಷಿಣ ಕನ್ನಡದ ಹರೇಕಳದ ವ್ಯಕ್ತಿಯೊಬ್ಬರಿಗೆ ಕೇಂದ್ರ ಗೃಹಸಚಿವಾಲಯದ ಕಛೇರಿಯಿಂದ ಹೀಗೊಂದು ಕಾಲ್ ಬರುತ್ತದೆ.

ತನ್ನ ಊರಿನ ರೇಷನ್ ಅಂಗಡಿಯ ಮುಂದೆ ಖಾಲಿ ಚೀಲ ಹಿಡಿದು ರೇಷನ್ ಗಾಗಿ ಕಾದು ಬೆಳಗಿನಿಂದ ಕಾದು ಬಸವಳಿದಿದ್ದ ಆ ವ್ಯಕ್ತಿ “…. ಹಮಾರೆ ಹಿಂದೀ ನಹೀ….” ಎಂದು ಮುಗ್ಧವಾಗಿಯೇ ಉತ್ತರಿಸಿ ಕಾಲ್ ಕಟ್ ಮಾಡಿ ಎಂದಿನಂತೆ ಶಾಲೆಯ ಬೀಗ ತೆಗೆದು ಕಸ ಗುಡಿಸಿ,

ನೆಲ ಸಾರಿಸಿ ತಮ್ಮ ನಿತ್ಯದ ಕಾಯಕದಂತೆ ಮಂಗಳೂರಿನ ಬೀದಿಗಳಲ್ಲಿ ಕಿತ್ತಲೆ ಹಣ್ಣನ್ನು ಮಾರಲು ಹೊರಟೂ ಹೋಗುತ್ತಾರೆ.

ಹತ್ತಿರದ ಅವರ ಸ್ನೇಹಿತರಿಂದ ಸಂಜೆಯ ವೇಳೆಗೆ ಇಡಿಯ ಊರಿಗೆ ವಿಷಯ ಹಬ್ಬಿ, ಊರಿಗೆ ಊರೇ ಇವರನ್ನು ಹುಡುಕಿ ಬಂದು ನಿಜವಾದ ವಿಷಯ ತಿಳಿಸಿದಾಗಲೂ

ಈ ವ್ಯಕ್ತಿ ಹೇಳಿದ್ದು” “ಒಂದು ರೂಪಾಯಿ ಬೆಲೆ ಬಾಳದ ಮನುಷ್ಯನಿಗೆ ಪದ್ಮಶ್ರೀ, ಒಂದು ರೂಪಾಯಿ ಬೆಲೆ ಬಾಳದ ಮನುಷ್ಯನಿಗೆ ಜನ ಲಕ್ಷಾಂತರ ಹಣ ಕೊಟ್ಟರು. ಅವರಿಗೆ ನಾನು ಎಂದಿಗೂ ಚಿರಋಣಿ”.

ಅದು ಕಳೆದ ೨೦೨೦ ರ ಜನವರಿ ತಿಂಗಳ ೨೦ನೇ ತಾರೀಕು, ಮತ್ತು ಆ ಕರೆ ನಮ್ಮ ಬಂದದ್ದು ಅಕ್ಷರ ಸಂತ ಹಾಜಬ್ಬರಿಗೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಎಂದು ಭಾವಿಸಿ ನಿಮ್ಮೊಂದಿಗೆ ಮಾತಿಗಿಳಿಯುತ್ತೇನೆ.

ಕನ್ನಡ ನಾಡಿನ ಕುಗ್ರಾಮದ ‘ಆರ್ಥಿಕ’ ಕಡುಬಡತನದ, ಅನಕ್ಷರಸ್ಥ ವ್ಯಕ್ತಿ ಹರೇಕಳದ ಹಾಜಬ್ಬ ಕೇರಳ ರಾಜ್ಯದ ಕನ್ನಡ ಮಾಧ್ಯಮದ ಪಠ್ಯಕ್ಕೆ ವಿಷಯವಾದ ವಿಷಯವಿದು.

ಅಲ್ಲದೆ ಇಂತಹ ವ್ಯಕ್ತಿಯೊಬ್ಬ ನಾಡಿನ ವಿಶ್ವವಿದ್ಯಾನಿಲಯಗಳಾದಿಯಾಗಿ, ಆರ್ಥಿಕ ಸಾಮಾಜಿಕ ಸಬಲ ಸಂಘ-ಸಂಸ್ಥೆಗಳಿಗೂ ಸಾಧ್ಯವಾಗದ ಕೆಲಸವನ್ನು ಹಾಜಬ್ಬ ಸಾಧಿಸಿತೋರಿಸಿದ್ದಾರೆ.

ಅದು ಕೂಡ ಬೀದಿಬದಿಯ ಕಿತ್ತಲೆ ವ್ಯಾಪಾರದಿಂದಲಷ್ಟೇ ಎಂಬುದು ಗಮನಾರ್ಹ. ಸ್ವಂತಕ್ಕೊಂದು ಸೂರಿಲ್ಲದ ಅಕ್ಷರ ಸಂತ ಕಟ್ಟಿದ್ದು ಬರೋಬ್ಬರಿ ಎರೆಡು ಸುಸಜ್ಜಿತ ಶಾಲೆಗಳನ್ನು.

೬೪ರ ಹರೆಯದ ಹಾಜಬ್ಬ ನಿರಕ್ಷರಕುಕ್ಷಿ. ಬಡತನವನ್ನು ಬೆನ್ನಿಗಂಟಿಸಿಕೊಂಡೇ ಹುಟ್ಟಿದ್ದ ಕುಂಟುಂಬದ ಮೂರನೆ ಕುಡಿ. ಬಾಲ್ಯದಿಂದಲೇ ದುಡಿಮೆಗೆ ಬಿದ್ದ ಹಾಜಬ್ಬ ಮಾಡಿದ ಕೆಲಸಗಳು ಒಂದೆರೆಡಲ್ಲ. ಉದರಂಭಣಕ್ಕಾಗಿ ಕಡೆಯದಾಗಿ ಹಾಜಬ್ಬ ಆಶ್ರಯಿಸಿದ್ದು ಮೋಸಂಬಿ, ಕಿತ್ತಲೆ ಹಣ್ಣುಗಳನ್ನು ಮಾರಾಟ. ಒಪ್ಪತ್ತಿನ ಗಂಜಿ ಕೂಡ ಅವರ ಇಡೀ ದಿನದ ವ್ಯಾಪಾರದ ಮೇಲೆ ಅವಲಂಬಿತವಾಗಿದ್ದ ಕೆಟ್ಟ ಸ್ಥಿತಿ ಹಾಜಬ್ಬರದ್ದು.

ಜಗತ್ತಿನಲ್ಲಿ ಬಡತನ, ನೋವು, ಹತಾಶೆ, ಅವಮಾನಗಳಿವೆಯಲ್ಲ ಅವು ಕಲಿಸುವ ಪಾಠ ಜಗತ್ತಿನ ಯಾವ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯದ ಸಿಲಾಬಸ್ ನಲ್ಲಿಯೂ ಕಾಣಸಿಗುವುದಿಲ್ಲ.

ಕಲಿಯಲು ನಾವು ಸಿದ್ಧವಿರಬೇಕಷ್ಟೇ. ಕಲಿಯಲು ‘ಊಹು’ ಗುಟ್ಟಿದೆವೋ ಆಗ ನೋಡಿ ಬದುಕಿದ ವ್ಯಕ್ತಿಯನ್ನು ಬದುಕಿದ್ದಂತೆಯೇ ಕೊಲ್ಲುವ ಆಯುಧಗಳಾಗಿ ಮಾರ್ಪಡುತ್ತವೆ.

ಬದುಕಿನ ತಣ್ಣಗಿನ ಕ್ರೌರ್ಯ ಹೆಗಲೇರುವುದೇ ಹಾಗೆ. ಯಶಸ್ಸಿನೆಡೆಗೆ ಸಾಗುವಾಗ ಲೆಕ್ಕವಿಲ್ಲದಷ್ಟು ಸೋಲುಗಳ ಮೂಟೆಯನು ಹೊತ್ತೇ ಸಾಗಬೇಕಿರುತ್ತದೆ. ಆಳವೇ ಅರಿಯದ ಅಸಂಖ್ಯ ದುಃಖಗಳ ಮಡುವನ್ನೇ ದಾಟಬೇಕಿರುತ್ತದೆ.

ಪದ್ಮಶ್ರೀಗೆ ಒಲಿದು ಬಂದ ಹಾಜಬ್ಬ ನಾಮಾಂಕಿತ ಹರೇಕಳದ ಬರಿಗಾಲ ಅಕ್ಷರ ಸಂತ 📖

ಕೆಲವರು ಅರ್ಧ ದಾರಿಯಲ್ಲಿ ಕುಸಿದು ಕುಳಿತರೆ ಇನ್ನರ್ಧ ಮಂದಿ ಮಡುವಿನಲ್ಲೇ ಮುಳುಗಿ ಮಡಿಯುತ್ತಾರೆ.

ಹಾಜಬ್ಬರ ಜೀವನದಲ್ಲಿ ಅಂತಹದೊಂದು ಘಟನೆ ನಡೆಯದೇ ಹೋಗಿದ್ದರೆ ಇಂದಿಗೆ ಇದೆಲ್ಲವೂ ಸಾಧ್ಯವಾಗುತ್ತಿರಲಿಲ್ಲವೇನೋ. ಅದೊಂದು ಅವಮಾನದ ಕಥೆ.

ಅಷ್ಟೇ ಅಲ್ಲ ಅದು ಅವಮಾನದಿಂದ ಅಭಿಯಾನಕ್ಕೆ, ಅಭಿಯಾನದಿಂದ ಶಾಲೆಯ ಸಂಸ್ಥಾಪನಕ್ಕೆ ಕಾರಣವಾದ ಕಥೆ. ಒಂದು ದಿನ ಹಾಜಬ್ಬ ಮಂಗಳೂರಿನ ಬಸ್ ನಿಲ್ದಾಣದಲ್ಲಿ ಹಣ್ಣು ಮಾರುತ್ತಿದ್ದಾಗ ವಿದೇಶಿಗನೊಬ್ಬ “Hey man, how much are these oranges?” ಎಂದು ಕೇಳುತ್ತಾನೆ.

ಶಾಲೆಯ ಮಟ್ಟಿಲೇರದ ಹಾಜಬ್ಬ ಟಾಕುಟೀಕಾಗಿ ಅವನು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ತೀವ್ರ ಮುಜುಗರಕ್ಕೆ, ಅವಮಾನಕ್ಕೆ ಈಡಾಗುತ್ತಾರೆ. ಆ ಅಪಮಾನದ ಗೀರು ಗಾಯಕ್ಕೆ ಅವರು ತಾವೊಬ್ಬರೇ ಮುಲಾಮು ಕಂಡುಕೊಳ್ಳದೆ ತನ್ನಂತೆಯೇ ಇರುವ ತನ್ನೂರಿನ ಹಲಾವರು ಮಕ್ಕಳ ಶಿಕ್ಷಣಕ್ಕೆ ಘಾಸಿಯಾಗದಂತೆ ಗಾಯವೇ ಆಗದಂತೆ ಶಾಲೆಯನ್ನು ಪ್ರಾರಂಭಿಸುವ ನಿರ್ಧಾರ ಮಾಡಿಯೇ ಬಿಡುತ್ತಾರೆ.

ನಿರ್ಧಾರ ಮಾಡಿದ ಮಾತ್ರಕ್ಕೆ ಹಾಜಬ್ಬರ ಕನಸು ನನಸಾಗುವುದು ಸುಲಭ ಸಾಧ್ಯವಾಗಿರಲಿಲ್ಲ.

ಅವರ ಕೈಯಲ್ಲಿ ಇದ್ದದ್ದು ಆ ದಿನದ ಗಳಿಕೆಯ ೧೨೦ ರೂಪಾಯಿಗಳು ಮತ್ತು ಯಾವುದೇ ಸಂದರ್ಭದಲ್ಲೂ ತನ್ನೂರಿನ ಮಕ್ಕಳಿಗೆ ಶಿಕ್ಷಣದಿಂದ ವಂಚಿತ ಮಾಡಲಾರೆನೆಂಬ ೧೨೦ ಆನೆಗಳಷ್ಟು ಬಲದ ಆತ್ಮವಿಶ್ವಾಸ. ಹಾಜಬ್ಬರ ಸತ್ವಪರೀಕ್ಷೆ ಆರಂಭವಾಗುವುದೇ ಇಲ್ಲಿಂದ.

“A truth is always stranger than fiction “

ಎನ್ನುವ ಹಾಗೆ ಅದು ಛಲ ಬಿಡದ ಮೈನವಿರೇಳಿಸುವ ಶಾಸನ ಸೂಕ್ತ ರೋಚಕ ಕಥಾನಕ.

ಇಷ್ಟು ದಿನ ಹಣ್ಣು ಮಾರಲಷ್ಟೇ ತಿರುಗುತ್ತಿದ್ದ ಹಾಜಬ್ಬರ ದಿನಚರಿ ಬದಲಾಗಿ ಹಣ್ಣು ಮಾರಾಟದ ತಿರುಗಾಟದ ಜೊತೆಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಅಧಿಕಾರಿಗಳ ಕಛೇರಿಗಳಿಗೆ ದಿನಂಪ್ರತಿಯ ತಿರುಗಾಟಕ್ಕೆ ಬದಲಾಗುತ್ತದೆ.

ಸರ್ಕಾರಿ ಕಛೇರಿಗಳ ಅಲೆದಾಟದಲ್ಲಿ ಅದೆಷ್ಟೋ ಜನ ಚಪ್ಪಲಿ ಸವಿಸಿಕೊಂಡವರ ನಡುವೆ ಹಾಜಬ್ಬ ತಮ್ಮ ಕಾಲುಗಳನ್ನೇ ಸವಿಸಿಕೊಳ್ಳುತ್ತಾರೆ.

ಕೆದರಿದ ಕೂದಲು, ಬತ್ತಿಹೋದಂತಿದ್ದ ಮುಖ, ಮೊಣಕೈಗಿಂತ ಕೊಂಚ ಕೆಳಗೆ ಮಡಚಿದ, ಮೇಲಿನೆರೆಡು ಬಟನ್ ಗಳನ್ನು ಯಾವಾಗಲೂ ತೆರೆದ ತೋಳಿನ ಬಿಳಿಯ ಬಣ್ಣದ ಮಾಸಲು ಅಂಗಿ, ಬಿಳಿ ಪಂಚೆ, ಕಾಲಿಗೆ ಹರಿದ ಹವಾಯಿ ಚಪ್ಪಲಿ ಯ ಹಾಜಬ್ಬರನ್ನು ಯಾವ ಅಧಿಕಾರಿಯೂ ಗಂಭೀರವಾಗಿ ಪರಿಗಣಿಸಲೇ ಇಲ್ಲ.

ಕೆಲ ಅಧಿಕಾರಗಳಂತೂ ಇವರ ವೇಷ ಭೂಷಣ ನೋಡಿ ಕಛೇರಿಯ ಪ್ರವೇಶಕ್ಕೂ ಅನುಮತಿ ನೀಡುತ್ತಿರಲಿಲ್ಲ. ಆದರೂ ಛಲಬಿಡದ ತ್ರಿವಿಕ್ರಮನಂತೆ ಹಾಜಬ್ಬ ತಮ್ಮ ಗುರಿಯನ್ನು ಸಾಧಿಸಿಯೇ ಬಿಡುತ್ತಾರೆ.

ಸರ್ಕಾರಿ ಜಾಗವನ್ನು ಅತಿಕ್ರಮಿಸಿದ ವ್ಯಕ್ತಿ ಕೈನಿಂದ ಜಾಗವನ್ನು ವಶಪಡಿಸಿ ಶಾಲೆ ಆರಂಭಿಸಲು ನೀಡುವಂತೆ ಒತ್ತಾಯಿಸುತ್ತಾರೆ. ಕಡೆಗೆ ೫೫ ಸಾವಿರ ನೀಡಿ ಜಾಗವನ್ನು ಶಾಲೆಗೆ ಪಡೆಯುವ ಒಪ್ಪಂದವಾಗುತ್ತದೆ.

ತನ್ನ ಉಳಿತಾಯದ ೨೫ ಸಾವಿರ ಮಾತ್ರ ಹೊಂದಿದ್ದ ಹಾಜಬ್ಬ ಉಳಿದ ಹಣ ಹೊಂದಿಸಲು ಪರದಾಡುತ್ತಾರೆ. ತಲೆ ಮರೆಸಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗುತ್ತದೆ.

ಕಡೆಗೆ ಸೈದಾನಿ ಬೀಬಿ ದರ್ಗಾ, ಡಾ.ವೀರೇಂದ್ರ ಹೆಗ್ಗಡೆ, ಖಾಸಗಿ ಕಂಪನಿಗಳ ನೆರವಿನೊಂದಿಗೆ ಜಾಗವನ್ನು ಖರೀದಿಸುತ್ತಾರೆ ಹಾಜಬ್ಬ. ಸರಿ ಸುಮಾರು ಅರವತ್ತು ಕೇಜಿ ದೇಹತೂಕದ ಮನುಷ್ಯ ಹಾಜಬ್ಬ ಬಿಟ್ಟೂ ಬಿಡದ ತಮ್ಮ ಮೊದಲ ಪ್ರಯತ್ನದಲ್ಲಿ ಒಟ್ಟು ಗೂಡಿಸಿದ ಮೊತ್ತ ಅನಾಮತ್ತು ೬೦ ಲಕ್ಷಕ್ಕಿಂತಲೂ ಹೆಚ್ಚು.

ತನ್ನ ಕನಸು ನನಸಾಗುವ ಸಂಭ್ರಮ ಹಾಜಬ್ಬರಿಗೆ ಈಗ. ಇದೇ ಸಮಯ ೧೯೯೯-೨೦೦೦ ಸಾಲಿನಲ್ಲಿ ಶೈಕ್ಷಣಿಕ ವರ್ಷಾರಂಭದಿಂದ ಪ್ರಾಥಮಿಕ ಶಾಲೆ ಆರಂಭಿಸಲು ಹಾಜಬ್ಬರಿಗೆ ಅನುಮತಿ ದೊರೆಯುತ್ತದೆ.

ಪದ್ಮಶ್ರೀಗೆ ಒಲಿದು ಬಂದ ಹಾಜಬ್ಬ ನಾಮಾಂಕಿತ ಹರೇಕಳದ ಬರಿಗಾಲ ಅಕ್ಷರ ಸಂತ 📖

ಪದ್ಮಶ್ರೀಗೆ ಒಲಿದು ಬಂದ ಹಾಜಬ್ಬ

೧೯೯೯ ಜೂನ್ ೬ ರಂದು ನ್ಯೂ ಪಡ್ಪುವಿನ ಮದರಸಾದ ಸಣ್ಣ ಕೊಠಡಿಯಲ್ಲಿ ೨೮ ಮಕ್ಕಳೊಂದಿಗೆ ಪ್ರಾಥಮಿಕ ಶಾಲೆ ಆರಂಭಗೊಳ್ಳುತ್ತದೆ.

ಹಾಜಬ್ಬರ ಕನಸು ಈಡೇರುವ ಸಮಯ ಅದು. –

ಇಷ್ಟಕ್ಕೆ ಸುಮ್ಮನಾಗದ ಹಾಜಬ್ಬ ಶಾಲೆ ಆರಂಭಿಸಲು ದೊರಕಿದ ಜಾಗದಲ್ಲಿ ಕಟ್ಟಡ ಕಟ್ಟಲು ಹೊರಡುತ್ತಾರೆ. ಹಣ್ಣು ಮಾರಿ ಬಂದ ನಂತರ ಹಾರೆ -ಗುದ್ದಲಿ ಹಿಡಿದು ಜಾಗ ಸಮತಟ್ಟು ಮಾಡುತ್ತಾರೆ.

ಕಿತ್ತಲೆ ಮಾರಿ ಉಳಿಸಿದ ಹಣ ಶಾಲೆಯ ಕೆಲಸಕ್ಕೆ ವಿನಿಯೋಗವಾಗುತ್ತದೆ. ಹಣ ಇದ್ದಷ್ಟು ಸಮಯ ಕೆಲಸದವರನ್ನು ಕರೆಯುವ ಹಾಜಬ್ಬ ಆಮೇಲೆ ತಾನೇ ಮೇಸ್ತ್ರಿಯಾಗುತ್ತಾರೆ.

ಇಲ್ಲಿ ಇನ್ನೊದು ವಿಷಯವನ್ನು ಮತ್ತು ವ್ಯಕ್ತಿಯನ್ನು ಪ್ರಸ್ತಾಪಿಸದೇ ಮತ್ತು ನಿಮಗೆ ಪರಿಚಯಿಸದೇ ಮುಂದೆ ಹೋಗುವುದು ಸರಿಯಲ್ಲವೇನೋ.

ಇದೇ ಸಂದರ್ಭದಲ್ಲಿ ಇವರ ಕೆಲಸಗಳನ್ನು ಗಮನಿಸಿತ್ತಿದ್ದ ‘ಹೊಸ ದಿಗಂತ’ ಪತ್ರಿಕೆಯ ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿಯವರು ಇವರ ಬಗ್ಗೆ ಒಂದು ವಿಸ್ತೃತ ಲೇಖನವನ್ನೇ ಬರೆಯುತ್ತಾರೆ.

ಅಲ್ಲಿಯವರಗೂ ಎಲೆಮರೆಯ ಕಾಯಿಯಂತಿದ್ದ ಹಾಜಬ್ಬರ ವ್ಯಕ್ತಿತ್ವ ನೋಡನೋಡುತ್ತಿದ್ದಂತೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅನಾವರಣಗೊಳ್ಳುತ್ತದೆ. ಅಲ್ಲದೆ ೨೦೦೪ರಲ್ಲಿ ಸ್ಥಳೀಯ ಪತ್ರಿಕೆಯೊಂದು ಇವರನ್ನು ‘ವರ್ಷದ ವ್ಯಕ್ತಿ’ ಎಂದು ಗುರುತಿಸಿ ಸನ್ಮಾನಿಸುತ್ತದೆ.

ಏನಕೇನ, ಅಂದಿನಿಂದ ಹಾಜಬ್ಬರ ಜೊತೆಗೆ ಕೆಲ ಸಂಘ-ಸಂಸ್ಥೆಗಳು ಹಾಗು ಕೆಲ ಜನಪ್ರತಿನಿಧಿಗಳು ಕೈಜೋಡಿಸುತ್ತಾರೆ. ಸುಸಜ್ಜಿತ ಪ್ರಾಥಮಿಕ ಶಾಲಾ ಕಟ್ಟಡ ಹರೇಕಳದಲ್ಲಿ ತಲೆಯೆತ್ತುತ್ತದೆ.

ಪ್ರೌಢಶಾಲೆ ಆರಂಭಿಸಲು ಹೊರಡುತ್ತಾರೆ ಹಾಜಬ್ಬ. ಒಮ್ಮೆ ಕೆಲಸ ನಡೆಯುತ್ತಿದ್ದಾಗ ಸಿಮೆಂಟಿಗೆ ನೀರು ಹಾಕಲು ಹೋಗಿ ಆಯತಪ್ಪಿ ಬಿದ್ದ ಹಾಜಬ್ಬ ಆಸ್ಪತ್ರೆಗೆ ದಾಖಲಾಗುತ್ತಾರೆ.

ಕೈನಲ್ಲಿದ್ದ ಹಣವೆಲ್ಲ ಶಾಲೆಗೆ ಹಾಕಿದ್ದ ಹಾಜಬ್ಬರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲೆ ಚೇತರಿಸಿಕೊಂಡ ಹಾಜಬ್ಬ ಮರಳಿ ಶಾಲೆಯ ಕೆಲಸಕ್ಕೆ ಬರುತ್ತಾರೆ. ಕೆಲಸ ಪೂರ್ತಿಯಾಗುತ್ತದೆ.

ತದನಂತರದಲ್ಲಿ ಲೇಖಕ ಇಸ್ಮತ್ ಪಜೀರ್ ಬರೆದ ‘ಹರೇಕಳ ಹಾಜಬ್ಬ ಜೀವನ ಚರಿತ್ರೆ’ ಲೋಕಾರ್ಪಣೆಯಾಗುತ್ತದೆ.

ಸಾಲು ಸಾಲು ಪ್ರಶಸ್ತಿ-ಪುರಸ್ಕಾರಗಳು ಹಾಜಬ್ಬ ಎನ್ನುವ ಬರಿಗಾಲ ಫಕೀರನನ್ನು ಅರಸಿ ಬರುತ್ತವೆ. ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ. ಬಿಬಿಸಿ ಹಾಜಬ್ಬ ಸಾಧನೆ ಕುರಿತು ವಿಶೇಷ ಲೇಖನ ಪ್ರಕಟಿಸುತ್ತದೆ.

ಸಿ ಎನ್ ಎನ್ – ಐ ಬಿ ಸಿ ಮತ್ತು ರಿಲಯನ್ಸ್ ಫೌಂಡೇಶನ್ ಹಾಜಬ್ಬರಿಗೆ “ರಿಯಲ್ ಹೀರೋ” ಎಂದು ಗೌರವಿಸುತ್ತವೆ

..ಪ್ರತಿ ದಾನಿ ನೀಡಿದ ಕಿರುಕಾಣಿಕೆ ಶಾಲೆಯ ಇತಿಹಾಸದಲ್ಲಿ ಒಂದೊಂದು ಮೈಲುಗಲ್ಲು ಎಂದೇ ಭಾವಿಸುತ್ತಾರೆ.

ಮಲಗಿದಲ್ಲೇ ಇರುವ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಪೈಂಟರ್ ಮಗನ ಕುಟುಂಬ ಹೊಂದಿರುವ ಹಾಜಬ್ಬ ತನಗೆ ಸಿಕ್ಕಿದ ಪ್ರಶಸ್ತಿ-ಪುರಸ್ಕಾರ-ಗೌರವಗಳ ನಗದನ್ನೆಲ್ಲ ಶಾಲೆಯ ಕಲ್ಲು-ಮರಳು-ಸಿಮೆಂಟಿಗೆ ಉಪಯೋಗಿಸಿದರು.

ದಾನಿಗಳು ನೀಡಿದ ಹಣವನ್ನು ತನ್ನ ಸ್ವಂತಕ್ಕೆ ಹೇಗೆ ಉಪಯೋಗಿಸಲಿ ಎನ್ನುವ ಹಾಜಬ್ಬಗೆ ಮಂಗಳೂರಿನ ಸಂಸ್ಥೆಯೊಂದು ಮನೆ ನಿರ್ಮಿಸಿ ಕೊಡುತ್ತದೆ.

ಸಮಾಜವು ಒಂದು ಕ್ರಿಯಾತ್ಮಕ ವ್ಯವಸ್ಥೆಯಾಗಿದ್ದು, ಇದು ಬದಲಾವಣೆ, ಅಭಿವೃದ್ಧಿ ಮುಂತಾದ ಗುಣಲಕ್ಷಣಗಳಿಂದ ನಿರೂಪಿಸಲ್ಪಟ್ಟಿದೆ. ಯಾವುದೇ ಸಮಾಜವು ಸ್ಥಿರವಾಗಿಲ್ಲ ಎಂದು ಇತಿಹಾಸ ತೋರಿಸುತ್ತದೆ:

ಅದು ಪ್ರಗತಿಯಾಗುತ್ತದೆ ಅಥವಾ ಹಿಮ್ಮೆಟ್ಟುತ್ತದೆ. ಮೊತ್ತ ಇದ್ದರೆ ಸಕಾರಾತ್ಮಕ ಪರಿಣಾಮಗಳು ಸಮಾಜದಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳು ನಕಾರಾತ್ಮಕ ಪ್ರಮಾಣವನ್ನು ಮೀರುತ್ತವೆ, ನಂತರ ಒಬ್ಬರು ಸಾಮಾಜಿಕ ಪ್ರಗತಿಯ ಬಗ್ಗೆ ಮಾತನಾಡುತ್ತಾರೆ.

ಇಲ್ಲದಿದ್ದರೆ, ಸಾಮಾಜಿಕ ಹಿಂಜರಿತವಿದೆ. ಸಾಮಾಜಿಕ ಪ್ರಗತಿ – ಜಾಗತಿಕ ಪ್ರಕ್ರಿಯೆಚಲನೆಯನ್ನು ನಿರೂಪಿಸುತ್ತದೆ ಮಾನವ ಸಮಾಜ ಇತಿಹಾಸದುದ್ದಕ್ಕೂ. ಸಾಮಾಜಿಕ ಹಿಂಜರಿತವು ಸ್ಥಳೀಯ ಪ್ರಕ್ರಿಯೆಯಾಗಿದ್ದು ಅದು ವೈಯಕ್ತಿಕ ಸಮಾಜಗಳನ್ನು ಮತ್ತು ಅಲ್ಪಾವಧಿಯನ್ನು ಒಳಗೊಳ್ಳುತ್ತದೆ.

ಬದಲಾವಣೆಗಳ ತೀವ್ರತೆಯನ್ನು ಅವಲಂಬಿಸಿರುತ್ತದೆ ಗುಣಮಟ್ಟದ ಸ್ಥಿತಿವಸ್ತು ಪ್ರಕ್ರಿಯೆಗಳನ್ನು ವಿಕಸನೀಯ ಮತ್ತು ಕ್ರಾಂತಿಕಾರಿ ಎಂದು ವಿಂಗಡಿಸಲಾಗಿದೆ. ಹಾಜಬ್ಬ ವ್ಯಕ್ತಿ ಕೇಂದ್ರಿತ ಬದಲಾವಣೆಯ ಮೂಲಕ ಸಾಮಾಜಿಕ, ಶೈಕ್ಷಣಿಕ ಕ್ರಾಂತಿಯ ಜೊತೆಗೆ ಬದಲಾವಣೆಯನ್ನು ತಂದದ್ದು ಪವಾಡವೇ ಸರಿ.

ಅಂದ ಹಾಗೆ ಹಾಜಬ್ಬರಿಗೆ ‘ಅಕ್ಷರಸಂತ’ ನೆಂಬ ಬಿರುದನ್ನು ಕೊಟ್ಟದ್ದು ಪಜೀರು ರಹ್ಮಾನಿಯಾದಜುಮಾ ಮಸೀದಿ.

ಮೊಟ್ಟ ಮೊದಲ ಬಾರಿಗೆ ಈ ಹೆಸರು ಪ್ರಕಟವಾಗಿದ್ದು ಮದರಂಗಿ ಮಾಸಿಕದಲ್ಲಿ..ಎರಡನೇ ಬಾರಿ ಪ್ರಕಟವಾಗಿದ್ದು “ಹೊಸತು” ಮಾಸಿಕದಲ್ಲಿ.

ಅಲ್ಲಿಂದೀಚೆ ಹಾಜಬ್ಬ ಜಗತ್ತಿಗೆ ಪರಿಚಯವಾಗಿದ್ದೇ ಅಕ್ಷರಸಂತನೆಂಬ ಖ್ಯಾತಿಯಿಂದ. ದೇಶದ ನಾಲ್ಕನೇ ಉನ್ನತ ಪ್ರಶಸ್ತಿಯಾದ ಪದ್ಮಶ್ರೀಗೆ ಭಾಜನರಾದ ಹಾಜಬ್ಬ ಈಗಲೂ ಮಂಗಳೂರಿನ ಕೇಂದ್ರ ಪ್ರದೇಶ ಸ್ಟೇಟ್ ಬ್ಯಾಂಕ್ ಸರ್ಕಲ್‌ನಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡುತ್ತಾರೆ.

ಅವರ ಬುಟ್ಟಿಯೊಳಗಿನ ಪ್ರತೀ ಹಣ್ಣಿನ ಸಿಹಿಯೂ ನಾಡಿನ ಶಿಕ್ಷಣ ವಂಚಿತ ಮಕ್ಕಳ ಕಹಿಯನ್ನು ಕಳೆಯುತ್ತಲಿದೆ. ಕಳೆಯುತ್ತಲೇ ಇರುತ್ತದೆ.
ಹರೇಕಳದ ನಮ್ಮ ಹಾಜಬ್ಬ ಬರಿಗಾಲಲಿ
ಬೀದಿ ಬೀದಿಯಲಿ ಮಾರಿದ ಸಿಹಿ ಕಿತ್ತಲೆ
ಕಳೆದುದು ಮಾತ್ರ ಶತಮಾನದ ನಾಡಿನ
ಮನೆಯ ಮಕ್ಕಳ ಶಿಕ್ಷಣಕ್ಕೆ ಕವಿದ ಕಹಿ ಕತ್ತಲೆ

ಪದ್ಮಶ್ರೀಗೆ ಒಲಿದು ಬಂದ ಹಾಜಬ್ಬ ನಾಮಾಂಕಿತ ಹರೇಕಳದ ಬರಿಗಾಲ ಅಕ್ಷರ ಸಂತ 📖

ಈಗಲೂ ಬೆಳಿಗ್ಗೆ ಶಾಲೆಯ ಬಳಿ ಹೋದರೆ ಹಾಜಬ್ಬ ಸಿಗುತ್ತಾರೆ.

ಶಾಲೆಯ ಮೂಲೆಯಲ್ಲಿ ಬಿದ್ದಿರುವ ಕಸ ಕಡ್ಡಿಗಳನ್ನು ಹೆಕ್ಕುತ್ತಿರುತ್ತಾರೆ. ನೆಲ ಒರಸುತ್ತಿರುತ್ತಾರೆ.

ಅತಿಥಿಗಳು ಶಾಲೆ ನೋಡಲು ಬಂದಿದ್ದಾರೆ ಎಂದು ಗೊತ್ತಾದ ತಕ್ಷಣ ಉದ್ದನೆಯ ಬಿದಿರಿನ ಕೋಲಿಗೆ ಕತ್ತಿ ಕಟ್ಟಿ ತೆಂಗಿನ ಮರದಿಂದ ಎಳನೀರು ತೆಗೆದು ತಂದು ಕೊಡುತ್ತಾರೆ.

“ಸಾರು.. ನಮ್ಮ ಶಾಲೆಗೆ ಬಂದಿದ್ದೀರಿ. ತುಂಬಾ ಸಂತೋಸ ಆಯ್ತು ಸಾರು. ಸಾರು ಮೈದಾನಕ್ಕೆ ಕಂಪೌಂಡು ಹಾಕಬೇಕು ಸಾರು,” ಎನ್ನುತ್ತಾರೆ. ಮಾದರಿ ವ್ಯಕ್ತಿತ್ವಗಳಿಗೆ ಇತಿಹಾಸದ ಕಡೆ ಮುಖಮಾಡುವ ನಮಗೆ ವರ್ತಮಾನದಲ್ಲಿ ಇಂತಹ ಅಕ್ಷರಯೋಗಿಯ ಬದುಕು ಲಿವಿಂಗ್ ಲಿಜೆಂಡ್ ಎನಿಸುತ್ತದೆ. ನೀವೇನಂತೀರಿ?

ಮೇಲೋಗರ : ರಾಷ್ಟ್ರಪತಿ ಭವನದ ದರ್ಬಾರ್ ಹಾಲಿನಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿಲು ಹಾಜಬ್ಬರು ಬಂದಾಗ ಕೇಳಿದ ಮಾತುಗಳು ಹೀಗಿದ್ದವು.

ಪದ್ಮಶ್ರೀಗೆ ಒಲಿದು ಬಂದ ಹಾಜಬ್ಬ

ಭರಿ ಸಡಕೋಂಪೆ ‘ಸಂತರೆ’
ಬೇಚನೇವಾಲೆ ಇಸ್ ಆಮ್ ಇನ್ಸಾನ್
ಕೊ ಅಕ್ಷರ್ ‘ಸಂತ’ ಕೆಹೆಲಾಯಾ
ಧನ್ಯ್ ಹೇ ಮಾ ತುನೆ ಐಸೆ ಪುಣ್ಯ
ಜೀವೋಂಕೋ ಜನಮ್ ದಿಯಾ
ಆಜ್ ಪದ್ಮಶ್ರೀ ಸೆ ಭೀ
ಸು ಸಮ್ಮಾನಿತ್ ಕಿಯಾ

✍🏻ರಾಜ್ ಆಚಾರ್ಯ
೦೯-೧೧-೨೦೨೧

http://digitalindiahelpline.com/

achievements

Social Share

Leave a Reply

Your email address will not be published. Required fields are marked *